ನೆಹೆಮೀಯ 5:9 - ಕನ್ನಡ ಸಮಕಾಲಿಕ ಅನುವಾದ9 ನಾನು ಅವರಿಗೆ, “ನೀವು ಮಾಡುವುದು ಒಳ್ಳೆಯದಲ್ಲ. ಇತರ ದೇಶದವರಾದ ನಮ್ಮ ಶತ್ರುಗಳ ನಿಂದೆಗೆ ಗುರಿಯಾಗದಂತೆ ನೀವು ನಮ್ಮ ದೇವರ ಭಯದಲ್ಲಿ ನಡೆಯಬೇಕಲ್ಲವೇ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಆನಂತರ ನಾನು ಅವರಿಗೆ, “ನೀವು ಮಾಡುತ್ತಿರುವುದು ಒಳ್ಳೆಯ ಕಾರ್ಯವಲ್ಲ; ನಾವು ನಮ್ಮ ವಿರೋಧಿಗಳಾಗಿರುವ ಅನ್ಯಜನರ ನಿಂದೆಗೆ ಗುರಿಯಾಗದಂತೆ ದೇವರಲ್ಲಿ ಭಯಭಕ್ತಿಯುಳ್ಳವರಾಗಿ ನಡೆದುಕೊಳ್ಳಬೇಕಲ್ಲವೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಆಮೇಲೆ ನಾನು ಅವರಿಗೆ, “ನೀವು ಮಾಡಿದ್ದು ಸರಿಯಲ್ಲ; ನಾವು ನಮ್ಮ ವಿರೋಧಿಗಳಾದ ಅನ್ಯಜನರ ನಿಂದೆಗೆ ಗುರಿಯಾಗದಂತೆ ದೇವರಲ್ಲಿ ಭಯಭಕ್ತಿಯುಳ್ಳವರಾಗಿ ನಡೆದುಕೊಳ್ಳಬೇಕಲ್ಲವೇ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಆಮೇಲೆ ನಾನು ಅವರಿಗೆ - ನೀವು ಮಾಡಿದ್ದು ಒಳ್ಳೇದಲ್ಲ; ನಾವು ನಮ್ಮ ವಿರೋಧಿಗಳಾಗಿರುವ ಅನ್ಯಜನರ ನಿಂದೆಗೆ ಗುರಿಯಾಗದಂತೆ ದೇವರಲ್ಲಿ ಭಯಭಕ್ತಿಯುಳ್ಳವರಾಗಿ ನಡೆದುಕೊಳ್ಳಬೇಕಲ್ಲವೇ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ನಾನು ಹೇಳುವುದನ್ನು ಮುಂದುವರಿಸುತ್ತಾ, “ನೀವು ತಪ್ಪು ಕೆಲಸ ಮಾಡುತ್ತಿದ್ದೀರಿ. ದೇವರಿಗೆ ಭಯಪಟ್ಟು ಆತನನ್ನು ಗೌರವಿಸಬೇಕೆಂದು ನಿಮಗೆ ಗೊತ್ತಿದೆ. ಇತರ ಜನರು ಮಾಡುವ ನಾಚಿಕೆಕರವಾದ ಕೆಲಸವನ್ನು ನೀವು ಮಾಡಬಾರದು. ಅಧ್ಯಾಯವನ್ನು ನೋಡಿ |