Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 5:11 - ಕನ್ನಡ ಸಮಕಾಲಿಕ ಅನುವಾದ

11 ಅವರ ಹೊಲ, ದ್ರಾಕ್ಷಿತೋಟ, ಓಲಿವ್ ಎಣ್ಣೆಮರಗಳ ತೋಪು, ಮನೆ ಇವುಗಳನ್ನು ಹಿಂದಕ್ಕೆ ಕೊಟ್ಟು ಬಿಡಿ; ನೀವು ಕೊಟ್ಟ ಹಣ, ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಿಗೆ ಶೇಕಡಾ ಇಷ್ಟೆಂದು ವಸೂಲಿ ಮಾಡುವ ಹಕ್ಕನ್ನೂ ಕೂಡ ದಯವಿಟ್ಟು ಈ ದಿನವೇ ರದ್ದುಗೊಳಿಸಿ,” ಎಂದು ಹೇಳಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಅವರ ಹೊಲ, ದ್ರಾಕ್ಷಿತೋಟ, ಎಣ್ಣೆಮರಗಳ ತೋಪು, ಮನೆ ಇವುಗಳನ್ನೂ ನೀವು ಕೊಟ್ಟ ಹಣ, ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಿಗೋಸ್ಕರ ನೂರಕ್ಕೆ ಒಂದರಂತೆ ನೀವು ತೆಗೆದುಕೊಂಡಿರುವ ಬಡ್ಡಿಯನ್ನೂ ದಯವಿಟ್ಟು ಈ ಹೊತ್ತೇ ಹಿಂದಕ್ಕೆ ಕೊಡಿರಿ” ಎಂದು ಹೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಅವರ ಹೊಲ, ದ್ರಾಕ್ಷೀತೋಟ, ಎಣ್ಣೆಮರಗಳ ತೋಪು, ಮನೆ ಇವುಗಳನ್ನು ಹಿಂದಕ್ಕೆ ಕೊಟ್ಟುಬಿಡಿ. ನೀವು ಕೊಟ್ಟ ಹಣ, ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಿಗೆ ಶೇಕಡಾ ಇಷ್ಟೆಂದು ವಸೂಲಿಮಾಡುವ ಹಕ್ಕನ್ನೂ ಕೂಡ ದಯವಿಟ್ಟು ಈ ದಿನವೇ ರದ್ದುಗೊಳಿಸಿ,” ಎಂದು ಹೇಳಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಅವರ ಹೊಲ, ದ್ರಾಕ್ಷೇತೋಟ, ಎಣ್ಣೆಮರಗಳ ತೋಪು, ಮನೆ ಇವುಗಳನ್ನೂ ನೀವು ಕೊಟ್ಟ ಹಣ, ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಿಗೋಸ್ಕರ ಶೇಕಡಾ ಇಷ್ಟೆಂದು ತೆಗೆದುಕೊಂಡಿರುವ ಬಡ್ಡಿಯನ್ನೂ ದಯವಿಟ್ಟು ಈಹೊತ್ತೇ ಹಿಂದಕ್ಕೆ ಕೊಡಿರಿ ಎಂದು ಹೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಅವರಿಂದ ಕಿತ್ತುಕೊಂಡ ಹೊಲಗದ್ದೆಗಳನ್ನು, ದ್ರಾಕ್ಷಾತೋಟ, ಎಣ್ಣೆಮರಗಳ ತೋಟ ಮತ್ತು ಅವರ ಮನೆಗಳನ್ನು ಅವರಿಗೆ ಈಗಲೇ ಹಿಂದಕ್ಕೆ ಕೊಡಿರಿ. ಅವರಿಂದ ವಸೂಲಿ ಮಾಡಿದ ಬಡ್ಡಿಯನ್ನು ಹಿಂದಕ್ಕೆ ಕೊಡಿರಿ. ನೀವು ಯಾವ ಯಾವದಕ್ಕೆ ಬಡ್ಡಿ ವಸೂಲಿ ಮಾಡಿರುವಿರೋ ಎಲ್ಲವನ್ನು ಹಿಂದಕ್ಕೆ ಕೊಡಿರಿ” ಎಂದು ಹೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 5:11
9 ತಿಳಿವುಗಳ ಹೋಲಿಕೆ  

“ನಾನು ಆಯ್ದುಕೊಳ್ಳುವ ಉಪವಾಸವು ಅನ್ಯಾಯದ ಸರಪಣಿಯನ್ನು ಬಿಚ್ಚುವುದೂ, ಭಾರವಾದ ಹೊರೆಯನ್ನು ಬಿಚ್ಚುವುದೂ, ದಬ್ಬಾಳಿಕೆಯಾದವರನ್ನು ಬಿಡಿಸುವುದೂ, ನೊಗಗಳನ್ನೆಲ್ಲಾ ಮುರಿದುಹಾಕುವುದೂ, ಇವೇ ಅಲ್ಲವೋ?


ಹಾಗಾದರೆ ದೇವರ ಕಡೆಗೆ ತಿರುಗಿಕೊಂಡದ್ದಕ್ಕೆ ತಕ್ಕ ಫಲಗಳನ್ನು ತೋರಿಸಿರಿ. ‘ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ,’ ಎಂದು ನಿಮ್ಮೊಳಗೆ ಕೊಚ್ಚಿಕೊಳ್ಳಬೇಡಿರಿ. ಈ ಕಲ್ಲುಗಳಿಂದಲೂ ದೇವರು ಅಬ್ರಹಾಮನಿಗೆ ಮಕ್ಕಳನ್ನು ಹುಟ್ಟಿಸಲು ಶಕ್ತರೆಂದು ನಾನು ನಿಮಗೆ ಹೇಳುತ್ತೇನೆ.


ಅವನು ಕನಿಕರಪಡದೆ ಈ ಕಾರ್ಯವನ್ನು ಮಾಡಿದ್ದರಿಂದ, ಆ ಕುರಿಗೋಸ್ಕರವಾಗಿ ನಾಲ್ಕರಷ್ಟು ತಿರುಗಿ ಕೊಡಬೇಕು,” ಎಂದನು.


ನಾನು ಇಲ್ಲಿದ್ದೇನೆ. ಯೆಹೋವ ದೇವರ ಮುಂದೆಯೂ, ಅವರ ಅಭಿಷಿಕ್ತನ ಮುಂದೆಯೂ ನನಗೆ ವಿರೋಧವಾಗಿ ಸಾಕ್ಷಿ ಕೊಡಿರಿ. ನಾನು ಯಾರ ಎತ್ತನ್ನಾದರೂ, ಕತ್ತೆಯನ್ನಾದರೂ ತೆಗೆದುಕೊಂಡೆನೋ? ಯಾರಿಗಾದರೂ ವಂಚನೆ ಮಾಡಿದೆನೋ? ಯಾರನ್ನಾದರೂ ಹಿಂಸಿಸಿದೆನೋ? ಯಾರಿಂದಲಾದರೂ ಕಣ್ಣಿಗೆ ಮರೆಮಾಡುವ ಲಂಚವನ್ನು ತೆಗೆದುಕೊಂಡೆನೋ? ಹೀಗಿದ್ದರೆ ಹೇಳಿರಿ, ತಿರುಗಿಕೊಡುತ್ತೇನೆ,” ಎಂದನು.


ನೀವು ಕೂಡಿಸದ ಉತ್ತಮ ವಸ್ತುಗಳಿಂದ ತುಂಬಿದ ಮನೆಗಳನ್ನೂ, ನೀವು ಅಗೆಯದಿರುವ ಬಾವಿಗಳನ್ನೂ, ನೀವು ನೆಡದ ದ್ರಾಕ್ಷಿತೋಟಗಳನ್ನೂ, ಓಲಿವ್ ತೋಟಗಳನ್ನೂ ನಿಮಗೆ ಕೊಡಲಾಗಿ, ನೀವು ತಿಂದು ತೃಪ್ತರಾಗಿರುವಿರಿ.


ನಾನು, ನನ್ನ ಸಹೋದರರು, ಸೇವಕರು ಸಹ ಅವರಿಗೆ ಹಣವನ್ನೂ, ಧಾನ್ಯವನ್ನೂ ಸಾಲವಾಗಿ ಕೊಟ್ಟಿದ್ದೇವೆ. ಬಡ್ಡಿ ತೆಗೆದುಕೊಳ್ಳುವ ಪದ್ಧತಿಯನ್ನು ಬಿಟ್ಟುಬಿಡೋಣ.


ಅದಕ್ಕವರು, “ನಾವು ಹಿಂದಕ್ಕೆ ಕೊಡುತ್ತೇವೆ. ಅವರಿಂದ ಏನೂ ಕೇಳುವುದಿಲ್ಲ. ನೀನು ಹೇಳಿದ ಹಾಗೆ ಮಾಡುತ್ತೇವೆ,” ಎಂದರು. ಆಗ ನಾನು ಯಾಜಕರನ್ನು ಕರೆದು, ಅವರು ಈ ಮಾತಿನ ಪ್ರಕಾರ ಮಾಡುವ ಹಾಗೆ ಅವರಿಂದ ಪ್ರಮಾಣವನ್ನು ತೆಗೆದುಕೊಂಡೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು