ನೆಹೆಮೀಯ 4:6 - ಕನ್ನಡ ಸಮಕಾಲಿಕ ಅನುವಾದ6 ಹೀಗೆ ನಾವು ಪುನಃ ಗೋಡೆ ಕಟ್ಟುವುದನ್ನು ಮುಂದುವರಿಸಿದೆವು. ಗೋಡೆ ಅರ್ಧ ಎತ್ತರದವರೆಗೂ ಆಯಿತು. ಏಕೆಂದರೆ ಜನರು ಕೆಲಸ ಮಾಡುವುದಕ್ಕೆ ಮನಸ್ಸುಳ್ಳವರಾಗಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಆದರೂ ನಾವು ಕಟ್ಟುವ ಕೆಲಸವನ್ನು ಮುಂದುವರಿಸಿದೆವು. ಜನರು ಅದಕ್ಕೆ ಮನಸ್ಸು ಕೊಟ್ಟಿದ್ದರಿಂದ ಗೋಡೆಯೆಲ್ಲಾ ಅರ್ಧ ಎತ್ತರದವರೆಗೂ ಸಮನಾಗಿ ಕಟ್ಟಲಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಇದಾದ ಮೇಲೆ ನಾವು ಕಟ್ಟುವ ಕೆಲಸವನ್ನು ಮುಂದುವರಿಸಿದೆವು. ಜನರು ಮನಸ್ಸುಮಾಡಿ ಅರ್ಧಗೋಡೆಯನ್ನು ಕಟ್ಟಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಆದರೂ ನಾವು ಕಟ್ಟುವ ಕೆಲಸವನ್ನು ಮುಂದರಿಸಿದೆವು. ಜನರು ಅದಕ್ಕೆ ಮನಸ್ಸು ಕೊಟ್ಟದ್ದರಿಂದ ಗೋಡೆಯೆಲ್ಲಾ ಅರ್ಧ ಎತ್ತರದವರೆಗೂ ಜೋಡನೆಯಾಯಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 ಜೆರುಸಲೇಮಿನ ಗೋಡೆಯನ್ನು ನಾವು ಕಟ್ಟಿ ಮುಗಿಸಿದೆವು. ಪಟ್ಟಣದ ಸುತ್ತಲೂ ಪೌಳಿಗೋಡೆಯನ್ನು ಕಟ್ಟಿದೆವು. ಆದರೆ ಅದರ ಎತ್ತರ ಇರಬೇಕಾದಷ್ಟು ಇರದೆ ಅರ್ಧದ ತನಕ ಇದ್ದವು. ನಮ್ಮ ಜನರು ತಮ್ಮ ಹೃದಯ ಪೂರ್ವಕವಾಗಿ ಕೆಲಸ ಮಾಡಿದ್ದುದರಿಂದ ನಮಗೆ ಅಷ್ಟಾದರೂ ಮಾಡುವುದಕ್ಕೆ ಆಯಿತು. ಅಧ್ಯಾಯವನ್ನು ನೋಡಿ |
ಯೆಹೋವ ದೇವರು ಶೆಯಲ್ತಿಯೇಲನ ಮಗ ಮತ್ತು ಯೆಹೂದದ ಅಧಿಪತಿಯಾದ ಜೆರುಬ್ಬಾಬೆಲನ ಆತ್ಮವನ್ನೂ, ಯೆಹೋಚಾದಾಕನ ಮಗ ಮತ್ತು ಮಹಾಯಾಜಕ ಯೆಹೋಶುವನ ಆತ್ಮವನ್ನೂ, ಜನರಲ್ಲಿ ಉಳಿದವರೆಲ್ಲರ ಆತ್ಮವನ್ನೂ ಪ್ರೇರೇಪಿಸಿದರು. ಅವರು ಬಂದು ಅರಸನಾದ ದಾರ್ಯಾವೆಷನ ಆಳಿಕೆಯ ಎರಡನೇ ವರ್ಷದ, ಆರನೆಯ ತಿಂಗಳಿನ, ಇಪ್ಪತ್ನಾಲ್ಕನೆಯ ದಿವಸದಲ್ಲಿ ತಮ್ಮ ದೇವರಾದ ಸೇನಾಧೀಶ್ವರ ಯೆಹೋವ ದೇವರ ಆಲಯದ ಕೆಲಸ ಪ್ರಾರಂಭಿಸಿದರು. ಅರಸನಾದ ದಾರ್ಯಾವೆಷನ ಎರಡನೇ ವರ್ಷದಲ್ಲಿ,