Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 4:23 - ಕನ್ನಡ ಸಮಕಾಲಿಕ ಅನುವಾದ

23 ನಾನೂ, ನನ್ನ ಸಹೋದರರೂ, ಸೇವಕರೂ, ಮೈಗಾವಲಿನವರೂ ಸ್ನಾನದ ಸಮಯದಲ್ಲಿ ಹೊರತು, ಬೇರೆ ಸಮಯದಲ್ಲಿ ನಮ್ಮ ವಸ್ತ್ರಗಳನ್ನು ತೆಗೆದುಹಾಕಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ನಾನೂ ನನ್ನ ಸಹೋದರರೂ, ಸೇವಕರೂ, ಮೈಗಾವಲಿನವರೂ ನಮ್ಮ ಬಟ್ಟೆಗಳನ್ನು ಬದಲಾಯಿಸಿರಲಿಲ್ಲ. ಪ್ರತಿಯೊಬ್ಬನು ನೀರನ್ನು ಮತ್ತು ಆಯುಧಗಳನ್ನು ಹಿಡಿದುಕೊಂಡಿದ್ದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ನಾನು, ನನ್ನ ಸಹೋದರರು, ಸೇವಕರು ಹಾಗು ಮೈಗಾವಲಿನವರು ಸ್ನಾನ ಸಮಯದಲ್ಲಿ ಹೊರತು, ಬೇರೆ ಸಮಯದಲ್ಲಿ ನಮ್ಮ ಬಟ್ಟೆಗಳನ್ನು ತೆಗೆದುಹಾಕುತ್ತಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ನಾನೂ ನನ್ನ ಸಹೋದರರೂ ಸೇವಕರೂ ಮೈಗಾವಲಿನವರೂ ಸ್ನಾನಸಮಯದಲ್ಲಿ ಹೊರತು ಬೇರೆ ಸಮಯದಲ್ಲಿ ನಮ್ಮ ವಸ್ತ್ರಗಳನ್ನು ತೆಗೆದುಹಾಕಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಇದರಿಂದಾಗಿ ಯಾರೂ ತಮ್ಮ ವಸ್ತ್ರಗಳನ್ನು ಬದಲಾಯಿಸಲಿಲ್ಲ. ನಾನಾಗಲಿ ನನ್ನ ಬಂಧುಗಳಾಗಲಿ ನನ್ನ ಜನರಾಗಲಿ ಪಹರೆಯವರಾಗಲಿ ವಸ್ತ್ರಗಳನ್ನು ಬದಲಾಯಿಸದೆ ಆಯುಧಗಳನ್ನು ಧರಿಸಿಕೊಂಡೇ ಇದ್ದೆವು. ನೀರು ಕುಡಿಯುವಾಗಲೂ ಆಯುಧ ಸನ್ನದ್ಧರಾಗಿರುತ್ತಿದ್ದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 4:23
8 ತಿಳಿವುಗಳ ಹೋಲಿಕೆ  

ಆದರೆ ನಾನು ಎಂಥವನಾಗಿದ್ದೇನೋ, ಅದು ದೇವರ ಕೃಪೆಯಿಂದಲೇ ಆಗಿರುತ್ತದೆ. ನನಗುಂಟಾದ ದೇವರ ಕೃಪೆಯು ನಿಷ್ಫಲವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಎಷ್ಟೋ ಹೆಚ್ಚಾಗಿ ಪ್ರಯಾಸಪಟ್ಟೆನು. ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿದ್ದ ದೇವರ ಕೃಪೆಯೇ.


ಆಮೇಲೆ ನಾನು ನನ್ನ ಸಹೋದರನಾದ ಹನಾನೀ ಮತ್ತು ಅರಮನೆಯ ಅಧಿಪತಿಯಾದ ಹನನ್ಯ ಇವರಿಗೆ ಯೆರೂಸಲೇಮಿನ ಜವಾಬ್ದಾರಿಕೆಯನ್ನು ಒಪ್ಪಿಸಿದೆನು. ಏಕೆಂದರೆ ಇವನು ಸತ್ಯವಂತನಾಗಿಯೂ, ಅನೇಕರಿಗಿಂತ ಹೆಚ್ಚಾಗಿ ದೇವರಿಗೆ ಭಯಪಡುವವನಾಗಿಯೂ ಇದ್ದನು.


ಆ ಗೋಡೆ ಕಟ್ಟುವುದರಲ್ಲೇ ನಿರತನಾಗಿದ್ದೆ ಮತ್ತು ನನ್ನ ಎಲ್ಲಾ ಸೇವಕರು ಪ್ರತಿದಿನ ಆ ಕೆಲಸಕ್ಕೆ ಬರುವಂತೆ ನೋಡುತ್ತಿದ್ದೆ. ನಾವು ಅಲ್ಲಿ ಭೂಮಿಯನ್ನು ಸಂಪಾದಿಸಿಕೊಂಡಿರಲಿಲ್ಲ.


ಅಬೀಮೆಲೆಕನು ತನ್ನ ಸಂಗಡ ಇದ್ದ ಸೈನಿಕರೆಲ್ಲರ ಸಹಿತವಾಗಿ ಚಲ್ಮೋನ್ ಬೆಟ್ಟವನ್ನೇರಿ, ತನ್ನ ಕೈಯಲ್ಲಿ ಕೊಡಲಿಯನ್ನು ಹಿಡಿದು, ಒಂದು ಮರದ ಕೊಂಬೆಯನ್ನು ಕಡಿದು, ಅದನ್ನು ತನ್ನ ಹೆಗಲಿನ ಮೇಲೆ ಹೊತ್ತುಕೊಂಡು, ತನ್ನ ಕೂಡ ಇದ್ದ ಜನರಿಗೆ, “ನಾನು ಮಾಡಿದ್ದನ್ನು ನೋಡಿ ಹಾಗೆಯೇ ತೀವ್ರವಾಗಿ ಮಾಡಿರಿ,” ಎಂದನು.


ನೀರು ಸೇದುವ ಸ್ಥಳಗಳ ಹತ್ತಿರ ಗಾಯಕರ ಶಬ್ದದಿಂದ ಯೆಹೋವ ದೇವರ ನೀತಿಸಾಧನೆಗಳನ್ನು ವರ್ಣಿಸುತ್ತಾರೆ. ಇಸ್ರಾಯೇಲಿನಲ್ಲಿ ಅವರ ಹಳ್ಳಿಗಳ ನಿವಾಸಿಗಳಿಗೆ ಮಾಡಿದ ಮಹತ್ಕಾರ್ಯಗಳನ್ನು ತಿರುಗಿ ಪ್ರಕಟಿಸುವರು. “ಆಗ ಯೆಹೋವ ದೇವರ ಜನರು ಪಟ್ಟಣದ ಬಾಗಿಲುಗಳಿಗೆ ಇಳಿದು ಬರುವರು.


ಇದಲ್ಲದೆ ನಾನು ಆ ಸಮಯದಲ್ಲಿ ಜನರಿಗೆ, “ನಿಮ್ಮ ಆಳುಗಳು ರಾತ್ರಿಯಲ್ಲಿ ನಮಗೆ ಕಾವಲಾಗಿರುವಂತೆಯೂ, ಹಗಲಿನಲ್ಲಿ ಕೆಲಸ ನಡೆಸುವಂತೆಯೂ ನೀವು ನಿಮ್ಮ ನಿಮ್ಮ ಆಳುಗಳೊಡನೆ ಯೆರೂಸಲೇಮಿನಲ್ಲೇ ವಾಸಮಾಡಬೇಕು,” ಎಂದು ಅಪ್ಪಣೆ ಮಾಡಿದೆನು.


ತರುವಾಯ ಜನರೂ, ಅವರ ಹೆಂಡತಿಯರೂ ತಮ್ಮ ಸಹೋದರರಾದ ಯೆಹೂದ್ಯರ ವಿರುದ್ಧ ಬಹಳ ಗೋಳಾಡ ತೊಡಗಿದರು.


ಒಂದು ಇನ್ನೊಂದನ್ನು ನೂಕುವುದಿಲ್ಲ. ಅವುಗಳಲ್ಲಿ ಪ್ರತಿಯೊಂದು ತನ್ನ ತನ್ನ ದಾರಿಯಲ್ಲಿ ಮುನ್ನಡೆಯುತ್ತವೆ. ತಮ್ಮ ಸ್ಥಾನಗಳನ್ನು ಬಿಟ್ಟುಕೊಡದೆ ಯುದ್ಧ ಮಾಡುತ್ತವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು