Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 3:1 - ಕನ್ನಡ ಸಮಕಾಲಿಕ ಅನುವಾದ

1 ಆಗ ಮಹಾಯಾಜಕನಾದ ಎಲ್ಯಾಷೀಬನೂ, ಅವನ ಕುಟುಂಬದ ಯಾಜಕರೂ ಕುರಿ ಬಾಗಿಲನ್ನು ಕಟ್ಟಿ, ಅದನ್ನು ಪ್ರತಿಷ್ಠಿಸಿ, ಅದಕ್ಕೆ ಕದಗಳನ್ನು ಇಟ್ಟರು. ಅಲ್ಲಿಂದ ಶತ ಗೋಪುರದವರೆಗೆ ಗೋಡೆ ಕಟ್ಟಿ ಅದನ್ನೂ ಪ್ರತಿಷ್ಠಿಸಿದರು. ಅಲ್ಲಿಂದ ಹನನೇಲ್ ಬುರುಜಿನವರೆಗೂ ಕಟ್ಟಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಹೀಗೆ ಮಹಾಯಾಜಕನಾದ ಎಲ್ಯಾಷೀಬನೂ ಅವನ ಕುಟುಂಬದ ಯಾಜಕರೂ ಕುರಿಬಾಗಿಲನ್ನು ಕಟ್ಟಿ ಅದನ್ನು ಪ್ರತಿಷ್ಠಿಸಿ ಅದಕ್ಕೆ ಬಾಗಿಲುಗಳನ್ನು ಇಟ್ಟರು. ಅಲ್ಲಿಂದ ಹಮ್ಮೆಯಾ ಗೋಪುರದವರೆಗೆ ಗೋಡೆಕಟ್ಟಿ ಅದನ್ನು ಪ್ರತಿಷ್ಠಿಸಿದರು. ಅಲ್ಲಿಂದ ಹನನೇಲ್ ಗೋಪುರದವರೆಗೂ ಕಟ್ಟಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಮಹಾಯಾಜಕನಾದ ಎಲ್ಯಾಷೀಬನೂ ಅವನ ಕುಟುಂಬದ ಯಾಜಕರೂ ಕುರಿಬಾಗಿಲನ್ನು ಕಟ್ಟಿ ಅದನ್ನು ಪ್ರತಿಷ್ಠಿಸಿ ಅದಕ್ಕೆ ಕದಗಳನ್ನು ಇಟ್ಟರು. ಅಲ್ಲಿಂದ ಹಮ್ಮೆಯಾ ಬುರುಜಿನವರೆಗೆ ಗೋಡೆಕಟ್ಟಿ ಅದನ್ನೂ ಪ್ರತಿಷ್ಠಿಸಿದರು. ಅಲ್ಲಿಂದ ಹನನೇಲ್ ಬುರುಜಿನವರೆಗೂ ಕಟ್ಟಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಆಗ ಮಹಾಯಾಜಕನಾದ ಎಲ್ಯಾಷೀಬನೂ ಅವನ ಕುಟುಂಬದ ಯಾಜಕರೂ ಕುರಿಬಾಗಲನ್ನು ಕಟ್ಟಿ ಅದನ್ನು ಪ್ರತಿಷ್ಠಿಸಿ ಅದಕ್ಕೆ ಕದಗಳನ್ನು ಇಟ್ಟರು. ಅಲ್ಲಿಂದ ಹಮ್ಮೆಯಾ ಬುರುಜಿನವರೆಗೆ ಗೋಡೆಕಟ್ಟಿ ಅದನ್ನೂ ಪ್ರತಿಷ್ಠಿಸಿದರು. ಅಲ್ಲಿಂದ ಹನನೇಲ್ ಬುರುಜಿನವರೆಗೂ ಕಟ್ಟಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಎಲ್ಯಾಷೀಬನು ಮಹಾಯಾಜಕನಾಗಿದ್ದನು. ಅವನೂ ಮತ್ತು ಯಾಜಕರುಗಳಾಗಿದ್ದ ಅವನ ಸಹೋದರರೂ ಕುರಿ ಹೆಬ್ಬಾಗಿಲನ್ನು ಕಟ್ಟಿದರು. ನಂತರ ಪ್ರಾರ್ಥಿಸಿ ಯೆಹೋವನಿಗೆ ಅದನ್ನು ಪ್ರತಿಷ್ಠಿಸಿದರು. ಅವರು ಅದಕ್ಕೆ ಬಾಗಿಲುಗಳನ್ನು ಜೋಡಿಸಿದರು. ಆ ಯಾಜಕರು ನೂರುಗೋಪುರ ಮತ್ತು ಹನನೇಲ್ ಗೋಪುರದವರೆಗೂ ಜೆರುಸಲೇಮಿನ ಗೋಡೆಯನ್ನು ಕಟ್ಟಿದ್ದರು. ಅವರು ಪ್ರಾರ್ಥಿಸಿ ಯೆಹೋವನಿಗೆ ಪ್ರತಿಷ್ಠಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 3:1
19 ತಿಳಿವುಗಳ ಹೋಲಿಕೆ  

ಎಫ್ರಾಯೀಮ್ ಬಾಗಿಲ ಮೇಲೆಯೂ, ಯೆಷಾನಾ ಬಾಗಿಲ ಮೇಲೆಯೂ, ಮೀನು ಬಾಗಿಲ ಮೇಲೆಯೂ ಹಾದು, ಹನನೇಲ್ ಗೋಪುರವನ್ನೂ, ಶತ ಗೋಪುರವನ್ನೂ ದಾಟಿ, ಕುರಿ ಬಾಗಿಲವರೆಗೆ ಬಂದು ಸೆರೆಮನೆಯ ಬಾಗಿಲ ಬಳಿಯಲ್ಲಿ ನಿಂತರು.


ಯೆಹೋವ ದೇವರು ಹೇಳುವುದೇನೆಂದರೆ, “ಇಗೋ, ಹನನೇಲನ ಬುರುಜು ಮೊದಲುಗೊಂಡು ಮೂಲೆಯ ಬಾಗಿಲಿನವರೆಗೂ ಪಟ್ಟಣವು ಕರ್ತರಿಗೆ ಕಟ್ಟಲಾಗುವ ದಿನಗಳು ಬರಲಿದೆ.


ಯೆರೂಸಲೇಮಿನಲ್ಲಿ “ಕುರಿಬಾಗಿಲು” ಎಂಬ ಸ್ಥಳದ ಬಳಿ ಒಂದು ಕೊಳವಿದೆ. ಇದನ್ನು ಹೀಬ್ರೂ ಭಾಷೆಯಲ್ಲಿ ಬೇತ್ಸಥಾ ಎಂದು ಕರೆಯುತ್ತಾರೆ. ಅದಕ್ಕೆ ಐದು ಮಂಟಪಗಳಿದ್ದವು.


ಗೆಬ ಮೊದಲುಗೊಂಡು ಯೆರೂಸಲೇಮಿನ ದಕ್ಷಿಣದಲ್ಲಿರುವ ರಿಮ್ಮೋನಿನವರೆಗೂ ದೇಶವೆಲ್ಲಾ ಅರಾಬಾದ ಹಾಗೆ ಮಾರ್ಪಡುವುದು. ಯೆರೂಸಲೇಮ್ ತನ್ನ ಸ್ಥಳದಲ್ಲಿ ಬೆನ್ಯಾಮೀನನ ಬಾಗಿಲು ಮೊದಲುಗೊಂಡು, ಮೊದಲನೆಯ ಬಾಗಿಲಿನ ಸ್ಥಳದವರೆಗೂ, ಮೂಲೆ ಬಾಗಿಲಿನವರೆಗೂ, ಹನನೇಲನ ಗೋಪುರ ಮೊದಲುಗೊಂಡು ಅರಸನ ದ್ರಾಕ್ಷಿ ಆಲೆಗಳವರೆಗೂ ಎತ್ತರದಲ್ಲಿ ನಿವಾಸವಾಗುವುದು.


ನಿನ್ನ ಆಸ್ತಿಯಿಂದಲೂ ನಿನ್ನ ಎಲ್ಲಾ ಬೆಳೆಯ ಪ್ರಥಮ ಫಲದಿಂದಲೂ ಯೆಹೋವ ದೇವರನ್ನು ಸನ್ಮಾನಿಸು.


ಮಹಾಯಾಜಕನಾದ ಎಲ್ಯಾಷೀಬನ ಮಗ ಯೋಯಾದನ ಮಕ್ಕಳಲ್ಲಿ ಒಬ್ಬನು ಹೋರೋನಿನವನಾದ ಸನ್ಬಲ್ಲಟನಿಗೆ ಅಳಿಯನಾದ ಕಾರಣ ನಾನು ಅವನನ್ನು ನನ್ನ ಬಳಿಯಿಂದ ಓಡಿಸಿಬಿಟ್ಟೆನು.


ಈ ಮೂಲೆಯುಪ್ಪರಿಗೆಗೂ, ಕುರಿ ಬಾಗಿಲಿಗೂ ಮಧ್ಯದಲ್ಲಿದ್ದ ಗೋಡೆಯನ್ನು ಜೀರ್ಣೋದ್ಧಾರ ಮಾಡಿದವರು ಅಕ್ಕಸಾಲಿಗರು, ವರ್ತಕರು ಇವರೇ.


ನಿನ್ನ ಎಲ್ಲಾ ಮಾರ್ಗಗಳಲ್ಲಿ ದೇವರಿಗೆ ಅಧೀನವಾಗಿರು. ಆಗ ದೇವರು ನಿನ್ನ ಮಾರ್ಗಗಳನ್ನು ಸರಾಗ ಮಾಡುವರು.


ಯೆಹೋವ ದೇವರೇ, ನಿಮ್ಮನ್ನು ಕೊಂಡಾಡುವೆನು; ನೀವು ನನ್ನ ಶತ್ರುಗಳು ನನ್ನ ವಿಷಯದಲ್ಲಿ ಸಂತೋಷಪಡದಂತೆ ಮಾಡಿದ್ದೀರಿ. ನನ್ನನ್ನು ಮೇಲಕ್ಕೆ ಎತ್ತಿದ್ದೀರಿ.


ಯಾಜಕರೂ, ಲೇವಿಯರೂ ತಮ್ಮನ್ನು ಶುದ್ಧ ಮಾಡಿಕೊಂಡು ಜನರನ್ನೂ, ಬಾಗಿಲುಗಳನ್ನೂ, ಗೋಡೆಯನ್ನೂ ಶುದ್ಧ ಮಾಡಿದರು.


ನಾನು ಗೋಡೆಯನ್ನು ಪುನಃ ಕಟ್ಟಿಸಿ, ಬಾಗಿಲುಗಳನ್ನು ನಿಲ್ಲಿಸಿ, ತರುವಾಯ ಬಾಗಿಲು ಕಾಯುವವರನ್ನು, ಹಾಡುಗಾರರನ್ನು, ಲೇವಿಯರನ್ನು ನೇಮಿಸಿದೆನು.


ನಾನು ಹೆಬ್ಬಾಗಿಲುಗಳಲ್ಲಿ ಬಾಗಿಲುಗಳನ್ನು ಇಡುವುದಕ್ಕಿಂತ ಮುಂಚೆ ನಾನು ಗೋಡೆಯಲ್ಲಿ ಒಂದು ಸಂದನ್ನೂ ಬಿಡದೆ ಪುನಃ ಕಟ್ಟಿದೆನೆಂದು ಸನ್ಬಲ್ಲಟನೂ, ಟೋಬೀಯನೂ, ಅರಬಿಯನಾದ ಗೆಷೆಮನೂ, ಮಿಕ್ಕಾದ ನಮ್ಮ ಶತ್ರುಗಳೂ ಕೇಳಿದಾಗ,


ಇವನ ನಂತರ, ಗೋಡೆಯ ಇನ್ನೊಂದು ಭಾಗವನ್ನು ಅಂದರೆ ಮೂಲೆಯಿಂದ ಮಹಾಯಾಜಕನಾದ ಎಲ್ಯಾಷೀಬನ ಮನೆಯ ಬಾಗಿಲಿನವರೆಗೆ ಜಕ್ಕೈಯ ಮಗನಾದ ಬಾರೂಕನು ಉತ್ಸಾಹದಿಂದ ಭದ್ರಪಡಿಸಿದನು.


ಮತ್ತು ಅಧಿಕಾರಿಗಳು ಅವರಿಗೆ ಹೀಗೆ ಹೇಳಬೇಕು, “ನಿಮ್ಮಲ್ಲಿ ಯಾವನಾದರು ಹೊಸ ಮನೆಯನ್ನು ಕಟ್ಟಿ, ಗೃಹ ಪ್ರತಿಷ್ಠೆ ಇನ್ನು ಮಾಡದಿದ್ದರೆ, ಅವನು ತನ್ನ ಮನೆಗೆ ಹೋಗಲಿ. ಯುದ್ಧದಲ್ಲಿ ಸತ್ತರೆ ಬೇರೊಬ್ಬನು ಆ ಮನೆಯನ್ನು ಸೇರಿಕೊಂಡಾನು.


ಇದಲ್ಲದೆ ಯೇಷೂವನು ಯೋಯಾಕೀಮನ ತಂದೆ, ಯೋಯಾಕೀಮನು ಎಲ್ಯಷೀಬನನ್ನು ಪಡೆದನು; ಎಲ್ಯಾಷೀಬನು ಯೋಯಾದನನ್ನು ಪಡೆದನು;


ಚೀಯೋನನ್ನು ಸುತ್ತಿ ಅದರ ಸುತ್ತಲೂ ತಿರುಗಾಡಿ ಅದರ ಗೋಪುರಗಳನ್ನು ಎಣಿಸಿರಿ.


“ಆದ್ದರಿಂದ ನೀನು ಅರಿತು ತಿಳಿಯಬೇಕಾದದ್ದು ಏನೆಂದರೆ, ಯೆರೂಸಲೇಮನ್ನು ತಿರುಗಿ ಕಟ್ಟಲು ಆಜ್ಞೆ ಹೊರಡುವ ದಿನದಿಂದ, ಆಳುವ ಒಬ್ಬ ಅಭಿಷಿಕ್ತರು ಬರುವುದರೊಳಗೆ ಏಳು ವಾರಗಳು ಕಳೆಯಬೇಕು! ಅದು ಪುನಃ ಕಟ್ಟಿದ ಮೇಲೆ, ಅರವತ್ತೆರಡು ವಾರಗಳು ಇರುವುದು. ಕಷ್ಟಕಾಲದಲ್ಲಿ ಬೀದಿ ಚೌಕಗಳಿಂದಲೂ ಕೋಟೆಕೊತ್ತಲುಗಳಿಂದಲೂ ಅದು ಕಟ್ಟಲಾಗುವುದು.


ಇವನ ನಂತರ, ಗೋಡೆಯ ಇನ್ನೊಂದು ಭಾಗವನ್ನು ಎಂದರೆ ಎಲ್ಯಾಷೀಬನ ಮನೆಯ ಬಾಗಿಲಿನಿಂದ ಅದೇ ಮನೆಯ ಕೊನೆಯವರೆಗೆ ಹಕ್ಕೋಚನ ಮೊಮ್ಮಗನೂ, ಊರೀಯನ ಮಗನೂ ಆದ ಮೆರೇಮೋತನು ಜೀರ್ಣೋದ್ಧಾರ ಮಾಡಿದನು.


ಇದಕ್ಕೆ ಮುಂಚೆ ನಮ್ಮ ದೇವರ ಆಲಯದ ಉಗ್ರಾಣದ ಮೇಲೆ ವಿಚಾರಕನಾಗಿದ್ದ ಎಲ್ಯಾಷೀಬನೆಂಬ ಯಾಜಕನು ಟೋಬೀಯನ ಸಮೀಪ ಬಂಧುವಾಗಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು