Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 2:7 - ಕನ್ನಡ ಸಮಕಾಲಿಕ ಅನುವಾದ

7 ತರುವಾಯ ನಾನು ಅರಸನಿಗೆ, “ಯೂಫ್ರೇಟೀಸ್ ನದಿ ಆಚೆಯ ರಾಜ್ಯಪಾಲರು ತಮ್ಮ ಪ್ರಾಂತಗಳಲ್ಲಿ ಹಾದು, ಯೆಹೂದದ ನಾಡಿಗೆ ಹೋಗುವುದಕ್ಕೆ ನನಗೆ ಅಪ್ಪಣೆ ಕೊಡಬೇಕಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ತರುವಾಯ ನಾನು ಅರಸನಿಗೆ, “ನದಿಯಾಚೆಯ ದೇಶಾಧಿಪತಿಗಳು ತಮ್ಮ ಪ್ರಾಂತ್ಯಗಳ ಮೂಲಕ ಹಾದು ಯೆಹೂದ ಸೀಮೆಗೆ ಹೋಗುವುದಕ್ಕೆ ನನಗೆ ಅಪ್ಪಣೆಕೊಡುವ ಹಾಗೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ತರುವಾಯ ನಾನು ರಾಜನಿಗೆ, “ನದಿ ಆಚೆಯ ದೇಶಾಧಿಪತಿಗಳು ತಮ್ಮ ಪ್ರಾಂತ್ಯಗಳಲ್ಲಿ ಹಾದು ಜುದೇಯ ನಾಡಿಗೆ ಹೋಗುವುದಕ್ಕೆ ನನಗೆ ಅಪ್ಪಣೆಕೊಡಬೇಕಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ತರುವಾಯ ನಾನು ಅರಸನಿಗೆ - ಹೊಳೆಯಾಚೆಯ ದೇಶಾಧಿಪತಿಗಳು ತಮ್ಮ ಪ್ರಾಂತಗಳಲ್ಲಿ ಹಾದು ಯೆಹೂದ ಸೀಮೆಗೆ ಹೋಗುವದಕ್ಕೆ ನನಗೆ ಅಪ್ಪಣೆಕೊಡುವ ಹಾಗೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಆಮೇಲೆ “ರಾಜನೇ, ನನಗೆ ಸಹಾಯವನ್ನು ಮಾಡಲು ನೀನು ಇಚ್ಫಿಸುವುದಾದರೆ ಯೂಫ್ರೇಟೀಸ್ ನದಿಯ ಪಶ್ಚಿಮದ ಪ್ರಾಂತ್ಯದ ರಾಜ್ಯಪಾಲರಿಗೆ ಪತ್ರಗಳನ್ನು ಬರೆದುಕೊಟ್ಟರೆ ನಾನು ಯೆಹೂದಕ್ಕೆ ಅವರ ಪ್ರಾಂತ್ಯಗಳ ಮೂಲಕವಾಗಿ ಸುರಕ್ಷಿತವಾಗಿ ಹೋಗಲು ಸಾಧ್ಯವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 2:7
6 ತಿಳಿವುಗಳ ಹೋಲಿಕೆ  

“ಅರ್ತಷಸ್ತ ರಾಜನಾದ ನಾನು, ಯೂಫ್ರೇಟೀಸ್ ನದಿ ಆಚೆಯ ಪ್ರಾಂತಗಳ ಭಂಡಾರ ಮುಖ್ಯಸ್ಥರಿಗೆ ಆಜ್ಞಾಪಿಸುವುದೇನೆಂದರೆ ಯಾಜಕನೂ, ಪರಲೋಕ ದೇವರ ಧರ್ಮಾಚಾರ್ಯನೂ ಆದ ಎಜ್ರನು ಕೇಳಿಕೊಳ್ಳುವುದನ್ನೆಲ್ಲಾ ನೀವು ತಪ್ಪದೆ ಕೊಡಬೇಕು.


ಆಗ ನಾನು ಯೂಫ್ರೇಟೀಸ್ ನದಿಯ ಆಚೆಯಲ್ಲಿರುವ ಅಧಿಪತಿಗಳ ಬಳಿಗೆ ಬಂದು, ಅರಸನ ಪತ್ರಗಳನ್ನು ಅವರಿಗೆ ಕೊಟ್ಟೆನು. ಅರಸನು ನನ್ನ ಸಂಗಡ ಸೈನ್ಯಾಧಿಪತಿಗಳನ್ನೂ, ಕುದುರೆ ಸವಾರರನ್ನೂ ಕಳುಹಿಸಿದನು.


ಅವರು ಅರಸನ ಆಜ್ಞೆಗಳನ್ನು ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಅರಸನ ಅಧಿಪತಿಗಳಿಗೂ, ಯಜಮಾನರಿಗೂ ಒಪ್ಪಿಸಿದರು. ಆಗ ಅವರು ಜನರಿಗೂ, ದೇವರ ಆಲಯಕ್ಕೂ ಸಹಾಯ ಮಾಡಿದರು.


ಬಳಿಕ ದಾರ್ಯಾವೆಷನು ಬರೆದು ಕಳುಹಿಸಿದ್ದು ಏನೆಂದರೆ, ಯೂಫ್ರೇಟೀಸ್ ನದಿಯ ಆಚೆಯಲ್ಲಿರುವ ಅಧಿಪತಿಯಾದ ತತ್ತೆನೈನೇ, ಶೆತರ್ ಬೋಜೆನೈಯೇ, ನದಿಯ ಆಚೆಯಲ್ಲಿರುವ ನಿಮ್ಮ ಜೊತೆಗಾರರು ಸಹ ಆ ಸ್ಥಳವನ್ನು ಬಿಟ್ಟು ದೂರವಾಗಿರಿ.


“ನಮ್ಮ ದೇವರ ಕೃಪಾಹಸ್ತವು ಅವರನ್ನು ಹುಡುಕುವವರೆಲ್ಲರ ಮೇಲೆಯೂ ಇದೆ, ಆದರೆ ಅವರ ಕೋಪವು ಅವರನ್ನು ತ್ಯಜಿಸುವ ಎಲ್ಲರ ವಿರುದ್ಧವಾಗಿರುತ್ತದೆ,” ಎಂದು ನಾವು ಅರಸನಿಗೆ ಹೇಳಿದ್ದರಿಂದ, ಮಾರ್ಗದಲ್ಲಿ ಶತ್ರುವಿಗೆ ವಿರೋಧವಾಗಿ ನಮಗೆ ಸಹಾಯ ಕೊಡಲು ಸೈನ್ಯವನ್ನೂ ಅಶ್ವಬಲವನ್ನೂ ಅರಸನಿಂದ ಕೇಳಲು ನಾಚಿಕೆಪಟ್ಟೆವು.


ಅಲ್ಲಿಂದ ಯೂಫ್ರೇಟೀಸ್ ನದಿಯ ರಾಜ್ಯಪಾಲನ ಅಧಿಕಾರದಲ್ಲಿರುವ ಸ್ಥಳಗಳಿಂದ ಗಿಬ್ಯೋನ್ ಮತ್ತು ಮಿಚ್ಪ ಊರುಗಳ, ಗಿಬ್ಯೋನಿನವನಾದ ಮೆಲೆಟ್ಯ, ಮೇರೊನೋತಿನವನಾದ ಯಾದೋನ್ ಇವರೂ, ಜೀರ್ಣೋದ್ಧಾರ ಮಾಡಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು