ನೆಹೆಮೀಯ 12:31 - ಕನ್ನಡ ಸಮಕಾಲಿಕ ಅನುವಾದ31 ಆಗ ನಾನು ಯೆಹೂದದ ಪ್ರಧಾನರನ್ನು ಗೋಡೆಯ ಮೇಲೆ ಬರಮಾಡಿ, ಸ್ತುತಿಸಲು ಎರಡು ಗುಂಪುಗಳನ್ನು ನೇಮಿಸಿದೆನು. ಒಂದು ಗುಂಪಿನವರು ಗೋಡೆಯ ಮೇಲೆ ಬಲಗಡೆಯಿಂದ ತಿಪ್ಪೆ ಬಾಗಿಲ ಕಡೆಗೆ ಹೋದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201931 ಆನಂತರ ನಾನು ಯೆಹೂದ ಪ್ರಮುಖರನ್ನು ಗೋಡೆಯ ಮೇಲೆ ಕರೆದುಕೊಂಡು ಬಂದು, ಆರಾಧನೆ ಮಂಡಳಿಯವರಿಗೆ ಎರಡು ದೊಡ್ಡ ಗುಂಪುಗಳಾಗಿ ಆಲ್ಲಿ ನಿಲ್ಲಬೇಕೆಂದು ಅಪ್ಪಣೆಮಾಡಿದನು. ಒಂದು ಗುಂಪಿನವರು ಮೆರವಣಿಗೆಯಿಂದ ಗೋಡೆಯ ಮೇಲೆ ತಿಪ್ಪೆಬಾಗಿಲಿನಿಂದ ಬಲಗಡೆಗೆ ಹೋದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)31 ಆಮೇಲೆ ನಾನು ಯೆಹೂದ ಪ್ರಮುಖರನ್ನು ಗೋಡೆಯ ಮೇಲೆ ಕರೆದುಕೊಂಡು ಬಂದೆ; ಭಜನೆ ಮಂಡಲಿಯವರಿಗೆ, “ಎರಡು ದೊಡ್ಡ ಗುಂಪುಗಳಾಗಿ ಇಲ್ಲಿ ನಿಲ್ಲಿ,” ಎಂದು ಅಪ್ಪಣೆಮಾಡಿದೆ. ಒಂದು ಗುಂಪಿನವರು ಮೆರವಣಿಗೆಯಿಂದ ಗೋಡೆಯ ಮೇಲೆ ತಿಪ್ಪೆಬಾಗಿಲಿನಿಂದ ಬಲಗಡೆಗೆ ಹೋದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)31 ಆಮೇಲೆ ನಾನು ಯೆಹೂದ ಪ್ರಭುಗಳನ್ನು ಗೋಡೆಯ ಮೇಲೆ ಕರಕೊಂಡು ಬಂದು ಭಜನ ಮಂಡಲಿಯವರಿಗೆ - ಎರಡು ದೊಡ್ಡ ಗುಂಪುಗಳಾಗಿ ಇಲ್ಲಿ ನಿಲ್ಲಬೇಕೆಂದು ಅಪ್ಪಣೆಮಾಡಿದೆನು. ಒಂದು ಗುಂಪಿನವರು ಮೆರವಣಿಗೆಯಿಂದ ಗೋಡೆಯ ಮೇಲೆ ತಿಪ್ಪೆಬಾಗಲಿನಿಂದ ಬಲಗಡೆಗೆ ಹೋದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್31 ನಾನು ಯೆಹೂದದ ನಾಯಕರಿಗೆ ಗೋಡೆಯ ಮೇಲೆ ನಿಂತುಕೊಳ್ಳಲು ಹೇಳಿದೆನು. ಅಲ್ಲದೆ ದೇವರಿಗೆ ಕೃತಜ್ಞತಾಸ್ತುತಿ ಮಾಡಲು ಗಾಯಕರ ಎರಡು ದೊಡ್ಡ ಗುಂಪುಗಳನ್ನು ಆರಿಸಿಕೊಂಡೆನು. ಒಂದು ಗುಂಪಿನವರು ಮೆರವಣಿಗೆಯಿಂದ ಬಲಗಡೆಯಿದ್ದ ತಿಪ್ಪೆಬಾಗಿಲಿನ ಕಡೆಹೋದರು. ಅಧ್ಯಾಯವನ್ನು ನೋಡಿ |