Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 12:24 - ಕನ್ನಡ ಸಮಕಾಲಿಕ ಅನುವಾದ

24 ಲೇವಿಯರ ಮುಖ್ಯಸ್ಥರಾದ ಹಷಬ್ಯನೂ, ಶೇರೇಬ್ಯನೂ; ಕದ್ಮಿಯೇಲನ ಮಗನಾದ ಯೇಷೂವನೂ, ಅವರಿಗೆ ಎದುರಾದ ತಂಡವಾಗಿ ನಿಂತ ಅವರ ಸಹೋದರರೂ, ದೇವರ ಮನುಷ್ಯನಾದ ದಾವೀದನ ಆಜ್ಞೆಯ ಪ್ರಕಾರ ಕೃತಜ್ಞತಾಸ್ತುತಿ ಮಾಡುವುದಕ್ಕೆ ವರ್ಗ ವರ್ಗಗಳಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಈ ಲೇವಿಯರ ಗೋತ್ರಪ್ರಧಾನರಲ್ಲಿ ಯೇಷೂವನ ಮಗನೂ ಯೋಚಾದಾಕನ ಮೊಮ್ಮಗನೂ ಅದ ಯೋಯಾಕೀಮ್, ದೇಶಾಧಿಪತಿಯಾದ ನೆಹೆಮೀಯ, ಯಾಜಕನೂ ಧರ್ಮೋಪದೇಶಕನಾದ ಎಜ್ರ ಇವರ ಕಾಲದಲ್ಲಿದ್ದವರು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಈ ಲೇವಿ ಗೋತ್ರಪ್ರಧಾನರಲ್ಲಿ ಯೇಷೂವನ ಮಗನೂ ಯೋಚಾದಾಕನ ಮೊಮ್ಮಗನೂ ಆದ ಯೋಯಾಕೀಮ್, ರಾಜ್ಯಪಾಲನಾದ ನೆಹೆಮೀಯ, ಯಾಜಕನೂ ಧರ್ಮೋಪದೇಶಕನೂ ಆದ ಎಜ್ರ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಈ ಲೇವಿಗೋತ್ರಪ್ರಧಾನರಲ್ಲಿ ಯೇಷೂವನ ಮಗನೂ ಯೋಚಾದಾಕನ ಮೊಮ್ಮಗನೂ ಆದ ಯೋಯಾಕೀಮ್, ದೇಶಾಧಿಪತಿಯಾದ ನೆಹೆಮೀಯ, ಯಾಜಕನೂ ಧರ್ಮೋಪದೇಶಕನೂ ಆದ ಎಜ್ರ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಲೇವಿಯರಲ್ಲಿ ಇವರು ಮುಖಂಡರು: ಹಷಬ್ಯ, ಶೇರೇಬ್ಯ, ಕದ್ಮೀಯೇಲನ ಮಗನಾದ ಯೇಷೂವ ಮತ್ತು ಅವನ ಸಹೋದರರು. ಇವರು ತಮ್ಮ ಸಹೋದರರ ಎದುರು ನಿಂತು ಸ್ತೋತ್ರಗೀತೆ ಹಾಡುವರು. ಹೀಗೆ ಪರಸ್ಪರ ಹಾಡುವುದು ದೇವರ ಮನುಷ್ಯನಾದ ದಾವೀದನ ಆಜ್ಞೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 12:24
18 ತಿಳಿವುಗಳ ಹೋಲಿಕೆ  

ಇದಲ್ಲದೆ ಆಸಾಫನ ಮಗ ಜಬ್ದೀಯ ಮಗ, ಮೀಕನ ಮಗ ಮತ್ತನ್ಯನು ಪ್ರಾರ್ಥನೆಯನ್ನು ಮತ್ತು ಕೃತಜ್ಞತಾಸ್ತುತಿಯನ್ನು ಪ್ರಾರಂಭಿಸಲು ಮುಖ್ಯಸ್ಥನಾಗಿದ್ದನು. ಅವನ ಸಂಗಡಿಗರಲ್ಲಿ ಎರಡನೆಯವನು ಬಕ್ಬುಕ್ಯನು, ಅವನ ಸಂಗಡ ಯೆದುತೂನನ ಮಗ, ಗಲಾಲನ ಮಗ, ಶಮ್ಮೂವನ ಮಗ ಅಬ್ದನು.


ಆಗ ಮೆಟ್ಟಿಲುಗಳ ಮೇಲೆ ಲೇವಿಯರಲ್ಲಿ ಯೇಷೂವ, ಬಾನೀ, ಕದ್ಮಿಯೇಲ್, ಶೆಬನ್ಯ, ಬುನ್ನಿ, ಶೇರೇಬ್ಯ, ಬಾನೀ, ಕೆನಾನಿ ಎಂಬವರು ನಿಂತು ಮಹಾಶಬ್ದದಿಂದ ತಮ್ಮ ದೇವರಾಗಿರುವ ಯೆಹೋವ ದೇವರಿಗೆ ಮೊರೆಯಿಟ್ಟರು.


ಆಮೇಲೆ ಯೇಷೂವ, ಬಾನೀ, ಶೇರೇಬ್ಯ, ಯಾಮೀನ್, ಅಕ್ಕೂಬ್, ಶಬ್ಬೆತೈ, ಹೋದೀಯ, ಮಾಸೇಯ, ಕೆಲೀಟ, ಅಜರ್ಯ, ಯೋಜಾಬಾದ್, ಹಾನಾನ್, ಪೆಲಾಯ ಎಂಬ ಲೇವಿಯರು ನಿಯಮವನ್ನು ತಿಳಿಯುವಂತೆ ಹೇಳಿದರು. ಜನರು ತಮ್ಮ ತಮ್ಮ ಸ್ಥಳಗಳಲ್ಲಿ ನಿಂತುಕೊಂಡಿದ್ದರು.


ಲೇವಿಯರು: ಹೋದವ್ಯನ ಸಂತತಿಯಾದ ಯೇಷೂವನ, ಕದ್ಮಿಯೇಲನ ವಂಶಜರು 74.


ಅವನು ತನ್ನ ತಂದೆಯಾದ ದಾವೀದನ ಕ್ರಮದ ಪ್ರಕಾರ, ಅವರ ಸೇವೆಗೆ ಯಾಜಕ ವರ್ಗಗಳವರನ್ನೂ ಪ್ರತಿ ದಿವಸಕ್ಕೆ ಬೇಕಾದ ಕಾರ್ಯದ ಪ್ರಕಾರ, ಯಾಜಕರ ಮುಂದೆ ಸ್ತುತಿಸುವುದಕ್ಕೂ, ಸೇವೆ ಮಾಡುವುದಕ್ಕೂ ತಮ್ಮ ವಿಚಾರಗಳಲ್ಲಿ ಲೇವಿಯರನ್ನೂ, ಸೇವೆಯ ಬಾಗಿಲಲ್ಲಿ ತಮ್ಮ ವರ್ಗಗಳ ಸರದಿಯ ಪ್ರಕಾರವಾಗಿ ದ್ವಾರಪಾಲಕರನ್ನೂ ನೇಮಿಸಿದನು. ಏಕೆಂದರೆ ದೇವರ ಮನುಷ್ಯನಾದ ದಾವೀದನು ಹಾಗೆಯೇ ನೇಮಿಸಿದ್ದನು.


ಸ್ತ್ರೀಯು ಎಲೀಯನಿಗೆ, “ನೀನು ದೇವರ ಮನುಷ್ಯನೆಂದೂ, ನಿನ್ನ ಬಾಯಲ್ಲಿರುವ ಯೆಹೋವ ದೇವರ ವಾಕ್ಯವು ಸತ್ಯವೆಂದೂ ಇದರಿಂದ ಈಗ ತಿಳಿದಿದ್ದೇನೆ,” ಎಂದಳು.


ಯೆಹೂದದ ಗೋತ್ರದವರು ಗಿಲ್ಗಾಲಿನಲ್ಲಿ ಯೆಹೋಶುವನ ಬಳಿಗೆ ಬಂದರು. ಆಗ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನು ಅವನಿಗೆ, “ಕಾದೇಶ್ ಬರ್ನೇಯದಲ್ಲಿ ಯೆಹೋವ ದೇವರು ನನ್ನನ್ನೂ, ನಿನ್ನನ್ನೂ ಕುರಿತು ದೇವರ ಮನುಷ್ಯನಾದ ಮೋಶೆಗೆ ಹೇಳಿದ ಮಾತನ್ನು ನೀನು ಬಲ್ಲೆ.


ದೇವರ ಮನುಷ್ಯನಾದ ಮೋಶೆಯು ಮರಣ ಹೊಂದುವದಕ್ಕಿಂತ ಮುಂಚೆ ಇಸ್ರಾಯೇಲರಿಗೆ ಕೊಟ್ಟ ಆಶೀರ್ವಾದ:


ಆದ್ದರಿಂದ ದೇವರ ಮನುಷ್ಯನು ಪರಿಪೂರ್ಣನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು.


ದೇವರ ಮನುಷ್ಯನೇ, ನೀನಾದರೋ ಇವುಗಳಿಂದ ಓಡಿಹೋಗು. ನೀತಿ, ಭಕ್ತಿ, ನಂಬಿಕೆ, ಪ್ರೀತಿ, ತಾಳ್ಮೆ, ಸಾತ್ವಿಕತ್ವ ಇವುಗಳನ್ನು ಹಿಂಬಾಲಿಸು.


ಎಲ್ಯಾಷೀಬನ ಮಗನಾದ ಯೋಹಾನಾನನ ಕಾಲದವರೆಗೆ ಲೇವಿ ಎಂಬವನ ಪುತ್ರರಾದ ಪಿತೃಗಳ ಮುಖ್ಯಸ್ಥರು ಇತಿಹಾಸ ಗ್ರಂಥದಲ್ಲಿ ಬರೆದಿರುತ್ತದೆ.


ದೇವರ ಮನುಷ್ಯನಾದ ದಾವೀದನ ಗೀತವಾದ್ಯಗಳನ್ನು ಹಿಡಿಯುವ ಜೆಕರೀಯನ ಸಹೋದರರಾದ ಶೆಮಾಯ, ಅಜರಯೇಲ್, ಮಿಲಲೈ, ಗಿಲಲೈ, ಮಾಯೈ, ನೆತನೆಯೇಲ್, ಯೆಹೂದ, ಹನಾನೀ ಎಂಬವರು ನಡೆದರು; ನಿಯಮಶಾಸ್ತ್ರಿಯಾದ ಎಜ್ರನು ಇವರ ಮುಂದೆ ನಡೆದನು.


ಇದಲ್ಲದೆ ಯೆಹೋವ ದೇವರ ಮಂಜೂಷದ ಮುಂದೆ ಸೇವೆಮಾಡಲೂ, ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಸ್ಮರಿಸುವುದಕ್ಕೂ, ಕೊಂಡಾಡುವುದಕ್ಕೂ, ಹೊಗಳುವುದಕ್ಕೂ ಲೇವಿಯರಲ್ಲಿ ಕೆಲವರನ್ನು ನೇಮಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು