ನೆಹೆಮೀಯ 11:3 - ಕನ್ನಡ ಸಮಕಾಲಿಕ ಅನುವಾದ3 ಯೆರೂಸಲೇಮಿನಲ್ಲಿ ವಾಸವಾಗಿದ್ದ ಸಂಸ್ಥಾನಪ್ರಧಾನರು ಯಾರೆಂದರೆ: ಯೆಹೂದದ ಪಟ್ಟಣಗಳಲ್ಲಿ ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ದೇವಾಲಯದ ಸೇವಕರೂ, ಸೊಲೊಮೋನನ ಸೇವಕರ ಮಕ್ಕಳೂ, ಅವರವರು ತಮ್ಮ ತಮ್ಮ ಪಟ್ಟಣಗಳ ಸ್ವಾಸ್ತ್ಯಗಳಲ್ಲಿ ವಾಸವಾಗಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದ ಯೆಹೂದ ಸಂಸ್ಥಾನ ಪ್ರಧಾನರು ಯಾರಾರೆಂದರೆ: ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ದೇವಾಲಯದ ಸೇವಕರು, ಸೊಲೊಮೋನನ ಸೇವಕರ ವಂಶದವರೂ ತಮ್ಮ ತಮ್ಮ ಸ್ವತ್ತುಗಳಿರುವ ಯೆಹೂದ ದೇಶದ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3-4 ಯೆಹೂದ ಕುಲದವರಲ್ಲಿ - ಒಬ್ಬನು ಅತಾಯ; ಇವನು ಉಜ್ಜೀಯನ ಮಗ; ಇವನು ಜೆಕರ್ಯನ ಮಗ; ಇವನು ಅಮರ್ಯನ ಮಗ; ಇವನು ಶೆಫಟ್ಯನ ಮಗ; ಇವನು ಮಹಲಲೇಲನ ಮಗ; ಇವನು ಪೆರೆಚ್ ಸಂತಾನದವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಯೆರೂಸಲೇವಿುನಲ್ಲಿ ವಾಸಿಸುತ್ತಿದ್ದ [ಯೆಹೂದ] ಸಂಸ್ಥಾನಪ್ರಧಾನರ ಪಟ್ಟಿ. (ಸಾಧಾರಣ ಇಸ್ರಾಯೇಲ್ಯರೂ ಯಾಜಕರೂ ಲೇವಿಯರೂ ದೇವಸ್ಥಾನದಾಸರೂ ಸೊಲೊಮೋನನ ದಾಸರ ವಂಶದವರೂ ತಮ್ಮ ತಮ್ಮ ಸ್ವಾಸ್ತ್ಯಗಳಿರುವ ಯೆಹೂದ ದೇಶದ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಜೆರುಸಲೇಮಿನಲ್ಲಿ ವಾಸಿಸಿದ ಪ್ರಾಂತ್ಯಾಧಿಕಾರಿಗಳ ಪಟ್ಟಿ, (ಕೆಲವು ಇಸ್ರೇಲ್ ಜನರು, ಯಾಜಕರು, ಲೇವಿಯರು, ಆಲಯದ ಸೇವಕರು ಮತ್ತು ಸೊಲೊಮೋನನ ಸೇವಕರ ಸಂತಾನದವರು ಯೆಹೂದ ಪ್ರಾಂತ್ಯದ ಊರುಗಳಲ್ಲಿ ವಾಸಿಸಿದರು. ಇವರೆಲ್ಲರು ತಮ್ಮ ಊರುಗಳಲ್ಲಿದ್ದ ತಮ್ಮ ಸ್ವಂತ ಸ್ಥಳಗಳಲ್ಲಿ ಜೀವಿಸಿದರು. ಅಧ್ಯಾಯವನ್ನು ನೋಡಿ |