Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 11:22 - ಕನ್ನಡ ಸಮಕಾಲಿಕ ಅನುವಾದ

22 ಮೀಕನ ಮಗ, ಮತ್ತನ್ಯನ ಮಗ, ಹಷಬ್ಯನ ಮಗ, ಬಾನೀಯ ಮಗ ಉಜ್ಜೀಯು ಯೆರೂಸಲೇಮಿನಲ್ಲಿರುವ ಲೇವಿಯರ ಮೇಲ್ವಿಚಾರಕನಾಗಿದ್ದನು. ಆಸಾಫನ ವಂಶದಲ್ಲಿರುವ ಹಾಡುಗಾರನಾದ ಉಜ್ಜೀಯನು ದೇವರ ಆಲಯ ಕಾರ್ಯದ ಮೇಲೆ ಅಧಿಕಾರಿಯಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ದೇವಾಲಯದ ಕೆಲಸದ ಸಂಬಂಧವಾಗಿ ಗಾಯಕರಾದ ಆಸಾಫ್ಯರಿಗೆ ಸೇರಿದ ಬಾನೀಯನ ಮಗನೂ, ಹಷಬ್ಯನ ಮೊಮ್ಮಗನೂ, ಮತ್ತನ್ಯನ ಮರಿಮಗನೂ, ಮೀಕನ ವಂಶದವನಾದ ಆದ ಉಜ್ಜೀಯು ಯೆರೂಸಲೇಮಿನಲ್ಲಿದ್ದ ಲೇವಿಯರ ನಾಯಕನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ದೇವಾಲಯ ಸೇವಾಸಂಬಂಧದಲ್ಲಿ ಗಾಯಕರಾದ ಆಸಾಫ್ಯರಿಗೆ ಸೇರಿದ ಬಾನೀಯ ಮಗನೂ ಹಷಬ್ಯನ ಮೊಮ್ಮಗನೂ ಮತ್ತನ್ಯನ ಮರಿಮಗನೂ ಮೀಕನ ವಂಶದವನೂ ಆದ ಉಜ್ಜೀಯು ಜೆರುಸಲೇಮಿನಲ್ಲಿದ್ದ ಲೇವಿಯರ ನಾಯಕನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ದೇವಾಲಯ ಸೇವಾ ಸಂಬಂಧದಲ್ಲಿ ಗಾಯಕರಾದ ಆಸಾಫ್ಯರಿಗೆ ಸೇರಿದ ಬಾನೀಯ ಮಗನೂ ಹಷಬ್ಯನ ಮೊಮ್ಮಗನೂ ಮತ್ತನ್ಯನ ಮರಿಮಗನೂ ಮೀಕನ ವಂಶದವನೂ ಆದ ಉಜ್ಜೀಯು ಯೆರೂಸಲೇವಿುನಲ್ಲಿದ್ದ ಲೇವಿಯರ ನಾಯಕನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಮೀಕ ವಂಶಕ್ಕೆ ಸೇರಿದ ಉಜ್ಜೀಯು ಜೆರುಸಲೇಮಿನಲ್ಲಿ ಲೇವಿಯರಿಗೆಲ್ಲಾ ಮುಖ್ಯಸ್ಥನಾಗಿದ್ದನು. ಉಜ್ಜೀಯು ಬಾನೀಯ ಮಗ. (ಬಾನೀಯು ಹಷಬ್ಯನ ಮಗ; ಹಷಬ್ಯನು ಮತ್ತನ್ಯನ ಮಗ; ಮತ್ತನ್ಯನು ಮೀಕನ ಮಗ.) ಉಜ್ಜೀಯು ಆಸಾಫನ ಸಂತಾನಕ್ಕೆ ಸೇರಿದವನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 11:22
19 ತಿಳಿವುಗಳ ಹೋಲಿಕೆ  

ಮಾಸೇಯನೂ, ಶೆಮಾಯನೂ, ಎಲಿಯಾಜರನೂ, ಉಜ್ಜೀಯೂ, ಯೆಹೋಹಾನಾನನೂ, ಮಲ್ಕೀಯನೂ, ಏಲಾಮನೂ, ಏಜೆರನೂ, ತಮ್ಮ ಮೇಲ್ವಿಚಾರಕನಾದ ಯೆಜ್ರಾಹ್ಯನ ಸಂಗಡ ಹಾಡುಗಾರರು ಗಟ್ಟಿಯಾಗಿ ಹಾಡಿದರು.


ತುತೂರಿಗಳನ್ನು ಹಿಡಿಯುವ ಯಾಜಕರ ಮಕ್ಕಳಲ್ಲಿ ಆಸಾಫನ ಮಗ ಜಕ್ಕೂರನ ಮಗ, ಮೀಕಾಯನ ಮಗ, ಮತ್ತನ್ಯನ ಮಗ, ಶೆಮಾಯನ ಮಗ, ಯೋನಾತಾನನ ಮಗ ಜೆಕರ್ಯನೂ,


ಪರಾಕ್ರಮಶಾಲಿಗಳಾಗಿದ್ದ ಅವರ ಸಹೋದರರು 128 ಮಂದಿ ಇದ್ದರು. ಹಗ್ಗೆದೋಲೀಮನ ಮಗನಾದ ಜಬ್ದಿಯೇಲನು ಅವರಿಗೆ ಮೇಲ್ವಿಚಾರಕನಾಗಿದ್ದನು.


ಅಹೀಟೂಬನ ಮಗ, ಮೆರಾಯೋತನ ಮಗ, ಚಾದೋಕನ ಮಗ, ಮೆಷುಲ್ಲಾಮನ ಮಗ, ಹಿಲ್ಕೀಯನ ಮಗ ಸೆರಾಯನು ದೇವರ ಆಲಯದ ನಾಯಕನಾಗಿದ್ದನು.


ಜಿಕ್ರಿಯ ಮಗ, ಯೋಯೇಲನು ಅವರಿಗೆ ಮೇಲ್ವಿಚಾರಕನಾಗಿದ್ದನು. ಹಸ್ಸೆನುವಾಹನ ಮಗ ಯೆಹೂದನು ಪಟ್ಟಣದ ಹೊಸ ಭಾಗದ ಮೇಲೆ ಮೇಲ್ವಿಚಾರಕನಾಗಿದ್ದನು.


ಹೋದೀಯ, ಬಾನೀ, ಬೆನೀನೂ ಎಂಬವರು.


ಆಮೇಲೆ ಯೇಷೂವ, ಬಾನೀ, ಶೇರೇಬ್ಯ, ಯಾಮೀನ್, ಅಕ್ಕೂಬ್, ಶಬ್ಬೆತೈ, ಹೋದೀಯ, ಮಾಸೇಯ, ಕೆಲೀಟ, ಅಜರ್ಯ, ಯೋಜಾಬಾದ್, ಹಾನಾನ್, ಪೆಲಾಯ ಎಂಬ ಲೇವಿಯರು ನಿಯಮವನ್ನು ತಿಳಿಯುವಂತೆ ಹೇಳಿದರು. ಜನರು ತಮ್ಮ ತಮ್ಮ ಸ್ಥಳಗಳಲ್ಲಿ ನಿಂತುಕೊಂಡಿದ್ದರು.


ಇವನ ನಂತರ ಜೀರ್ಣೋದ್ಧಾರ ಮಾಡಿದವರು ಲೇವಿಯರು. ಅವರಲ್ಲಿ ಮೊದಲು ಬಾನೀಯ ಮಗನಾದ ರೆಹೂಮ್, ಇವನ ಸಮೀಪದಲ್ಲಿ ತನ್ನ ನಾಡಿನವರೊಡನೆ ಕಟ್ಟುತ್ತಿದ್ದ ಕೆಯೀಲದ ಅರೆನಾಡೊಡೆಯನಾದ ಹಷಬ್ಯ ಇವರು.


ಹಷಬ್ಯನೂ, ಅವನ ಸಂಗಡ ಮೆರಾರೀಯ ಪುತ್ರರಲ್ಲಿ ಯೆಶಾಯನೂ, ಅವನ ಸಹೋದರರೂ, ಅವರ ಪುತ್ರರೂ ಆದ ಇಪ್ಪತ್ತು ಮಂದಿಯನ್ನೂ,


ದೇವರು ತಮ್ಮ ರಕ್ತದಿಂದ ಕೊಂಡುಕೊಂಡ ಸಭೆಗೆ ನೀವು ಕುರುಬರಾಗಿರುವುದಕ್ಕಾಗಿ ಪವಿತ್ರಾತ್ಮರು ನಿಮ್ಮನ್ನೇ ಮಂದೆಯಲ್ಲಿ ಮೇಲ್ವಿಚಾರಕರನ್ನಾಗಿ ಇಟ್ಟಿರುವುದರಿಂದ, ನಿಮ್ಮ ವಿಷಯದಲ್ಲಿಯೂ ಇಡೀ ಮಂದೆಯ ವಿಷಯದಲ್ಲಿಯೂ ಎಚ್ಚರವಾಗಿರಿ.


ಆಗ ನಾನು ಯಾಜಕನಾದ ಶೆಲೆಮ್ಯನನ್ನೂ, ಲೇಖಕನಾದ ಚಾದೋಕನನ್ನೂ, ಲೇವಿಯರಲ್ಲಿರುವ ಪೆದಾಯನನ್ನೂ ಅವರಿಗೆ ಸಹಾಯವಾಗಿ ಮತ್ತನ್ಯನ ಮಗನಾದ ಜಕ್ಕೂರನ ಮಗ ಹಾನಾನನನ್ನೂ ಬೊಕ್ಕಸಗಳ ಮೇಲೆ ನೇಮಿಸಿದೆನು. ಅವರು ನಂಬಿಗಸ್ತರೆಂದು ಹೆಸರುಗೊಂಡವರು. ತಮ್ಮ ಸಹೋದರರಿಗೆ ಹಂಚಿ ಕೊಡುವುದು ಅವರ ಕೆಲಸವಾಗಿತ್ತು.


ಏಕೆಂದರೆ ದಾವೀದನ ಮತ್ತು ಆಸಾಫನ ಕಾಲದಲ್ಲಿಯೇ ದೇವರಿಗೆ ಸ್ತೋತ್ರವನ್ನೂ, ಕೃತಜ್ಞತೆಯನ್ನೂ ಹಾಡತಕ್ಕ ಹಾಡುಗಾರರಲ್ಲಿ ಮುಖ್ಯಸ್ಥರಿದ್ದರು.


ಮೆಫೀಬೋಶೆತನಿಗೆ ಮೀಕನೆಂಬ ಹೆಸರುಳ್ಳ ಒಬ್ಬ ಮಗನಿದ್ದನು. ಚೀಬನ ಮನೆಯಲ್ಲಿ ವಾಸವಾಗಿದ್ದ ಸಮಸ್ತರೂ ಮೆಫೀಬೋಶೆತನಿಗೆ ದಾಸರಾಗಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು