Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 11:17 - ಕನ್ನಡ ಸಮಕಾಲಿಕ ಅನುವಾದ

17 ಇದಲ್ಲದೆ ಆಸಾಫನ ಮಗ ಜಬ್ದೀಯ ಮಗ, ಮೀಕನ ಮಗ ಮತ್ತನ್ಯನು ಪ್ರಾರ್ಥನೆಯನ್ನು ಮತ್ತು ಕೃತಜ್ಞತಾಸ್ತುತಿಯನ್ನು ಪ್ರಾರಂಭಿಸಲು ಮುಖ್ಯಸ್ಥನಾಗಿದ್ದನು. ಅವನ ಸಂಗಡಿಗರಲ್ಲಿ ಎರಡನೆಯವನು ಬಕ್ಬುಕ್ಯನು, ಅವನ ಸಂಗಡ ಯೆದುತೂನನ ಮಗ, ಗಲಾಲನ ಮಗ, ಶಮ್ಮೂವನ ಮಗ ಅಬ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಮೀಕನ ಮಗನೂ, ಜಬ್ದೀಯನ ಮೊಮ್ಮಗನೂ, ಆಸಾಫನ ಮರಿಮಗನೂ, ಪ್ರಾರ್ಥನೆಯ ಸಮಯದಲ್ಲಿ ಕೃತಜ್ಞತಾಸ್ತುತಿಯನ್ನು ಆರಂಭಿಸುತ್ತಾ ಆರಾಧನೆಯಲ್ಲಿ ಜನರನ್ನು ನಡೆಸುತ್ತಿದ್ದ ಮತ್ತನ್ಯ, ತನ್ನ ಬಂಧುಗಳಲ್ಲಿ ದ್ವಿತೀಯ ಸ್ಥಾನದವನಾದ ಬಕ್ಬುಕ್ಯ, ಶಮ್ಮೂವನ ಮಗನೂ, ಗಾಲಾಲನ ಮೊಮ್ಮಗನೂ, ಯೆದೂತೂನನ ಮರಿಮಗನೂ ಆದ ಅಬ್ದ ಎಂಬುವವರು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಮೀಕನ ಮಗ ಜಬ್ದೀಯ ಮೊಮ್ಮಗ, ಆಸಾಫನ ಮರಿಮಗ ಪ್ರಾರ್ಥನಾ ಸಮಯದಲ್ಲಿ ಕೃತಜ್ಞತಾ ಸ್ತುತಿಮಾಡಿರಿ ಎಂದು ಹೇಳಿ ಭಜಕರನ್ನು ನಡೆಸುತ್ತಿದ್ದ ಮತ್ತನ್ಯ, ತನ್ನ ಬಂಧುಗಳಲ್ಲಿ‍ ದ್ವಿತೀಯ ಸ್ಥಾನದವನಾದ ಬಕ್ಬುಕ್ಯ, ಶಮ್ಮೂವನ ಮಗನು; ಗಾಲಾಲನ ಮೊಮ್ಮಗನು, ಯೆದೂತೂನನ ಮರಿಮಗನು ಆದ ಅಬ್ದ ಎಂಬವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಮೀಕನ ಮಗನೂ ಜಬ್ದೀಯ ಮೊಮ್ಮಗನೂ ಆಸಾಫನ ಮರಿಮಗನೂ ಪ್ರಾರ್ಥನಾಸಮಯದಲ್ಲಿ - ಕೃತಜ್ಞತಾಸ್ತುತಿಮಾಡಿರಿ ಎಂದು ಹೇಳಿ ಭಜಕರನ್ನು ನಡಿಸುತ್ತಿದ್ದ ಮತ್ತನ್ಯ, ತನ್ನ ಬಂಧುಗಳಲ್ಲಿ ದ್ವಿತೀಯ ಸ್ಥಾನದವನಾದ ಬಕ್ಬುಕ್ಯ, ಶಮ್ಮೂವನ ಮಗನೂ ಗಾಲಾಲನ ಮೊಮ್ಮಗನೂ ಯೆದೂತೂನನ ಮರಿಮಗನೂ ಆದ ಅಬ್ದ ಎಂಬವರೂ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಮತ್ತನ್ಯ, (ಮತ್ತನ್ಯನು ಮೀಕನ ಮಗ; ಮೀಕನು ಜಬ್ದೀಯ ಮಗ; ಜಬ್ದೀಯು ಆಸಾಫನ ಮಗ. ಆಸಾಫನು ಗಾಯಕರ ನಾಯಕನಾಗಿದ್ದು ಪ್ರಾರ್ಥನೆ ಮತ್ತು ಸ್ತುತಿಗೀತೆಗಳಲ್ಲಿ ಜನರನ್ನು ನಡೆಸುತ್ತಿದ್ದನು.) ಬಕ್ಬುಕ್ಯ (ಇವನು ತನ್ನ ಸಹೋದರರಲ್ಲಿ ಎರಡನೆ ಸ್ಥಾನ ಪಡೆದಿದ್ದನು), ಮತ್ತು ಶಮ್ಮೂವನ ಮಗನಾದ ಅಬ್ದ, (ಶಮ್ಮೂವನು ಗಾಲಾಲನ ಮಗ; ಗಾಲಾಲನು ಯೆದೂತೂನನ ಮಗ).

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 11:17
15 ತಿಳಿವುಗಳ ಹೋಲಿಕೆ  

ಬಕ್ಬಕ್ಕರನೂ, ಹೆರೆಷನೂ, ಗಲಾಲನೂ, ಆಸಾಫನ ಮಗ, ಜಿಕ್ರಿಯ ಮಗ, ಮೀಕನ ಮಗ ಮತ್ತನ್ಯನೂ;


ಯಾವ ವಿಷಯವಾಗಿಯೂ ಚಿಂತೆ ಮಾಡದೆ, ಸರ್ವ ವಿಷಯದಲ್ಲಿ ಕೃತಜ್ಞತಾಸ್ತುತಿಯೊಡನೆ ಪ್ರಾರ್ಥನೆ ವಿಜ್ಞಾಪನೆಗಳನ್ನು ಮಾಡುತ್ತಾ ನಿಮ್ಮ ಬೇಡಿಕೆಯನ್ನು ದೇವರಿಗೆ ಸಮರ್ಪಿಸಿರಿ.


ಆಗ ನಾನು ಯೆಹೂದದ ಪ್ರಧಾನರನ್ನು ಗೋಡೆಯ ಮೇಲೆ ಬರಮಾಡಿ, ಸ್ತುತಿಸಲು ಎರಡು ಗುಂಪುಗಳನ್ನು ನೇಮಿಸಿದೆನು. ಒಂದು ಗುಂಪಿನವರು ಗೋಡೆಯ ಮೇಲೆ ಬಲಗಡೆಯಿಂದ ತಿಪ್ಪೆ ಬಾಗಿಲ ಕಡೆಗೆ ಹೋದರು.


ಮತ್ತನ್ಯನೂ, ಬಕ್ಬುಕ್ಯನೂ, ಓಬದ್ಯನೂ, ಮೆಷುಲ್ಲಾಮನೂ, ಟಲ್ಮೋನನೂ, ಅಕ್ಕೂಬನೂ ಬೊಕ್ಕಸಗಳ ಬಾಗಿಲುಗಳನ್ನು ಕಾಯುವವರಾಗಿದ್ದರು.


ಜಕ್ಕೂರ್, ಶೇರೇಬ್ಯ, ಶೆಬನ್ಯ,


“ದೇವರ ಪ್ರೀತಿ ನಿತ್ಯವಾಗಿ ನೆಲೆಗೊಂಡಿರುವುದು,” ಎಂದು ಯೆಹೋವ ದೇವರನ್ನು ಕೊಂಡಾಡುವುದಕ್ಕೆ ಹೇಮಾನನೂ, ಯೆದುತೂನನೂ ಹೆಸರು ಹೆಸರಾಗಿ ಆಯ್ಕೆಗೊಂಡು, ನೇಮಕರಾಗಿದ್ದರು.


ಇದಲ್ಲದೆ ಯೆಹೋವ ದೇವರ ಮಂಜೂಷದ ಮುಂದೆ ಸೇವೆಮಾಡಲೂ, ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಸ್ಮರಿಸುವುದಕ್ಕೂ, ಕೊಂಡಾಡುವುದಕ್ಕೂ, ಹೊಗಳುವುದಕ್ಕೂ ಲೇವಿಯರಲ್ಲಿ ಕೆಲವರನ್ನು ನೇಮಿಸಿದನು.


ಮೆಫೀಬೋಶೆತನಿಗೆ ಮೀಕನೆಂಬ ಹೆಸರುಳ್ಳ ಒಬ್ಬ ಮಗನಿದ್ದನು. ಚೀಬನ ಮನೆಯಲ್ಲಿ ವಾಸವಾಗಿದ್ದ ಸಮಸ್ತರೂ ಮೆಫೀಬೋಶೆತನಿಗೆ ದಾಸರಾಗಿದ್ದರು.


ಲೇವಿಯರ ಮುಖ್ಯಸ್ಥರಲ್ಲಿ ಶಬ್ಬೆತೈನೂ, ಯೋಜಾಬಾದನೂ ದೇವರ ಆಲಯದ ಹೊರಗಿನ ಕೆಲಸವನ್ನು ವಿಚಾರಿಸುವವರಾಗಿದ್ದರು.


ಪರಿಶುದ್ಧ ಪಟ್ಟಣದಲ್ಲಿರುವ ಲೇವಿಯರೆಲ್ಲಾ 284 ಮಂದಿಯಾಗಿದ್ದರು.


ಲೇವಿಯರ ಮುಖ್ಯಸ್ಥರಾದ ಹಷಬ್ಯನೂ, ಶೇರೇಬ್ಯನೂ; ಕದ್ಮಿಯೇಲನ ಮಗನಾದ ಯೇಷೂವನೂ, ಅವರಿಗೆ ಎದುರಾದ ತಂಡವಾಗಿ ನಿಂತ ಅವರ ಸಹೋದರರೂ, ದೇವರ ಮನುಷ್ಯನಾದ ದಾವೀದನ ಆಜ್ಞೆಯ ಪ್ರಕಾರ ಕೃತಜ್ಞತಾಸ್ತುತಿ ಮಾಡುವುದಕ್ಕೆ ವರ್ಗ ವರ್ಗಗಳಾಗಿದ್ದರು.


ಏಕೆಂದರೆ ದಾವೀದನ ಮತ್ತು ಆಸಾಫನ ಕಾಲದಲ್ಲಿಯೇ ದೇವರಿಗೆ ಸ್ತೋತ್ರವನ್ನೂ, ಕೃತಜ್ಞತೆಯನ್ನೂ ಹಾಡತಕ್ಕ ಹಾಡುಗಾರರಲ್ಲಿ ಮುಖ್ಯಸ್ಥರಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು