Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 1:3 - ಕನ್ನಡ ಸಮಕಾಲಿಕ ಅನುವಾದ

3 ಅವರು ನನಗೆ, “ಸೆರೆಯಿಂದ ತಪ್ಪಿಸಿಕೊಂಡು ಈಗ ಆ ನಾಡಿನಲ್ಲಿ ವಾಸಿಸುತ್ತಿರುವವರು ಮಹಾ ಕಷ್ಟ ನಿಂದೆಗಳಿಗೆ ಒಳಗಾಗಿದ್ದಾರೆ. ಯೆರೂಸಲೇಮಿನ ಪೌಳಿಗೋಡೆಯನ್ನು ಕೆಡವಲಾಗಿದೆ. ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅವರು ನನಗೆ, “ಸೆರೆಯವರೊಳಗಿಂದ ತಪ್ಪಿಸಿಕೊಂಡು ಬಂದು ಆ ಸಂಸ್ಥಾನದಲ್ಲಿ ವಾಸಿಸುತ್ತಿರುವವರು ಮಹಾ ಕಷ್ಟನಿಂದೆಗಳಿಗೆ ಒಳಗಾಗಿದ್ದಾರೆ; ಯೆರೂಸಲೇಮಿನ ಪೌಳಿಗೋಡೆಯು ಕೆಡವಲ್ಪಟ್ಟಿದೆ; ಅದರ ಬಾಗಿಲುಗಳು ಬೆಂಕಿಯಿಂದ ಸುಡಲ್ಪಟ್ಟಿವೆ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಅವರು ನನಗೆ, “ಸೆರೆಯಿಂದ ತಪ್ಪಿಸಿಕೊಂಡು ಈಗ ಆ ನಾಡಿನಲ್ಲಿ ವಾಸಿಸುತ್ತಿರುವವರು ಮಹಾಕಷ್ಟನಿಂದೆಗಳಿಗೆ ಒಳಗಾಗಿದ್ದಾರೆ. ಜೆರುಸಲೇಮಿನ ಪೌಳಿಗೋಡೆಯನ್ನು ಕೆಡವಲಾಗಿದೆ. ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅವರು ನನಗೆ - ಸೆರೆಯವರೊಳಗೆ ತಪ್ಪಿಸಿಕೊಂಡು ಆ ಸಂಸ್ಥಾನದಲ್ಲಿ ವಾಸಿಸುತ್ತಿರುವವರು ಮಹಾ ಕಷ್ಟನಿಂದೆಗಳಿಗೆ ಒಳಗಾಗಿದ್ದಾರೆ; ಯೆರೂಸಲೇವಿುನ ಪೌಳಿಗೋಡೆಯು ಕೆಡವಲ್ಪಟ್ಟಿರುತ್ತದೆ; ಅದರ ಬಾಗಲುಗಳು ಬೆಂಕಿಯಿಂದ ಸುಡಲ್ಪಟ್ಟಿರುತ್ತವೆ ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಆಗ ಹನಾನೀ ಮತ್ತು ಅವನ ಜೊತೆಗಾರರು, “ನೆಹೆಮೀಯನೇ, ಸೆರೆಯಿಂದ ತಪ್ಪಿಸಿಕೊಂಡು ಯೆಹೂದ ಪ್ರಾಂತ್ಯಕ್ಕೆ ಹೋಗಿರುವವರು ತುಂಬಾ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಅವರು ಅನೇಕ ಸಮಸ್ಯೆಗಳಲ್ಲಿ ಸಿಕ್ಕಿಕೊಂಡು ಅವಮಾನಕ್ಕೀಡಾಗಿದ್ದಾರೆ. ಯಾಕೆಂದರೆ ಜೆರುಸಲೇಮಿನ ಪೌಳಿಗೋಡೆಗಳು ಕೆಡವಲ್ಪಟ್ಟಿವೆ; ಅದರ ಬಾಗಿಲುಗಳೆಲ್ಲಾ ಸುಟ್ಟುಹೋಗಿವೆ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 1:3
33 ತಿಳಿವುಗಳ ಹೋಲಿಕೆ  

ಬಳಿಕ ನಾನು ಅವರಿಗೆ, “ನಮ್ಮ ದುರವಸ್ಥೆ ನಿಮ್ಮ ಕಣ್ಣ ಮುಂದಿರುತ್ತದಲ್ಲವೇ? ಯೆರೂಸಲೇಮ್ ಪಟ್ಟಣ ಹಾಳುಬಿದ್ದಿದೆ; ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ; ಬನ್ನಿ, ಯೆರೂಸಲೇಮಿನ ಗೋಡೆಯನ್ನು ಪುನಃ ಕಟ್ಟೋಣ. ಹೀಗೆ ಮಾಡಿದರೆ, ನಮ್ಮ ಮೇಲಿನ ನಿಂದೆ ನೀಗುವುದು,” ಎಂದು ಹೇಳಿದೆ.


ಕಾವಲುಗಾರರ ಅಧಿಪತಿಯ ಸಂಗಡದಲ್ಲಿದ್ದ ಬಾಬಿಲೋನಿಯರ ಸೈನ್ಯದವರೆಲ್ಲರೂ ಯೆರೂಸಲೇಮಿನ ಸುತ್ತಲೂ ಇರುವ ಗೋಡೆಗಳನ್ನು ಕೆಡವಿಬಿಟ್ಟರು.


ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಸೆರೆಯಾಗಿ ಹೋಗಿ, ಅನಂತರ ಬಂಧನದಿಂದ ಬಿಡುಗಡೆಯಾಗಿ ಯೆರೂಸಲೇಮಿಗೂ, ಯೆಹೂದಕ್ಕೂ, ತಮ್ಮ ತಮ್ಮ ಪಟ್ಟಣಗಳಿಗೂ


ನಾನು ರಾತ್ರಿಯಲ್ಲಿ ಕಣಿವೆಯ ಬಾಗಿಲಿಂದ ಹೊರಟು, ಸರ್ಪದ ಬಾವಿಯನ್ನು ದಾಟಿ, ತಿಪ್ಪೆ ದಿಬ್ಬೆಯ ಬಾಗಿಲಿಗೆ ಬಂದು, ಯೆರೂಸಲೇಮಿನ ಕೆಡವಿ ಹಾಕಲಾದ ಗೋಡೆಗಳನ್ನೂ, ಬೆಂಕಿಯಿಂದ ಸುಡಲಾದ ಅದರ ಬಾಗಿಲುಗಳನ್ನೂ ಚೆನ್ನಾಗಿ ಕಂಡೆನು.


“ಅರಸನು ಎಂದೆಂದಿಗೂ ಬಾಳಲಿ. ನನ್ನ ತಂದೆಗಳ ಸಮಾಧಿಗಳಿರುವ ಸ್ಥಳವಾದ ಆ ಪಟ್ಟಣವು ಹಾಳಾಗಿದ್ದು, ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿರುವಾಗ ನನ್ನ ಮುಖವು ದುಃಖವಿಲ್ಲದೆ ಇರಲು ಸಾಧ್ಯವೇ?” ಎಂದು ಹೇಳಿದೆನು.


ಅರಸನಿಗೆ ತಿಳಿಯಬೇಕಾದದ್ದೇನೆಂದರೆ, ನಾವು ಯೆಹೂದರ ದೇಶದಲ್ಲಿರುವ ಮಹಾ ದೇವರ ಆಲಯಕ್ಕೆ ಹೋದೆವು. ಅದನ್ನು ದೊಡ್ಡ ಕಲ್ಲುಗಳಿಂದ ಕಟ್ಟುತ್ತಿದ್ದಾರೆ. ಗೋಡೆಗಳ ಮೇಲೆ ತೊಲೆಗಳನ್ನು ಇಡುತ್ತಿದ್ದಾರೆ. ಆ ಕೆಲಸವು ತೀವ್ರವಾಗಿ ನಡೆಯುತ್ತಾ ಅವರ ಕೈಗಳಿಂದ ವೇಗವಾಗಿ ವೃದ್ಧಿಯಾಗುತ್ತದೆ.


ಯೆಹೋವ ದೇವರೇ, ನಮಗೆ ಏನು ಸಂಭವಿಸಿದೆ ಎಂದು ಜ್ಞಾಪಕಮಾಡಿಕೊಳ್ಳಿರಿ. ಪರಿಗಣಿಸಿ, ನಮ್ಮ ನಿಂದೆಯನ್ನು ನೋಡಿರಿ.


ಯೆಹೋವ ದೇವರೇ, ಅವರ ಎಲ್ಲಾ ಕಲ್ಪನೆಗಳನ್ನೂ ಮತ್ತು ನನಗೆ ವಿರುದ್ಧವಾಗಿ ಹೇಳುವವರ ತುಟಿಗಳನ್ನೂ,


ಯೆರೂಸಲೇಮು ಕಷ್ಟದ ಮತ್ತು ಸಂಕಟದ ದಿನಗಳಲ್ಲಿ ಪೂರ್ವದಿನಗಳಲ್ಲಿ ತನಗಿದ್ದ ಸಂಪತ್ತೆಲ್ಲವನ್ನು ಜ್ಞಾಪಕ ಮಾಡಿಕೊಂಡಿದ್ದಾಳೆ. ಆಕೆಯ ಜನರು ಶತ್ರುವಿನ ಕೈಯಲ್ಲಿ ಬಿದ್ದಾಗ, ಅವಳಿಗೆ ಯಾರೂ ಸಹಾಯ ಮಾಡಲಿಲ್ಲ. ವೈರಿಗಳು ಅವಳನ್ನು ನೋಡಿ ಅವಳ ನಾಶನದ ವಿಷಯವಾಗಿ ಅಪಹಾಸ್ಯ ಮಾಡಿದರು.


ಕಾವಲುಗಾರರ ಅಧಿಪತಿಯ ಸಂಗಡದಲ್ಲಿದ್ದ ಬಾಬಿಲೋನಿಯರ ಸೈನ್ಯದವರೆಲ್ಲರೂ ಯೆರೂಸಲೇಮಿನ ಸುತ್ತಲೂ ಇರುವ ಗೋಡೆಗಳನ್ನು ಕೆಡವಿಬಿಟ್ಟರು.


ಇಸ್ರಾಯೇಲಿನ ದೇವರೂ, ಸರ್ವಶಕ್ತರೂ ಆದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನನ್ನ ರೌದ್ರ ಕೋಪಾಗ್ನಿಯು ಯೆರೂಸಲೇಮಿನ ಮೇಲೆ ಹೇಗೆ ಸುರಿಯಿತೋ, ಹಾಗೆಯೇ ನೀವು ಈಜಿಪ್ಟಿನಲ್ಲಿ ಕಾಲಿಟ್ಟ ಕೂಡಲೇ, ನನ್ನ ಕೋಪಾಗ್ನಿ ನಿಮ್ಮ ಮೇಲೆಯೂ ಸುರಿಯುವುದು. ನೀವು ಅಪವಾದ, ಅಪಹಾಸ್ಯಕ್ಕೂ, ಶಾಪ, ನಿಂದೆ, ದೂಷಣೆಗಳಿಗೂ ಗುರಿಯಾಗುವಿರಿ. ಈ ಸ್ಥಳವನ್ನು ನೀವು ಮತ್ತೆ ನೋಡಲಾರಿರಿ.’


ಅರಮನೆಯನ್ನೂ, ಜನರ ಮನೆಗಳನ್ನೂ, ಬಾಬಿಲೋನಿಯರು ಬೆಂಕಿಯಿಂದ ಸುಟ್ಟರು. ಯೆರೂಸಲೇಮಿನ ಗೋಡೆಗಳನ್ನು ಕೆಡವಿಬಿಟ್ಟರು.


ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಅವರನ್ನು ಹಿಂಸಿಸಿ, ನಾನು ಅವರನ್ನು ಓಡಿಸಿಬಿಟ್ಟ ಎಲ್ಲಾ ಜನಾಂಗಗಳಲ್ಲಿ ಶಾಪಕ್ಕೂ ಭಯಕ್ಕೂ ಪರಿಹಾಸ್ಯಕ್ಕೂ ನಿಂದೆಗೂ ಗುರಿಯಾಗುವ ಹಾಗೆ ಒಪ್ಪಿಸಿಬಿಡುವೆನು.


‘ನಾನು ಅವರನ್ನು ಅಸಹ್ಯಪಡಿಸುತ್ತೇನೆ. ನಿಂದೆಗೂ, ಗಾದೆಗೂ, ಹಾಸ್ಯಕ್ಕೂ, ಶಾಪಕ್ಕೂ ಗುರಿಮಾಡಿ ಅವರನ್ನು ಭೂಮಿಯ ಸಮಸ್ತ ರಾಜ್ಯಗಳಿಂದ ತೆಗೆದು ಕೇಡಿಗೆ ಒಪ್ಪಿಸುವೆನು.


ಅವಳ ದ್ರಾಕ್ಷಿತೋಟಗಳ ಮೂಲಕ ಹೋಗಿ ಅವುಗಳನ್ನು ಹಾಳುಮಾಡಿರಿ. ಆದರೆ ಸಂಪೂರ್ಣವಾಗಿ ನಾಶಮಾಡಬೇಡಿರಿ. ಅದರ ರೆಂಬೆಗಳನ್ನು ತೆಗೆದುಹಾಕಿರಿ ಏಕೆಂದರೆ ಅವು ಯೆಹೋವ ದೇವರಿಗೆ ಸೇರಿದವುಗಳಲ್ಲ.


ಆದಕಾರಣ ಪವಿತ್ರಾಲಯದ ಪ್ರಧಾನರನ್ನು ನಾಚಿಕೆಪಡಿಸಿ, ಯಾಕೋಬನ್ನು ಶಾಪಕ್ಕೂ, ಇಸ್ರಾಯೇಲನ್ನು ದೂಷಣೆಗಳಿಗೂ ಒಪ್ಪಿಸಿಬಿಟ್ಟಿದ್ದೇನೆ.


ನನ್ನ ದ್ರಾಕ್ಷಿ ತೋಟಕ್ಕೆ ನಾನು ಮಾಡುವುದು ಏನೆಂದು ನಾನು ನಿಮಗೆ ತಿಳಿಸುತ್ತೇನೆ. ನಾನು ಅದರ ಬೇಲಿಯನ್ನು ತೆಗೆದುಹಾಕುವೆನು. ಆಗ ದನಕರುಗಳು ಅದನ್ನು ಮೇಯ್ದುಬಿಡುವುದು. ಅದರ ಗೋಡೆಯನ್ನು ಕೆಡವಿಬಿಡುವೆನು, ಆಗ ಅದು ತುಳಿದಾಟಕ್ಕೆ ಈಡಾಗುವುದು.


ನಾವು ನಮ್ಮ ನೆರೆಯವರಿಗೆ ನಿಂದೆಯೂ ನಮ್ಮ ಸುತ್ತಲಿರುವವರಿಗೆ ಗೇಲಿಯೂ ಹಾಸ್ಯವೂ ಆಗಿದ್ದೇವೆ.


ಭಾರತ ದೇಶ ಮೊದಲುಗೊಂಡು ಇಥಿಯೋಪಿಯ ದೇಶದವರೆಗಿನ ನೂರ ಇಪ್ಪತ್ತೇಳು ಸಂಸ್ಥಾನಗಳನ್ನು ಅಹಷ್ವೇರೋಷನು ಆಳುತ್ತಿದ್ದನು.


ಯೆರೂಸಲೇಮಿನಲ್ಲಿ ವಾಸವಾಗಿದ್ದ ಸಂಸ್ಥಾನಪ್ರಧಾನರು ಯಾರೆಂದರೆ: ಯೆಹೂದದ ಪಟ್ಟಣಗಳಲ್ಲಿ ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ದೇವಾಲಯದ ಸೇವಕರೂ, ಸೊಲೊಮೋನನ ಸೇವಕರ ಮಕ್ಕಳೂ, ಅವರವರು ತಮ್ಮ ತಮ್ಮ ಪಟ್ಟಣಗಳ ಸ್ವಾಸ್ತ್ಯಗಳಲ್ಲಿ ವಾಸವಾಗಿದ್ದರು.


ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ, ಬಾಬಿಲೋನಿಗೆ ಸೆರೆಯಾಗಿ ಹೋಗಿ, ಅನಂತರ ಬಂಧನದಿಂದ ಬಿಡುಗಡೆಯಾಗಿ ಯೆರೂಸಲೇಮಿಗೂ, ಯೆಹೂದಕ್ಕೂ, ತಮ್ಮ ತಮ್ಮ ಪಟ್ಟಣಗಳಿಗೂ


ಆಗ ನಾನು ಇಸ್ರಾಯೇಲಿಗೆ ಕೊಟ್ಟ ದೇಶದೊಳಗಿಂದ ಅವರನ್ನು ತೆಗೆದುಹಾಕಿ, ನನ್ನ ನಾಮಕ್ಕೋಸ್ಕರ ಪ್ರತಿಷ್ಠಿಸಿಕೊಂಡ ಈ ಆಲಯವನ್ನು ನಾನು ನಿರಾಕರಿಸುವೆನು. ಇಸ್ರಾಯೇಲರು ಸಮಸ್ತ ಜನರಲ್ಲಿ ಗಾದೆಯಾಗಿಯೂ, ಅಪಹಾಸ್ಯಕ್ಕೆ ಗುರಿಯಾಗುವರು.


ತನ್ನ ಸ್ವಂತ ಆತ್ಮವನ್ನು ಆಳದಿರುವವನು, ಗೋಡೆ ಬಿದ್ದ ಹಾಳೂರಿಗೆ ಸಮಾನ.


ಅವಳ ಬಾಗಿಲುಗಳು ನೆಲದೊಳಗೆ ಹೂತುಕೊಂಡಿವೆ. ಆತನು ಆಕೆಯ ಅಗುಳಿಗಳನ್ನು ಮುರಿದು ಹಾಳು ಮಾಡಿದ್ದಾನೆ. ಅವಳ ಅರಸನು ಮತ್ತು ಅವಳ ಪ್ರಭುಗಳು ಇತರ ಜನಾಂಗಗಳ ಮಧ್ಯೆ ಇರುವರು. ಇನ್ನು ದೈವನಿಯಮವು ನಿಂತುಹೋಗಿವೆ. ಆಕೆಯ ಪ್ರವಾದಿಗಳು ಸಹ ಯೆಹೋವ ದೇವರಿಂದ ದರ್ಶನವನ್ನು ಕಂಡುಕೊಳ್ಳುವುದಿಲ್ಲ.


ನಿಮ್ಮ ಪಟ್ಟಣಗಳನ್ನು ನಾನು ಕೆಡವಿಹಾಕಿ, ನಿಮ್ಮ ಪರಿಶುದ್ಧ ಸ್ಥಳಗಳನ್ನು ಹಾಳು ಮಾಡಿ, ನಿಮ್ಮ ಸುವಾಸನೆಗಳನ್ನು ಮೂಸಿ ನೋಡದೆ ಇರುವೆನು.


ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ, ನಿಮ್ಮ ಹಿಂದೆ ಖಡ್ಗವನ್ನು ಬೀಸುವೆನು. ನಿಮ್ಮ ಭೂಮಿ ಹಾಳಾಗಿರುವುದು, ನಿಮ್ಮ ಪಟ್ಟಣಗಳು ನಾಶವಾಗಿರುವುವು.


ಅವರು ದೇವರ ಆಲಯವನ್ನು ಸುಟ್ಟುಬಿಟ್ಟು, ಯೆರೂಸಲೇಮಿನ ಗೋಡೆಯನ್ನು ಕೆಡವಿಹಾಕಿ, ಅದರ ಅರಮನೆಗಳನ್ನು ಸುಟ್ಟುಬಿಟ್ಟು, ಅದರ ಬೆಲೆಯುಳ್ಳ ಸಲಕರಣೆಗಳನ್ನೆಲ್ಲಾ ನಾಶಮಾಡಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು