Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನಹೂಮ 3:16 - ಕನ್ನಡ ಸಮಕಾಲಿಕ ಅನುವಾದ

16 ನಿನ್ನ ವರ್ತಕರನ್ನು ಆಕಾಶದ ನಕ್ಷತ್ರಗಳಿಗಿಂತ ಹೆಚ್ಚಾಗಿ ಸಂಖ್ಯೆಯಲ್ಲಿ ಬೆಳೆಸಿದ್ದೀ. ಆದರೆ ಅವರು ಮಿಡತೆಗಳಂತೆ ದೇಶವನ್ನು ಸುಲಿದುಕೊಂಡು ಹಾರಿಹೋಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ನಿನ್ನ ವರ್ತಕರ ಸಂಖ್ಯೆಯನ್ನು ಆಕಾಶದ ನಕ್ಷತ್ರಗಳಿಗಿಂತ ಹೆಚ್ಚಿಸಿದ್ದೀ; ಆದರೆ, ಮಿಡತೆಯು ರೆಕ್ಕೆಗಳ ಪರೆಯನ್ನು ಹರಿದುಕೊಂಡು ಹಾರಿಹೋಗಿ ಬಿಡುವುದಷ್ಟೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ನಿನ್ನ ವರ್ತಕರು ಆಕಾಶದ ನಕ್ಷತ್ರಗಳಿಗಿಂತ ಅಧಿಕವಾಗಲಿ! ಆದರೆ ಈಗ ಮಿಡತೆ ತನ್ನ ಪರೆಯನ್ನು ಬಿಟ್ಟು ಹಾರಿಹೋಗುವಂತೆ ಎಲ್ಲರು ಪಲಾಯನವಾಗಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ನಿನ್ನ ವರ್ತಕರ ಸಂಖ್ಯೆಯನ್ನು ಆಕಾಶದ ನಕ್ಷತ್ರಗಳಿಗಿಂತ ಹೆಚ್ಚಿಸಿದ್ದೀ; [ಆದರೇನು,] ವಿುಡತೆಯು [ರೆಕ್ಕೆಗಳ ಪರೆಯನ್ನು] ಹರಿದುಕೊಂಡು ಹಾರಿಹೋಗಿಬಿಡುವದಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ನಿನ್ನಲ್ಲಿ ಅನೇಕ ವ್ಯಾಪಾರಸ್ಥರು ಊರೂರಿಗೆ ತಿರುಗಿ ವ್ಯಾಪಾರ ಮಾಡುವವರಿದ್ದಾರೆ. ಅವರು ಆಕಾಶದಲ್ಲಿರುವ ನಕ್ಷತ್ರಗಳಷ್ಟು ಇದ್ದಾರೆ. ಅವರು ಮಿಡತೆಗಳಂತೆ ಬಂದು, ಎಲ್ಲವನ್ನು ತಿಂದು ಮುಗಿಸಿದ ಬಳಿಕ ಹೋಗುವಂಥವರಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನಹೂಮ 3:16
7 ತಿಳಿವುಗಳ ಹೋಲಿಕೆ  

ಆದರೆ ನನ್ನ ದಾಸ ದಾವೀದನ ಸಂತಾನವನ್ನೂ ನನ್ನ ಪರಿಚಾರಕರಾದ ಲೇವಿಯರನ್ನೂ ಅಸಂಖ್ಯಾತ ನಕ್ಷತ್ರಗಣದಷ್ಟು ಮತ್ತು ಎಣಿಸಲಾಗದ ಸಮುದ್ರತೀರದ ಮರಳಿನಷ್ಟು ಅಧಿಕಗೊಳಿಸುವೆನು.’ ”


ಇದಲ್ಲದೆ ಅವರ ಮಕ್ಕಳನ್ನು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಿಸಿದಿರಿ. ಅವರು ಸ್ವಾಧೀನಮಾಡಿಕೊಳ್ಳುವರು ಎಂದು ನೀವು ಅವರ ಪಿತೃಗಳಿಗೆ ವಾಗ್ದಾನಮಾಡಿದ ದೇಶಕ್ಕೆ ಅವರನ್ನು ಬರಮಾಡಿದಿರಿ.


ನಿಶ್ಚಯವಾಗಿ ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು. ನಿನ್ನ ಸಂತಾನವನ್ನು ಆಕಾಶದ ನಕ್ಷತ್ರಗಳ ಹಾಗೆಯೂ ಸಮುದ್ರದ ತೀರದಲ್ಲಿರುವ ಮರಳಿನ ಹಾಗೆಯೂ ಹೆಚ್ಚಿಸುವೆನು. ನಿನ್ನ ಸಂತಾನದವರು ತಮ್ಮ ಶತ್ರುಗಳ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು.


ಯೆಹೋವ ದೇವರು ಅವನನ್ನು ಹೊರಗೆ ಕರೆದುಕೊಂಡು ಬಂದು, “ಈಗ ನೀನು ಆಕಾಶವನ್ನು ದೃಷ್ಟಿಸಿ, ನಕ್ಷತ್ರಗಳನ್ನು ಲೆಕ್ಕಿಸಲು ನಿನ್ನಿಂದಾದರೆ, ಲೆಕ್ಕಿಸು. ಅದರಂತೆಯೇ ನಿನ್ನ ಸಂತತಿಯು ಆಗುವುದು,” ಎಂದು ಹೇಳಿದರು.


ದೇವರು ಆಜ್ಞಾಪಿಸಲು ಮಿಡತೆಗಳೂ, ಲೆಕ್ಕವಿಲ್ಲದ ಕಂಬಳಿ ಹುಳುಗಳೂ ಬಂದವು.


ಅದು ಕಿರೀಟದಾಯಕವಾದ ಪಟ್ಟಣವು. ಅದರ ವರ್ತಕರಾದ ಪ್ರಭುಗಳು, ಅದರ ವ್ಯಾಪಾರಿಗಳು ಭೂಮಿಯಲ್ಲಿ ಘನವುಳ್ಳವರಾಗಿದ್ದಾರೆ. ಇಂಥ ಟೈರಿಗೆ ವಿರುದ್ಧವಾಗಿ ಈ ಆಲೋಚನೆ ಮಾಡಿದವರು ಯಾರು?


ಚೂರಿಮಿಡತೆ ತಿಂದು, ಉಳಿದಿದ್ದ ಬೆಳೆಯನ್ನು ಗುಂಪುಮಿಡತೆ ತಿಂದುಬಿಟ್ಟಿತು. ಗುಂಪುಮಿಡತೆ ತಿಂದು ಬಿಟ್ಟಿದ್ದನ್ನು, ಕುದುರೆಮಿಡತೆ ತಿಂದುಬಿಟ್ಟಿತು. ಕುದುರೆಮಿಡತೆ ಬಿಟ್ಟಿದ್ದನ್ನು ಕಂಬಳಿಮಿಡತೆ ತಿಂದುಬಿಟ್ಟಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು