Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನಹೂಮ 1:5 - ಕನ್ನಡ ಸಮಕಾಲಿಕ ಅನುವಾದ

5 ಬೆಟ್ಟಗಳು ಅವರ ಮುಂದೆ ಕಂಪಿಸುತ್ತವೆ; ಗುಡ್ಡಗಳು ಕರಗುತ್ತವೆ; ಭೂಮಿಯೂ, ಲೋಕವೂ, ಅದರ ನಿವಾಸಿಗಳೆಲ್ಲವೂ ಅವರ ಮುಂದೆ ನಡುಗುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆತನ ಮುಂದೆ ಬೆಟ್ಟಗಳು ಅದರುತ್ತವೆ, ಗುಡ್ಡಗಳು ಕರಗುತ್ತವೆ; ಆತನ ದರ್ಶನಕ್ಕೆ ಭೂಮಿಯು ಕಂಪಿಸುತ್ತದೆ, ಹೌದು, ಲೋಕವೂ ಲೋಕನಿವಾಸಿಗಳೆಲ್ಲರೂ ತಲ್ಲಣಿಸುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಆತನೆದುರು ಅದರುತ್ತವೆ ಬೆಟ್ಟಗಳು ಕರಗುತ್ತವೆ ಗುಡ್ಡಗಳು. ಆತನ ದರ್ಶನಕೆ ಕಂಪಿಸುತ್ತದೆ ಭೂಗೋಳವು ತಲ್ಲಣಿಸುತ್ತದೆ ಲೋಕ ಲೋಕನಿವಾಸಿಗಳೆಲ್ಲವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಆತನ ಮುಂದೆ ಬೆಟ್ಟಗಳು ಅದರುತ್ತವೆ, ಗುಡ್ಡಗಳು ಕರಗುತ್ತವೆ; ಆತನ ದರ್ಶನಕ್ಕೆ ಭೂವಿುಯು ಕಂಪಿಸುತ್ತದೆ, ಹೌದು, ಲೋಕವೂ ಲೋಕನಿವಾಸಿಗಳೆಲ್ಲವೂ ತಲ್ಲಣಿಸುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಯೆಹೋವನು ಬರುತ್ತಾನೆ. ಪರ್ವತಗಳು ಭಯದಿಂದ ನಡುಗುವವು. ಬೆಟ್ಟಗಳು ಕರಗಿಹೋಗುವವು. ಯೆಹೋವನು ಬರುತ್ತಾನೆ, ಮತ್ತು ಭೂಮಿಯು ಭಯದಿಂದ ನಡುಗುವುದು. ಇಡೀ ಪ್ರಪಂಚ ಮತ್ತು ಅದರಲ್ಲಿರುವ ಜನರೆಲ್ಲಾ ಭಯದಿಂದ ನಡುಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನಹೂಮ 1:5
34 ತಿಳಿವುಗಳ ಹೋಲಿಕೆ  

ಬೆಂಕಿಯ ಮುಂದೆ ಮೇಣದ ಹಾಗೆಯೂ ಇಳಿಜಾರಿನ ಸ್ಥಳದಲ್ಲಿ ರಭಸವಾಗಿ ಹರಿಯುವ ನೀರಿನ ಹಾಗೆಯೂ ಬೆಟ್ಟಗಳು ಆತನ ಕೆಳಗೆ ಕರಗುವುವು; ತಗ್ಗುಗಳು ಸೀಳುವುವು.


ಬೆಟ್ಟಗಳನ್ನು ನೋಡಿದೆನು, ಇಗೋ, ಅವು ನಡುಗಿದವು; ಗುಡ್ಡಗಳು ಹಗುರವಾಗಿ ಅದುರಿದವು.


ಆಗ ದೇವರು ಬೇಸರಗೊಂಡಿದ್ದರಿಂದ ಭೂಮಿಯು ನಡುಗಿ ಕದಲಿದವು, ಆಕಾಶಗಳ ಅಸ್ತಿವಾರಗಳು ಸಹ ಕದಲಿದವು.


ಬೆಟ್ಟಗಳು ನಿನ್ನನ್ನು ಕಂಡು ನಡುಗಿದವು; ಜಲಪ್ರವಾಹವು ಹಾದುಹೋಯಿತು; ಸಾಗರವು ಗರ್ಜಿಸಿ; ತನ್ನ ತೆರೆಗಳನ್ನು ಮೇಲಕ್ಕೆ ಎತ್ತುತ್ತದೆ.


ಭೂಮಿಯು ಕದಲಿತು, ಆಕಾಶಗಳು ಸಹ ನಿಮ್ಮ ಮುಂದೆ ಮಳೆಗರೆದವು. ಇಸ್ರಾಯೇಲರ ದೇವರ ಮುಂದೆ, ಹೌದು, ದೇವರ ಮುಂದೆಯೇ ಸೀನಾಯಿ ಸಹ ಕದಲಿತು.


ಯೆಹೋವ ದೇವರ ಮುಂದೆ ಬೆಟ್ಟಗಳು ಕಂಪಿಸಿದವು. ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮುಂದೆ ಸೀನಾಯಿ ಪರ್ವತವು ಸಹ ಕಂಪಿಸಿತು.


ಬೆಟ್ಟಗಳೇ, ಟಗರುಗಳ ಹಾಗೆಯೂ; ಚಿಕ್ಕಗುಡ್ಡಗಳೇ, ನೀವು ಕುರಿಮರಿಗಳ ಹಾಗೆಯೂ ಹಾರಾಡುವುದೇಕೆ?


ಬೆಟ್ಟಗಳು ಟಗರುಗಳಂತೆ ಓಡಿತು, ಗುಡ್ಡಗಳು ಕುರಿಮರಿಗಳಂತೆಯೂ ಓಡಾಡಿದವು.


ಸಮುದ್ರವೂ, ಅದರಲ್ಲಿರುವುದೆಲ್ಲವೂ, ಲೋಕವೂ, ಅದರ ನಿವಾಸಿಗಳೂ ಪ್ರತಿಧ್ವನಿಸಲಿ.


ರಾಷ್ಟ್ರಗಳು ಕೋಲಾಹಲದಲ್ಲಿವೆ ರಾಜ್ಯಗಳು ಬೀಳುತ್ತವೆ. ದೇವರು ತಮ್ಮ ಧ್ವನಿಯನ್ನೆತ್ತಲು ಭೂಮಿಯು ಕರಗುತ್ತದೆ.


ಯೆಹೋವ ದೇವರು ಅಗ್ನಿಯೊಳಗೆ ಬೆಟ್ಟದ ಮೇಲೆ ಇಳಿದಿದ್ದರಿಂದ ಸೀನಾಯಿ ಬೆಟ್ಟದಲ್ಲೆಲ್ಲಾ ಹೊಗೆ ಹಾಯುತ್ತಿತ್ತು. ಅದರ ಹೊಗೆಯು ಆವಿಗೆಯ ಹೊಗೆಯಂತೆ ಏರಿ ಬರುತ್ತಾ ಇತ್ತು. ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು.


ಆಮೇಲೆ ಬೆಳ್ಳಗಿರುವ ಮಹಾ ಸಿಂಹಾಸನವನ್ನು ಕಂಡೆನು. ಅದರ ಮೇಲೆ ಒಬ್ಬರು ಆಸೀನರಾಗಿದ್ದರು. ಅವರ ಸನ್ನಿಧಿಯಿಂದ ಭೂಮ್ಯಾಕಾಶಗಳು ಓಡಿಹೋಗಿ ಸ್ಥಳ ಕಾಣಿಸದಂತಾದವು.


ಆಗ ಮಹಾ ಭೂಕಂಪವಾಯಿತು. ಕರ್ತನ ದೂತನು ಪರಲೋಕದಿಂದ ಇಳಿದುಬಂದು, ಬಾಗಿಲಿನಿಂದ ಬಂಡೆಯನ್ನು ಉರುಳಿಸಿ ಅದರ ಮೇಲೆ ಕುಳಿತುಕೊಂಡನು.


ಅದೇ ಸಮಯದಲ್ಲಿ, ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೆ ಹರಿದು ಎರಡು ಭಾಗವಾಯಿತು. ಭೂಮಿಯು ಕಂಪಿಸಿತು. ಬಂಡೆಗಳು ಸೀಳಿಹೋದವು.


ಆಕಾಶವು ಸುರುಳಿಯಂತೆ ಸುತ್ತಿಕೊಂಡು ಹೊರಟುಹೋಯಿತು. ಪ್ರತಿ ಬೆಟ್ಟಗಳು ಮತ್ತು ದ್ವೀಪಗಳು ತಮ್ಮ ಸ್ಥಳಗಳಿಂದ ಕದಲಿದವು.


ದೇವರು ಬೇಸರಗೊಂಡಿದ್ದರಿಂದ ಭೂಮಿಯು ನಡುಗಿ ಕದಲಿದವು; ಪರ್ವತಗಳ ಅಸ್ತಿವಾರಗಳು ಸಹ ಕದಲಿದವು.


ಆದಕಾರಣ ಯೆಹೋವ ದೇವರು ಕೋಪಗೊಂಡು ಜನರಿಗೆ ವಿರೋಧವಾಗಿ ಉರಿಗೊಂಡು ಅವರ ಮೇಲೆ ತಮ್ಮ ಕೈಚಾಚಿ, ಅವರನ್ನು ಹೊಡೆದಿದ್ದಾರೆ, ಬೆಟ್ಟಗುಡ್ಡಗಳು ಕಂಪಿಸಿದವು. ಅವರ ಹೆಣಗಳು ಹರಿದು ಬೀದಿಗಳ ಮಧ್ಯದಲ್ಲಿ ಬಿದ್ದಿರುವುವು. ಇಷ್ಟೆಲ್ಲಾ ಆದರೂ ದೇವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇರುವುದು.


ಇಗೋ, ಯೆಹೋವ ದೇವರು ಭೂಮಿಯನ್ನು ಬರಿದುಮಾಡಿ, ನಿರ್ಜನ ಪ್ರದೇಶವನ್ನಾಗಿ ಮಾಡಿ, ತಲೆಕೆಳಗಾಗಿ ತಿರುಗಿಸಿ, ಅದರ ನಿವಾಸಿಗಳನ್ನು ಚದರಿಸಿಬಿಡುವವರಾಗಿದ್ದಾರೆ.


ಭೂಮಿಯು ಕುಡುಕನ ಹಾಗೆ ಓಲಾಡುತ್ತದೆ, ಗಾಳಿಗೆ ಸಿಕ್ಕಿದ ಗುಡಿಸಲಿನ ಹಾಗೆ ತೂಗಾಡುತ್ತದೆ, ಅದರ ಅಪರಾಧವು ಅದರ ಮೇಲೆ ಭಾರವಾಗಿರುತ್ತದೆ, ಅದು ಬಿದ್ದು ಹೋಗುತ್ತದೆ, ತಿರುಗಿ ಏಳುವುದೇ ಇಲ್ಲ.


ಅವುಗಳ ಮುಂದೆ ಭೂಮಿಯು ನಡುಗುತ್ತದೆ. ಆಕಾಶಗಳು ಅದರುತ್ತವೆ. ಸೂರ್ಯ ಚಂದ್ರರು ಕಪ್ಪಾಗುತ್ತವೆ. ನಕ್ಷತ್ರಗಳು ಇನ್ನು ಮುಂದೆ ಹೊಳೆಯುವುದಿಲ್ಲ.


“ಪರಾಕ್ರಮದ ಬೆಟ್ಟವೇ, ನೀನ್ಯಾರು? ಜೆರುಬ್ಬಾಬೆಲನ ಮುಂದೆ ಬಯಲಾಗುವೆ. ಅವನು ಕಲಶದ ಕಲ್ಲನ್ನು ಸ್ಥಾಪಿಸಿ, ‘ದೇವರು ಇದನ್ನು ಆಶೀರ್ವದಿಸಲಿ! ದೇವರು ಇದನ್ನು ಆಶೀರ್ವದಿಸಲಿ!’ ಎಂದು ಘೋಷಿಸುವನು.”


“ಖಂಡಿತವಾಗಿ ಆ ದಿನ ಬರುತ್ತದೆ, ಅದು ಒಲೆಯಂತೆ ಉರಿಯುತ್ತದೆ. ಆಗ ಗರ್ವಿಷ್ಠರೆಲ್ಲರೂ ಕೆಟ್ಟದ್ದನ್ನು ಮಾಡುವವರೆಲ್ಲರೂ ಹುಲ್ಲಿನಂತಿರುವರು. ಬರುವ ಆ ದಿನವು ಅವರನ್ನು ಸುಟ್ಟುಬಿಡುವುದು. ಬೇರನ್ನಾದರೂ, ಕೊಂಬೆಯನ್ನಾದರೂ ಅವರಿಗೆ ಬಿಡದು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.


ದೇವರು ಪರ್ವತಗಳನ್ನು ಅವುಗಳಿಗೆ ತಿಳಿಯದ ಹಾಗೆ ಸರಿಸುತ್ತಾರೆ; ತಮ್ಮ ಎದುರಿನಲ್ಲಿ ಅವುಗಳನ್ನು ತಿರುಗಿಸುತ್ತಾರೆ.


ಆಕಾಶಮಂಡಲದ ಸ್ತಂಭಗಳು ಕಂಪಿಸುತ್ತವೆ; ದೇವರ ಗದರಿಕೆಗೆ ಅವು ಬೆರಗಾಗಿ ಕದಲುತ್ತವೆ.


ಮೂಗಿನಿಂದ ಹೊಗೆ ಬಂದಂತೆಯೂ ಬಾಯಿಯೊಳಗಿಂದ ದಹಿಸುವ ಅಗ್ನಿ ಹೊರಟಂತೆಯೂ; ಕೆಂಡಗಳು ಅದರಿಂದ ಜ್ವಾಲಿಸಿದಂತೆಯೂ ಇರಲು,


ಅವರು ಭೂಮಿಯನ್ನು ದೃಷ್ಟಿಸಲು, ಅದು ನಡುಗುತ್ತದೆ; ಬೆಟ್ಟಗಳನ್ನು ಮುಟ್ಟಲು, ಅವು ಹೊಗೆ ಹಾಯುತ್ತವೆ.


ಆದರೆ ಯೆಹೋವ ದೇವರು ನಿಜವಾದ ದೇವರಾಗಿದ್ದಾರೆ. ಅವರು ಜೀವಸ್ವರೂಪರಾದ ದೇವರೂ, ನಿತ್ಯನಾದ ಅರಸರೂ ಆಗಿದ್ದಾರೆ. ಅವರ ರೌದ್ರದಿಂದ ಭೂಮಿ ಕಂಪಿಸುವುದು. ಅವರ ಉಗ್ರತೆಯನ್ನು ಜನಾಂಗಗಳು ತಾಳಲಾರವು.


ಆಗ ಸಮುದ್ರದ ಮೀನುಗಳು ಆಕಾಶದ ಪಕ್ಷಿಗಳು ಬಯಲಿನ ಮೃಗಗಳು ಮತ್ತು ಭೂಮಿಯ ಮೇಲೆ ಹರಿದಾಡುವ ಎಲ್ಲಾ ಜಂತುಗಳು, ಭೂಮಿಯ ಎಲ್ಲಾ ಮನುಷ್ಯರ ಸಂಗಡ ನನ್ನ ಸಮ್ಮುಖದಲ್ಲಿ ನಡುಗುವುವು; ಪರ್ವತಗಳು ಉರುಳಿಹೋಗುವುವು. ಝರಿಗಳು ಕವಚಿಕೊಳ್ಳುತ್ತಾ, ಪ್ರತಿಯೊಂದು ಗೋಡೆಯೂ ನೆಲಕ್ಕೆ ಉರುಳುವುದು.


ಸೇನಾಧೀಶ್ವರ ಯೆಹೋವ ದೇವರಾದ ಕರ್ತರೇ, ನೀವು ದೇಶವನ್ನು ಮುಟ್ಟಿದ ಮಾತ್ರಕ್ಕೆ ಅದು ಕರಗಿ ಹೋಗುವುದು. ಅದರಲ್ಲಿ ವಾಸವಾಗಿರುವವರೆಲ್ಲರೂ ಗೋಳಾಡುವರು. ಅವೆಲ್ಲಾ ನೈಲ್ ನದಿಯ ಹಾಗೆ ಪ್ರವಾಹದಂತೆ ಉಕ್ಕಿ, ಈಜಿಪ್ಟಿನ ಪ್ರವಾಹದಂತೆ ಉಕ್ಕಿ ಮುಳುಗಿ ಹೋಗುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು