Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 9:24 - ಕನ್ನಡ ಸಮಕಾಲಿಕ ಅನುವಾದ

24 ನಾನು ನಿಮ್ಮನ್ನು ತಿಳಿದಂದಿನಿಂದ ನೀವು ಯೆಹೋವ ದೇವರಿಗೆ ವಿರೋಧವಾಗಿ ತಿರುಗಿಬೀಳುವವರಾಗಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ನನಗೆ ನಿಮ್ಮ ಪರಿಚಯವಾದಂದಿನಿಂದಲೂ ನೀವು ಯೆಹೋವನಿಗೆ ದ್ರೋಹಿಗಳಾಗಿ ನಡೆದುಕೊಂಡಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ನನಗೆ ನಿಮ್ಮ ಪರಿಚಯವಾದಂದಿನಿಂದಲೂ ನೀವು ಸರ್ವೇಶ್ವರನ ಆಜ್ಞೆಯನ್ನು ಉಲ್ಲಂಘಿಸುತ್ತಾ ಬಂದಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ನನಗೆ ನಿಮ್ಮ ಪರಿಚಯವಾದಂದಿನಿಂದಲೂ ನೀವು ಯೆಹೋವನ ಆಜ್ಞೆಯನ್ನು ಉಲ್ಲಂಘಿಸುವವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ನಾನು ನಿಮ್ಮನ್ನು ತಿಳಿದಿರುವ ಕಾಲದಿಂದ ನೀವು ಯೆಹೋವನಿಗೆ ಅವಿಧೇಯರಾಗಿಯೇ ಇದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 9:24
13 ತಿಳಿವುಗಳ ಹೋಲಿಕೆ  

ಏಕೆಂದರೆ ನಿಮ್ಮ ದ್ರೋಹವನ್ನೂ, ನಿಮ್ಮ ಹಟಮಾರಿತನವನ್ನೂ ನಾನು ಬಲ್ಲೆನು. ಈ ಹೊತ್ತು ನಾನು ಇನ್ನೂ ನಿಮ್ಮ ಸಂಗಡ ಬದುಕಿರುವಾಗಲೇ ಯೆಹೋವ ದೇವರಿಗೆ ದ್ರೋಹ ಮಾಡಿದವರಾದಿರಿ. ನಾನು ಸತ್ತಮೇಲೆ ಇನ್ನೇನಾಗುವುದು?


“ಹಟಮಾರಿಗಳೇ! ಹೃದಯದಲ್ಲಿಯೂ ಕಿವಿಯಲ್ಲಿಯೂ ಸುನ್ನತಿ ಹೊಂದದವರೇ, ನೀವು ಸಹ ನಿಮ್ಮ ಪಿತೃಗಳಂತೆಯೇ ಯಾವಾಗಲೂ ಪವಿತ್ರಾತ್ಮ ದೇವರನ್ನು ಎದುರಿಸುತ್ತೀರಿ!


ಅದಕ್ಕೆ ಆರೋನನು, “ನನ್ನ ಒಡೆಯನೇ ಕೋಪಗೊಳ್ಳಬೇಡಿ ಈ ಜನರು ಕೆಡುಕಿನ ಮನಸ್ಸಿನವರಾಗಿದ್ದಾರೆಂದು ನೀವು ಬಲ್ಲಿರಿ.


ಆದ್ದರಿಂದ ನೀವಾದರೋ ಯೆಹೋವ ದೇವರಿಗೆ ತಿರುಗಿ ಬೀಳಬೇಡಿರಿ. ಆ ದೇಶದ ಜನರಿಗೆ ಭಯಪಡಬೇಡಿರಿ. ಏಕೆಂದರೆ ನಾವು ಅವರನ್ನು ನುಂಗಿಬಿಡುವೆವು. ಅವರ ಆಶ್ರಯವು ಅವರ ಬಳಿಯಿಂದ ಹೋಯಿತು. ಯೆಹೋವ ದೇವರು ನಮ್ಮ ಸಂಗಡ ಇದ್ದಾರೆ, ಅವರಿಗೆ ಭಯಪಡಬೇಡಿರಿ,” ಎಂದರು.


ಯೆಹೋವ ದೇವರು ಮೋಶೆಗೆ, “ಆರೋನನ ಕೋಲನ್ನು ಎದುರು ಬೀಳುವವರಿಗೆ ಗುರುತಾಗಿ ಇಟ್ಟುಕೊಳ್ಳುವುದಕ್ಕೆ ಒಡಂಬಡಿಕೆಯ ಮಂಜೂಷದ ಮುಂದೆ ತಿರುಗಿ ಇಡು. ಗೊಣಗುಟ್ಟುವುದನ್ನು ನೀನು ಸಂಪೂರ್ಣವಾಗಿ ತೆಗೆದುಬಿಡಬೇಕು,” ಎಂದರು.


“ಯೆಹೋವ ದೇವರು ಯಾಕೋಬನಲ್ಲಿ ಆಪತ್ತನ್ನು ಕಾಣಲಿಲ್ಲ. ಇಸ್ರಾಯೇಲಿನಲ್ಲಿ ವಿಪತ್ತನ್ನು ನೋಡಲಿಲ್ಲ. ಅವರ ದೇವರಾದ ಯೆಹೋವ ದೇವರು ಅವರ ಸಂಗಡ ಇದ್ದಾರೆ. ಅರಸನ ಜಯಧ್ವನಿಯು ಅವರಲ್ಲಿ ಉಂಟು.


ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ತೆಗೆದುಹಾಕಿದಾಗ, “ಯೆಹೋವ ದೇವರು ನಮ್ಮನ್ನು ಈ ದೇಶವನ್ನು ಸ್ವಾಧೀನಪಡಿಸಲು ಕರೆದುಕೊಂಡು ಬಂದಿದ್ದು ನಮ್ಮ ನೀತಿಯ ನಿಮಿತ್ತವೇ,” ಎಂದು ನೀವು ನಿಮ್ಮ ಹೃದಯದಲ್ಲಿ ಹೇಳಿಕೊಳ್ಳಬಾರದು. ಆ ಜನಾಂಗಗಳ ಕೆಟ್ಟತನದ ನಿಮಿತ್ತವೇ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ಹೊರಡಿಸುತ್ತಾರೆ.


ಆಗ ಅವರು ತಮ್ಮ ಪಿತೃಗಳ ಹಾಗೆ ಹಟಮಾರಿ ಮತ್ತು ದಂಗೆಕೋರ ಸಂತತಿಯವರು ಆಗಿರುವುದಿಲ್ಲ, ಅವರ ಹೃದಯವು ದೇವರಿಗೆ ಸತ್ಯವಾಗಿರಲಿಲ್ಲ, ಅವರ ಆತ್ಮವು ದೇವರಲ್ಲಿ ನಂಬಿಗಸ್ತಿಕೆಯಿಂದಲೂ ಇರಲಿಲ್ಲ.


ನೀನು ಕೇಳಿಲ್ಲ, ತಿಳಿದೂ ಇಲ್ಲ. ಪುರಾತನ ಕಾಲದಿಂದ ನಿನ್ನ ಕಿವಿಯು ತೆರೆದೇ ಇಲ್ಲ. ಏಕೆಂದರೆ ನೀನು ದೊಡ್ಡ ವಂಚಕನೆಂದೂ, ಗರ್ಭದಿಂದಲೇ ನೀನು ದ್ರೋಹಿ ಎಂದೂ ನಾನು ತಿಳಿದುಕೊಂಡಿದ್ದೇನೆ.


“ನಿಮ್ಮ ಪಿತೃಗಳ ಬದಲಾಗಿ ಬಂದಿರುವ ನೀವು, ಪಾಪಿಗಳಾಗಿ ಇಸ್ರಾಯೇಲ್ ಕುರಿತು ಯೆಹೋವ ದೇವರ ಕೋಪವನ್ನೂ ಮತ್ತಷ್ಟು ಹೆಚ್ಚಿಸುತ್ತಿದ್ದೀರಲ್ಲಾ.


ಹೊಲ ಕಾಯುವವರಂತೆ ಸುತ್ತಲಾಗಿ ಅವಳಿಗೆ ವಿರೋಧವಾಗಿದ್ದಾರೆ. ಏಕೆಂದರೆ ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದಾಳೆಂದು,’ ” ಎಂದು ಯೆಹೋವ ದೇವರು ಹೇಳುತ್ತಾರೆ.


“ ‘ಆದರೆ ಅವರು ನನಗೆ ವಿರುದ್ಧವಾಗಿ ತಿರುಗಿಬಿದ್ದರು. ನನಗೆ ಕಿವಿಗೊಡಲಿಲ್ಲ. ಅವರು ತಮ್ಮ ಕಣ್ಣಿಗೆ ಅಸಹ್ಯವಾದವುಗಳನ್ನು ಬಿಸಾಡಲಿಲ್ಲ. ಅವರು ಈಜಿಪ್ಟಿನ ವಿಗ್ರಹಗಳನ್ನು ಬಿಡಲಿಲ್ಲ. ಆಗ ನಾನು ಅವರ ಮೇಲೆ ನನ್ನ ರೋಷವನ್ನು ಸುರಿಸಿ, ಈಜಿಪ್ಟ್ ದೇಶದಲ್ಲಿ ಅವರ ಮೇಲೆ ನನ್ನ ಕೋಪವನ್ನು ತೀರಿಸುವೆನೆಂದು ಹೇಳಿದೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು