Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 8:6 - ಕನ್ನಡ ಸಮಕಾಲಿಕ ಅನುವಾದ

6 ಹೀಗಿರುವುದರಿಂದ ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನು ಕೈಗೊಂಡು, ಅವರ ಮಾರ್ಗಗಳಲ್ಲಿ ನಡೆದು ಅವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ನೀವು ಆತನ ಆಜ್ಞೆಗಳನ್ನು ಅನುಸರಿಸುವವರಾಗಿ, ಆತನು ಹೇಳಿದ ಮಾರ್ಗದಲ್ಲೇ ನಡೆದು ಆತನಲ್ಲಿ ಭಯಭಕ್ತಿಯುಳ್ಳವರಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಅವರ ಆಜ್ಞೆಗಳನ್ನು ಅನುಸರಿಸುತ್ತಾ ಅವರು ಹೇಳಿದ ಮಾರ್ಗದಲ್ಲೇ ನಡೆದು ಅವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಆತನ ಆಜ್ಞೆಗಳನ್ನು ಅನುಸರಿಸುವವರಾಗಿ ಆತನು ಹೇಳಿದ ಮಾರ್ಗದಲ್ಲೇ ನಡೆದು ಆತನಲ್ಲಿ ಭಯಭಕ್ತಿಯುಳ್ಳವರಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 “ಆತನ ಆಜ್ಞೆಗಳಿಗೆ ವಿಧೇಯರಾಗಿರಿ. ಆತನನ್ನು ಅನುಸರಿಸಿ ಗೌರವಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 8:6
9 ತಿಳಿವುಗಳ ಹೋಲಿಕೆ  

ನೀವು ಬದುಕುವ ಹಾಗೆಯೂ, ನಿಮಗೆ ಒಳ್ಳೆಯದಾಗುವ ಹಾಗೆಯೂ, ನೀವು ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನಿಮ್ಮ ದಿವಸಗಳು ಬಹಳವಾಗುವ ಹಾಗೆಯೂ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಜ್ಞಾಪಿಸಿದ ಮಾರ್ಗಗಳಲ್ಲೇ ನಡೆದುಕೊಳ್ಳಬೇಕು.


ಇವರಿಬ್ಬರೂ ಕರ್ತದೇವರ ಎಲ್ಲಾ ಆಜ್ಞೆಗಳನ್ನೂ ತೀರ್ಪುಗಳನ್ನೂ ತಪ್ಪಿಲ್ಲದೆ ಕೈಕೊಂಡು, ದೇವರ ಮುಂದೆ ನೀತಿವಂತರಾಗಿದ್ದರು.


ಯೆಹೋವ ದೇವರಿಗೆ ಭಯಪಟ್ಟು ಅವರ ಮಾರ್ಗಗಳಲ್ಲಿ ನಡೆದುಕೊಳ್ಳುವ ಪ್ರತಿಯೊಬ್ಬನು ಧನ್ಯನು.


ಆಗ ನೀವು ನಮ್ಮ ತಂದೆಗಳಿಗೆ ಕೊಟ್ಟ ದೇಶದಲ್ಲಿ ಅವರು ವಾಸಿಸುವ ಕಾಲದಲ್ಲೆಲ್ಲಾ ನಿಮ್ಮಲ್ಲಿ ಭಯಭಕ್ತಿಯುಳ್ಳವರಾಗಿ ನಿಮ್ಮ ಮಾರ್ಗಗಳಲ್ಲಿ ನಡೆಯುವರು.


ಆದರೆ ನೀವು ಯೆಹೋವ ದೇವರಿಗೆ ಭಯಪಟ್ಟು, ನಿಮ್ಮ ಪೂರ್ಣಹೃದಯದಿಂದ ನಂಬಿಗಸ್ತರಾಗಿ ಅವರನ್ನು ಸೇವಿಸಿರಿ. ಏಕೆಂದರೆ ಅವರು ನಿಮಗೋಸ್ಕರ ಎಂಥ ಮಹತ್ತಾದ ಕಾರ್ಯಗಳನ್ನು ಮಾಡಿದರೆಂದು ಆಲೋಚಿಸಿರಿ.


ನಿಯಮಗಳನ್ನೂ, ಆಜ್ಞೆಗಳನ್ನೂ ಅವರಿಗೆ ಕಲಿಸಿ, ಅವರು ನಡೆಯಬೇಕಾದ ಮಾರ್ಗವನ್ನೂ, ಅವರು ಮಾಡಬೇಕಾದ ಕೆಲಸವನ್ನೂ ಅವರಿಗೆ ತೋರಿಸಬೇಕು.


ಇದಲ್ಲದೆ ಒಬ್ಬನು ತನ್ನ ಮಗನನ್ನು ಶಿಸ್ತುಪಡಿಸುವ ಪ್ರಕಾರ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಶಿಸ್ತಿನಿಂದ ನಡೆಸುತ್ತಾ ಬಂದರೆಂದು ನಿಮ್ಮ ಹೃದಯದಲ್ಲಿ ತಿಳಿದುಕೊಳ್ಳಿರಿ.


ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಒಳ್ಳೆಯ ದೇಶಕ್ಕೆ ಬರಮಾಡುತ್ತಾರೆ. ಅದು ನೀರಿನ ಹಳ್ಳಗಳೂ, ತಗ್ಗುಗಳಲ್ಲಿಯೂ, ಬೆಟ್ಟದಲ್ಲಿಯೂ, ಉಕ್ಕುವ ಬುಗ್ಗೆಗಳೂ ಇರುವ ದೇಶವಾಗಿರುತ್ತದೆ.


ಅವರು ನನಗೆ ಭಯಪಟ್ಟು, ನನ್ನ ಆಜ್ಞೆಗಳನ್ನೆಲ್ಲಾ ಎಂದೆಂದಿಗೂ ಕೈಗೊಳ್ಳುವಂಥ ಹೃದಯವು ಅವರಲ್ಲಿದ್ದರೆ ಎಷ್ಟೋ ಒಳ್ಳೆಯದು. ಆಗ ಅವರಿಗೂ, ಅವರ ಮಕ್ಕಳಿಗೂ ಎಂದೆಂದಿಗೂ ಒಳ್ಳೆಯದಾಗುವುದು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು