Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 7:24 - ಕನ್ನಡ ಸಮಕಾಲಿಕ ಅನುವಾದ

24 ದೇವರು ಅವರ ಅರಸರನ್ನು ನಿಮಗೆ ಒಪ್ಪಿಸುವರು. ನೀವು ಅವರ ಹೆಸರನ್ನು ಆಕಾಶದ ಕೆಳಗೆ ಇಲ್ಲದ ಹಾಗೆ ದಂಡಿಸುವಿರಿ. ನೀವು ಅವರನ್ನು ನಿರ್ಮೂಲ ಮಾಡುವ ತನಕ ಒಬ್ಬನಾದರೂ ನಿಮ್ಮ ಮುಂದೆ ನಿಲ್ಲಲಾರನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಆತನು ಅವರ ಅರಸರನ್ನು ನಿಮ್ಮ ಕೈಗೆ ಸಿಗುವಂತೆ ಮಾಡಿ, ನೀವು ಅವರ ಹೆಸರುಗಳೇ ಭೂಮಿಯ ಮೇಲೆ ಉಳಿಯದಂತೆ ಮಾಡಬೇಕು. ಯಾರೂ ನಿಮ್ಮ ಮುಂದೆ ನಿಲ್ಲುವುದಿಲ್ಲ; ನೀವು ಎಲ್ಲರನ್ನೂ ನಾಶಮಾಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಈ ಜನರ ಅರಸುಗಳು ನಿಮ್ಮ ಕೈಗೆಸಿಕ್ಕುವಂತೆ ಮಾಡುವರು. ನೀವು ಅವರ ಹೆಸರುಗಳೇ ಭೂಮಿಯ ಮೇಲೆ ಉಳಿಯದಂತೆ ಮಾಡಬೇಕು. ಯಾರೂ ನಿಮ್ಮ ಮುಂದೆ ನಿಲ್ಲರು; ಎಲ್ಲರನ್ನು ನೀವು ನಾಶಮಾಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಆತನು ಅವರ ಅರಸುಗಳನ್ನು ನಿಮ್ಮ ಕೈಗೆ ಸಿಕ್ಕುವಂತೆ ಮಾಡಲಾಗಿ ನೀವು ಅವರ ಹೆಸರುಗಳೇ ಭೂವಿುಯ ಮೇಲೆ ಉಳಿಯದಂತೆ ಮಾಡಬೇಕು. ಯಾರೂ ನಿಮ್ಮ ಮುಂದೆ ನಿಲ್ಲುವದಿಲ್ಲ; ಎಲ್ಲರನ್ನೂ ನಾಶಮಾಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಅವರ ರಾಜರನ್ನು ನೀವು ಸೋಲಿಸುವಂತೆ ಮಾಡುವನು. ನೀವು ಅವರನ್ನು ಕೊಂದು ಅವರ ಹೆಸರು ಉಳಿಯದಂತೆ ಮಾಡುವಿರಿ. ನಿಮ್ಮನ್ನು ಯಾರೂ ತಡೆಯಲಾರರು. ನೀವು ಪ್ರತಿಯೊಬ್ಬರನ್ನು ನಾಶಮಾಡಿಬಿಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 7:24
26 ತಿಳಿವುಗಳ ಹೋಲಿಕೆ  

“ಯೆಹೋವ ದೇವರು ನಿಮ್ಮ ಮುಂದೆ ಬಲವಾದ ದೊಡ್ಡ ರಾಷ್ಟ್ರಗಳನ್ನು ಸಹ ಹೊರಡಿಸಿಬಿಟ್ಟರು. ನಿಮ್ಮ ಮುಂದೆ ಈವರೆಗೂ ಒಬ್ಬರಾದರೂ ನಿಲ್ಲಲಾರದೆ ಹೋದರು.


ಯೆಹೋವ ದೇವರು ಯೆಹೋಶುವನಿಗೆ, “ನೀನು ಅವರಿಗೆ ಭಯಪಡಬೇಡ, ನಾನು ನಿನ್ನ ಕೈಯಲ್ಲಿ ಅವರನ್ನು ಒಪ್ಪಿಸಿಕೊಟ್ಟಿದ್ದೇನೆ. ಅವರಲ್ಲಿ ಒಬ್ಬನಾದರೂ ನಿನ್ನ ಎದುರಿನಲ್ಲಿ ನಿಲ್ಲುವುದಿಲ್ಲ,” ಎಂದರು.


ಯಾರೂ ನಿಮ್ಮ ಮುಂದೆ ನಿಲ್ಲಲಾರರು. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಹೇಳಿದ ಹಾಗೆ ನಿಮ್ಮ ಹೆದರಿಕೆಯನ್ನೂ, ದಿಗಿಲನ್ನೂ, ನೀವು ಸಂಚಾರ ಮಾಡುವ ಸಮಸ್ತ ದೇಶದ ಮೇಲೆ ಇಡುವರು.


ಯೆಹೋಶುವನು ಈ ಸಮಸ್ತ ಅರಸರನ್ನೂ, ಅವರ ರಾಜ್ಯವನ್ನೂ ಏಕಕಾಲದಲ್ಲಿ ವಶಪಡಿಸಿಕೊಂಡನು. ಏಕೆಂದರೆ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಇಸ್ರಾಯೇಲಿಗೋಸ್ಕರ ಯುದ್ಧಮಾಡಿದರು.


ನೀನು ಜೀವಿಸುವ ದಿವಸಗಳಲ್ಲೆಲ್ಲಾ ಒಬ್ಬನೂ ನಿನ್ನ ಮುಂದೆ ನಿಲ್ಲನು. ನಾನು ಮೋಶೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರುವೆನು. ನಾನು ನಿನ್ನನ್ನು ಮರೆಯುವುದಿಲ್ಲ, ನಿನ್ನನ್ನು ತೊರೆಯುವುದಿಲ್ಲ.


ನನ್ನನ್ನು ಬಿಡು, ನಾನು ಅವರನ್ನು ನಾಶಮಾಡಿ, ಅವರ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಟ್ಟು, ನಿಮ್ಮನ್ನು ಅವರಿಗಿಂತ ಬಲಿಷ್ಠವಾದ ಜನಾಂಗವಾಗಿ ಮಾಡುವೆನು,” ಎಂದು ಹೇಳಿದರು.


ಇವೆಲ್ಲವುಗಳಲ್ಲಿಯೂ ನಾವು ನಮ್ಮನ್ನು ಪ್ರೀತಿಸಿದಾತನ ಮೂಲಕ ಜಯ ಹೊಂದಿದವರಿಗಿಂತಲೂ ಹೆಚ್ಚಿನವರಾಗಿದ್ದೇವೆ.


ಆದರೆ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ನಮಗೆ ಜಯವನ್ನು ಕೊಡುವ ದೇವರಿಗೆ ಸ್ತೋತ್ರ.


“ಯೆಹೂದದ ಮೇಲೆಯೂ ಯೆರೂಸಲೇಮಿನ ಎಲ್ಲಾ ನಿವಾಸಿಗಳ ಮೇಲೆಯೂ ನನ್ನ ಕೈಚಾಚುವೆನು. ಈ ಸ್ಥಳದಲ್ಲಿ ಬಾಳನ ಪೂಜೆಗಳನ್ನು ಮತ್ತು ಉಳಿದಿರುವ ವಿಗ್ರಹಾರಾಧಕ ಯಾಜಕರ ಹೆಸರುಗಳನ್ನು ತೆಗೆದುಬಿಡುವೆನು.


“ನೀವು ಅವರಿಗೆ ಹೀಗೆ ಹೇಳಬೇಕು: ‘ಆಕಾಶಗಳನ್ನೂ ಭೂಮಿಯನ್ನೂ ಉಂಟು ಮಾಡದ ದೇವರುಗಳು, ಭೂಮಿಯ ಮೇಲಿನಿಂದಲೂ ಈ ಆಕಾಶದ ಕೆಳಗಿನಿಂದಲೂ ನಾಶವಾಗುವುವು.’ ”


ನಿನಗೆ ವಿರೋಧವಾಗಿ ನಿರ್ಮಿಸಿದ ಆಯುಧಗಳು ಸಫಲವಾಗುವುದಿಲ್ಲ. ನಿನಗೆ ವಿರೋಧವಾಗಿ ನಿಂತುಕೊಳ್ಳುವ ಪ್ರತಿಯೊಂದು ನಾಲಿಗೆಯನ್ನು ನ್ಯಾಯತೀರ್ಪಿನಲ್ಲಿ ನೀನು ಖಂಡಿಸುವೆ. ಇದೇ ಯೆಹೋವ ದೇವರ ಸೇವಕರ ಬಾಧ್ಯತೆಯು, ಇದು ನನ್ನಿಂದ ಅವರಿಗೆ ದೊರೆಯುವ ಸಮರ್ಥನೆ,” ಎಂದು ಯೆಹೋವ ದೇವರು ಹೇಳುತ್ತಾರೆ.


ನೀತಿವಂತರ ಸ್ಮರಣೆಯು ಆಶೀರ್ವಾದಕ್ಕೆ ಆಸ್ಪದ; ಆದರೆ ದುಷ್ಟನ ಹೆಸರು ಕೊಳೆಯುವುದು.


ರಾಷ್ಟ್ರಗಳನ್ನು ಖಂಡಿಸಿ ದುಷ್ಟರನ್ನು ದಂಡಿಸಿದ್ದೀರಿ; ಅವರ ಹೆಸರನ್ನು ಯುಗಯುಗಾಂತರಗಳವರೆಗೂ ಅಳಿಸಿಬಿಟ್ಟಿದ್ದೀರಿ.


ಅಂಥವನನ್ನು ಯೆಹೋವ ದೇವರು ಉಳಿಸುವುದಿಲ್ಲ, ಆಗಲೇ ಯೆಹೋವ ದೇವರ ಕೋಪವೂ, ರೋಷವೂ ಆ ಮನುಷ್ಯನನ್ನು ಸುಡುವುದು. ಈ ಗ್ರಂಥದಲ್ಲಿ ಬರೆದಿರುವ ಶಾಪವೆಲ್ಲಾ ಅವನ ಮೇಲೆ ಬರುವುದು. ಯೆಹೋವ ದೇವರು ಅವನ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವರು.


ಆದ್ದರಿಂದ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ವಶಮಾಡಿಕೊಳ್ಳುವುದಕ್ಕೆ ಸೊತ್ತಾಗಿ ಕೊಡುವ ದೇಶದ ಸುತ್ತಲು ಇರುವ ಶತ್ರುಗಳಿಂದ ನಿಮ್ಮನ್ನು ಬಿಡಿಸಿ, ವಿಶ್ರಾಂತಿ ಕೊಡುವರು. ಆಗ ನೀವು ಅಮಾಲೇಕ್ಯರ ಜ್ಞಾಪಕವನ್ನು ಆಕಾಶದ ಕೆಳಗಿಂದ ಅಳಿಸಿಬಿಡಬೇಕು, ಇದನ್ನು ಮರೆಯಬಾರದು.


ಆಗ ಯೆಹೋವ ದೇವರು ಮೋಶೆಗೆ, “ಇದನ್ನು ಜ್ಞಾಪಕಾರ್ಥವಾಗಿ ಗ್ರಂಥದಲ್ಲಿ ಬರೆ. ಏಕೆಂದರೆ ನಾನು ಅಮಾಲೇಕ್ಯರ ನೆನಪು ಭೂಲೋಕದಲ್ಲಿ ಇರದಂತೆ ಸಂಪೂರ್ಣವಾಗಿ ಅಳಿಸಿಬಿಡುವೆನು. ಇದನ್ನು ಯೆಹೋಶುವನಿಗೆ ಮನದಟ್ಟಾಗುವಂತೆ ಹೇಳು,” ಎಂದರು.


ಹೀಗಿರುವುದರಿಂದ ನೀವು ಈ ಹೊತ್ತು ತಿಳಿದುಕೊಳ್ಳತಕ್ಕದ್ದೇನೆಂದರೆ, ನಿಮ್ಮ ದೇವರಾದ ಯೆಹೋವ ದೇವರೇ ನಿಮ್ಮ ಮುಂದೆ ಹೋಗುತ್ತಾರೆ. ಅವರು ದಹಿಸುವ ಅಗ್ನಿಯಾಗಿ ಅವರನ್ನು ನಾಶಮಾಡುವರು. ದೇವರು ಅವರನ್ನು ನಿಮ್ಮ ಮುಂದೆ ಸೋಲಿಸುವರು. ಯೆಹೋವ ದೇವರು ನಿಮಗೆ ಹೇಳಿದ ಹಾಗೆ ನೀವು ಅವರನ್ನು ಸ್ವಾಧೀನಪಡಿಸಿಕೊಂಡು ಅವರನ್ನು ಬೇಗ ತೆಗೆದುಹಾಕುವಿರಿ.


ಆಗ ಯೆಹೋವ ದೇವರು ಯೆಹೋಶುವನಿಗೆ, “ನೋಡು, ಯೆರಿಕೋವನ್ನೂ ಅದರ ಅರಸನನ್ನೂ ಯುದ್ಧ ವೀರರನ್ನೂ ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ.


ಅವರು ಹಾಗೆಯೇ ಮಾಡಿದರು. ಆ ಐದು ಮಂದಿ ಅರಸರನ್ನು ಅಂದರೆ ಯೆರೂಸಲೇಮಿನ ಅರಸನನ್ನೂ, ಹೆಬ್ರೋನಿನ ಅರಸನನ್ನೂ ಯರ್ಮೂತಿನ ಅರಸನನ್ನೂ ಲಾಕೀಷಿನ ಅರಸನನ್ನೂ ಎಗ್ಲೋನಿನ ಅರಸನನ್ನೂ ಆ ಗವಿಯೊಳಗಿಂದ ಅವನ ಬಳಿಗೆ ಹೊರಗೆ ತಂದರು.


ಹೀಗೆ ಯೆಹೋಶುವನು ಸಮಸ್ತ ಬೆಟ್ಟಗಳ ದೇಶವನ್ನೂ, ದಕ್ಷಿಣದ ಪ್ರದೇಶವನ್ನೂ, ತಗ್ಗಿನ ದೇಶವನ್ನೂ ನೀರು ಬುಗ್ಗೆಗಳ ದೇಶವನ್ನೂ ಅವುಗಳ ಅರಸರನ್ನೂ ಒಬ್ಬರನ್ನೂ ಉಳಿಸದೆ, ಇಸ್ರಾಯೇಲಿನ ದೇವರಾದ ಯೆಹೋವ ದೇವರು ಆಜ್ಞಾಪಿಸಿದ ಹಾಗೆಯೇ ಶ್ವಾಸವುಳ್ಳದ್ದನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿದನು.


ಯೆಹೋಶುವನು ಸೇಯೀರಿಗೆ ಏರಿಹೋಗುವ ಹಾಲಾಕ್ ಬೆಟ್ಟ ಮೊದಲುಗೊಂಡು ಬಾಲ್ಗಾದಿನ ಮಟ್ಟಿಗೂ ಇರುವ ಲೆಬನೋನಿನ ಕಣಿವೆಯಲ್ಲಿ ಹೆರ್ಮೋನಿನ ಬೆಟ್ಟದ ಕೆಳಗಿರುವ ಎಲ್ಲಾ ದೇಶವನ್ನೂ ಬೆಟ್ಟಗಳನ್ನೂ ದಕ್ಷಿಣ ದೇಶವೆಲ್ಲವನ್ನೂ ತೆಗೆದುಕೊಂಡು ಅವುಗಳ ಅರಸುಗಳೆಲ್ಲರನ್ನೂ ಹಿಡಿದು ಅವರಿಗೆ ಮರಣದಂಡನೆ ವಿಧಿಸಿದನು.


ತಿರ್ಚದ ಅರಸನು. ಹೀಗೆ ಒಟ್ಟು ಮೂವತ್ತೊಂದು ಮಂದಿ ಅರಸರು ಅಪಜಯಗೊಂಡರು.


ಯೆಹೋವ ದೇವರು ಅವರ ತಂದೆಗಳಿಗೆ ಆಣೆಯಿಟ್ಟ ಪ್ರಕಾರವೇ ಅವರ ಸುತ್ತಲೂ ಅವರಿಗೆ ವಿಶ್ರಾಂತಿಕೊಟ್ಟರು. ಅವರ ಎಲ್ಲಾ ಶತ್ರುಗಳಲ್ಲಿ ಒಬ್ಬನಾದರೂ ಅವರ ಮುಂದೆ ನಿಲ್ಲಲಿಲ್ಲ. ಅವರ ಶತ್ರುಗಳನ್ನೆಲ್ಲಾ ಯೆಹೋವ ದೇವರು ಅವರ ಕೈಗಳಿಗೆ ಒಪ್ಪಿಸಿದರು.


ಆದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೋಸ್ಕರ ಈ ಸಕಲ ಜನಾಂಗಗಳಿಗೆ ಮಾಡಿದ ಎಲ್ಲವನ್ನೂ ನೋಡಿದ್ದೀರಿ. ನಿಮಗೋಸ್ಕರವಾಗಿ ಯುದ್ಧ ಮಾಡಿದವರು ನಿಮ್ಮ ದೇವರಾದ ಯೆಹೋವ ದೇವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು