Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 4:3 - ಕನ್ನಡ ಸಮಕಾಲಿಕ ಅನುವಾದ

3 ಬಾಳ್ ಪೆಯೋರನ ವಿಷಯದಲ್ಲಿ ಯೆಹೋವ ದೇವರು ಮಾಡಿದವುಗಳನ್ನು ನಿಮ್ಮ ಕಣ್ಣುಗಳು ನೋಡಿದವು. ಬಾಳ್ ಪೆಯೋರನನ್ನು ಹಿಂಬಾಲಿಸಿದ ಜನರನ್ನೆಲ್ಲಾ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಿದರಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಪೆಗೋರದ ಬಾಳನ ಸಂಗತಿಯಲ್ಲಿ ಯೆಹೋವನು ಮಾಡಿದ ಕಾರ್ಯವನ್ನು ನೀವು ಗಮನಿಸಿದ್ದೀರಿ. ಪೆಗೋರದ ಬಾಳನನ್ನು ಅನುಸರಿಸಿದವರೆಲ್ಲರನ್ನೂ ನಿಮ್ಮ ದೇವರಾದ ಯೆಹೋವನು ನಿಮ್ಮಲ್ಲಿರದಂತೆ ನಾಶಮಾಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಪೆಗೋರದ ಬಾಳ್ ದೇವತೆಯ ವಿಷಯದಲ್ಲಿ ಸರ್ವೇಶ್ವರ ಮಾಡಿದ ಕಾರ್ಯವನ್ನು ನೀವು ನೋಡಿದ್ದೀರಷ್ಟೆ; ಆ ಪೆಗೋರದ ಬಾಳನನ್ನು ಅನುಸರಿಸಿದವರೆಲ್ಲರನ್ನು ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಮಧ್ಯೆಯಿಂದ ನಾಶಮಾಡಿದರಲ್ಲವೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಪೆಗೋರದ ಬಾಳನ ಸಂಗತಿಯಲ್ಲಿ ಯೆಹೋವನು ಮಾಡಿದ ಕಾರ್ಯವನ್ನು ನೀವು ನೋಡೇ ಇದ್ದೀರಷ್ಟೆ; ಪೆಗೋರದ ಬಾಳನನ್ನು ಅನುಸರಿಸಿದವರೆಲ್ಲರನ್ನೂ ನಿಮ್ಮ ದೇವರಾದ ಯೆಹೋವನು ನಿಮ್ಮಲ್ಲಿರದಂತೆ ನಾಶಮಾಡಿದನಲ್ಲಾ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 “ಬಾಳ್‌ಪೆಗೋರಿನಲ್ಲಿ ನಡೆದ ಸಂಗತಿಯನ್ನು ನೀವು ನೋಡಿದ್ದೀರಿ. ಅಲ್ಲಿ ಬಾಳನನ್ನು ಪೂಜಿಸಿದವರನ್ನೆಲ್ಲಾ ಯೆಹೋವನು ನಾಶಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 4:3
9 ತಿಳಿವುಗಳ ಹೋಲಿಕೆ  

“ನಾನು ಮರುಭೂಮಿಯಲ್ಲಿ ದ್ರಾಕ್ಷಾಫಲದ ಹಾಗೆ ಇಸ್ರಾಯೇಲನ್ನು ಕಂಡುಕೊಂಡೆನು. ಅಂಜೂರದ ಗಿಡದಲ್ಲಿ ಮೊದಲು ಮಾಗಿದ ಹಣ್ಣನ್ನು ಕಂಡ ಹಾಗೆ ನಿಮ್ಮ ಪಿತೃಗಳನ್ನು ನೋಡಿದೆನು. ಆದರೆ ಅವರು ಬಾಳ್ ಪೆಯೋರನ ಹತ್ತಿರ ಬಂದು ನಾಚಿಕೆಯ ವಿಗ್ರಹಕ್ಕೆ ತಮ್ಮನ್ನು ಪ್ರತ್ಯೇಕಿಸಿಕೊಂಡರು. ಅವರು ಪ್ರೀತಿಸಿದ ವಿಗ್ರಹಗಳ ಹಾಗೆ ಅಸಹ್ಯರಾದರು.


ಪೆಯೋರದವರ ದುಷ್ಟತನವು ನಮಗೆ ಅಲ್ಪವೋ? ಯೆಹೋವ ದೇವರ ಜನರ ಮೇಲೆ ವ್ಯಾಧಿ ಬಂದಿದ್ದರೂ ಈ ದಿನದವರೆಗೂ ಆ ಪಾಪದಿಂದ ನಾವು ಶುದ್ಧವಾಗಲಿಲ್ಲ.


ಇವರೇ ಬಿಳಾಮನ ಮಾತಿನಿಂದ ಪೆಯೋರನ ಕಾರ್ಯದಲ್ಲಿ ಯೆಹೋವ ದೇವರಿಗೆ ವಿರೋಧವಾಗಿ ದ್ರೋಹ ಮಾಡುವುದಕ್ಕೆ ಇಸ್ರಾಯೇಲರಿಗೆ ಕಾರಣವಾಗಿದ್ದರು. ಯೆಹೋವ ದೇವರ ಸಭೆಯೊಳಗೆ ಇವರಿಂದಲೇ ವ್ಯಾಧಿಯಾಯಿತು.


ಆದರೆ ಮೋಶೆಯೂ ಯಾಜಕನಾದ ಆರೋನನೂ ಸೀನಾಯಿ ಮರುಭೂಮಿಯಲ್ಲಿ ಇಸ್ರಾಯೇಲರನ್ನು ಎಣಿಸಿದಾಗ, ಎಣಿಕೆಯಾದವರಲ್ಲಿ ಒಬ್ಬನಾದರೂ ಇವರ ಲೆಕ್ಕದಲ್ಲಿ ಸೇರಲಿಲ್ಲ.


ಆದರೆ ನಿಮ್ಮ ದೇವರಾದ ಯೆಹೋವ ದೇವರಿಗೆ ವಿಧೇಯರಾದ ನೀವೆಲ್ಲರು ಇಂದಿನವರೆಗೆ ಬದುಕಿದ್ದೀರಿ.


ಮರುಭೂಮಿಯಲ್ಲಿ ನಾನು ಅವರ ಮಕ್ಕಳಿಗೆ ಹೇಳಿದ್ದೇನೆಂದರೆ, “ನೀವು ನಿಮ್ಮ ತಂದೆಗಳ ನಿಯಮಗಳನ್ನು ಅನುಸರಿಸಬೇಡಿರಿ, ಅವರ ನ್ಯಾಯಗಳನ್ನು ಕೈಕೊಳ್ಳಬೇಡಿರಿ, ಅವರ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರಮಾಡಿಕೊಳ್ಳಬೇಡಿರಿ.


ಯೆಹೋವ ದೇವರು ಮಾಡಿದ ಮಹತ್ಕಾರ್ಯಗಳನ್ನೆಲ್ಲಾ ನಿಮ್ಮ ಕಣ್ಣುಗಳು ನೋಡಿದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು