Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 4:10 - ಕನ್ನಡ ಸಮಕಾಲಿಕ ಅನುವಾದ

10 ನೀವು ಹೋರೇಬಿನಲ್ಲಿ ಯೆಹೋವ ದೇವರ ಮುಂದೆ ನಿಂತ ದಿವಸದಂದು ದೇವರು ನನಗೆ, “ಜನರನ್ನು ನನಗಾಗಿ ಕೂಡಿಸು, ಅವರು ಭೂಮಿಯ ಮೇಲೆ ಬದುಕುವ ದಿವಸಗಳೆಲ್ಲಾ ನನಗೆ ಭಯಭಕ್ತಿಯಿಂದಿರುವುದನ್ನು ಕಲಿತು, ತಮ್ಮ ಮಕ್ಕಳಿಗೂ ಬೋಧಿಸುವಂತೆ ನಾನು ಅವರಿಗೆ ನನ್ನ ವಾಕ್ಯಗಳನ್ನು ಹೇಳಿಕೊಡುವೆನು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆ ಸಂಗತಿಗಳು ಯಾವುವೆಂದರೆ, ನೀವು ಹೋರೇಬಿನಲ್ಲಿ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ನಿಂತಿದ್ದಾಗ ಆತನು ನನಗೆ, “ಜನರೆಲ್ಲರನ್ನು ನನ್ನ ಹತ್ತಿರಕ್ಕೆ ಕೂಡಿಸು; ಅವರು ತಾವು ಭೂಮಿಯ ಮೇಲಿರುವ ದಿನಗಳಲ್ಲೆಲ್ಲಾ ನನಗೆ ಭಯಭಕ್ತಿಯಿಂದಿರುವುದಕ್ಕೆ ಕಲಿತುಕೊಂಡು ತಮ್ಮ ಮಕ್ಕಳಿಗೂ ಕಲಿಸಿಕೊಡುವಂತೆ ಅವರಿಗೆ ಆಜ್ಞೆಗಳನ್ನು ತಿಳಿಸುತ್ತೇನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಹೋರೇಬಿನಲ್ಲಿ ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ನೀವು ನಿಂತಿದ್ದಾಗ ಅವರು ನನಗೆ, ‘ಜನರೆಲ್ಲರನ್ನು ನನ್ನ ಹತ್ತಿರಕ್ಕೆ ಕರೆ; ಅವರೇ ನನ್ನ ಆಜ್ಞೆಗಳನ್ನು ಕೇಳಿಸಿಕೊಳ್ಳಲಿ; ಆಗ ಅವರು ತಮ್ಮ ಜೀವಮಾನದಲ್ಲೆಲ್ಲಾ ನನ್ನಲ್ಲಿ ಭಯಭಕ್ತಿಯಿಂದಿರಲು ಕಲಿತುಕೊಳ್ಳುವರು; ಅಂತೆಯೇ ತಮ್ಮ ಮಕ್ಕಳಿಗೂ ಕಲಿಸಿಕೊಡುವರು,’ ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಆ ಸಂಗತಿಗಳು ಯಾವವಂದರೆ - ನೀವು ಹೋರೇಬಿನಲ್ಲಿ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ನಿಂತಿದ್ದಾಗ ಆತನು ನನಗೆ - ಜನರೆಲ್ಲರನ್ನು ನನ್ನ ಹತ್ತಿರಕ್ಕೆ ಕೂಡಿಸು; ಅವರು ತಾವು ಭೂವಿುಯ ಮೇಲಿರುವ ದಿನಗಳಲ್ಲೆಲ್ಲಾ ನನಗೆ ಭಯಭಕ್ತಿಯಿಂದಿರುವದಕ್ಕೆ ಕಲಿತುಕೊಂಡು ತಮ್ಮ ಮಕ್ಕಳಿಗೂ ಕಲಿಸಿಕೊಡುವಂತೆ ಅವರಿಗೆ ಆಜ್ಞೆಗಳನ್ನು ತಿಳಿಸುತ್ತೇನೆ ಎಂದು ಹೇಳಿದ ದಿನದ ವಿಷಯಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಸೀನಾಯಿ ಬೆಟ್ಟದ ಬಳಿಯಲ್ಲಿ ನೀನು ಯೆಹೋವನ ಸನ್ನಿಧಾನದಲ್ಲಿ ನಿಂತಿದ್ದನ್ನು ನೀವು ಜ್ಞಾಪಕ ಮಾಡಿಕೊಳ್ಳಿರಿ. ಆತನು ನನಗೆ ಹೇಳಿದ್ದೇನೆಂದರೆ: ‘ನಾನು ಹೇಳುವ ಮಾತುಗಳನ್ನು ಕೇಳುವಂತೆ ಜನರನ್ನೆಲ್ಲಾ ಒಟ್ಟುಗೂಡಿಸು. ನನ್ನ ಮಾತುಗಳನ್ನು ಕೇಳಿ ಅವರು ಜೀವಮಾನವೆಲ್ಲಾ ನನ್ನನ್ನು ಸನ್ಮಾನಿಸಲು ಮತ್ತು ಭಯಭಕ್ತಿಯಿಂದಿರಲು ಕಲಿತುಕೊಳ್ಳುವರು ಮತ್ತು ಅವರ ಮಕ್ಕಳಿಗೂ ಕಲಿಸುವರು.’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 4:10
25 ತಿಳಿವುಗಳ ಹೋಲಿಕೆ  

ಯೆಹೋವ ದೇವರು ಮೋಶೆಗೆ, “ನಾನು ನಿನ್ನ ಸಂಗಡ ಮಾತನಾಡುವುದನ್ನು ಜನರು ಕೇಳುವ ಹಾಗೆಯೂ ಅವರು ಸದಾಕಾಲ ನಿನ್ನನ್ನು ನಂಬುವಂತೆಯೂ ದಟ್ಟವಾದ ಮೇಘದಲ್ಲಿ ನಾನು ನಿನ್ನ ಬಳಿಗೆ ಬರುತ್ತೇನೆ,” ಎಂದರು. ಮೋಶೆಯು ಜನರ ಮಾತುಗಳನ್ನು ಯೆಹೋವ ದೇವರಿಗೆ ತಿಳಿಸಿದನು.


ಅವನು ಗರ್ವದಿಂದ ತನ್ನ ಸ್ವದೇಶದವರನ್ನು ಹೀಯಾಳಿಸಬಾರದು. ಯೆಹೋವ ದೇವರ ಆಜ್ಞೆಯನ್ನು ಮೀರಿ ಎಡಬಲಕ್ಕೆ ತಿರುಗಿಕೊಳ್ಳಬಾರದು. ದೇವರಾದ ಯೆಹೋವ ದೇವರಲ್ಲಿ ಭಯಭಕ್ತಿಯುಳ್ಳವನಾಗಿರಬೇಕು. ಈ ದೇವರ ನಿಯಮದ ಎಲ್ಲಾ ವಾಕ್ಯಗಳನ್ನು, ತೀರ್ಪುಗಳನ್ನು ಅನುಸರಿಸಲು ಅಭ್ಯಾಸ ಮಾಡಿಕೊಳ್ಳಬೇಕು. ಈ ಕಾರಣ ಈ ಗ್ರಂಥ ಅವನ ಬಳಿಯಲ್ಲೇ ಇರಬೇಕು. ಅವನು ತನ್ನ ಜೀವಮಾನವೆಲ್ಲಾ ಇದನ್ನು ಓದಿಕೊಳ್ಳುತ್ತಾ ಇರಬೇಕು.


ನಮ್ಮ ದೇವರಾದ ಯೆಹೋವ ದೇವರು ಹೋರೇಬಿನಲ್ಲಿ ನಮ್ಮ ಸಂಗಡ ಒಡಂಬಡಿಕೆ ಮಾಡಿಕೊಂಡರು.


ಆಗ ಮೋಶೆಯು ಜನರಿಗೆ, “ಭಯಪಡಬೇಡಿರಿ. ಏಕೆಂದರೆ ನಿಮ್ಮನ್ನು ಪರೀಕ್ಷಿಸುವುದಕ್ಕೋಸ್ಕರವೂ ನೀವು ಪಾಪಮಾಡದಂತೆ ಅವರ ಭಯವು ನಿಮಗಿರಲೆಂದೂ ದೇವರು ಬಂದಿದ್ದಾರೆ,” ಎಂದನು.


ಜನರೆಲ್ಲಾ ಗುಡುಗುಗಳನ್ನೂ ಮಿಂಚುಗಳನ್ನೂ ತುತೂರಿಯ ಶಬ್ದವನ್ನೂ ಬೆಟ್ಟದಲ್ಲಿ ಹೊಗೆ ಹಾಯುವುದನ್ನೂ ನೋಡಿದರು. ಜನರು ಅದನ್ನು ನೋಡಿ ನಡುಗುತ್ತಾ ದೂರಹೋಗಿ ನಿಂತುಕೊಂಡರು.


ಮೂರನೆಯ ದಿನದಲ್ಲಿ ಉದಯವಾದಾಗ, ಬೆಟ್ಟದ ಮೇಲೆ ಗುಡುಗು, ಮಿಂಚು, ದಟ್ಟವಾದ ಮೇಘ ಮತ್ತು ತುತೂರಿಯ ಮಹಾ ಧ್ವನಿ ಉಂಟಾದವು. ಪಾಳೆಯದಲ್ಲಿದ್ದ ಜನರೆಲ್ಲರೂ ನಡುಗಿದರು.


ಈಗ ನಾವು ಎಲ್ಲಾ ವಿಷಯವನ್ನೂ ಕೇಳಿ ಮುಗಿಯಿತು. ದೇವರಿಗೆ ಭಯಪಡು ಮತ್ತು ದೇವರ ಆಜ್ಞೆಗಳನ್ನು ಪಾಲಿಸು. ಇದೇ ಮನುಷ್ಯನ ಪ್ರಮುಖ ಕರ್ತವ್ಯ.


ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಸ್ವರವು: “ದೇವರ ಎಲ್ಲಾ ದಾಸರೇ, ದೇವರಿಗೆ ಭಯಪಡುವ ಹಿರಿಕಿರಿಯರೇ, ನಮ್ಮ ದೇವರನ್ನು ಸ್ತುತಿಸಿರಿ!” ಎಂದು ಹೇಳಿತು.


ಮಾತನಾಡುವ ದೇವರನ್ನು ನೀವು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಏಕೆಂದರೆ ಭೂಮಿಯ ಮೇಲೆ ಎಚ್ಚರಿಸಿದವರನ್ನು ಅಸಡ್ಡೆ ಮಾಡಿದ್ದಕ್ಕೆ ಅವರು ತಪ್ಪಿಸಿಕೊಳ್ಳದಿದ್ದರೆ, ಪರಲೋಕದಿಂದ ಎಚ್ಚರಿಸುವ ದೇವರಿಂದ ನಾವು ತೊಲಗಿ ಹೋದರೆ, ಹೇಗೆ ತಾನೆ ದಂಡನೆಯಿಂದ ನಾವು ತಪ್ಪಿಸಿಕೊಳ್ಳಬಲ್ಲೆವು?


ದೇವರಲ್ಲಿ ಭಯಭಕ್ತಿಯುಳ್ಳವರ ಮೇಲೆ, ಅವರ ಕರುಣೆಯು ತಲತಲಾಂತರಗಳಿಗೂ ಇರುವುದು.


ಆದರೆ ನೀವು ಯೆಹೋವ ದೇವರಿಗೆ ಭಯಪಟ್ಟು, ನಿಮ್ಮ ಪೂರ್ಣಹೃದಯದಿಂದ ನಂಬಿಗಸ್ತರಾಗಿ ಅವರನ್ನು ಸೇವಿಸಿರಿ. ಏಕೆಂದರೆ ಅವರು ನಿಮಗೋಸ್ಕರ ಎಂಥ ಮಹತ್ತಾದ ಕಾರ್ಯಗಳನ್ನು ಮಾಡಿದರೆಂದು ಆಲೋಚಿಸಿರಿ.


ನಿಮ್ಮ ಧಾನ್ಯ, ಹೊಸ ದ್ರಾಕ್ಷಾರಸ, ಓಲಿವ್ ಎಣ್ಣೆಗಳ ದಶಮಾಂಶವನ್ನೂ ನಿಮ್ಮ ದನಕುರಿಗಳಲ್ಲಿ ಚೊಚ್ಚಲುಗಳನ್ನೂ ನಿಮ್ಮ ದೇವರಾದ ಯೆಹೋವ ದೇವರ ಮುಂದೆ ತಮ್ಮ ಹೆಸರನ್ನು ಸ್ಥಾಪಿಸಿಕೊಳ್ಳುವುದಕ್ಕೆ ದೇವರೇ ಆಯ್ದುಕೊಂಡ ಸ್ಥಳದಲ್ಲಿ ತಿನ್ನಬೇಕು. ಇದರಿಂದ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಎಂದೆಂದಿಗೂ ಭಯಭಕ್ತಿಯುಳ್ಳವರಾಗಿ ಇರುವುದನ್ನು ಕಲಿಯುವಿರಿ.


ಅವರು ನನಗೆ ಭಯಪಟ್ಟು, ನನ್ನ ಆಜ್ಞೆಗಳನ್ನೆಲ್ಲಾ ಎಂದೆಂದಿಗೂ ಕೈಗೊಳ್ಳುವಂಥ ಹೃದಯವು ಅವರಲ್ಲಿದ್ದರೆ ಎಷ್ಟೋ ಒಳ್ಳೆಯದು. ಆಗ ಅವರಿಗೂ, ಅವರ ಮಕ್ಕಳಿಗೂ ಎಂದೆಂದಿಗೂ ಒಳ್ಳೆಯದಾಗುವುದು.”


ಇಸ್ರಾಯೇಲರು ಈಜಿಪ್ಟನ್ನು ಬಿಟ್ಟ ಮೂರನೆಯ ತಿಂಗಳಿನ ಅದೇ ದಿನದಲ್ಲಿ ಸೀನಾಯಿ ಮರುಭೂಮಿಗೆ ಬಂದರು.


ನಿಮ್ಮ ಕಣ್ಣುಗಳಿಂದ ನೋಡಿದ ಕಾರ್ಯಗಳನ್ನು ನೀವು ಮರೆಯದ ಹಾಗೆಯೂ, ನೀವು ಬದುಕುವ ದಿನಗಳೆಲ್ಲಾ ಅವು ನಿಮ್ಮ ಹೃದಯಕ್ಕೆ ದೂರವಾಗದ ಹಾಗೆಯೂ ಬಹು ಜಾಗ್ರತೆಯಾಗಿದ್ದು, ಕಾಪಾಡಿಕೊಳ್ಳಿರಿ. ಅವುಗಳನ್ನು ನಿಮ್ಮ ಮಕ್ಕಳಿಗೂ, ನಿಮ್ಮ ಮಕ್ಕಳ ಮಕ್ಕಳಿಗೂ ಬೋಧಿಸಿರಿ.


ನೀವು ನಿಮ್ಮ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯ ಮಾತನಾಡಿ, ಅವುಗಳನ್ನು ನಿಮ್ಮ ಮಕ್ಕಳಿಗೆ ಕಲಿಸಬೇಕು.


ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಕೊಡುವ ದೇಶದಲ್ಲಿ ನೀವು ಬದುಕುವ ದಿವಸಗಳಲ್ಲೆಲ್ಲಾ ಕೈಗೊಂಡು ನಡೆಯತಕ್ಕ ತೀರ್ಪು ಹಾಗು ನಿಯಮಗಳು ಇವೇ.


ಏಕೆಂದರೆ, ಅವನು ತನ್ನ ಮಕ್ಕಳಿಗೂ ಅವನ ತರುವಾಯ ಅವನ ಮನೆಯವರಿಗೂ ಯೆಹೋವ ದೇವರ ಮಾರ್ಗವನ್ನು ಕೈಗೊಂಡು, ನೀತಿ ನ್ಯಾಯಗಳನ್ನು ಅನುಸರಿಸಬೇಕೆಂದು ಆಜ್ಞಾಪಿಸುವನು. ಆಗ ಯೆಹೋವ ದೇವರಾದ ನಾನು ಅಬ್ರಹಾಮನಿಗೆ ಹೇಳಿದ್ದು ನೆರವೇರುವದು,” ಎಂದುಕೊಂಡರು.


ಮೂರನೆಯ ದಿನದಲ್ಲಿ ಅವರು ಸಿದ್ಧವಾಗಿರಲಿ. ಏಕೆಂದರೆ ಮೂರನೆಯ ದಿನದಲ್ಲಿ ಯೆಹೋವ ದೇವರು ಸಮಸ್ತ ಜನರ ಕಣ್ಣೆದುರಿನಲ್ಲಿ ಸೀನಾಯಿ ಪರ್ವತಕ್ಕೆ ಇಳಿದು ಬರುವರು.


ನೀವೂ, ನಿಮ್ಮ ಮಕ್ಕಳೂ, ನಿಮ್ಮ ಮೊಮ್ಮಕ್ಕಳೂ ತಮ್ಮ ಜೀವನದ ದಿವಸಗಳಲ್ಲೆಲ್ಲಾ ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಟ್ಟು, ಕೈಗೊಳ್ಳುವ ಹಾಗೆಯೂ, ನಿಮ್ಮ ದಿವಸಗಳು ಬಹಳವಾಗುವ ಹಾಗೆಯೂ ನಾನು ನಿಮಗೆ ಕೊಡುವ ದೇವರ ಎಲ್ಲಾ ತೀರ್ಪುಗಳನ್ನು ಮತ್ತು ಆಜ್ಞೆಗಳನ್ನು ಅನುಸರಿಸಬೇಕು.


ಅವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸ ಮಾಡಿಸಿ, ನಿಮ್ಮ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯವಾಗಿ ಮಾತನಾಡಬೇಕು.


ದೇವರೇ ಒಂದು ತಲಾಂತರವು ಇನ್ನೊಂದು ತಲಾಂತರಕ್ಕೆ ನಿಮ್ಮ ಕೆಲಸಗಳನ್ನು ಪ್ರಕಟಿಸುತ್ತದೆ; ಜನರು ನಿಮ್ಮ ಪರಾಕ್ರಮಗಳನ್ನು ತಿಳಿಸುತ್ತಾರೆ.


ಜೀವಂತನು; ಜೀವಂತನೇ ನಿನ್ನನ್ನು ಸ್ತುತಿಸುವೆನು. ಹೌದು, ಜೀವಂತನಾದ ನಾನೇ ಈ ಹೊತ್ತು ನಿಮ್ಮನ್ನು ಹೊಗಳುವೆನು. ತಂದೆಯು ಮಕ್ಕಳಿಗೆ ನಿಮ್ಮ ನಿಷ್ಠೆಯನ್ನು ಬೋಧಿಸುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು