Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 33:28 - ಕನ್ನಡ ಸಮಕಾಲಿಕ ಅನುವಾದ

28 ಆದಕಾರಣ ಆಕಾಶದಿಂದ ಮಂಜನ್ನು ಸುರಿಯುವ, ಧಾನ್ಯ, ಹೊಸ ದ್ರಾಕ್ಷಾರಸ ಸಮೃದ್ಧಿಯಾಗಿರುವ ನಾಡಿನಲ್ಲಿ, ಯಾಕೋಬನ ವಂಶದವರು ಸುರಕ್ಷಿತರಾದರು. ಇಸ್ರಾಯೇಲರು ನಿರ್ಭಯವಾಗಿ ವಾಸಿಸುವವರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಆದಕಾರಣ ಇಸ್ರಾಯೇಲರು ಆಕಾಶದಿಂದ ಮಂಜು ಸುರಿದು, ಧಾನ್ಯವೂ ಮತ್ತು ದ್ರಾಕ್ಷಾರಸವೂ ಸಮೃದ್ಧಿಯಾಗಿರುವ ದೇಶದಲ್ಲೇ ಸೇರಿ ನಿರ್ಭಯವಾಗಿ ವಾಸಿಸುವವರಾದರು, ಯಾಕೋಬನ ವಂಶದವರು ಸುರಕ್ಷಿತರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ವಾಸಿಸಿರಿ ಇಸ್ರಯೇಲರೇ, ನಿರ್ಭಯರಾಗಿ ಯಕೋಬನ ಸಂತತಿಯೇ, ಸುರಕ್ಷಿತವಾಗಿ ಆಗಸದಿಂದ ಮಳೆಸುರಿಯುವ ನಾಡಿನಲ್ಲಿ ಧಾನ್ಯ, ದ್ರಾಕ್ಷಾರಸ ಸಮೃದ್ಧಿಯಾಗಿರುವಲ್ಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಆದಕಾರಣ ಇಸ್ರಾಯೇಲ್ಯರು ಆಕಾಶದಿಂದ ಮಂಜು ಸುರಿದು ಧಾನ್ಯವೂ ದ್ರಾಕ್ಷಾರಸವೂ ಸಮೃದ್ಧಿಯಾಗಿರುವ ದೇಶದಲ್ಲೇ ಸೇರಿ ನಿರ್ಭಯವಾಗಿ ವಾಸಿಸುವವರಾದರು, ಯಾಕೋಬ್‍ಸಂಭವರು ಸುರಕ್ಷಿತರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಇಸ್ರೇಲ್ ಸುರಕ್ಷಿತವಾಗಿ ಜೀವಿಸುವುದು. ಯಾಕೋಬನ ಬಾವಿ ಅವರ ವಶದಲ್ಲಿದೆ. ಧಾನ್ಯದ ಮತ್ತು ದ್ರಾಕ್ಷಾರಸದ ದೇಶವು ಅವರಿಗೆ ದೊರಕುತ್ತದೆ. ಆ ದೇಶಕ್ಕೆ ಅಧಿಕವಾಗಿ ಮಳೆ ಸುರಿಯುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 33:28
26 ತಿಳಿವುಗಳ ಹೋಲಿಕೆ  

ಬೆಟ್ಟಗಳ ತುದಿಯಿಂದ ಅವರನ್ನು ನೋಡುತ್ತೇನೆ. ಎತ್ತರದ ಗುಡ್ಡಗಳಿಂದ ಅವರನ್ನು ದೃಷ್ಟಿಸಿದ್ದೇನೆ. ನಾನು ಆ ಪ್ರತ್ಯೇಕವಾಗಿ ವಾಸಿಸುವ ಜನರನ್ನು ನೋಡುತ್ತೇನೆ. ಆ ಜನಾಂಗವು ತಾನು ಇತರ ಜನಾಂಗಗಳಂತೆ ಸಾಧಾರಣವೆಂದು ಎಣಿಸುವುದಿಲ್ಲ.


ಏಕೆಂದರೆ ನನಗೂ ನಿಮ್ಮ ಜನರಿಗೂ ನಿಮ್ಮ ದೃಷ್ಟಿಯಲ್ಲಿ ದಯೆ ದೊರಕಿತೆಂದು ಯಾವುದರಿಂದ ತಿಳಿದುಬರುವುದು? ನೀವು ನನ್ನೊಂದಿಗೆ ಹೋಗುವುದರಿಂದಲ್ಲವೋ? ಹೀಗೆ ನಾನೂ ನಿಮ್ಮ ಜನರೂ ಭೂಮಿಯ ಮೇಲಿರುವ ಎಲ್ಲಾ ಜನರಿಂದ ಪ್ರತ್ಯೇಕವಾಗಿರುವೆವು,” ಎಂದನು.


ದೇವರು ನಿನಗೆ ಆಕಾಶದ ಮಂಜನ್ನೂ ಸಾರವುಳ್ಳ ಭೂಮಿಯನ್ನೂ ಸಮೃದ್ಧಿಯಾದ ಧಾನ್ಯವನ್ನೂ ಹೊಸ ದ್ರಾಕ್ಷಾರಸವನ್ನೂ ಕೊಡಲಿ.


ಅಶುದ್ಧವಾದದ್ದು ಅದರಲ್ಲಿ ಸೇರುವುದಿಲ್ಲ. ಅಸಹ್ಯವಾದದ್ದನ್ನೂ ವಂಚಕವಾದದ್ದನ್ನೂ ನಡೆಸುವವನು ಅದರಲ್ಲಿ ಪ್ರವೇಶಿಸಲಾರನು. ಕುರಿಮರಿಯ ಜೀವ ಪುಸ್ತಕದಲ್ಲಿ ಯಾರ ಯಾರ ಹೆಸರುಗಳು ಬರೆದಿವೆಯೋ ಅವರು ಮಾತ್ರ ಸೇರುವರು.


ಆತನ ದಿನಗಳಲ್ಲಿ ಯೆಹೂದ್ಯರು ಸುರಕ್ಷಿತರಾಗಿರುವರು. ಇಸ್ರಾಯೇಲರು ನೆಮ್ಮದಿಯಿಂದ ವಾಸಿಸುವರು. ಯೆಹೋವ ಚಿದ್ಕೇನು ಎಂದರೆ, ಯೆಹೋವ ದೇವರೇ ನಮ್ಮ ಸದ್ಧರ್ಮ ಎಂಬ ಹೆಸರು ಅವರಿಗಿರುವುದು.


ಆಗ ಯೆಹೂದ್ಯರು ಸುರಕ್ಷಿತರಾಗಿರುವರು. ಯೆರೂಸಲೇಮಿನವರು ನೆಮ್ಮದಿಯಿಂದ ವಾಸಿಸುವರು. ಯೆಹೋವ ಚಿದ್ಕೇನು ಅಂದರೆ ಯೆಹೋವ ದೇವರೇ ನಮ್ಮ ಸದ್ಧರ್ಮ ಎಂಬ ಹೆಸರು ಈ ನಗರಕ್ಕೆ ಸಲ್ಲುವುದು.’


ಮಹಾಸಭೆಯಲ್ಲಿ ದೇವರನ್ನು ಸ್ತುತಿಸಿರಿ. ಇಸ್ರಾಯೇಲರ ಸಮೂಹದವರಲ್ಲಿ ಯೆಹೋವ ದೇವರನ್ನು ಸ್ತುತಿಸಿರಿ.


ಆದರೆ ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶವು ಬೆಟ್ಟಗಳೂ, ತಗ್ಗುಗಳೂ ಉಳ್ಳ ದೇಶವೇ; ಆಕಾಶದ ಮಳೆಯಿಂದ ಅದಕ್ಕೆ ನೀರು ದೊರೆಯುವುದು.


ಯೋಸೇಫನ ವಿಷಯವಾಗಿ ಹೇಳಿದ್ದೇನೆಂದರೆ: “ಅವನ ದೇಶವು ಆಕಾಶದ ಅಮೂಲ್ಯವಾದ ಮಂಜಿನಿಂದಲೂ, ಕೆಳಗೆ ಸಾಗರ ಸೆಲೆಯಿಂದಲೂ ಯೆಹೋವ ದೇವರ ಆಶೀರ್ವಾದ ಹೊಂದಲಿ.


ನನ್ನ ಬೋಧನೆ ಮಳೆಯಂತೆ ಸುರಿಯುವುದು. ನನ್ನ ಮಾತು ಮಂಜಿನಂತೆಯೂ, ಹುಲ್ಲಿನ ಮೇಲೆ ಬೀಳುವ ವೃಷ್ಟಿಗಳ ಹಾಗೆಯೂ ಬೀಳುವುದು.


“ ‘ಅವರ ಸಂಗಡ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ದುಷ್ಟಮೃಗಗಳನ್ನು ದೇಶದೊಳಗೆ ಇಲ್ಲದಂತೆ ಮಾಡುವೆನು. ಆದ್ದರಿಂದ ಅವರು ನಿರ್ಭಯವಾಗಿ ಮರುಭೂಮಿಯಲ್ಲಿ ವಾಸಿಸಿ ಅಡವಿಗಳಲ್ಲಿ ಮಲಗುವರು.


“ಇಸ್ರಾಯೇಲ್ ಎಂಬ ಹೆಸರಿನವರೂ, ಯೆಹೂದವೆಂಬ ಒರತೆಯಿಂದ ಬಂದವರೂ ಆದ ಯಾಕೋಬನ ಮನೆತನದವರೇ, ಇದನ್ನು ಕೇಳಿರಿ: ಯೆಹೋವ ದೇವರ ಹೆಸರಿನ ಮೇಲೆ ಆಣೆ ಇಟ್ಟು, ಇಸ್ರಾಯೇಲಿನ ದೇವರನ್ನು ಸ್ಮರಿಸುತ್ತೀರಿ. ಆದರೆ ಸತ್ಯದಿಂದಲೂ ಅಥವಾ ನೀತಿಯಿಂದಲೂ ಅಲ್ಲ.


ಇಸಾಕನು ಉತ್ತರವಾಗಿ ಏಸಾವನಿಗೆ, “ಅವನನ್ನು ನಿನಗೆ ದೊರೆಯನನ್ನಾಗಿ ನೇಮಿಸಿದ್ದೇನೆ, ಅವನ ಸಹೋದರರೆಲ್ಲರನ್ನೂ ಅವನಿಗೆ ಸೇವಕರನ್ನಾಗಿ ಕೊಟ್ಟು, ಧಾನ್ಯದಿಂದಲೂ ಹೊಸ ದ್ರಾಕ್ಷಾರಸದಿಂದಲೂ ಅವನನ್ನು ಪೋಷಿಸಿದ್ದೇನೆ. ಈಗ ನನ್ನ ಮಗನೇ, ನಿನಗೆ ನಾನು ಏನು ಮಾಡಲಿ?” ಎಂದನು.


ಆಗ ಅವನ ತಂದೆ ಇಸಾಕನು ಉತ್ತರವಾಗಿ ಅವನಿಗೆ ಹೀಗೆ ಹೇಳಿದನು, “ನಿನ್ನ ನಿವಾಸವು ಭೂಮಿಯ ಐಶ್ವರ್ಯದಿಂದಲೂ ಮೇಲಿನ ಆಕಾಶದಿಂದ ಬೀಳುವ ಮಂಜಿನಿಂದಲೂ ಇರುವುದು.


ಮಹೋನ್ನತ ದೇವರು ಜನಾಂಗಗಳಿಗೆ ಸ್ಥಳವನ್ನು ಕೊಡುವಾಗಲೂ, ಅವರು ಮಾನವರನ್ನು ವಿಂಗಡಿಸುವಾಗಲೂ, ಇಸ್ರಾಯೇಲರ ಲೆಕ್ಕದ ಪ್ರಕಾರ ಜನರ ಮೇರೆಗಳನ್ನು ಗುರುತಿಸಿಕೊಂಡರು.


ಮೋಶೆಯು ಬೆನ್ಯಾಮೀನನ ವಿಷಯವಾಗಿ ಹೇಳಿದ್ದೇನೆಂದರೆ: “ಯೆಹೋವ ದೇವರಿಗೆ ಪ್ರಿಯನಾದ ಇವನು ದೇವರ ಬಳಿಯಲ್ಲಿ ಸುರಕ್ಷಿತವಾಗಿ ವಾಸಮಾಡುವನು. ದೇವರು ಅವನಿಗೆ ದಿನವೆಲ್ಲಾ ಆಸರೆಯಾಗಿರುವರು. ಅವನು ದೇವರ ಭುಜಗಳ ನಡುವೆ ವಿಶ್ರಾಂತಿ ಪಡೆಯುವನು.”


ದೇವರು ತಮ್ಮ ಅರಿವಿನಿಂದಲೇ ಸೆಲೆಗಳು ಒಡೆದು, ಮೇಘಗಳು ಇಬ್ಬನಿಯನ್ನು ಸುರಿಸುತ್ತವೆ.


ಅರಸನ ಕೋಪವು ಸಿಂಹದ ಘರ್ಜನೆಯಂತಿದೆ; ಆದರೆ ಅವನ ದಯೆಯು ಹುಲ್ಲಿನ ಮೇಲಿರುವ ಇಬ್ಬನಿಯಂತಿದೆ.


“ಏಳಿರಿ, ಭದ್ರವಾಗಿ ವಾಸಿಸುವ ಸುಖವುಳ್ಳ ಜನಾಂಗದ ಬಳಿಗೆ ಹೋಗಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ. “ಅದಕ್ಕೆ ಬಾಗಿಲುಗಳು ಇಲ್ಲ; ಅಗುಳಿಗಳು ಇಲ್ಲ; ಅದರ ಜನರು ಅಪಾಯದಿಂದ ದೂರ ವಾಸಿಸುತ್ತಾರೆ.


ಬೀಜವು ವೃದ್ಧಿಯಾಗುವುದು. ದ್ರಾಕ್ಷಿಬಳ್ಳಿ ತನ್ನ ಫಲವನ್ನು ಕೊಡುವುದು. ಭೂಮಿಯು ತನ್ನ ಹುಟ್ಟುವಳಿಯನ್ನು ಹೆಚ್ಚಾಗಿ ಕೊಡುವುದು. ಆಕಾಶಗಳು ತಮ್ಮ ಮಂಜನ್ನು ಕೊಡುವುವು. ಈ ಜನರಲ್ಲಿ ಉಳಿದವರು, ಇವುಗಳನ್ನೆಲ್ಲಾ ಸ್ವಾಧೀನ ಮಾಡಿಕೊಳ್ಳುವಂತೆ ಮಾಡುವೆನು.


ಆದರೆ ನೀವು ಯೊರ್ದನ್ ನದಿಯನ್ನು ದಾಟಿದ ಮೇಲೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ದೇಶದಲ್ಲಿ ವಾಸಮಾಡುವಾಗ, ದೇವರು ಸುತ್ತಲಿರುವ ಎಲ್ಲಾ ಶತ್ರುಗಳಿಂದ ನಿಮ್ಮನ್ನು ತಪ್ಪಿಸಿ, ನೀವು ಸುರಕ್ಷಿತವಾಗಿ ವಾಸಿಸುವಂತೆ ಮಾಡುವರು.


ಆದ್ದರಿಂದ, ನನ್ನ ದೇವರಾದ ಯೆಹೋವ ದೇವರ ಹೆಸರಿಗೆ ಆಲಯವನ್ನು ಕಟ್ಟಿಸಬೇಕೆಂದಿದ್ದೇನೆ. ಅದರ ವಿಷಯವಾಗಿ ಯೆಹೋವ ದೇವರು ನನ್ನ ತಂದೆಯಾದ ದಾವೀದನಿಗೆ, ‘ನಿನಗೆ ಬದಲಾಗಿ ನಿನ್ನ ಸಿಂಹಾಸನದ ಮೇಲೆ ನಾನು ಕುಳ್ಳಿರಿಸುವ ನಿನ್ನ ಮಗನೇ ನನ್ನ ಹೆಸರಿಗೆ ದೇವಾಲಯವನ್ನು ಕಟ್ಟಿಸುವನು,’ ಎಂದು ಹೇಳಿದ್ದಾರಲ್ಲವೇ.


ಅದರಲ್ಲಿ ಜನರು ವಾಸವಾಗಿರುವರು. ಅಲ್ಲಿ ಇನ್ನು ಮೇಲೆ ಸಂಪೂರ್ಣವಾದ ನಾಶವಿರದು. ಆದರೆ ಯೆರೂಸಲೇಮು ಭದ್ರವಾಗಿರುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು