Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 32:36 - ಕನ್ನಡ ಸಮಕಾಲಿಕ ಅನುವಾದ

36 ಏಕೆಂದರೆ ಯೆಹೋವ ದೇವರು ತಮ್ಮ ಜನರಿಗೆ ನ್ಯಾಯತೀರಿಸುವರು. ದೇವರು ತಮ್ಮ ಸೇವಕರ ಬಲ ಹೋಯಿತೆಂದೂ, ಗುಲಾಮರಾಗಲಿ, ಸ್ವತಂತ್ರರಾಗಲಿ ಉಳಿಯಲಿಲ್ಲವೆಂದೂ ನೋಡಿದಾಗ, ತಮ್ಮ ಸೇವಕರಿಗೋಸ್ಕರ ಕರುಣಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಆಗ ಯೆಹೋವನು ತನ್ನ ಜನರಿಗಾಗಿ ನ್ಯಾಯತೀರಿಸುವನು. ಪರತಂತ್ರರಾಗಲಿ ಅಥವಾ ಸ್ವತಂತ್ರರಾಗಲಿ ಅವರೆಲ್ಲರೂ ನಿರಾಶ್ರಿತರಾಗಿ ನಿಶ್ಶೇಷರಾದುದ್ದನ್ನು ಆತನು ತಿಳಿದು ತನ್ನ ಸೇವಕರ ವಿಷಯದಲ್ಲಿ ಕನಿಕರಪಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ಸ್ವತಂತ್ರರು, ಪರತಂತ್ರರು ನಿರಾಶ್ರಯರಾದಾಗ ಅವರೆಲ್ಲರು ನಿಶ್ಯೇಷರಾದವರು ಎಂದು ತಿಳಿದುಬಂದಾಗ ದೊರಕಿಸುವನು ಸರ್ವೇಶ್ವರನು ನ್ಯಾಯವನು ತನ್ನ ಪ್ರಜೆಗೆ ತೋರುವನು ಅನುಕಂಪವನು ತನ್ನ ಭಕ್ತಾದಿಗಳಿಗೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ಆಗ ಯೆಹೋವನು ತನ್ನ ಜನರಿಗೋಸ್ಕರ ನ್ಯಾಯತೀರಿಸುವನು. ಪರತಂತ್ರರಾಗಲಿ ಸ್ವತಂತ್ರರಾಗಲಿ ಅವರೆಲ್ಲರೂ ನಿರಾಶ್ರಯರಾಗಿ ನಿಶ್ಶೇಷರಾದದ್ದನ್ನು ಆತನು ತಿಳಿದಾಗ ತನ್ನ ಸೇವಕರಾದ ಅವರ ವಿಷಯದಲ್ಲಿ ಪಶ್ಚಾತ್ತಾಪಪಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 “ಯೆಹೋವನು ತನ್ನ ಜನರಿಗೆ ನ್ಯಾಯತೀರಿಸುವನು. ಅವರು ಆತನ ಸೇವಕರಾಗಿದ್ದಾರೆ. ಆತನು ಅವರಿಗೆ ಕರುಣೆ ತೋರುವನು. ಅವರ ಬಲವು ಕುಂದುವಂತೆ ಮಾಡುವನು. ಗುಲಾಮರಾಗಿರಲಿ ಸ್ವತಂತ್ರರಾಗಿರಲಿ ಅವರನ್ನು ಆತನು ನಿಸ್ಸಹಾಯಕರನ್ನಾಗಿ ಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 32:36
24 ತಿಳಿವುಗಳ ಹೋಲಿಕೆ  

ಯೆಹೋವ ದೇವರು ತಮ್ಮ ಜನರಿಗೆ ನ್ಯಾಯವನ್ನು ಸ್ಥಾಪಿಸುವರು, ತಮ್ಮ ಸೇವಕರ ಮೇಲೆ ಅನುಕಂಪವನ್ನೂ ತೋರಿಸುವರು.


ಅವರಿಗಾಗಿ ತಮ್ಮ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು, ತಮ್ಮ ಅತಿಶಯವಾದ ಪ್ರೀತಿಯ ಪ್ರಕಾರ,


ಇಸ್ರಾಯೇಲಿನಲ್ಲಿ ಪ್ರತಿಯೊಬ್ಬರೂ ಸ್ವತಂತ್ರನಾಗಿರಲಿ, ಗುಲಾಮನಾಗಿರಲಿ, ಎಲ್ಲರು ಎಷ್ಟು ಕಷ್ಟದಲ್ಲಿದ್ದಾರೆಂಬುದನ್ನು ಯೆಹೋವ ದೇವರು ನೋಡಿದರು. ಅವರಿಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ.


“ ‘ಆದ್ದರಿಂದ ನಾನು ಯಾರೊಬ್ಬಾಮನ ಮನೆಯ ಮೇಲೆ ಕೇಡನ್ನು ಬರಮಾಡಿ, ಯಾರೊಬ್ಬಾಮನ ಕಡೆಯಿಂದ ಸಮಸ್ತ ಗಂಡಸರನ್ನೂ, ಇಸ್ರಾಯೇಲಿನಲ್ಲಿ ಉಳಿದು ಬಚ್ಚಿಟ್ಟುಕೊಂಡವರನ್ನೂ ಕಡಿದುಬಿಟ್ಟು, ಅದು ತೀರುವವರೆಗೆ ಮನುಷ್ಯನು ರಸವನ್ನು ಹೇಗೆ ತೆಗೆದು ಹಾಕುತ್ತಾನೋ, ಹಾಗೆಯೇ ನಾನು ಯಾರೊಬ್ಬಾಮನ ಮನೆಯ ಉಳುವಿಕೆಯನ್ನು ತೆಗೆದುಹಾಕುತ್ತೇನೆ.


ಯೆಹೋವ ದೇವರು ಅವರಿಗೆ ನ್ಯಾಯಾಧಿಪತಿಗಳನ್ನು ಎಬ್ಬಿಸಿದಾಗ, ಯೆಹೋವ ದೇವರು ನ್ಯಾಯಾಧಿಪತಿಯ ಸಂಗಡ ಇದ್ದು, ಆ ನ್ಯಾಯಾಧಿಪತಿಯ ದಿವಸಗಳಲ್ಲೆಲ್ಲಾ ಅವರನ್ನು ಅವರ ಶತ್ರುಗಳ ಕೈಯಿಂದ ತಪ್ಪಿಸಿ ರಕ್ಷಿಸುತ್ತಿದ್ದರು. ಏಕೆಂದರೆ ಅವರು ತಮ್ಮನ್ನು ಬಾಧಿಸಿ, ಶ್ರಮೆಪಡಿಸುವವರ ನಿಮಿತ್ತ ಗೋಳಾಡಿದ್ದರಿಂದ ಯೆಹೋವ ದೇವರು ಕನಿಕರಪಟ್ಟರು.


ಏಕೆಂದರೆ, “ಮುಯ್ಯಿ ತೀರಿಸುವುದು ನನಗೆ ಸಂಬಂಧಪಟ್ಟದ್ದು, ನಾನೇ ಪ್ರತಿಫಲವನ್ನು ಕೊಡುವೆನು,” ಎಂದು ಹೇಳಿದ ಕರ್ತದೇವರನ್ನು ನಾವು ಬಲ್ಲೆವು. ಇದಲ್ಲದೆ, “ಕರ್ತದೇವರು ತಮ್ಮ ಜನರಿಗೆ ನ್ಯಾಯತೀರಿಸುವರು,” ಎಂದೂ ಹೇಳಲಾಗಿದೆ.


ಆಗ ಸಾರ್ವಭೌಮ ಯೆಹೋವ ದೇವರು ಇದನ್ನು ಕುರಿತು ಮನಮರುಗಿ, “ಈ ದರ್ಶನ ನೆರವೇರುವುದಿಲ್ಲ,” ಎಂದರು.


ಯೆಹೋವ ದೇವರು ಇದನ್ನು ಕುರಿತು ಮನಮರುಗಿ, “ಈ ದರ್ಶನ ನೆರವೇರುವುದಿಲ್ಲ,” ಎಂದರು.


ದೇವರು ಒಂದು ವೇಳೆ ತಮ್ಮ ಮನಸ್ಸನ್ನು ಬದಲಾಯಿಸಬಹುದು. ನಿಮ್ಮ ಕಡೆಗೆ ತಿರುಗಿಕೊಂಡು ನಿಮ್ಮನ್ನು ಆಶೀರ್ವದಿಸಬಹುದು. ನಿಮ್ಮ ಯೆಹೋವ ದೇವರಿಗೆ ಅರ್ಪಿಸಲು ಬೇಕಾದ ಧಾನ್ಯ ಸಮರ್ಪಣೆ ಹಾಗು ಪಾನಾರ್ಪಣೆಯನ್ನು ನಿಮಗೆ ಧಾರಾಳವಾಗಿ ಉಳಿಸಬಹುದು, ಯಾರಿಗೆ ಗೊತ್ತು?


ಯೆಹೋವ ದೇವರು ಮುಂದುವರೆಸಿ, ‘ಎಫ್ರಾಯೀಮನು ನನಗೆ ಪ್ರಿಯ ಪುತ್ರನಲ್ಲವೇ? ಅವನು ನನಗೆ ಹರ್ಷಗೊಂಡಿರುವ ನನ್ನ ಮಗುವಲ್ಲವೋ? ನಾನು ಅವನಿಗೆ ವಿರೋಧವಾಗಿ ಆಗಾಗ ಮಾತಾಡಿದ್ದರೂ, ಅವನನ್ನು ಇನ್ನು ಬಹಳವಾಗಿ ಜ್ಞಾಪಕ ಮಾಡುತ್ತೇನೆ. ಆದ್ದರಿಂದ ಅವನಿಗೋಸ್ಕರ ನನ್ನ ಹೃದಯ ಮರುಗುತ್ತದಲ್ಲಾ ಅವನನ್ನು ಕನಿಕರಿಸುವೆನು,’ ” ಎಂದು ಯೆಹೋವ ದೇವರು ಹೇಳುತ್ತಾರೆ.


ಸಮಸ್ತ ಸೃಷ್ಟಿಯು ಯೆಹೋವ ದೇವರ ಸನ್ನಿಧಿಯಲ್ಲಿ ಹಾಡಲಿ, ಏಕೆಂದರೆ ಅವರು ಲೋಕಕ್ಕೆ ನೀತಿಯಿಂದಲೂ; ಜನರಿಗೆ ತಮ್ಮ ಸತ್ಯದಿಂದಲೂ ನ್ಯಾಯತೀರಿಸಲು ಬರುತ್ತಾರೆ.


ಯೆಹೋವ ದೇವರೇ, ಮನಸ್ಸು ಮಾರ್ಪಡಿಸಿಕೊಳ್ಳಿರಿ. ನೀವು ಎಷ್ಟರವರೆಗೆ ಬೇಸರಗೊಳ್ಳುವಿರಿ? ನಿಮ್ಮ ಸೇವಕರ ವಿಷಯದಲ್ಲಿ ಅನುಕಂಪ ತೋರಿಸಿರಿ.


ತಮ್ಮ ಜನರಿಗೆ ನ್ಯಾಯತೀರಿಸುವುದಕ್ಕೆ ಭೂಮಿ ಆಕಾಶಗಳನ್ನೂ ಹೀಗೆಂದು ಕರೆಯುತ್ತಿದ್ದಾರೆ:


ಯೆಹೋವ ದೇವರು ಜನಗಳಿಗೆ ನ್ಯಾಯತೀರಿಸಲಿ. ಮಹೋನ್ನತರಾದ ಯೆಹೋವ ದೇವರೇ, ನನ್ನ ನೀತಿಯ ಪ್ರಕಾರವೂ, ಯಥಾರ್ಥತೆಯ ಪ್ರಕಾರವೂ ನನಗೆ ನ್ಯಾಯತೀರಿಸಿರಿ.


ಅಹಾಬನ ಮನೆಯೆಲ್ಲಾ ನಾಶವಾಗುವುದು. ಇಸ್ರಾಯೇಲಿನಲ್ಲಿ ಉಳಿದಿರುವ ಅಹಾಬನ ಗಂಡಸರಲ್ಲಿ ಸ್ವತಂತ್ರರಾಗಲಿ, ಗುಲಾಮರಾಗಲಿ ಎಲ್ಲರನ್ನೂ ತೆಗೆದುಹಾಕುವೆನು.


‘ನಾನು ನಿನ್ನ ಮೇಲೆ ಕೇಡನ್ನು ಬರಮಾಡಿ, ನಿನ್ನ ಸಂತತಿಯನ್ನು ತೆಗೆದುಹಾಕಿ, ಅಹಾಬನಿಗೆ ಒಬ್ಬ ಗಂಡು ಮಗುವನ್ನಾದರೂ ಉಳಿಸದೆ ಇಸ್ರಾಯೇಲಿನಲ್ಲಿ ಎಲ್ಲರನ್ನು ತೆಗೆದುಹಾಕಿಬಿಡುವೆನು.


ಅವರು ಬಿಟ್ಟುಹೋದ ಸ್ವದೇಶವು ಯಾರೂ ಇಲ್ಲದೆ ಹಾಳಾದ ವೇಳೆಯಲ್ಲಿ ತನ್ನ ವಿಶ್ರಾಂತಿಯನ್ನು ಅನುಭವಿಸುವುದು. ಆದರೆ ಅವರು ತಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ಅನುಭವಿಸುವರು. ಅದು ಏಕೆಂದರೆ, ಅವರು ನನ್ನ ನ್ಯಾಯಗಳನ್ನು ಹೇಸಿ, ತಮ್ಮ ಹೃದಯಗಳಲ್ಲಿ ನನ್ನ ನಿಯಮಗಳನ್ನು ತಾತ್ಸಾರ ಮಾಡಿದ್ದರಿಂದಲೇ.


ಆದರೆ ಯೆಹೋವ ದೇವರು ಭಯಂಕರವಾದ ಪರಾಕ್ರಮಶಾಲಿಯ ಹಾಗೆ ನನ್ನ ಸಂಗಡ ಇದ್ದಾರೆ. ಆದ್ದರಿಂದ ನನ್ನನ್ನು ಹಿಂಸಿಸುವವರು ಎಡವುವರು, ಗೆಲ್ಲುವುದಿಲ್ಲ. ಅನುಕೂಲವಾಗದೆ ಇದ್ದುದರಿಂದ ಅವರು ಬಹಳವಾಗಿ ನಾಚಿಕೆಪಡುವರು. ಅವರ ಅವಮಾನವು ಎಂದಿಗೂ ಮರೆಯದ ಅವಮಾನವಾಗಿರುವುದು.


ಆಗ ಯೆಹೋವ ದೇವರು ತಮ್ಮ ಜನರಿಗೆ ಮಾಡುವೆನೆಂದು ಹೇಳಿದ ಕೇಡಿನ ವಿಷಯದಲ್ಲಿ ಮನಸ್ಸನ್ನು ಮಾರ್ಪಡಿಸಿಕೊಂಡರು.


‘ನೀವು ಇನ್ನು ಈ ದೇಶದಲ್ಲಿ ವಾಸಮಾಡಿದರೆ, ನಾನು ನಿಮ್ಮನ್ನು ಕೆಡವದೆ ಕಟ್ಟುವೆನು; ಕಿತ್ತು ಹಾಕದೆ ನೆಡುವೆನು. ಏಕೆಂದರೆ ನಾನು ನಿಮಗೆ ಮಾಡಿರುವ ಕೇಡಿನ ವಿಷಯವಾಗಿ ಪಶ್ಚಾತ್ತಾಪಪಡುತ್ತೇನೆ.


ನದಿಯ ನೀರಿನ ಮೇಲೆ ನಿಂತು ನಾರುಬಟ್ಟೆಯನ್ನು ಧರಿಸಿ ನಿಂತಿದ್ದ ಮನುಷ್ಯನು ತನ್ನ ಎಡಗೈಯನ್ನೂ ಬಲಗೈಯನ್ನೂ ಆಕಾಶದ ಕಡೆಗೆ ಎತ್ತಿ ಸದಾಕಾಲ ಜೀವಂತರಾಗಿರುವವರ ಮೇಲೆ ಆಣೆಯಿಟ್ಟು, “ಅದು ಒಂದುಕಾಲ, ಎರಡುಕಾಲ, ಅರ್ಧಕಾಲ ಕಳೆಯಬೇಕು; ಕೊನೆಗೆ ಪರಿಶುದ್ಧರ ಬಲವನ್ನು ಮುರಿದ ಮೇಲೆ ಈ ಕಾರ್ಯಗಳೆಲ್ಲ ಮುಕ್ತಾಯವಾಗುವುವು,” ಎಂಬುದಾಗಿ ನನ್ನ ಕಿವಿಗೆ ಬೀಳುವಂತೆ ಹೇಳಿದನು.


ಆಗ ಯೆಹೋವ ದೇವರು ತಮ್ಮ ದೇಶಕ್ಕೋಸ್ಕರ ಅಭಿಮಾನಗೊಂಡು, ತಮ್ಮ ಜನರನ್ನು ಕನಿಕರಿಸುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು