Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 31:11 - ಕನ್ನಡ ಸಮಕಾಲಿಕ ಅನುವಾದ

11 ಇಸ್ರಾಯೇಲಿನವರೆಲ್ಲರು ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ, ಅವರು ಆಯ್ದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಂದಾಗ, ನೀವು ಈ ನಿಯಮವನ್ನು ಇಸ್ರಾಯೇಲಿನವರೆಲ್ಲರ ಮುಂದೆ ಜನರು ಕೇಳುವ ಹಾಗೆ ಓದಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ನಿಮ್ಮ ದೇವರಾದ ಯೆಹೋವನು ಆದುಕೊಂಡ ಸ್ಥಳದಲ್ಲಿ ಇಸ್ರಾಯೇಲರೆಲ್ಲರು ಆತನ ಸನ್ನಿಧಿಗೆ ಕೂಡಿಬಂದಾಗ ನೀವು ಅವರೆಲ್ಲರಿಗೆ ಕೇಳಿಸುವಂತೆ ಈ ಧರ್ಮಶಾಸ್ತ್ರವನ್ನು ಅವರ ಮುಂದೆ ಓದಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ನಿಮ್ಮ ದೇವರಾದ ಸರ್ವೇಶ್ವರ ಆರಿಸಿಕೊಂಡ ಸ್ಥಳದಲ್ಲಿ, ಇಸ್ರಯೇಲರೆಲ್ಲರು ಅವರ ಸನ್ನಿಧಿಗೆ ಕೂಡಿಬಂದಾಗ ಅವರೆಲ್ಲರಿಗೂ ಕೇಳಿಸುವಂತೆ ನೀವು ಈ ಧರ್ಮಶಾಸ್ತ್ರವನ್ನು ಅವರ ಮುಂದೆ ಓದಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ನಿಮ್ಮ ದೇವರಾದ ಯೆಹೋವನು ಆದುಕೊಂಡ ಸ್ಥಳದಲ್ಲಿ ಇಸ್ರಾಯೇಲ್ಯರೆಲ್ಲರು ಆತನ ಸನ್ನಿಧಿಗೆ ಕೂಡಿ ಬಂದಾಗ ನೀವು ಅವರೆಲ್ಲರಿಗೂ ಕೇಳಿಸುವಂತೆ ಈ ಧರ್ಮಶಾಸ್ತ್ರವನ್ನು ಅವರ ಮುಂದೆ ಓದಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆ ಹಬ್ಬದ ಸಮಯದಲ್ಲಿ ಇಸ್ರೇಲರೆಲ್ಲರು ತಮ್ಮ ದೇವರಾದ ಯೆಹೋವನು ಆರಿಸುವ ವಿಶೇಷ ಸ್ಥಳದಲ್ಲಿ ಕೂಡಿಬರುವಾಗ ಈ ಬೋಧನೆಯ ಪುಸ್ತಕವನ್ನು ಎಲ್ಲರಿಗೂ ಕೇಳಿಸುವಂತೆ ಓದಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 31:11
17 ತಿಳಿವುಗಳ ಹೋಲಿಕೆ  

ಆಗ ಅರಸನೂ, ಅವನ ಸಂಗಡ ಯೆಹೂದದ ಜನರೂ, ಯೆರೂಸಲೇಮಿನ ನಿವಾಸಿಗಳೂ, ಯಾಜಕರೂ, ಪ್ರವಾದಿಗಳೂ, ಹಿರಿಕಿರಿಯರಾದ ಸಮಸ್ತ ಜನರೂ ಯೆಹೋವ ದೇವರ ಆಲಯಕ್ಕೆ ಹೋದರು. ಅರಸನು ಯೆಹೋವ ದೇವರು ಆಲಯದಲ್ಲಿ ದೊರಕಿದ ಒಡಂಬಡಿಕೆಯ ಗ್ರಂಥದ ಮಾತುಗಳನ್ನೆಲ್ಲಾ ಅವರು ಕೇಳುವಂತೆ ಓದಿದನು.


ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಹೆಸರನ್ನು ಸ್ಥಾಪಿಸಿಕೊಳ್ಳಲು ಹಾಗು ತಾವು ವಾಸಮಾಡಲು ನಿಮ್ಮ ಎಲ್ಲಾ ಗೋತ್ರಗಳಿಂದ ಆರಿಸಿಕೊಳ್ಳುವ ಸ್ಥಳದಲ್ಲೇ, ನೀವು ದೇವರ ದರ್ಶನಕ್ಕಾಗಿ ಸಭೆ ಸೇರಬೇಕು.


ಏಕೆಂದರೆ ನಾನು ಜನಾಂಗಗಳನ್ನು ನಿಮ್ಮ ಸನ್ನಿಧಿಯಿಂದ ಹೊರಡಿಸಿಬಿಟ್ಟು, ನಿಮ್ಮ ಮೇರೆಗಳನ್ನು ವಿಸ್ತಾರ ಮಾಡುವೆನು. ವರ್ಷಕ್ಕೆ ಮೂರು ಸಾರಿ ನೀವು ನಿಮ್ಮ ಯೆಹೋವ ದೇವರ ಮುಂದೆ ಬರುವ ಸಮಯದಲ್ಲಿ ಯಾರೂ ನಿಮ್ಮ ಭೂಮಿಯನ್ನು ಅಪಹರಿಸಲು ಆಶೆಪಡುವುದಿಲ್ಲ.


ಏಕೆಂದರೆ ಆರಂಭ ಕಾಲದಿಂದಲೂ ಪ್ರತಿಯೊಂದು ಪಟ್ಟಣದಲ್ಲಿ ಮೋಶೆಯ ಗ್ರಂಥವನ್ನು ಬೋಧಿಸಲಾಗುತ್ತದೆ ಹಾಗೂ ಪ್ರತಿ ಸಬ್ಬತ್ ದಿನ ಸಭಾಮಂದಿರಗಳಲ್ಲಿ ಓದಲಾಗುತ್ತದೆ,” ಎಂದು ಹೇಳಿದನು.


ನಿಯಮ ಮತ್ತು ಪ್ರವಾದಿಗಳ ಗ್ರಂಥವು ಪಾರಾಯಣವಾದ ತರುವಾಯ, ಸಭಾಮಂದಿರದ ಅಧಿಕಾರಿಗಳು ಅವರಿಗೆ, “ಸಹೋದರರೇ, ಜನರಿಗೆ ಪ್ರೋತ್ಸಾಹ ಕೊಡುವ ಸಂದೇಶ ನಿಮ್ಮಲ್ಲಿದ್ದರೆ, ಮಾತನಾಡಿರಿ,” ಎಂದು ಕೇಳಿಕೊಂಡರು.


ಅವರು ಬಲದಿಂದ ಬಲಕ್ಕೆ ಸಾಗಿ, ಚೀಯೋನಿನಲ್ಲಿ ದೇವರ ಮುಂದೆ ಕಾಣಿಸಿಕೊಳ್ಳುತ್ತಾರೆ.


ಅವರು ತಮ್ಮ ಸ್ಥಳಗಳಲ್ಲಿ ನಿಂತು ಮೂರು ತಾಸುಗಳು ತಮ್ಮ ದೇವರಾಗಿರುವ ಯೆಹೋವ ದೇವರ ನಿಯಮದ ಗ್ರಂಥವನ್ನು ಓದಿದರು. ಮತ್ತೊಂದು ಮೂರು ತಾಸುಗಳು ತಮ್ಮ ಪಾಪಗಳನ್ನು ಅರಿಕೆಮಾಡಿ, ತಮ್ಮ ದೇವರಾಗಿರುವ ಯೆಹೋವ ದೇವರನ್ನು ಆರಾಧಿಸಿದರು.


ಎರಡನೆಯ ದಿವಸದಲ್ಲಿ ಸಮಸ್ತ ಜನರ ಪಿತೃಗಳಲ್ಲಿರುವ ಮುಖ್ಯವಾದವರೂ ಯಾಜಕರೂ ಲೇವಿಯರೂ ದೇವರ ನಿಯಮದ ಮಾತುಗಳನ್ನು ತಿಳಿದುಕೊಳ್ಳುವ ಹಾಗೆ, ನಿಯಮಶಾಸ್ತ್ರಿಯಾದ ಎಜ್ರನ ಬಳಿಗೆ ಬಂದರು.


ಎಜ್ರನು ಮೊದಲನೆಯ ದಿವಸದಿಂದ ಕಡೇ ದಿವಸದವರೆಗೂ ದಿನದಿನವೂ ದೇವರ ನಿಯಮದ ಗ್ರಂಥವನ್ನು ಓದುತ್ತಿದ್ದನು. ಹೀಗೆಯೇ ಅವರು ಏಳು ದಿವಸ ಹಬ್ಬವನ್ನು ಆಚರಿಸಿದರು. ಎಂಟನೆಯ ದಿವಸದಲ್ಲಿ ಪದ್ಧತಿಯ ಪ್ರಕಾರ ಸಭೆಯು ಸೇರಿತ್ತು.


ನಾನು ನಿಮಗೆ ಆಜ್ಞಾಪಿಸಿದ ಎಲ್ಲಾ ಕಾಣಿಕೆಗಳನ್ನು ಅಂದರೆ, ದಹನಬಲಿಗಳನ್ನು, ಅರ್ಪಣೆಗಳನ್ನು, ಬೆಳೆಯ ದಶಮಾಂಶಗಳನ್ನು, ಯೆಹೋವ ದೇವರಿಗಾಗಿ ವಿಶೇಷ ಉಡುಗೊರೆಗಳನ್ನು, ಹರಕೆಮಾಡಿದ ವಿಶೇಷ ಕಾಣಿಕೆಗಳನ್ನು, ನಿಮ್ಮ ದೇವರಾದ ಯೆಹೋವ ದೇವರು ತಮ್ಮ ನಾಮಸ್ಥಾಪನೆಗಾಗಿ ಆರಿಸಿಕೊಳ್ಳುವ ಸ್ಥಳಕ್ಕೇ ತರಬೇಕು.


ಯೆಹೋವ ದೇವರು ನಿಮ್ಮ ಗೋತ್ರಗಳ ಒಂದರಲ್ಲಿ ಆಯ್ದುಕೊಳ್ಳುವ ಸ್ಥಳದಲ್ಲೇ ನೀವು ನಿಮ್ಮ ದಹನಬಲಿಗಳನ್ನು ಅರ್ಪಿಸಬೇಕು. ಅಲ್ಲೇ ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ಮಾಡಬೇಕು.


ಇದಲ್ಲದೆ ದೇವರು ನಿಮಗೆ ಬರೆದುಕೊಟ್ಟ ಕಟ್ಟಳೆಗಳನ್ನೂ, ನೀತಿಗಳನ್ನೂ, ನಿಯಮವನ್ನೂ, ಆಜ್ಞೆಯನ್ನೂ ನೀವು ನಿರಂತರವಾಗಿ ಕೈಗೊಳ್ಳಲು ಎಚ್ಚರಿಕೆಯಾಗಿರಬೇಕು. ಇತರ ದೇವರುಗಳಿಗೆ ಭಯಪಡಬೇಡಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು