Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 30:8 - ಕನ್ನಡ ಸಮಕಾಲಿಕ ಅನುವಾದ

8 ಆದರೆ ನೀವು ಪುನಃ ಯೆಹೋವ ದೇವರ ಮಾತನ್ನು ಕೇಳಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಎಲ್ಲಾ ಆಜ್ಞೆಗಳಂತೆ ನಡೆಯುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ನೀವಾದರೋ ಯೆಹೋವನ ಮಾತಿಗೆ ಪುನಃ ವಿಧೇಯರಾಗಿ, ನಾನು ಈಗ ನಿಮಗೆ ಬೋಧಿಸುವ ಆತನ ಆಜ್ಞೆಗಳಂತೆ ನಡೆಯುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ನೀವಾದರೋ ಸರ್ವೇಶ್ವರನ ಮಾತಿಗೆ ಪುನಃ ವಿಧೇಯರಾಗಿ, ನಾನು ಈಗ ನಿಮಗೆ ಬೋಧಿಸುವ ಅವರ ಆಜ್ಞೆಗಳಂತೆ ನಡೆಯುವಿರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ನೀವಾದರೋ ಯೆಹೋವನ ಮಾತಿಗೆ ಪುನಃ ವಿಧೇಯರಾಗಿ ನಾನು ಈಗ ನಿಮಗೆ ಬೋಧಿಸುವ ಆತನ ಆಜ್ಞೆಗಳಂತೆ ನಡೆಯುವಿರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನೀವು ಮತ್ತೆ ಯೆಹೋವನಿಗೆ ವಿಧೇಯರಾಗುವಿರಿ. ಇಂದು ನಾನು ನಿಮಗೆ ಕೊಡುವ ಎಲ್ಲಾ ಆಜ್ಞೆಗಳಿಗೆ ನೀವು ವಿಧೇಯರಾಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 30:8
14 ತಿಳಿವುಗಳ ಹೋಲಿಕೆ  

ಶಿಲುಬೆಯ ಮರಣದ ಮೂಲಕ ಇವೆರಡೂ ಗುಂಪಿನವರಿಂದ ಒಂದೇ ದೇಹದವರನ್ನಾಗಿ ಮಾಡಿ ದೇವರೊಂದಿಗೆ ಸಂಧಾನಪಡಿಸಿ, ಇದ್ದ ವೈರತ್ವವನ್ನು ಇಲ್ಲದಂತೆ ಮಾಡಿದರು.


ನನ್ನ ಆತ್ಮವನ್ನು ನಿಮ್ಮೊಳಗೆ ಇಡುವೆನು. ನೀವು ನನ್ನ ನಿಯಮಗಳಲ್ಲಿ ನಡೆಯುವ ಹಾಗೆ ಮಾಡುವೆನು ಮತ್ತು ನೀವು ನನ್ನ ನ್ಯಾಯವಿಧಿಗಳನ್ನು ಜಾಗರೂಕತೆಯಿಂದ ಅನುಸರಿಸಿ ನಡೆಯುವಿರಿ.


ಏಕೆಂದರೆ, ತಮ್ಮ ಸದುದ್ದೇಶವನ್ನು ನೆರವೇರಿಸುವಂತೆ ನಿಮ್ಮಲ್ಲಿ ಬಯಕೆಯನ್ನೂ ಕಾರ್ಯಸಾಧನೆಯನ್ನೂ ನಿರ್ಮಿಸುವವರು ದೇವರೇ.


“ ‘ನನ್ನ ಸೇವಕನಾದ ದಾವೀದನು ಅವರ ಮೇಲೆ ಅರಸನಾಗಿರುವನು. ಅವರೆಲ್ಲರಿಗೂ ಒಬ್ಬನೇ ಕುರುಬನಿರುವನು; ನನ್ನ ನ್ಯಾಯಗಳನ್ನು ಅನುಸರಿಸಿ, ನನ್ನ ನಿಯಮಗಳನ್ನು ಪಾಲಿಸುವಂತೆ ಮಾಡುವೆನು.


“ಆ ದಿನಗಳು ಬಂದ ಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು,” ಎಂದು ಯೆಹೋವ ದೇವರು ಹೇಳುತ್ತಾರೆ. “ನನ್ನ ನಿಯಮವನ್ನು ಅವರ ಅಂತರಂಗದಲ್ಲಿ ಇಡುವೆನು. ಅವರ ಹೃದಯದ ಹಲಗೆಯ ಮೇಲೆ ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.


ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಂಡು, ನೀವೂ, ನಿಮ್ಮ ಮಕ್ಕಳೂ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಮಾತುಗಳಿಗೆ, ನೀವು ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ದೇವರಿಗೆ ವಿಧೇಯರಾಗಬೇಕು.


ಮನುಷ್ಯನಲ್ಲಿ ತನ್ನ ಹೃದಯದ ಯೋಜನೆಗಳು, ಆದರೆ ಸರಿಯಾದ ಉತ್ತರಕೊಡುವ ಶಕ್ತಿ ಯೆಹೋವ ದೇವರಿಂದಲೇ ಬರುವವು.


ಇದಲ್ಲದೆ ನಿಮ್ಮ ದೇವರಾದ ಯೆಹೋವ ದೇವರು ಆ ಶಾಪಗಳನ್ನೆಲ್ಲಾ ನಿಮ್ಮ ಶತ್ರುಗಳ ಮೇಲೆಯೂ, ನಿಮ್ಮನ್ನು ಹಿಂಸಿಸಿದ ನಿಮ್ಮ ಹಗೆಯವರ ಮೇಲೆಯೂ ಬರಮಾಡುವರು.


ಇದಲ್ಲದೆ ಯೆಹೋವ ದೇವರು ನಿಮ್ಮನ್ನು ನಿಮ್ಮ ಎಲ್ಲಾ ಕೈಕೆಲಸದಲ್ಲಿಯೂ, ನಿಮ್ಮ ಗರ್ಭದ ಫಲದಲ್ಲಿಯೂ, ನಿಮ್ಮ ಪಶುಗಳ ಫಲದಲ್ಲಿಯೂ, ನಿಮ್ಮ ಭೂಮಿಯ ಫಲದಲ್ಲಿಯೂ ಅತ್ಯಂತ ಅಭಿವೃದ್ಧಿಯನ್ನು ಮಾಡುವರು. ಯೆಹೋವ ದೇವರು ನಿಮ್ಮ ಪಿತೃಗಳಲ್ಲಿ ಸಂತೋಷಿಸಿದ ಹಾಗೆ ನಿಮ್ಮಲ್ಲಿಯೂ ಸಂತೋಷಿಸುವರು.


ಒಂದು ವೇಳೆ ಯೆಹೂದದ ಮನೆತನದವರು ನಾನು ಅವರಿಗೆ ಮಾಡುವುದಕ್ಕೆ ನೆನಸುವ ಕೇಡನ್ನೆಲ್ಲಾ ಕೇಳಿ ನಾನು ಅವರ ಅಕ್ರಮವನ್ನೂ, ಅವರ ಪಾಪವನ್ನೂ ಮನ್ನಿಸುವ ಹಾಗೆ ತಮ್ಮ ತಮ್ಮ ಮಾರ್ಗಗಳನ್ನು ಬಿಟ್ಟು ತಿರುಗಿಕೊಂಡಾರು,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು