Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 30:2 - ಕನ್ನಡ ಸಮಕಾಲಿಕ ಅನುವಾದ

2 ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಂಡು, ನೀವೂ, ನಿಮ್ಮ ಮಕ್ಕಳೂ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಮಾತುಗಳಿಗೆ, ನೀವು ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ದೇವರಿಗೆ ವಿಧೇಯರಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ನಿಮ್ಮ ಮಕ್ಕಳ ಸಹಿತವಾಗಿ ನಿಮ್ಮ ದೇವರಾದ ಯೆಹೋವನ ಆಶ್ರಯಕ್ಕೆ ತಿರುಗಿ ಬಂದು, ನಾನು ಈಗ ನಿಮಗೆ ಬೋಧಿಸುವ ಆತನ ಮಾತುಗಳಿಗೆ ಸಂಪೂರ್ಣವಾದ ಹೃದಯದಿಂದಲೂ, ಮನಸ್ಸಿನಿಂದಲೂ ವಿಧೇಯರಾದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ನಿಮ್ಮ ಮಕ್ಕಳು ಸಹಿತವಾಗಿ ನಿಮ್ಮ ದೇವರಾದ ಸರ್ವೇಶ್ವರನ ಆಶ್ರಯಕ್ಕೆ ಮರಳಿಬಂದು ನಾನು ಈಗ ನಿಮಗೆ ಬೋಧಿಸುವ ಅವರ ಮಾತುಗಳಿಗೆ ಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ವಿಧೇಯರಾಗಬೇಕು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ನಿಮ್ಮ ಮಕ್ಕಳು ಸಹಿತವಾಗಿ ನಿಮ್ಮ ದೇವರಾದ ಯೆಹೋವನ ಆಶ್ರಯಕ್ಕೆ ತಿರಿಗಿ ಬಂದು ನಾನು ಈಗ ನಿಮಗೆ ಬೋಧಿಸುವ ಆತನ ಮಾತುಗಳಿಗೆ ಸಂಪೂರ್ಣವಾದ ಹೃದಯದಿಂದಲೂ ಮನಸ್ಸಿನಿಂದಲೂ ವಿಧೇಯರಾದರೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ನೀವೂ ನಿಮ್ಮ ಸಂತತಿಯವರೂ ಯೆಹೋವನ ಬಳಿಗೆ ಬರುವಿರಿ. ನಿಮ್ಮ ಹೃದಯಪೂರ್ವಕವಾಗಿ ಆತನನ್ನು ಹಿಂಬಾಲಿಸುವಿರಿ ಮತ್ತು ಆಜ್ಞೆಗಳಿಗೆ ಸಂಪೂರ್ಣವಾಗಿ ವಿಧೇಯರಾಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 30:2
27 ತಿಳಿವುಗಳ ಹೋಲಿಕೆ  

ಆದರೆ ನೀವು ನನ್ನ ಕಡೆಗೆ ತಿರುಗಿಕೊಂಡು ನನ್ನ ಆಜ್ಞೆಗಳನ್ನು ಅನುಸರಿಸಿ, ಅವುಗಳ ಪ್ರಕಾರ ನಡೆದರೆ, ನಿಮ್ಮಲ್ಲಿರುವವರು ಆಕಾಶದ ಅಂತ್ಯದವರೆಗೂ ಸೆರೆಯಾಗಿ ಹೋಗಿದ್ದರೂ, ನಾನು ಅಲ್ಲಿಂದ ಅವರನ್ನು ಕೂಡಿಸಿ, ನನ್ನ ಹೆಸರನ್ನಿಡಲು ಆಯ್ದುಕೊಂಡ ಸ್ಥಳಕ್ಕೆ ಅವರನ್ನು ಬರಮಾಡುವೆನು,’ ಎಂದು ಹೇಳಿದ್ದೀರಿ.


ನಾವು ನಮ್ಮ ಮಾರ್ಗಗಳನ್ನು ಪರಿಶೋಧಿಸಿ, ಪರೀಕ್ಷಿಸಿಕೊಂಡು ಆಮೇಲೆ ಯೆಹೋವ ದೇವರ ಬಳಿಗೆ ತಿರುಗಿಕೊಳ್ಳೋಣ.


ನಾವು ನಮ್ಮ ಪಾಪಗಳನ್ನು ದೇವರಿಗೆ ಅರಿಕೆಮಾಡಿದರೆ ಅವರು ನಂಬಿಗಸ್ತರೂ ನೀತಿವಂತರೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ, ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿಮಾಡುವರು.


ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಅಳಿದು ಹೋಗದ ಪ್ರೀತಿಯಿಂದ ಪ್ರೀತಿಸುವವರೆಲ್ಲರ ಮೇಲೆ ಕೃಪೆಯಿರಲಿ.


ಆದರೆ ಯಾರಾದರೂ ಕರ್ತ ಯೇಸುವಿನ ಕಡೆಗೆ ತಿರುಗಿದಾಗೆಲ್ಲಾ, ಆ ಮುಸುಕು ಅವರಿಂದ ತೆಗೆಯಲಾಗುತ್ತದೆ.


“ದಾವೀದನ ಮನೆತನದವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಕೃಪೆಯ ಆತ್ಮವನ್ನು ಮತ್ತು ಮೊರೆಯಿಡುವ ಮನೋಭಾವವನ್ನು ಸುರಿಸುವೆನು. ತಾವು ಇರಿದವನನ್ನು ಅವರು ದೃಷ್ಟಿಸಿನೋಡುವರು. ಒಬ್ಬನೇ ಮಗನ ನಿಮಿತ್ತ ಗೋಳಾಡುವವನ ಹಾಗೆ, ಆತನ ನಿಮಿತ್ತ ಗೋಳಾಡುವರು. ಚೊಚ್ಚಲ ಮಗನ ನಿಮಿತ್ತ ವ್ಯಥೆಪಡುವವನ ಹಾಗೆ ಆತನ ನಿಮಿತ್ತ ವ್ಯಥೆ ಪಡುವರು.


ಆಮೇಲೆ ಇಸ್ರಾಯೇಲರು ತಿರುಗಿಕೊಂಡು ಅವರ ದೇವರಾದ ಯೆಹೋವ ದೇವರನ್ನು ಮತ್ತು ಅವರ ಅರಸನಾದ ದಾವೀದನನ್ನು ಹುಡುಕಿಕೊಂಡು, ಅಂತ್ಯ ದಿವಸಗಳಲ್ಲಿ ಯೆಹೋವ ದೇವರನ್ನೂ, ಆತನ ಒಳ್ಳೆಯತನವನ್ನೂ ಭಯಭಕ್ತಿಯಿಂದ ಪಡೆಯುವರು.


ಆತನು ದುಃಖಪಡಿಸಿದರೂ, ತನ್ನ ಒಡಂಬಡಿಕೆಯ ಮಹಾಪ್ರೀತಿಯಿಂದ ಅನುಕಂಪ ತೋರಿಸುವರು.


ನನ್ನನ್ನು ಹುಡುಕುವಿರಿ. ಪೂರ್ಣಹೃದಯದಿಂದ ನನ್ನನ್ನು ಹುಡುಕುವಾಗ, ನನ್ನನ್ನು ಕಂಡುಕೊಳ್ಳುವಿರಿ.


ಯೆರೂಸಲೇಮೇ, ನಿನಗೆ ರಕ್ಷಣೆಯಾಗುವ ಹಾಗೆ ನಿನ್ನ ಹೃದಯದ ಕೆಟ್ಟತನವನ್ನು ತೊಳೆದುಕೋ; ನಿನ್ನ ವ್ಯರ್ಥ ಆಲೋಚನೆಗಳು ಎಷ್ಟರವರೆಗೆ ನಿನ್ನಲ್ಲಿ ತಂಗುವುವು.


ಇದೆಲ್ಲಾ ಆದಾಗ್ಯೂ ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಪೂರ್ಣಹೃದಯದಿಂದಲ್ಲ, ಕಪಟದಿಂದಲೇ ನನ್ನ ಬಳಿಗೆ ತಿರುಗಿಕೊಂಡಿದ್ದಾಳೆ,” ಎಂದು ಯೆಹೋವ ದೇವರು ನುಡಿಯುತ್ತಾರೆ.


ನಿಷ್ಕಳಂಕ ಹೃದಯದಿಂದ ನಾನು ನಿಮ್ಮ ತೀರ್ಪುಗಳನ್ನು ಪಾಲಿಸುವೆನು, ಅದರಿಂದ ನಾನು ನಾಚಿಕೆಗೆ ಗುರಿಯಾಗದಿರುವೆನು.


ಆದರೆ ನೀವು ನನ್ನ ಪ್ರಾಮಾಣಿಕತೆಯ ಕಾರಣ ನನ್ನನ್ನು ಎತ್ತಿ ಹಿಡಿದಿರುವಿರಿ; ನೀವು ನನ್ನನ್ನು ನಿತ್ಯವಾಗಿ ನಿಮ್ಮ ಸಮ್ಮುಖದಲ್ಲಿ ಇರಿಸುವಿರಿ.


ನನ್ನ ದೇವರೇ, ನೀವು ಹೃದಯವನ್ನು ಪರಿಶೋಧಿಸಿ ಯಥಾರ್ಥತೆಯಲ್ಲಿ ಸಂತೋಷವಾಗಿದ್ದೀರಿ, ಎಂದು ನಾನು ಬಲ್ಲೆನು. ನಾನು ಯಥಾರ್ಥವಾದ ಹೃದಯದಿಂದ ಇವುಗಳನ್ನೆಲ್ಲಾ ಇಷ್ಟಪೂರ್ವಕವಾಗಿ ಅರ್ಪಿಸಿದ್ದೇನೆ. ಇದಲ್ಲದೆ ಇಲ್ಲಿರುವ ನಿಮ್ಮ ಜನರು ನಿಮಗೆ ಇಷ್ಟಪೂರ್ವಕವಾಗಿ ಅರ್ಪಿಸುವುದನ್ನು ಈಗ ಕಂಡು ಸಂತೋಷಿಸಿದೆನು.


ಆಗ ಜನರು ಸಂತೋಷವಾಗಿ ಕಾಣಿಕೆಗಳನ್ನು ಅರ್ಪಿಸಿದ್ದರಿಂದ, ಜನರು ಸಂತೋಷಪಟ್ಟರು. ಏಕೆಂದರೆ ಅವರು ಪೂರ್ಣಮನಸ್ಸಿನಿಂದ ಮನಃಪೂರ್ವಕವಾಗಿ ಯೆಹೋವ ದೇವರಿಗೆ ಅರ್ಪಿಸಿದರು. ಅರಸನಾದ ದಾವೀದನು ಮಹಾ ಸಂತೋಷಪಟ್ಟನು.


ಅವನು ಹೇಳಿದಂತೆಯೇ ಅದು ನಡೆದರೂ ನೀವು ಅವನ ಮಾತಿಗೆ ಕಿವಿಗೊಡಬಾರದು. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನೀವು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಪ್ರಾಣದಿಂದಲೂ ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸುತ್ತೀರೋ ಇಲ್ಲವೋ ಎಂಬುದನ್ನು ಕಂಡುಕೊಳ್ಳುವುದಕ್ಕೆ ನಿಮ್ಮನ್ನು ಪರೀಕ್ಷಿಸುತ್ತಾರೆ.


ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ, ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.


ನೀವು ಯೆಹೋವ ದೇವರ ಕಡೆಗೆ ತಿರುಗಿ ಈ ದೇಶಕ್ಕೆ ಬರುವಂತೆ ತಮ್ಮನ್ನು ಸೆರೆಯಾಗಿ ಒಯ್ದವರ ಸಮ್ಮುಖದಲ್ಲಿ ಅನುಕಂಪವನ್ನು ಹೊಂದುವರು. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ಕೃಪೆಯೂ ಅನುಕಂಪವೂ ಉಳ್ಳವರಾಗಿದ್ದಾರೆ. ನೀವು ಅವರ ಕಡೆಗೆ ತಿರುಗಿದರೆ, ಅವರು ನಿಮ್ಮ ಕಡೆಯಿಂದ ತಮ್ಮ ಮುಖವನ್ನು ತಿರುಗಿಸುವುದಿಲ್ಲ,” ಎಂದು ಹೇಳಿದರು.


ಸಂಪೂರ್ಣ ಹೃದಯದಿಂದ ದೇವರನ್ನು ಹುಡುಕುತ್ತಾ ಅವರ ಶಾಸನಗಳನ್ನು ಕೈಗೊಳ್ಳುವವರೂ ಧನ್ಯರು


ಒಂದು ವೇಳೆ ಯೆಹೂದದ ಮನೆತನದವರು ನಾನು ಅವರಿಗೆ ಮಾಡುವುದಕ್ಕೆ ನೆನಸುವ ಕೇಡನ್ನೆಲ್ಲಾ ಕೇಳಿ ನಾನು ಅವರ ಅಕ್ರಮವನ್ನೂ, ಅವರ ಪಾಪವನ್ನೂ ಮನ್ನಿಸುವ ಹಾಗೆ ತಮ್ಮ ತಮ್ಮ ಮಾರ್ಗಗಳನ್ನು ಬಿಟ್ಟು ತಿರುಗಿಕೊಂಡಾರು,” ಎಂದನು.


ನಿಮ್ಮಲ್ಲಿ ತಪ್ಪಿಸಿಕೊಂಡವರು, ತಾವು ಸೆರೆಯಾಗಿ ಹೋಗುವಾಗ ಜನಾಂಗಗಳಲ್ಲಿ ನನ್ನನ್ನು ಜ್ಞಾಪಕಮಾಡಿಕೊಳ್ಳುವರು. ಅನ್ಯದೇವತೆಗಳಲ್ಲಿ ವಿಶ್ವಾಸವಿಟ್ಟು, ನನ್ನನ್ನೂ ತೊರೆದ ತಮ್ಮ ಹೃದಯವನ್ನು ಮತ್ತು ಅನ್ಯ ದೇವರ ವಿಗ್ರಹಗಳಲ್ಲಿ ಮೋಹಗೊಂಡ ತಮ್ಮ ಕಣ್ಣುಗಳನ್ನು ಮುರಿದವನು ನಾನೇ ಎಂಬುದಾಗಿ ಜ್ಞಾಪಕಮಾಡಿಕೊಳ್ಳುವರು. ಅವರು ತಮ್ಮ ಅಸಹ್ಯ ಕಾರ್ಯಗಳನ್ನು ಮಾಡುವ ಕೇಡುಗಳ ನಿಮಿತ್ತ ತಮ್ಮ ಬಗ್ಗೆ ತಾವೇ ಅಸಹ್ಯಪಡುವರು.


“ ‘ಆದರೆ ಅವರು ನನಗೆ ಮಾಡಿದ ತಮ್ಮ ದುಷ್ಕೃತ್ಯದಲ್ಲಿರುವ ತಮ್ಮ ಅಕ್ರಮವನ್ನೂ, ತಮ್ಮ ಪಿತೃಗಳ ಅಕ್ರಮವನ್ನೂ ತಾವು ನನಗೆ ವಿರೋಧವಾಗಿ ನಡೆದುಕೊಂಡದ್ದನ್ನೂ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು