Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 30:12 - ಕನ್ನಡ ಸಮಕಾಲಿಕ ಅನುವಾದ

12 “ನಾವು ಅದನ್ನು ಕೈಗೊಳ್ಳುವಂತೆ ನಮಗೋಸ್ಕರ ಯಾರು ಆಕಾಶಕ್ಕೆ ಏರಿಹೋಗಿ, ಅದನ್ನು ತೆಗೆದುಕೊಂಡು ಬಂದು ನಮಗೆ ತಿಳಿಸುವರು?” ಎಂದು ನೀವು ಕೇಳುವಂತೆ, ಆ ವಾಕ್ಯವು ಆಕಾಶದಲ್ಲಿ ಇರುವಂಥದ್ದೂ ಅಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಇದು ಮೇಲಣ ಲೋಕದಲ್ಲಿರುವ ಮಾತಲ್ಲ. “ನಮಗೋಸ್ಕರ ಮೇಲಣ ಲೋಕವನ್ನು ಏರಿ ಅದನ್ನು ತಿಳಿದುಕೊಂಡು ಬಂದು ನಮಗೆ ತಿಳಿಸುವಷ್ಟು ಶಕ್ತರು ಯಾರಿದ್ದಾರೆ? ಇದ್ದರೆ ನಾವು ಕೇಳಿ ಕೈಕೊಂಡೇವು” ಅಂದುಕೊಳ್ಳುವುದಕ್ಕೆ ಅವಕಾಶವೇನೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಇದು ಮೇಲಣ ಲೋಕದಲ್ಲಿರುವ ಮಾತಲ್ಲ, ‘ನಮಗಾಗಿ ಮೇಲಣ ಲೋಕವನ್ನು ಏರಿ ಅದನ್ನು ತಿಳಿದುಕೊಂಡು ಬಂದು ನಮಗೆ ತಿಳಿಸುವಷ್ಟು ಶಕ್ತರು ಯಾರಿದ್ದಾರೆ? ಇದ್ದಿದ್ದರೆ ನಾವು ಕೈಗೊಳ್ಳುತ್ತಿದ್ದೆವು’ ಎಂದುಕೊಳ್ಳುವುದಕ್ಕೆ ಅವಕಾಶವೇನೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಇದು ಮೇಲಣ ಲೋಕದಲ್ಲಿರುವ ಮಾತಲ್ಲ. ನಮಗೋಸ್ಕರ ಮೇಲಣ ಲೋಕವನ್ನು ಏರಿ ಅದನ್ನು ತಿಳಿದುಕೊಂಡುಬಂದು ನಮಗೆ ತಿಳಿಸುವಷ್ಟು ಶಕ್ತರು ಯಾರಿದ್ದಾರೆ? ಇದ್ದರೆ ನಾವು ಕೇಳಿ ಕೈಕೊಂಡೇವು ಅಂದುಕೊಳ್ಳುವದಕ್ಕೆ ಅವಕಾಶವೇನೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಈ ಆಜ್ಞೆಯು ಆಕಾಶದೊಳಗೆ ಇಲ್ಲ, ‘ನಮಗೋಸ್ಕರ ಮೇಲಿನ ಲೋಕವನ್ನೇರಿ ಅದನ್ನು ತಿಳಿದುಕೊಂಡು ಬಂದು ನಮಗೆ ತಿಳಿಯಪಡಿಸುವವನು ಯಾರು? ನಾವು ಅದನ್ನು ಕೇಳಿ ಅದರಂತೆಯೇ ಮಾಡುತ್ತಿದ್ದೆವು’ ಎಂದು ವಿಚಾರಿಸುವ ಅವಶ್ಯವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 30:12
5 ತಿಳಿವುಗಳ ಹೋಲಿಕೆ  

ಯಾರು ಸ್ವರ್ಗಕ್ಕೆ ಹೋಗಿ ಕೆಳಗಿಳಿದು ಬಂದಿದ್ದಾರೆ? ಯಾರ ಕೈಗಳು ಗಾಳಿಯನ್ನು ಒಟ್ಟುಗೂಡಿಸಿವೆ? ಯಾರು ತಮ್ಮ ವಸ್ತ್ರದಲ್ಲಿ ಸಾಗರಗಳನ್ನು ಮೂಟೆಕಟ್ಟಿಕೊಂಡಿದ್ದಾರೆ? ಭೂಮಿಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿದವರು ಯಾರು? ಅವರ ಹೆಸರೇನು? ಅವರ ಮಗನ ಹೆಸರೇನು? ಖಂಡಿತವಾಗಿಯೂ ನಿಮಗೆ ಗೊತ್ತಿರಬೇಕು!


ಪರಲೋಕದಿಂದ ಇಳಿದು ಬಂದ ಮನುಷ್ಯಪುತ್ರನಾದ ನನ್ನನ್ನು ಹೊರತು ಯಾರೂ ಪರಲೋಕಕ್ಕೆ ಏರಿ ಹೋದವರಿಲ್ಲ.


ನಿಶ್ಚಯವಾಗಿ ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಆಜ್ಞೆಯು ನಿಮಗೆ ಕಠಿಣವಾದದ್ದಲ್ಲ; ದೂರವಾದದ್ದೂ ಅಲ್ಲ.


“ನಾವು ಅದನ್ನು ಕೈಗೊಳ್ಳುವಂತೆ ನಮಗೋಸ್ಕರ ಯಾರು ಸಮುದ್ರವನ್ನು ದಾಟಿ, ನಮಗೆ ತೆಗೆದುಕೊಂಡು ಬಂದು ಅದನ್ನು ತಿಳಿಸುವರು?” ಎಂದು ನೀವು ಕೇಳುವಂತೆ, ಆ ವಾಕ್ಯವು ಸಮುದ್ರದ ಆಚೆಯಲ್ಲಿ ಇರುವಂಥದ್ದೂ ಅಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು