Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 29:16 - ಕನ್ನಡ ಸಮಕಾಲಿಕ ಅನುವಾದ

16 ಏಕೆಂದರೆ ನಾವು ಈಜಿಪ್ಟ್ ದೇಶದಲ್ಲಿ ಹೇಗೆ ವಾಸವಾಗಿದ್ದೆವೆಂದೂ, ನೀವು ದಾಟಿಬಂದ ಜನಾಂಗಗಳನ್ನು ನಾವು ಹೇಗೆ ದಾಟಿ ಬಂದೆವೆಂದೂ ನಿಮಗೆ ತಿಳಿದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ನಾವು ಐಗುಪ್ತದೇಶದಲ್ಲಿ ವಾಸಮಾಡಿದ್ದೂ ಹಾಗೂ ಅನೇಕ ಜನಾಂಗಗಳ ಪ್ರದೇಶಗಳನ್ನು ದಾಟಿಬಂದದ್ದೂ ನಿಮಗೆ ತಿಳಿದೇ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ನಾವು ಈಜಿಪ್ಟ್ ದೇಶದಲ್ಲಿ ವಾಸಮಾಡಿದ್ದು, ಅನೇಕ ಜನಾಂಗಗಳ ಪ್ರದೇಶಗಳನ್ನು ದಾಟಿಬಂದದ್ದು ನಿಮಗೆ ತಿಳಿದೇ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ನಾವು ಐಗುಪ್ತದೇಶದಲ್ಲಿ ವಾಸಮಾಡಿದ್ದೂ ಅನೇಕ ಜನಾಂಗಗಳ ಪ್ರದೇಶಗಳನ್ನು ದಾಟಿಬಂದದ್ದೂ ನಿಮಗೆ ತಿಳಿದೇ ಇದೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ನಾನು ಈಜಿಪ್ಟಿನಲ್ಲಿ ಹೇಗೆ ಜೀವಿಸುತ್ತಿದ್ದೆವೆಂಬುದನ್ನೂ, ನಾವು ಇಲ್ಲಿಗೆ ಬರುವಾಗ ಹೇಗೆ ದೇಶಗಳನ್ನು ದಾಟಿಕೊಂಡು ಬಂದೆವೆಂಬುದನ್ನೂ ಸ್ಮರಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 29:16
8 ತಿಳಿವುಗಳ ಹೋಲಿಕೆ  

“ಈಗ ಏಳಿರಿ, ಹೊರಡಿರಿ, ಅರ್ನೋನ್ ಹಳ್ಳವನ್ನು ದಾಟಿರಿ, ಇಗೋ, ಹೆಷ್ಬೋನಿನ ಅರಸ ಅಮೋರಿಯನಾದ ಸೀಹೋನನನ್ನೂ, ಅವನ ದೇಶವನ್ನೂ ನಿಮ್ಮ ಕೈಯಲ್ಲಿ ಕೊಟ್ಟಿದ್ದೇನೆ. ಅವನ ಸಂಗಡ ಯುದ್ಧಮಾಡಿ, ಆ ದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಆರಂಭಮಾಡಿರಿ.


ಅಮ್ಮೋನ್ಯರ ಹತ್ತಿರಕ್ಕೆ ನೀವು ಬಂದಾಗ, ಅವರಿಗೆ ಕಿರುಕುಳ ನೀಡಬೇಡಿರಿ ಅಥವಾ ಅವರನ್ನು ಯುದ್ಧಕ್ಕೆ ಪ್ರಚೋದಿಸಬೇಡಿರಿ. ನಾನು ಆ ದೇಶವನ್ನು ಲೋಟನ ವಂಶದವರಾದ ಅಮ್ಮೋನಿಯರಿಗೆ ಸೊತ್ತಾಗಿ ಕೊಟ್ಟಿರುವದರಿಂದ ನಿಮಗೆ ಅದರಲ್ಲಿ ಯಾವ ಭಾಗವನ್ನೂ ಕೊಡುವುದಿಲ್ಲ” ಎಂದರು.


ಆಗ ಯೆಹೋವ ದೇವರು ನನಗೆ, “ಮೋವಾಬ್ಯರಿಗೆ ಕಿರುಕುಳ ನೀಡಬೇಡಿರಿ ಅಥವಾ ಅವರನ್ನು ಯುದ್ಧಕ್ಕೆ ಪ್ರಚೋದಿಸಬೇಡಿರಿ. ಏಕೆಂದರೆ ನಾನು ಅವರ ದೇಶದಲ್ಲಿ ನಿನಗೆ ಸೊತ್ತನ್ನು ಕೊಡುವುದಿಲ್ಲ. ನಾನು ಅದನ್ನು ಲೋಟನ ಮಕ್ಕಳಿಗೆ ಆರ್ ಎಂಬ ಪ್ರದೇಶವನ್ನು ಕೊಟ್ಟೆನಲ್ಲವೇ?” ಎಂದರು.


ನೀವು ಜನರಿಗೆ ಆಜ್ಞಾಪಿಸಬೇಕಾದದ್ದೇನೆಂದರೆ, ‘ನೀವು ಸೇಯೀರಿನಲ್ಲಿ ವಾಸಮಾಡುವ ನಿಮ್ಮ ಸಹೋದರರಾದ ಏಸಾವನ ಪುತ್ರರ ಗಡಿಯನ್ನು ದಾಟಬೇಕು. ಅವರು ನಿಮಗೆ ಭಯಪಡುವರು. ಆದ್ದರಿಂದ ನೀವು ಬಹಳ ಜಾಗ್ರತೆಯಿಂದಿರಬೇಕು.


ಈ ಹೊತ್ತು ಇಲ್ಲಿ ನಮ್ಮೊಡನೆ ನಮ್ಮ ದೇವರಾದ ಯೆಹೋವ ದೇವರ ಮುಂದೆ ನಿಂತವರ ಸಂಗಡ, ಈ ಹೊತ್ತು ಇಲ್ಲಿ ನಮ್ಮೊಡನೆ ಇಲ್ಲದವರ ಸಂಗಡ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ.


ಅವರ ಬಳಿಯಲ್ಲಿರುವ ಮರ, ಕಲ್ಲು, ಬೆಳ್ಳಿ, ಬಂಗಾರಗಳ ಅಸಹ್ಯವಾದ ಬೊಂಬೆಗಳನ್ನೂ ನೀವು ನೋಡಿದ್ದೀರಲ್ಲವೇ?


ಆಮೇಲೆ ನಾನು ಅವರಿಗೆ, “ನಿಮ್ಮಲ್ಲಿ ಒಬ್ಬೊಬ್ಬನು ತಮ್ಮ ತಮ್ಮ ಕಣ್ಣುಗಳ ಮುಂದೆ ಅಸಹ್ಯವಾದವುಗಳನ್ನು ಬಿಸಾಡಿ ಬಿಡಿರಿ. ಈಜಿಪ್ಟಿನ ವಿಗ್ರಹಗಳಿಂದ ನಿಮ್ಮನ್ನು ಅಶುದ್ಧಪಡಿಸಿಕೊಳ್ಳಬೇಡಿರಿ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನಾಗಿರುವೆನು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು