Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 28:54 - ಕನ್ನಡ ಸಮಕಾಲಿಕ ಅನುವಾದ

54 ನಿಮ್ಮಲ್ಲಿರುವ ಅತ್ಯಂತ ಸೌಮ್ಯಸ್ವಭಾವದವನೂ ಬಹಳ ಸೂಕ್ಷ್ಮ ಗುಣವುಳ್ಳವನೂ ಸಹ ತನ್ನ ಸ್ವಂತ ಸಹೋದರ ಅಥವಾ ಅವನು ಪ್ರೀತಿಸುವ ಹೆಂಡತಿ ಅಥವಾ ಉಳಿದಿರುವ ಮಕ್ಕಳ ಮೇಲೆ ಅನುಕಂಪ ತೋರಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

54 ನಿಮ್ಮಲ್ಲಿ ಮೃದುಸ್ವಭಾವಿಯೂ ಮತ್ತು ಸೂಕ್ಷ್ಮಗುಣವುಳ್ಳವನು ಆಗಿರುವ ಸಹೋದರನು ಆಹಾರಕ್ಕಾಗಿ ತನ್ನ ಸಹೋದರ, ಪ್ರೀತಿಯ ಹೆಂಡತಿ ಮತ್ತು ತನ್ನ ಮಕ್ಕಳನ್ನು ದ್ವೇಷಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

54-55 ಶತ್ರುಗಳು ನಿಮ್ಮ ಪಟ್ಟಣಗಳಿಗೆಲ್ಲಾ ಮುತ್ತಿಗೆ ಹಾಕಿ, ನಿಮ್ಮನ್ನು ಭೀಕರವಾದ ಬಿಕ್ಕಟ್ಟಿಗೆ ಸಿಕ್ಕಿಸುವರು. ಆಗ ನಿಮ್ಮಲ್ಲಿ ಮೃದುಸ್ವಭಾವಿ ಹಾಗು ಅತಿ ಸುಕುಮಾರ ಆದವನೂ ಕೂಡ ತನಗೇ ತಿನ್ನಲಿಕ್ಕೆ ಏನೂ ಉಳಿಯದೆ, ತನ್ನ ಮಕ್ಕಳ ಮಾಂಸವನ್ನು ತಾನೇ ತಿನ್ನಬೇಕೆಂದು, ಅಣ್ಣತಮ್ಮಂದಿರಿಗೂ ಪ್ರಾಣಪ್ರಿಯ ಹೆಂಡತಿಗೂ ಉಳಿದ ಮಕ್ಕಳಿಗೂ ಮೋರೆಸಿಂಡರಿಸಿಕೊಂಡು ಆ ಮಾಂಸದಲ್ಲಿ ಅವರಿಗೆ ಸ್ವಲ್ಪವನ್ನಾದರೂ ಕೊಡದೆ ಹೋಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

54-55 ಶತ್ರುಗಳು ನಿಮ್ಮ ಎಲ್ಲಾ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಬಹಳವಾಗಿ ಇರಿಕಿಸುವ ಕಾಲದಲ್ಲಿ ನಿಮ್ಮಲ್ಲಿ ಮೃದುಸ್ವಭಾವಿಯೂ ಅತಿಸುಕುಮಾರನೂ ಆಗಿರುವವನೂ ತನಗೆ ತಿನ್ನಲಿಕ್ಕೆ ಏನೂ ಉಳಿಯದೆಹೋದದರಿಂದ ತನ್ನ ಮಕ್ಕಳ ಮಾಂಸವನ್ನು ತಾನೇ ತಿನ್ನಬೇಕೆಂದು ಅಣ್ಣತಮ್ಮಂದಿರಿಗೂ ಪ್ರಾಣಪ್ರಿಯಳಾದ ಹೆಂಡತಿಗೂ ಉಳಿದ ಮಕ್ಕಳಿಗೂ ಮೋರೆಯನ್ನು ಕಪ್ಪುಮಾಡಿಕೊಂಡು ಆ ಮಾಂಸದಲ್ಲಿ ಅವರಿಗೆ ಸ್ವಲ್ಪವನ್ನಾದರೂ ಕೊಡದೆಹೋಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

54 “ನಿಮ್ಮಲ್ಲಿರುವ ಮೃದುವಾದ ಮತ್ತು ಕನಿಕರವುಳ್ಳ ಮನುಷ್ಯನೂ ಬೇರೆಯವರಿಗೆ ಕ್ರೂರಿಯಾಗುವನು; ತನ್ನನ್ನು ಬಹಳವಾಗಿ ಪ್ರೀತಿಸುವ ಹೆಂಡತಿಗೂ ಅವನು ಕ್ರೂರಿಯಾಗುವನು; ಇನ್ನೂ ಜೀವಂತವಾಗಿರುವ ತನ್ನ ಮಕ್ಕಳಿಗೂ ಅವನು ಕ್ರೂರಿಯಾಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 28:54
14 ತಿಳಿವುಗಳ ಹೋಲಿಕೆ  

ನನ್ನದನ್ನು ನನ್ನ ಇಷ್ಟಬಂದಂತೆ ಕೊಡುವುದಕ್ಕೆ ನನಗೆ ಹಕ್ಕಿಲ್ಲವೇ? ನಾನು ಔದಾರ್ಯವುಳ್ಳವನಾದ್ದರಿಂದ, ನಿನಗೆ ಹೊಟ್ಟೆಯುರಿಯೋ?’ ಎಂದನು.


“ಸಾಲ ಬಿಡುಗಡೆಯ ವರ್ಷವಾದ ಏಳನೆಯ ವರ್ಷವು ಸಮೀಪವಾಯಿತು,” ಎಂಬ ದುಷ್ಟ ಆಲೋಚನೆ ನಿಮ್ಮ ಹೃದಯದಲ್ಲಿ ಹುಟ್ಟಿ, ನಿಮ್ಮ ಬಡ ಸಹೋದರನ ಮೇಲೆ ಕಠಿಣವಾಗಿ, ನೀವು ಅವನಿಗೆ ಏನೂ ಕೊಡದೆ ಇರಬೇಡಿರಿ. ಅವನು ನಿಮಗೆ ವಿರೋಧವಾಗಿ ಯೆಹೋವ ದೇವರಿಗೆ ಮೊರೆ ಇಟ್ಟಾಗ, ನಿಮ್ಮಲ್ಲಿ ಅಪರಾಧ ಉಂಟಾಗದಂತೆ ನೋಡಿಕೊಳ್ಳಿರಿ.


ನಿನ್ನ ಸಹೋದರನಾಗಲಿ, ಮಗನಾಗಲಿ, ಮಗಳಾಗಲಿ, ಪ್ರೀತಿಯ ಹೆಂಡತಿಯಾಗಲಿ, ಪ್ರಾಣ ಸ್ನೇಹಿತನಾಗಲಿ, “ನೀವೂ, ನಿಮ್ಮ ಪಿತೃಗಳೂ ತಿಳಿಯದ ಬೇರೆ ದೇವರುಗಳನ್ನು


ನೆರೆಯವನಲ್ಲಿ ನಂಬಿಕೆ ಇಡಬೇಡಿರಿ; ಆಪ್ತಸ್ನೇಹಿತನಲ್ಲಿ ಭರವಸೆ ಇಡಬೇಡಿರಿ; ನಿನ್ನ ಎದೆಯಲ್ಲಿ ಮಲಗುವವಳಿಗೆ ನಿನ್ನ ಬಾಯಿಯ ಬಾಗಿಲುಗಳನ್ನು ಕಾಯಿ.


“ತನ್ನ ಗರ್ಭದ ಮಗನ ಮೇಲೆ ಕರುಣಿಸದೆ ಒಬ್ಬ ಸ್ತ್ರೀ ತನ್ನ ಎದೆಹಾಲನ್ನು ಕುಡಿಯುವ ಕೂಸನ್ನು ಮರೆತಾಳೇ? ಹೌದು, ಅವಳು ಮರೆಯಬಹುದು, ಆದರೂ ನಾನು ನಿನ್ನನ್ನು ಮರೆಯುವುದಿಲ್ಲ.


ಧನವಂತನಾಗಲು ಆತುರಪಡುವವನು ಕೆಟ್ಟ ಕಣ್ಣುಳ್ಳವನಾಗಿದ್ದಾನೆ; ತನಗೆ ಬಡತನವು ಬರುವುದನ್ನು ಅವನು ಯೋಚಿಸುವುದಿಲ್ಲ.


ಜಿಪುಣನ ಆಹಾರವನ್ನು ತಿನ್ನಬೇಡ; ಅವನ ರುಚಿ ಪದಾರ್ಥಗಳನ್ನು ಆಶಿಸಬೇಡ.


ಒಬ್ಬ ತಂದೆಯು ತಮ್ಮ ಮಕ್ಕಳ ಮೇಲೆ ಅನುಕಂಪಗೊಳ್ಳುವಂತೆ, ಯೆಹೋವ ದೇವರು ತಮಗೆ ಭಯಪಡುವವರ ಮೇಲೆ ಅನುಕಂಪ ತೋರಿಸುವವರಾಗಿದ್ದಾರೆ.


ಬಡವನಿಗೆ ತಾನು ಕೊಂಡುಕೊಂಡ ಒಂದು ಚಿಕ್ಕ ಹೆಣ್ಣು ಕುರಿಮರಿಯ ಹೊರತು ಬೇರೇನೂ ಇರಲಿಲ್ಲ. ಅದು ಅವನ ಸಂಗಡ, ಅವನ ಮಕ್ಕಳ ಸಂಗಡ ಬೆಳೆದು, ಅವನ ಸ್ವಂತ ಆಹಾರ ತಿಂದು, ಅವನ ಪಾತ್ರೆಯಲ್ಲಿ ಕುಡಿದು, ಅವನ ಮಗ್ಗುಲಲ್ಲಿ ಮಲಗಿಕೊಂಡು, ಅವನಿಗೆ ಮಗಳ ಹಾಗಿತ್ತು.


ಇಲ್ಲವಾದರೆ, ನೀವು ಏನನ್ನು ಕಾಣುವುದಕ್ಕಾಗಿ ಹೋದಿರಿ? ನಯವಾದ ಉಡುಪನ್ನು ಧರಿಸಿದ್ದ ಮನುಷ್ಯನನ್ನೋ? ನಯವಾದ ಉಡುಪನ್ನು ಧರಿಸುವವರು ರಾಜರ ಅರಮನೆಗಳಲ್ಲಿ ಇರುತ್ತಾರೆ.


ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವುದರಿಂದ ನೀವು ನಿಮ್ಮ ಗರ್ಭದ ಫಲವನ್ನು ಅಂದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಪುತ್ರಪುತ್ರಿಯರ ಮಾಂಸವನ್ನು ತಿನ್ನುವಿರಿ.


ಶತ್ರುಗಳು ನಿಮ್ಮ ಎಲ್ಲಾ ಪಟ್ಟಣಗಳಿಗೆ ಮುತ್ತಿಗೆ ಹಾಕಿ, ನಿಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವ ಕಾಲದಲ್ಲಿ ಅವನು ತನಗೆ ತಿನ್ನಲಿಕ್ಕೆ ಏನೂ ಸಿಗುವುದಿಲ್ಲ ಅಂದುಕೊಂಡು, ತನ್ನ ಮಕ್ಕಳ ಮಾಂಸವನ್ನು ಇತರರಿಗೆ ಕೊಡದೆ ತಿನ್ನುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು