Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 28:24 - ಕನ್ನಡ ಸಮಕಾಲಿಕ ಅನುವಾದ

24 ಯೆಹೋವ ದೇವರು ನಿಮ್ಮ ದೇಶದಲ್ಲಿ ಮಳೆಗೆ ಬದಲಾಗಿ ಹುಡಿಯೂ ಧೂಳೂ ಆಗುವಂತೆ ಮಾಡುವರು. ನೀವು ನಾಶವಾಗುವವರೆಗೆ ಅದು ಆಕಾಶದಿಂದ ನಿಮ್ಮ ಮೇಲೆ ಸುರಿಯುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ನಿಮ್ಮ ದೇಶದಲ್ಲಿ ಯೆಹೋವನು ಆಕಾಶದಿಂದ ಮಳೆಗೆ ಬದಲಾಗಿ ಧೂಳನ್ನೂ ಮತ್ತು ಉಸುಬನ್ನೂ ನಿಮ್ಮ ಮೇಲೆ ಸುರಿಸುವನು; ಅದುದರಿಂದ ನೀವು ನಾಶವಾಗಿ ಹೋಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ನಿಮ್ಮ ನಾಡಿನ ಮೇಲೆ ಆಕಾಶದಿಂದ ಮಳೆಗೆ ಬದಲಾಗಿ ಧೂಳಿಯನ್ನೂ ಉಸುಬನ್ನೂ ಸರ್ವೇಶ್ವರ ಸುರಿಸುವರು; ಇದರಿಂದ ನೀವು ನಾಶವಾಗಿ ಹೋಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ನಿಮ್ಮ ದೇಶದಲ್ಲಿ ಯೆಹೋವನು ಆಕಾಶದಿಂದ ಮಳೆಗೆ ಬದಲಾಗಿ ಧೂಳಿಯನ್ನೂ ಉಸುಬನ್ನೂ ನಿಮ್ಮ ಮೇಲೆ ಸುರಿಸುವನು; ಅದರಿಂದ ನೀವು ನಾಶವಾಗಿ ಹೋಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಯೆಹೋವನು ನಿಮಗೆ ಮಳೆಯನ್ನು ಬೀಳಮಾಡುವುದಿಲ್ಲ; ಕೇವಲ ಧೂಳು ಮತ್ತು ಮರಳು ಆಕಾಶದಿಂದ ಬೀಳುವುದು. ನೀವು ನಾಶವಾಗುವವರೆಗೆ ಅದು ಮೇಲಿನಿಂದ ಬೀಳುತ್ತಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 28:24
8 ತಿಳಿವುಗಳ ಹೋಲಿಕೆ  

ಯೆಹೋವ ದೇವರು ಆಕಾಶವೆಂಬ ತಮ್ಮ ಒಳ್ಳೆಯ ಉಗ್ರಾಣವನ್ನು ನಿಮಗೆ ತೆರೆದು, ನಿಮ್ಮ ಭೂಮಿಗೆ ತಕ್ಕ ಕಾಲದಲ್ಲಿ ಮಳೆಯನ್ನು ಕೊಟ್ಟು, ನಿಮ್ಮ ಕೈಕೆಲಸವನ್ನೆಲ್ಲಾ ಆಶೀರ್ವದಿಸುವರು. ನೀವು ಅನೇಕ ಜನಾಂಗಗಳಿಗೆ ಸಾಲಕೊಡುವಿರೇ ಹೊರತು ಸಾಲ ತೆಗೆದುಕೊಳ್ಳುವುದಿಲ್ಲ.


“ಸೊದೋಮನ್ನೂ, ಗೊಮೋರವನ್ನೂ ಕೆಡವಿದ ಹಾಗೆ, ನಾನು ನಿಮ್ಮಲ್ಲಿ ಕೆಲವರನ್ನು ಕೆಡವಿ ಹಾಕಿದ್ದೇನೆ. ಬೆಂಕಿ ಉರಿಯೊಳಗಿಂದ ತೆಗೆದ ಕೊಳ್ಳಿಯ ಹಾಗೆ ಇದ್ದೀರಿ. ಆದರೂ ನೀವೂ ನನ್ನ ಕಡೆಗೆ ಹಿಂದಿರುಗಿಕೊಳ್ಳಲಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.


ಏಕೆಂದರೆ ಅವರು ಸೇನಾಧೀಶ್ವರ ಯೆಹೋವ ದೇವರ ನಿಯಮವನ್ನು ನಿರಾಕರಿಸಿದ್ದರಿಂದಲೂ, ಇಸ್ರಾಯೇಲಿನ ಪರಿಶುದ್ಧರ ವಾಕ್ಯವನ್ನು ಅಸಡ್ಡೆ ಮಾಡಿದ್ದರಿಂದಲೂ ಬೆಂಕಿಯು ಕೊಳ್ಳಿಯನ್ನು ನುಂಗಿ ಬಿಡುವ ಹಾಗೆಯೂ, ಜ್ವಾಲೆಯು ಒಣಹುಲ್ಲನ್ನು ಸುಟ್ಟುಬಿಡುವಂತೆಯೂ, ಅದರ ಬೇರು ಕೊಳೆಯುವಂತೆಯೂ, ಚಿಗುರು ಅದರ ಧೂಳಿನಂತೆಯೂ ಏರಿ ಹೋಗುವುವು.


ಆಗ ಯೆಹೋವ ದೇವರು ಸೊದೋಮ್ ಮತ್ತು ಗೊಮೋರದ ಮೇಲೆ ಗಂಧಕವನ್ನೂ, ಬೆಂಕಿಯನ್ನೂ ಆಕಾಶದಿಂದ ಸುರಿಸಿದರು.


ಇಲ್ಲದಿದ್ದರೆ, ಯೆಹೋವ ದೇವರ ಕೋಪವು ನಿಮ್ಮ ಮೇಲೆ ಉರಿಯಲು ಅವರು ಮಳೆಯಾಗದಂತೆ ಮಾಡುವರು. ಭೂಮಿಯು ತನ್ನ ಬೆಳೆಯನ್ನು ಕೊಡದಂತೆ ಆಕಾಶವನ್ನು ಮುಚ್ಚಿಬಿಡುವರು. ಯೆಹೋವ ದೇವರು ನಿಮಗೆ ಕೊಡುವ ಆ ಒಳ್ಳೆಯ ದೇಶದಲ್ಲಿ ನೀವು ಬೇಗ ನಾಶವಾಗಿಹೋಗುವಿರಿ, ಎಚ್ಚರಿಕೆ.


ನಿಮ್ಮ ತಲೆಯ ಮೇಲಿರುವ ಆಕಾಶವು ಕಂಚಿನಂತೆಯೂ ಕೆಳಗಿರುವ ಭೂಮಿ ಬೆಳೆಕೊಡದೆ ಕಬ್ಬಿಣದಂತೆಯೂ ಇರುವವು.


ಆದ್ದರಿಂದ ನಿಮ್ಮ ನಿಮಿತ್ತವೇ ಆಕಾಶವು ಮಂಜನ್ನು ತಡೆಯುತ್ತದೆ; ಭೂಮಿಯು ತನ್ನ ಹುಟ್ಟುವಳಿಯನ್ನು ತಡೆದುಬಿಟ್ಟಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು