ಧರ್ಮೋಪದೇಶಕಾಂಡ 22:6 - ಕನ್ನಡ ಸಮಕಾಲಿಕ ಅನುವಾದ6 ನೀನು ದಾರಿಯಲ್ಲಿ ಯಾವುದಾದರೊಂದು ಗಿಡದಲ್ಲಾಗಲಿ, ನೆಲದ ಮೇಲಾಗಲಿ, ನಿನಗೆ ಮರಿಗಳುಳ್ಳ ಇಲ್ಲವೆ ಮೊಟ್ಟೆಗಳುಳ್ಳ ಪಕ್ಷಿಯ ಗೂಡು ಸಿಕ್ಕಿದರೆ, ಮರಿಗಳ ಮೇಲೆಯಾಗಲಿ, ಮೊಟ್ಟೆಗಳ ಮೇಲೆಯಾಗಲಿ ತಾಯಿ ಕೂತುಕೊಂಡಿದ್ದರೆ, ಮರಿಗಳ ಸಂಗಡ ತಾಯಿಯನ್ನು ತೆಗೆದುಕೊಳ್ಳಬಾರದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ನೀವು ದಾರಿಯಲ್ಲಿ ಹೋಗುವಾಗ ಮರದ ಮೇಲಾಗಲಿ ಅಥವಾ ನೆಲದ ಮೇಲಾಗಲಿ ಇರುವ ಒಂದು ಪಕ್ಷಿಯ ಗೂಡಿನೊಳಗೆ ಮರಿಗಳು ಅಥವಾ ಮೊಟ್ಟೆಗಳು ಇದ್ದು, ಅವುಗಳ ಮೇಲೆ ತಾಯಿ ಹೊದಗಿರುವುದನ್ನು ಕಂಡರೆ ಮರಿಗಳನ್ನು ತೆಗೆದುಕೊಳ್ಳಬಹುದೇ ಹೊರತು ತಾಯಿಯನ್ನು ಹಿಡಿದುಕೊಳ್ಳಬಾರದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 “ನೀವು ದಾರಿಯಲ್ಲಿ ಹೋಗುವಾಗ ಮರದ ಮೇಲಾಗಲಿ ನೆಲದ ಮೇಲಾಗಲಿ ಒಂದು ಹಕ್ಕಿಯ ಗೂಡನ್ನು ಕಂಡು ಅದರೊಳಗೆ ಮರಿಗಳು ಅಥವಾ ಮೊಟ್ಟೆಗಳು ಇದ್ದು ಅವುಗಳ ಮೇಲೆ ತಾಯಿ ಹೊದಗಿರುವುದನ್ನು ನೋಡಿದರೆ, ಮರಿಗಳನ್ನಾಗಲಿ ತಾಯಿಯನ್ನಾಗಲಿ ಹಿಡಿದುಕೊಳ್ಳಬಾರದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ನೀವು ದಾರಿಯಲ್ಲಿ ಹೋಗುವಾಗ ಮರದ ಮೇಲಾಗಲಿ ನೆಲದ ಮೇಲಾಗಲಿ ಇರುವ ಒಂದು ಪಕ್ಷಿಯ ಗೂಡಿನೊಳಗೆ ಮರಿಗಳು ಅಥವಾ ತತ್ತಿಗಳು ಇದ್ದು ಅವುಗಳ ಮೇಲೆ ತಾಯಿ ಹೊದಗಿರುವದನ್ನು ಕಂಡರೆ ಮರಿಗಳನ್ನು ತೆಗೆದುಕೊಳ್ಳಬಹುದೇ ಹೊರತು ತಾಯಿಯನ್ನು ಹಿಡಿದುಕೊಳ್ಳಬಾರದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 “ನೀವು ದಾರಿಯಲ್ಲಿ ಹೋಗುತ್ತಿರುವಾಗ ನೆಲದ ಮೇಲಾಗಲಿ ಮರದಲ್ಲಿಯಾಗಲಿ ಗೂಡು ಕಟ್ಟಿಕೊಂಡು ಅದರೊಳಗೆ ತಾಯಿ ಪಕ್ಷಿಯು ತನ್ನ ಮೊಟ್ಟೆಗಳೊಂದಿಗೆ ಇಲ್ಲವೆ ಮರಿಗಳೊಂದಿಗೆ ಇರುವುದನ್ನು ಕಂಡಾಗ ನೀವು ಮರಿಗಳೊಂದಿಗೆ ತಾಯಿಪಕ್ಷಿಯನ್ನು ಹಿಡಿದು ಕೊಂಡೊಯ್ಯಬಾರದು. ಅಧ್ಯಾಯವನ್ನು ನೋಡಿ |