ಧರ್ಮೋಪದೇಶಕಾಂಡ 20:1 - ಕನ್ನಡ ಸಮಕಾಲಿಕ ಅನುವಾದ1 ನೀವು ನಿಮ್ಮ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಹೊರಟಾಗ ಅವರ ಕುದುರೆಗಳನ್ನೂ ರಥಗಳನ್ನೂ ನಿಮಗಿಂತ ಹೆಚ್ಚಾಗಿರುವ ಜನರನ್ನೂ ನೋಡಿದರೆ ಭಯಪಡಬೇಡಿರಿ. ಏಕೆಂದರೆ ಈಜಿಪ್ಟ್ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿದ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಸಂಗಡ ಇದ್ದಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ನೀವು ನಿಮ್ಮ ಶತ್ರುಗಳಿಗೆ ವಿರುದ್ಧವಾಗಿ ಯುದ್ಧಕ್ಕೆ ಹೊರಟಾಗ ಅವರ ಹತ್ತಿರ ಕುದುರೆಗಳೂ, ರಥಗಳೂ ಮತ್ತು ನಿಮಗಿಂತ ಹೆಚ್ಚಾದ ಕಾಲ್ಬಲವೂ ಇರುವುದನ್ನು ಕಂಡರೆ ಹೆದರಬಾರದು. ಏಕೆಂದರೆ ಐಗುಪ್ತದೇಶದಿಂದ ನಿಮ್ಮನ್ನು ಬಿಡಿಸಿದ ನಿಮ್ಮ ದೇವರಾದ ಯೆಹೋವನು ನಿಮ್ಮ ಕಡೆ ಇದ್ದಾನಲ್ಲಾ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 “ನೀವು ಶತ್ರುಗಳ ವಿರುದ್ಧ ಯುದ್ಧಕ್ಕೆ ಹೊರಟಾಗ ಅವರ ಕಡೆ ಕುದುರೆಗಳು, ರಥಗಳು ಹಾಗು ನಿಮಗಿಂತ ಹೆಚ್ಚಾದ ಕಾಲ್ಬಲವು ಇರುವುದನ್ನು ಕಂಡರೆ, ಹೆದರಬೇಡಿ. ಏಕೆಂದರೆ ಈಜಿಪ್ಟ್ ದೇಶದಿಂದ ನಿಮ್ಮನ್ನು ಬಿಡಿಸಿದ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮೊಂದಿಗೆ ಇದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ನೀವು ಶತ್ರುಗಳೊಡನೆ ಯುದ್ಧಕ್ಕೆ ಹೊರಟಾಗ ಅವರ ಕಡೆ ಕುದುರೆಗಳೂ ರಥಗಳೂ ನಿಮಗಿಂತ ಹೆಚ್ಚಾದ ಕಾಲ್ಬಲವೂ ಇರುವದನ್ನು ಕಂಡರೆ ಹೆದರಬಾರದು. ಐಗುಪ್ತದೇಶದಿಂದ ನಿಮ್ಮನ್ನು ಬಿಡಿಸಿದ ನಿಮ್ಮ ದೇವರಾದ ಯೆಹೋವನು ನಿಮ್ಮ ಕಡೆ ಇದ್ದಾನಲ್ಲಾ . ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 “ನೀವು ನಿಮಗಿಂತ ಬಲಿಷ್ಠರಾದ ವೈರಿಗಳ ಮೇಲೆ ಯುದ್ಧಕ್ಕೆ ಹೋದಾಗ ಅವರ ರಥಾಶ್ವಗಳನ್ನು ಮತ್ತು ನಿಮಗಿಂತಲೂ ಹೆಚ್ಚಾದ ಸೈನ್ಯಬಲವನ್ನು ನೋಡಿ ನೀವು ಭಯಗ್ರಸ್ತರಾಗಬೇಡಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗಿದ್ದಾನೆ. ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿ ತಂದವನು ಆತನೇ. ಅಧ್ಯಾಯವನ್ನು ನೋಡಿ |
ಆಗ ಆಸನು ತನ್ನ ದೇವರಾದ ಯೆಹೋವ ದೇವರನ್ನು ಪ್ರಾರ್ಥಿಸಿ, “ಯೆಹೋವ ದೇವರೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯ ಕೊಡುವುದು ನಿಮಗೆ ಏನೂ ಅಲ್ಲ. ನಮ್ಮ ದೇವರಾದ ಯೆಹೋವ ದೇವರೇ, ನಮಗೆ ಸಹಾಯಮಾಡಿರಿ. ಏಕೆಂದರೆ ನಾವು ನಿಮ್ಮ ಮೇಲೆ ಆತುಕೊಂಡಿದ್ದೇವೆ. ನಿಮ್ಮ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ. ಯೆಹೋವ ದೇವರೇ, ನೀವೇ ನಮ್ಮ ದೇವರು. ಮನುಷ್ಯನು ನಿಮ್ಮೆದುರಿನಲ್ಲಿ ಬಲಗೊಳ್ಳದಿರಲಿ,” ಎಂದನು.