Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 19:13 - ಕನ್ನಡ ಸಮಕಾಲಿಕ ಅನುವಾದ

13 ನೀವು ಅವನ ಮೇಲೆ ದಯೆ ತೋರಬಾರದು. ನಿಮಗೆ ಒಳ್ಳೆಯದಾಗುವಂತೆ ನಿರಪರಾಧಿಯ ಪ್ರಾಣವನ್ನು ತೆಗೆದವನು ಇಸ್ರಾಯೇಲರಲ್ಲಿ ಉಳಿಯದಂತೆ ತೆಗೆದುಹಾಕಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ನೀವು ಅವನನ್ನು ಕನಿಕರಿಸಬಾರದು. ನಿಮಗೆ ಶುಭವುಂಟಾಗುವಂತೆ ನಿರಪರಾಧಿಯ ಪ್ರಾಣವನ್ನು ತೆಗೆದವನನ್ನು ಇಸ್ರಾಯೇಲರಲ್ಲಿ ಉಳಿಯದಂತೆ ಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ನೀವು ಅವನನ್ನು ಕನಿಕರಿಸಬಾರದು. ನಿಮಗೆ ಶುಭವುಂಟಾಗುವಂತೆ ನಿರಪರಾಧಿಯ ಪ್ರಾಣವನ್ನು ತೆಗೆದವನು ಇಸ್ರಯೇಲರಲ್ಲಿ ಉಳಿಯದಂತೆ ಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ನೀವು ಅವನನ್ನು ಕನಿಕರಿಸಬಾರದು. ನಿಮಗೆ ಶುಭವುಂಟಾಗುವಂತೆ ನಿರಪರಾಧಿಯ ಪ್ರಾಣವನ್ನು ತೆಗೆದವನು ಇಸ್ರಾಯೇಲ್ಯರಲ್ಲಿ ಉಳಿಯದಂತೆ ಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನೀವು ಅವನ ವಿಷಯದಲ್ಲಿ ದುಃಖಪಡಬಾರದು. ಯಾಕೆಂದರೆ ಅವನು ನಿರಪರಾಧಿಯನ್ನು ಕೊಂದ ಅಪರಾಧಿಯಾಗಿದ್ದಾನೆ. ಅವನು ಮಾಡಿದ ಪಾಪವನ್ನು ಇಸ್ರೇಲಿನಿಂದ ತೆಗೆದುಹಾಕಬೇಕು. ಆಗ ನಿಮಗೆ ಶುಭವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 19:13
17 ತಿಳಿವುಗಳ ಹೋಲಿಕೆ  

ಅರಸನು ಬೆನಾಯನಿಗೆ, “ಅವನು ಹೇಳಿದ ಪ್ರಕಾರ ಮಾಡು. ಯೋವಾಬನು ನಿನ್ನ ಹಾಗೂ ನನ್ನ ತಂದೆಯ ಮನೆಯವರ ನಿರಪರಾಧ ರಕ್ತವನ್ನು ಚೆಲ್ಲಿದ ದೋಷವನ್ನು ತೊಲಗಿಸುವ ಹಾಗೆ ಅವನನ್ನು ಕೊಂದು, ಅವನ ಶವವನ್ನು ಸಮಾಧಿಮಾಡು.


ಈ ಪ್ರಕಾರ ನೀವು ಯೆಹೋವ ದೇವರ ಮುಂದೆ ಸರಿಯಾದದ್ದನ್ನು ಮಾಡಿದರೆ, ರಕ್ತಾಪರಾಧವನ್ನು ನಿಮ್ಮಲ್ಲಿಂದ ತೆಗೆದುಹಾಕುವಿರಿ.


ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಒಪ್ಪಿಸುವ ಜನರನ್ನೆಲ್ಲಾ ನೀವು ಸಂಹರಿಸಬೇಕು. ಅವರ ಮೇಲೆ ನೀವು ಕಟಾಕ್ಷವಿಡಬಾರದು. ಅವರ ದೇವರುಗಳನ್ನು ಆರಾಧಿಸಬಾರದು. ಏಕೆಂದರೆ ಅವು ನಿಮಗೆ ಉರುಲಾಗುವವು.


ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ದಂಡಿಸಿ ಸಂಪೂರ್ಣವಾಗಿ ತೆಗೆದುಹಾಕಿಬಿಡುವರು. ಅವರ ಸಂಗಡ ಒಡಂಬಡಿಕೆ ಮಾಡಿಕೊಳ್ಳಬಾರದು. ಅವರಿಗೆ ದಯೆ ತೋರಿಸಬಾರದು.


ದಾವೀದನ ದಿವಸಗಳಲ್ಲಿ ವರ್ಷದಿಂದ ವರ್ಷಕ್ಕೆ ಮೂರು ವರ್ಷ ಬರ ಉಂಟಾಗಿತ್ತು. ಆಗ ದಾವೀದನು ಯೆಹೋವ ದೇವರನ್ನು ವಿಚಾರಿಸಿದನು. ಆಗ ಯೆಹೋವ ದೇವರು, “ಸೌಲನು ಗಿಬ್ಯೋನ್ಯರನ್ನು ಕೊಂದುಹಾಕಿದ್ದರಿಂದ ಅವನಿಗೋಸ್ಕರವೂ ರಕ್ತಾಪರಾಧವುಳ್ಳ ಅವನ ಮನೆಗೋಸ್ಕರವೂ ಈ ಬರ ಬಂದಿದೆ,” ಎಂದು ಹೇಳಿದರು.


ನಿನ್ನನ್ನು ಕರುಣಿಸಿ, ಕಟಾಕ್ಷಿಸಿ ಯಾರೂ ನಿನಗೆ ಒಂದು ಸಹಾಯವನ್ನೂ ಮಾಡಲಿಲ್ಲ. ಆದರೆ ನೀನು ಹುಟ್ಟಿದ ದಿನದಲ್ಲಿ ಅಸಹ್ಯಪಟ್ಟು ನಿನ್ನನ್ನು ಹೊಲದಲ್ಲಿ ಬಿಸಾಕಿದರು.


ಅವುಗಳನ್ನು ಬೆನ್ಯಾಮೀನನ ದೇಶದ ಚೇಲದಲ್ಲಿರುವ ಸೌಲನ ತಂದೆಯಾದ ಕೀಷನ ಸಮಾಧಿಯಲ್ಲಿ ಹೂಳಿಟ್ಟರು. ಅವರು ಅರಸನು ಆಜ್ಞಾಪಿಸಿದ್ದನ್ನೆಲ್ಲಾ ತೀರಿಸಿದ ತರುವಾಯ, ದೇವರು ದೇಶಕ್ಕೋಸ್ಕರ ಮಾಡಿದ ಬಿನ್ನಹವನ್ನು ಕೇಳಿದರು.


ಅವಳ ಕೈಯನ್ನು ಕಡಿದುಹಾಕಬೇಕು. ಅವಳಿಗೆ ಕರುಣೆ ತೋರಿಸಬಾರದು.


ನೀವು ಅವರಿಗೆ ಸಮ್ಮತಿಸಬಾರದು. ಅವರ ಮಾತನ್ನು ಕೇಳಬಾರದು. ನೀವು ಅವರನ್ನು ಕನಿಕರಿಸಬಾರದು ಇಲ್ಲವೆ ಬಚ್ಚಿಡಬಾರದು.


ಪಶುವನ್ನು ಕೊಲ್ಲುವವರು ಅದಕ್ಕೆ ಬದಲುಕೊಡಬೇಕು. ಮನುಷ್ಯರನ್ನು ಕೊಲ್ಲುವವರನ್ನು ಮರಣಕ್ಕೆ ಒಳಪಡಿಸಬೇಕು.


“ ‘ಯಾರಾದರೂ ಮನುಷ್ಯನನ್ನು ಕೊಂದರೆ, ನಿಶ್ಚಯವಾಗಿ ಮರಣಕ್ಕೆ ಒಳಪಡಬೇಕು.


“ಯಾರಾದರೂ ಮನುಷ್ಯರ ರಕ್ತವನ್ನು ಸುರಿಸುತ್ತಾರೋ, ಅವರ ರಕ್ತವನ್ನು ಮನುಷ್ಯರೇ ಸುರಿಸುವರು. ಏಕೆಂದರೆ ದೇವರು ತಮ್ಮ ಸ್ವರೂಪದಲ್ಲಿಯೇ ಮನುಷ್ಯರನ್ನು ಸೃಷ್ಟಿಸಿದರು.


ಆ ಪಟ್ಟಣದ ಹಿರಿಯರು ಅವನನ್ನು ಅಲ್ಲಿಂದ ಹಿಡಿದು ತರಿಸಿ, ಅವನಿಗೆ ಮರಣದಂಡನೆಯಾಗುವಂತೆ ಸೇಡು ತೀರಿಸಿಕೊಳ್ಳುವವನ ಕೈಗೆ ಅವನನ್ನು ಒಪ್ಪಿಸಬೇಕು.


ನೀವು ಅಂಥವರಿಗೆ ಕರುಣೆ ತೋರಿಸಬಾರದು, ಪ್ರಾಣಕ್ಕೆ ಪ್ರತಿಯಾಗಿ ಪ್ರಾಣ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಪ್ರತಿಯಾಗಿ ಕಾಲನ್ನು ಅವನಿಂದ ತೆಗೆದುಬಿಡಬೇಕು.


ಆದ್ದರಿಂದ ಕುಟುಂಬದವರೆಲ್ಲರು ನಿನ್ನ ಸೇವಕಿಯ ವಿರೋಧವಾಗಿ ಎದ್ದು, ‘ತನ್ನ ಸಹೋದರನನ್ನು ಕೊಂದವನನ್ನು ಅವನ ಸಹೋದರನ ಪ್ರಾಣಕ್ಕೋಸ್ಕರ ಅವನನ್ನು ಒಪ್ಪಿಸಿಕೊಡು, ತಮ್ಮನ ಪ್ರಾಣಕ್ಕಾಗಿ ಅವನ ಪ್ರಾಣವನ್ನೂ ತೆಗೆದುಬಿಟ್ಟು ನಿನ್ನನ್ನು ಬಾಧ್ಯಸ್ಥವಿಲ್ಲದ ಹಾಗೆ ಮಾಡಿಬಿಡುತ್ತೇವೆ’ ಎನ್ನುತ್ತಾರೆ. ಹೀಗೆಯೇ ಅವರು ನನಗೆ ಉಳಿದಿರುವ ಒಂದು ಕೆಂಡವನ್ನು ಆರಿಸಿ, ಭೂಮಿಯ ಮೇಲೆ ನನ್ನ ಗಂಡನ ಹೆಸರನ್ನೂ, ಸಂತಾನವನ್ನೂ ಅಳಿಸಬೇಕೆಂದಿದ್ದಾರೆ,” ಎಂದಳು.


“ ‘ಸಾಯತಕ್ಕ ಕೊಲೆಪಾತಕನ ಪ್ರಾಣಕ್ಕೋಸ್ಕರ ಈಡನ್ನು ತೆಗೆದುಕೊಳ್ಳಬೇಡಿರಿ. ಏಕೆಂದರೆ ಅವನು ನಿಜವಾಗಿಯೂ ಸಾಯಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು