Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 18:21 - ಕನ್ನಡ ಸಮಕಾಲಿಕ ಅನುವಾದ

21 ಇದಲ್ಲದೆ ನೀವು, “ಇದು ಯೆಹೋವ ದೇವರು ಹೇಳಿದ ವಾಕ್ಯವು ಅಲ್ಲ ಎಂದು ನಾವು ತಿಳಿದುಕೊಳ್ಳುವುದು ಹೇಗೆ?” ಎಂದು ನೀವು ನಿಮ್ಮ ಹೃದಯದಲ್ಲಿ ಆಲೋಚಿಸಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ‘ಪ್ರವಾದಿಯು ಹೇಳಿದ ಮಾತು ಯೆಹೋವನ ಮಾತಲ್ಲವೆಂದು ತಿಳಿದುಕೊಳ್ಳುವುದು ಹೇಗೆ’ ಅಂದುಕೊಳ್ಳುತ್ತೀರೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 “ಪ್ರವಾದಿ ಹೇಳಿದ ಮಾತು ಸರ್ವೇಶ್ವರನ ಮಾತಲ್ಲವೆಂದು ತಿಳಿದುಕೊಳ್ಳುವುದು ಹೇಗೆ ಎಂದುಕೊಳ್ಳುತ್ತೀರೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಪ್ರವಾದಿಯು ಹೇಳಿದ ಮಾತು ಯೆಹೋವನ ಮಾತಲ್ಲವೆಂದು ತಿಳಿದುಕೊಳ್ಳುವದು ಹೇಗೆ ಅಂದುಕೊಳ್ಳುತ್ತೀರೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ‘ಆ ಪ್ರವಾದಿಯು ಹೇಳಿದ್ದು ದೇವರ ಮಾತಲ್ಲವೆಂದು ತಿಳಿದುಕೊಳ್ಳುವುದು ಹೇಗೆ?’ ಎಂದು ನೀವು ಅಂದುಕೊಳ್ಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 18:21
8 ತಿಳಿವುಗಳ ಹೋಲಿಕೆ  

ನಾನು ನಿನ್ನ ಕ್ರಿಯೆಗಳನ್ನು ಬಲ್ಲೆನು. ಪ್ರಯಾಸ, ಸಹನೆಯನ್ನು ಬಲ್ಲೆನು. ನೀನು ದುಷ್ಟರನ್ನು ಸಹಿಸಲಾರೆ. ಅಪೊಸ್ತಲರಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕ್ಷಿಸಿ, ಅವರನ್ನು ಸುಳ್ಳುಗಾರರೆಂದು ಕಂಡುಕೊಂಡಿರುವೆ.


ನಿಮ್ಮನ್ನು ಕರೆಯುವ ದೇವರು ನಂಬಿಗಸ್ತರು, ಅವರೇ ಅದನ್ನು ಸಾಧಿಸುವವರೂ ಆಗಿದ್ದಾರೆ.


ಆದರೆ ನಾನು ಮಾತನಾಡಲು ಆಜ್ಞಾಪಿಸದೆ ಇರುವುದನ್ನು ನನ್ನ ಹೆಸರಿನಿಂದ ಮಾತನಾಡುವ ಪ್ರವಾದಿಯೂ, ಬೇರೆ ದೇವರುಗಳ ಹೆಸರಿನಿಂದ ಮಾತನಾಡುವ ಪ್ರವಾದಿಯೂ ಸಾಯಬೇಕು.”


ಒಬ್ಬ ಪ್ರವಾದಿಯು ಯೆಹೋವ ದೇವರ ಹೆಸರಿನಲ್ಲಿ ಮುಂತಿಳಿಸಿದ ಮಾತು ಸಂಭವಿಸದೆ ಹೋದರೆ ಅಥವಾ ನಿಜವಾಗದಿದ್ದರೆ, ಅದು ಯೆಹೋವ ದೇವರ ಮಾತು ಅಲ್ಲವೆಂದು ನೀವು ತಿಳಿದುಕೊಳ್ಳಬೇಕು. ಆ ಪ್ರವಾದಿಯು ಅಹಂಕಾರದಿಂದ ಅದನ್ನು ಮಾತನಾಡಿದ್ದರೆ, ಆದ್ದರಿಂದ ನೀವು ಅವನಿಗೆ ಭಯಪಡಬಾರದು.


ಆಗ ಸಮುಯೇಲನು ಯೆಹೋವ ದೇವರ ಪ್ರವಾದಿಯಾಗಿ ದೃಢಪಟ್ಟನೆಂದು ದಾನ್ ಊರು ಮೊದಲ್ಗೊಂಡು ಬೇರ್ಷೆಬದವರೆಗೂ ಇದ್ದ ಇಸ್ರಾಯೇಲರೆಲ್ಲರು ತಿಳಿದಿದ್ದರು.


ಸಮಾಧಾನವನ್ನು ಕುರಿತು ಪ್ರವಾದಿಸುವ ಪ್ರವಾದಿಯಾದರೆ, ಆ ಪ್ರವಾದಿಯ ವಾಕ್ಯವು ಉಂಟಾಗುವಾಗ, ಅವನು ಯೆಹೋವ ದೇವರಿಂದ ನಿಜವಾಗಿ ಕಳುಹಿಸಲಾದ ಪ್ರವಾದಿ, ಎಂದು ತಿಳಿಯತಕ್ಕದ್ದು,” ಎಂದನು.


ಎಲ್ಲಾ ಮನುಷ್ಯರೇ, ಯೆಹೋವ ದೇವರ ಮುಂದೆ ಮೌನವಾಗಿರಿ. ಏಕೆಂದರೆ ಅವರು ತಮ್ಮ ಪರಿಶುದ್ಧ ನಿವಾಸದೊಳಗಿಂದ ಎದ್ದಿದ್ದಾರೆ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು