Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 18:13 - ಕನ್ನಡ ಸಮಕಾಲಿಕ ಅನುವಾದ

13 ನೀವು ನಿಮ್ಮ ದೇವರಾದ ಯೆಹೋವ ದೇವರ ಮುಂದೆ ನಿರ್ದೋಷಿಯಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ನೀವು ನಿಮ್ಮ ದೇವರಾದ ಯೆಹೋವನ ಮುಂದೆ ನಿರ್ದೊಷಿಗಳಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ನೀವು ನಿಮ್ಮ ದೇವರಾದ ಸರ್ವೇಶ್ವರನ ಸೇವೆಯ ವಿಷಯದಲ್ಲಿ ಸದಾಚಾರವುಳ್ಳವರು ಆಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ನೀವು ನಿಮ್ಮ ದೇವರಾದ ಯೆಹೋವನ ಸೇವೆಯ ವಿಷಯದಲ್ಲಿ ಸದಾಚಾರವುಳ್ಳವರಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನಿಮ್ಮ ದೇವರಾದ ಯೆಹೋವನಿಗೆ ನೀವು ನಂಬಿಗಸ್ತರಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 18:13
11 ತಿಳಿವುಗಳ ಹೋಲಿಕೆ  

ಆದ್ದರಿಂದ, ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ.


ಅಬ್ರಾಮನು ತೊಂಬತ್ತೊಂಬತ್ತು ವರ್ಷದವನಾದಾಗ, ಯೆಹೋವ ದೇವರು ಅಬ್ರಾಮನಿಗೆ ಕಾಣಿಸಿಕೊಂಡು, “ನಾನೇ ಸರ್ವಶಕ್ತ ದೇವರು. ನೀನು ನನ್ನ ಸನ್ನಿಧಿಯಲ್ಲಿಯೇ ನಡೆಯುತ್ತಾ ದೋಷವಿಲ್ಲದವನಾಗಿರು.


ಇದು ನೋಹನ ಮತ್ತು ಅವನ ವಂಶದವರ ಚರಿತ್ರೆ: ನೋಹನು ನೀತಿವಂತನೂ ತನ್ನ ಕಾಲದವರಲ್ಲಿ ನಿರ್ದೋಷಿಯೂ ಆಗಿದ್ದನು. ಅವನು ದೇವರೊಂದಿಗೆ ವಿಶ್ವಾಸದಿಂದ ನಡೆಯುತ್ತಿದ್ದನು.


ಇದನ್ನೆಲ್ಲಾ ನಾನು ಸಾಧಿಸಿದ್ದೇನೆಂದಲ್ಲ ಅಥವಾ ಈಗಲೇ ನಾನು ಪರಿಪೂರ್ಣನಾಗಿದ್ದೇನೆಂದೂ ನಾನು ಹೇಳುತ್ತಾ ಇಲ್ಲ. ಆದರೆ ಕ್ರಿಸ್ತ ಯೇಸು ನನ್ನನ್ನು ಅನುಸರಿಸಬೇಕೆಂದು ಯಾವುದಕ್ಕಾಗಿ ಆರಿಸಿಕೊಂಡರೋ, ಆ ಪೂರ್ಣತೆಯೆಡೆಗೆ ತಲುಪುವಂತೆ ನಾನು ಪರಿಶ್ರಮಿಸುತ್ತಿದ್ದೇನೆ.


ನಿರ್ದೋಷಿಯನ್ನು ಗಮನಿಸು; ಯಥಾರ್ಥನನ್ನು ನೋಡು; ಸಮಾಧಾನ ಹುಡುಕುವವರಿಗೆ ಒಳ್ಳೆಯ ಭವಿಷ್ಯವಿದೆ.


ಆಗ ಯೆಹೋವ ದೇವರು ಸೈತಾನನಿಗೆ, “ನನ್ನ ಸೇವಕ ಯೋಬನನ್ನು ಗಮನಿಸಿದೆಯಾ? ಅವನು ನಿರ್ದೋಷಿಯೂ ಯಥಾರ್ಥನೂ ದೇವರಿಗೆ ಭಯಪಡುವವನೂ ಕೇಡನ್ನು ತೊರೆಯುವವನೂ ಆಗಿದ್ದಾನೆ. ಅವನ ಹಾಗೆ ಭೂಲೋಕದಲ್ಲಿ ಒಬ್ಬರೂ ಇಲ್ಲ,” ಎಂದರು.


ಊಚ್ ದೇಶದಲ್ಲಿ ಯೋಬ ಎಂಬ ಮನುಷ್ಯನಿದ್ದನು. ಅವನು ನಿರ್ದೋಷಿಯೂ ಯಥಾರ್ಥನೂ ದೇವರಿಗೆ ಭಯಪಡುವವನೂ ಕೆಟ್ಟದ್ದನ್ನು ತೊರೆಯುವವನೂ ಆಗಿದ್ದನು.


ಎಚ್ಚರವಾಗು, ಸಾಯುವ ಹಾಗಿರುವ ಉಳಿದವುಗಳನ್ನು ಬಲಪಡಿಸು. ಏಕೆಂದರೆ ನನ್ನ ದೇವರ ಮುಂದೆ ನಿನ್ನ ಕೃತ್ಯಗಳು ನನಗೆ ಪರಿಪೂರ್ಣವಾಗಿ ಕಂಡುಬರಲಿಲ್ಲ.


ಆದ್ದರಿಂದ ನಮ್ಮಲ್ಲಿ ಆತ್ಮಿಕ ಪರಿಪಕ್ವತೆಯುಳ್ಳವರು ಇದೇ ಮನೋಭಾವವುಳ್ಳವರಾಗಿರಬೇಕು. ಕೆಲವು ವಿಷಯಗಳ ಮೇಲೆ ಭಿನ್ನಾಭಿಪ್ರಾಯವಿದ್ದರೆ, ಅದನ್ನೂ ದೇವರು ನಿಮಗೆ ಸ್ಪಷ್ಟಪಡಿಸುವರು.


“ಆದ್ದರಿಂದ ನೀವು ಈಗ ಯೆಹೋವ ದೇವರಿಗೆ ಭಯಪಟ್ಟು ಯಥಾರ್ಥದಲ್ಲಿಯೂ ಸತ್ಯದಲ್ಲಿಯೂ ಅವರನ್ನು ಸೇವಿಸಿರಿ. ನಿಮ್ಮ ಪೂರ್ವಜರು ಯೂಫ್ರೇಟೀಸ್ ನದಿಯ ಆಚೆಯಲ್ಲಿಯೂ ಈಜಿಪ್ಟಿನಲ್ಲಿಯೂ ಸೇವಿಸಿದ ದೇವರುಗಳನ್ನು ತೊರೆದುಬಿಟ್ಟು ಯೆಹೋವ ದೇವರನ್ನೇ ನೀವು ಸೇವಿಸಿರಿ.


ಇಂದಿನ ಹಾಗೆಯೇ ಅವರ ಕಟ್ಟಳೆಗಳಲ್ಲಿ ನಡೆಯಲೂ, ಅವರ ಆಜ್ಞೆಗಳನ್ನು ಕೈಗೊಳ್ಳಲೂ, ನಮ್ಮ ದೇವರಾದ ಯೆಹೋವ ದೇವರಿಗೆ ನಿಮ್ಮ ಹೃದಯಗಳು ಪೂರ್ಣವಾಗಿ ಒಪ್ಪಿಸಿಕೊಟ್ಟದ್ದಾಗಿರಲಿ,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು