ಧರ್ಮೋಪದೇಶಕಾಂಡ 15:2 - ಕನ್ನಡ ಸಮಕಾಲಿಕ ಅನುವಾದ2 ನೀವು ಮಾಡಬೇಕಾದ ಕ್ರಮವೇನೆಂದರೆ: ಸಾಲ ಕೊಟ್ಟವರೆಲ್ಲರೂ ತಮ್ಮ ನೆರೆಯವರಾದ ಇಸ್ರಾಯೇಲರಿಗೆ ಕೊಟ್ಟ ಸಾಲವನ್ನು ಬಿಟ್ಟುಬಿಡಬೇಕು. ಅದು ಯೆಹೋವ ದೇವರ ಬಿಡುಗಡೆಯ ವರ್ಷ ಎಂದು ಪ್ರಕಟವಾಗಿರುವುದರಿಂದ ತನ್ನ ನೆರೆಯವನಿಂದಲೂ, ತನ್ನ ಸಹೋದರನಿಂದಲೂ ಸಾಲವನ್ನು ಕೇಳಬಾರದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಹೇಗೆಂದರೆ ಯೆಹೋವನು ನೇಮಿಸಿದ ಬಿಡುಗಡೆಯ ವರ್ಷವು ಬಂತೆಂದು ಪ್ರಕಟವಾದುದರಿಂದ ಸಾಲಕೊಟ್ಟವನು ತೆಗೆದುಕೊಂಡವನಿಗೆ ಆ ಸಾಲವನ್ನು ಬಿಟ್ಟುಬಿಡಬೇಕು. ಅವನು ಸ್ವದೇಶದವನಿಗೆ ಕೊಟ್ಟ ಸಾಲವನ್ನು ಕೇಳಬಾರದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ಹೇಗೆಂದರೆ, ಸರ್ವೇಶ್ವರನೇ ನೇಮಿಸಿದ ಬಿಡುಗಡೆಯ ಸಂವತ್ಸರ ಪ್ರಕಟವಾಗಿದೆ. ಆದುದರಿಂದ ಸಾಲಕೊಟ್ಟವನು ತೆಗೆದುಕೊಂಡವನಿಗೆ ಆ ಸಾಲವನ್ನು ಬಿಟ್ಟುಬಿಡಬೇಕು; ಅವನು ಸ್ವದೇಶದವನಿಗೆ ಕೊಟ್ಟ ಸಾಲವನ್ನು ಕೇಳಬಾರದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಹೇಗಂದರೆ ಯೆಹೋವನು ನೇವಿುಸಿದ ಬಿಡುಗಡೆಯ ಸಂವತ್ಸರವು ಬಂತೆಂದು ಪ್ರಕಟವಾದದರಿಂದ ಸಾಲಕೊಟ್ಟವನು ತೆಗೆದುಕೊಂಡವನಿಗೆ ಆ ಸಾಲವನ್ನು ಬಿಟ್ಟುಬಿಡಬೇಕು; ಅವನು ಸ್ವದೇಶದವನಿಗೆ ಕೊಟ್ಟ ಸಾಲವನ್ನು ಕೇಳಬಾರದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 ಒಬ್ಬನು ಇನ್ನೊಬ್ಬ ಇಸ್ರೇಲನಿಗೆ ಸಾಲಕೊಟ್ಟರೆ ಆ ಸಾಲವನ್ನು ವಜಾಮಾಡಬೇಕು. ತನ್ನ ಸಹೋದರನಾದ ಇಸ್ರೇಲನಿಂದ ಸಾಲ ಹಿಂದೆ ಕೇಳಬಾರದು. ಆ ವರ್ಷದಲ್ಲಿ ಸಾಲವನ್ನೆಲ್ಲಾ ವಜಾ ಮಾಡಬೇಕೆಂಬುದಾಗಿ ದೇವರು ಆದೇಶವನ್ನು ನೀಡಿದ್ದಾನೆ. ಅಧ್ಯಾಯವನ್ನು ನೋಡಿ |