ಧರ್ಮೋಪದೇಶಕಾಂಡ 15:14 - ಕನ್ನಡ ಸಮಕಾಲಿಕ ಅನುವಾದ14 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಶೀರ್ವಾದವಾಗಿ ಕೊಟ್ಟದ್ದರಲ್ಲಿ ಅಂದರೆ ನಿಮ್ಮ ಕುರಿಮಂದೆಯಿಂದಲೂ ಕಣದಿಂದಲೂ ದ್ರಾಕ್ಷಿ ಆಲೆಯದಿಂದಲೂ ಅವರಿಗೆ ಧಾರಾಳವಾಗಿ ಕೊಟ್ಟುಕಳುಹಿಸಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ನಿಮ್ಮ ದೇವರಾದ ಯೆಹೋವನು ನಿಮಗೆ ಅನುಗ್ರಹಿಸಿರುವ ಮೇರೆಗೆ ನಿಮಗಿರುವ ಹಿಂಡು, ದವಸ, ದ್ರಾಕ್ಷಿ ಆಲೆ ಮತ್ತು ಕಣ ಇವುಗಳಲ್ಲಿ ಉದಾರವಾಗಿ ಕೊಟ್ಟು ಕಳುಹಿಸಿಬಿಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಅನುಗ್ರಹಿಸಿರುವ ಮೇರೆಗೆ ನಿಮಗಿರುವ ಆಡುಕುರಿಗಳು, ದವಸಧಾನ್ಯ, ದ್ರಾಕ್ಷರಸ ಇವುಗಳಲ್ಲಿ ಉದಾರವಾಗಿ ಕೊಟ್ಟುಕಳುಹಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ನಿಮ್ಮ ದೇವರಾದ ಯೆಹೋವನು ನಿಮಗೆ ಅನುಗ್ರಹಿಸಿರುವ ಮೇರೆಗೆ ನಿಮಗಿರುವ ಆಡುಕುರಿಗಳು, ದವಸ, ದ್ರಾಕ್ಷಾರಸ ಇವುಗಳಲ್ಲಿ ಉದಾರವಾಗಿ ಕೊಟ್ಟು ಕಳುಹಿಸಿಬಿಡಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ನೀವು ಅವರಿಗೆ ನಿಮ್ಮ ಪಶುಗಳಲ್ಲಿ ಕೆಲವನ್ನು, ಸ್ವಲ್ಪ ಧಾನ್ಯವನ್ನು ಮತ್ತು ಸ್ವಲ್ಪ ದ್ರಾಕ್ಷಾರಸವನ್ನು ಕೊಡಬೇಕು. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಆಶೀರ್ವದಿಸಿ ನಿಮಗೆ ಹೇರಳವಾಗಿ ಅನುಗ್ರಹಿಸಿದ್ದಾನೆ. ಆದ್ದರಿಂದ ನಿಮ್ಮ ಗುಲಾಮರಿಗೆ ಒಳ್ಳೆಯವುಗಳನ್ನು ಹೇರಳವಾಗಿ ಕೊಡಿರಿ. ಅಧ್ಯಾಯವನ್ನು ನೋಡಿ |