Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 10:8 - ಕನ್ನಡ ಸಮಕಾಲಿಕ ಅನುವಾದ

8 ಆ ಕಾಲದಲ್ಲಿ ಯೆಹೋವ ದೇವರು ಲೇವಿ ಗೋತ್ರವನ್ನು ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವುದಕ್ಕೂ, ಯೆಹೋವ ದೇವರ ಮುಂದೆ ನಿಂತುಕೊಂಡು ಅವರಿಗೆ ಸೇವೆಮಾಡಿ, ಅವರ ಹೆಸರಿನಲ್ಲಿ ಜನರನ್ನು ಆಶೀರ್ವದಿಸುವುದಕ್ಕೂ ಅವರನ್ನು ನೇಮಿಸಿದರು. ಅವರು ಈ ದಿನದವರೆಗೂ ಆ ಕೆಲಸವನ್ನು ನಡೆಸುತ್ತಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಆ ಕಾಲದಲ್ಲಿ ಯೆಹೋವನು ಲೇವಿ ಕುಲದವರನ್ನು ಪ್ರತ್ಯೇಕಿಸಿ ತನ್ನ ಒಡಂಬಡಿಕೆಯ ಮಂಜೂಷವನ್ನು ಹೊರುವುದಕ್ಕೂ, ತನ್ನ ಸನ್ನಿಧಿಯಲ್ಲಿ ಸೇವೆ ಮಾಡುವುದಕ್ಕೂ ಮತ್ತು ತನ್ನ ಹೆಸರಿನಿಂದ ಜನರನ್ನು ಆಶೀರ್ವದಿಸುವುದಕ್ಕೂ ಅವರನ್ನು ನೇಮಿಸಿದನು. ಅವರು ಇಂದಿನ ವರೆಗೂ ಆ ಕೆಲಸವನ್ನು ನಡಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 “ಆ ಕಾಲದಲ್ಲಿ ಸರ್ವೇಶ್ವರ ಲೇವಿಕುಲದವರನ್ನು ಪ್ರತ್ಯೇಕಿಸಿ ತಮ್ಮ ಒಡಂಬಡಿಕೆಯ ಮಂಜೂಷವನ್ನು ಹೊರುವುದಕ್ಕು, ತಮ್ಮ ಸನ್ನಿಧಿಯಲ್ಲಿ ಸೇವೆಮಾಡುವುದಕ್ಕು ಹಾಗು ತಮ್ಮ ಹೆಸರಿನಲ್ಲಿ ಜನರನ್ನು ಆಶೀರ್ವದಿಸುವುದಕ್ಕು ಅವರನ್ನು ನೇಮಿಸಿದರು. ಅವರು ಇಂದಿನವರೆಗೂ ಆ ಕೆಲಸವನ್ನು ನಡೆಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಆ ಕಾಲದಲ್ಲಿ ಯೆಹೋವನು ಲೇವಿ ಕುಲದವರನ್ನು ಪ್ರತ್ಯೇಕಿಸಿ ತನ್ನ ಒಡಂಬಡಿಕೆಯ ಮಂಜೂಷವನ್ನು ಹೊರುವದಕ್ಕೂ ತನ್ನ ಸನ್ನಿಧಿಯಲ್ಲಿ ಸೇವೆಮಾಡುವದಕ್ಕೂ ತನ್ನ ಹೆಸರಿನಿಂದ ಜನರನ್ನು ಆಶೀರ್ವದಿಸುವದಕ್ಕೂ ಅವರನ್ನು ನೇವಿುಸಿದನು. ಅವರು ಇಂದಿನವರೆಗೂ ಆ ಕೆಲಸವನ್ನು ನಡಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಆ ಸಮಯದಲ್ಲಿ ಯೆಹೋವನು ಲೇವಿಕುಲದವರನ್ನು ಒಂದು ವಿಶೇಷವಾದ ಕೆಲಸಕ್ಕಾಗಿ ಬೇರೆ ಕುಲಗಳವರಿಂದ ಪ್ರತ್ಯೇಕಿಸಿದನು. ಅವರಿಗೆ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಎತ್ತಿಕೊಂಡು ಹೋಗುವ ಕೆಲಸ ಕೊಡಲ್ಪಟ್ಟಿತು. ಯೆಹೋವನ ಸನ್ನಿಧಾನದಲ್ಲಿ ಅವರು ಯಾಜಕರ ಕೆಲಸವನ್ನು ಮಾಡಿದರು. ಅಲ್ಲದೆ ಯೆಹೋವನ ಜನರಿಗೆ ದೇವರ ಆಶೀರ್ವಾದ ವಚನಗಳನ್ನು ಹೇಳುವ ಕೆಲಸವನ್ನು ಅವರು ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 10:8
39 ತಿಳಿವುಗಳ ಹೋಲಿಕೆ  

ಲೇವಿಯ ಪುತ್ರರಾದ ಯಾಜಕರು ಹತ್ತಿರ ಇರಬೇಕು. ಏಕೆಂದರೆ ಅವರನ್ನೇ ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಸೇವೆ ಮಾಡುವುದಕ್ಕೂ ಯೆಹೋವ ದೇವರ ಹೆಸರಿನಲ್ಲಿ ಆಶೀರ್ವಾದ ಕೊಡುವುದಕ್ಕೂ ಎಲ್ಲಾ ವಿವಾದ ಹೊಡೆದಾಟಗಳ ವಿಷಯದಲ್ಲಿ ತೀರ್ಮಾನಿಸುವುದಕ್ಕೂ ಆಯ್ದುಕೊಂಡಿದ್ದಾರೆ.


ಏಕೆಂದರೆ ಅವರೂ, ಅವರ ಪುತ್ರರೂ ನಿತ್ಯವಾಗಿ ಯೆಹೋವ ದೇವರ ಹೆಸರಿನಲ್ಲಿ ಸೇವೆಮಾಡುತ್ತಾ ನಿಂತಿರುವ ಹಾಗೆ ಅವರನ್ನು ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಎಲ್ಲಾ ಗೋತ್ರಗಳೊಳಗಿಂದ ಆಯ್ದುಕೊಂಡಿದ್ದಾರೆ.


“ಆರೋನನು ಮತ್ತು ಅವನ ಪುತ್ರರು ಪರಿಶುದ್ಧ ಸ್ಥಳವನ್ನೂ, ಪರಿಶುದ್ಧಸ್ಥಳದ ಎಲ್ಲಾ ಸಲಕರಣೆಗಳನ್ನೂ ಮುಚ್ಚಿದ ಮೇಲೆ, ಪಾಳೆಯವು ಹೊರಡುವಾಗ ಕೊಹಾತ್ಯರು ಅದನ್ನು ಹೊತ್ತುಕೊಂಡು ಹೋಗುವುದಕ್ಕೆ ಪ್ರವೇಶಿಸಬೇಕು. ಆದರೆ ಅವರು ಸಾಯದೆ ಇರಬೇಕಾದರೋ, ಪರಿಶುದ್ಧವಾದ ಯಾವುದನ್ನೂ ಮುಟ್ಟಬಾರದು. ದೇವದರ್ಶನದ ಗುಡಾರದಲ್ಲಿ ಕೊಹಾತ್ಯನ ಪುತ್ರರ ಹೊರೆಗಳು ಇವೇ ಆಗಿವೆ.


“ಲೇವಿಯ ಗೋತ್ರವನ್ನು ಹತ್ತಿರ ಕರೆದು, ಯಾಜಕನಾದ ಆರೋನನ ಮುಂದೆ ನಿಲ್ಲಿಸು. ಅವರು ಅವನಿಗೆ ಸಹಾಯ ಮಾಡಲಿ.


ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಹೋಗಿ ಫಲಕೊಡುವಂತೆಯೂ ನಿಮ್ಮ ಫಲವು ಸ್ಥಿರವಾಗಿರುವಂತೆಯೂ ನಾನು ನಿಮ್ಮನ್ನು ನೇಮಿಸಿದ್ದೇನೆ. ಹೀಗೆ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅವರು ನಿಮಗೆ ಕೊಡುವರು.


ಆದಕಾರಣ ಯೆಹೋವ ದೇವರು ಹೀಗೆನ್ನುತ್ತಾರೆ: ನೀನು ಮಾನಸಾಂತರಪಟ್ಟರೆ, ನೀನು ನನಗೆ ಸೇವೆಮಾಡುವಂತೆ ನಾನು ನಿನ್ನನ್ನು ಪುನಃಸ್ಥಾಪಿಸುವೆನು. ನೀನು ತುಚ್ಛವಾದವುಗಳಿಗೆ ಬದಲಾಗಿ ಅಮೂಲ್ಯವಾದವುಗಳನ್ನೇ ಮಾತನಾಡುತ್ತಿದ್ದರೆ, ನೀನು ನನ್ನ ಬಾಯಿಯ ಹಾಗಿರುವೆ. ಅವರು ನಿನ್ನ ಕಡೆಗೆ ತಿರುಗಲಿ, ಆದರೆ ನೀನು ಅವರ ಕಡೆಗೆ ಹಿಂದಿರುಗಬೇಡ.


ಆಗ ಯಾಜಕರೂ ಲೇವಿಯರೂ ಎದ್ದು ಜನರನ್ನು ಆಶೀರ್ವದಿಸಿದರು. ದೇವರು ಅವರ ಪ್ರಾರ್ಥನೆಯನ್ನು ಕೇಳಿದರು. ಅವರ ಪ್ರಾರ್ಥನೆಯು ದೇವರ ಪರಿಶುದ್ಧ ನಿವಾಸ ಸ್ಥಾನವಾದ ಪರಲೋಕಕ್ಕೆ ತಲುಪಿತು.


ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬರುತ್ತಿದ್ದ ಲೇವಿಯರಿಗೆ ದೇವರು ಸಹಾಯ ಮಾಡಿದ್ದರಿಂದ, ಅವರು ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ಬಲಿಯಾಗಿ ಅರ್ಪಿಸಿದರು.


ಆರೋನನು ಜನರ ಕಡೆಗೆ ತನ್ನ ಕೈಗಳನ್ನು ಎತ್ತಿ, ಅವರನ್ನು ಆಶೀರ್ವದಿಸಿದನು. ಪಾಪ ಪರಿಹಾರದ ಬಲಿಯನ್ನೂ ದಹನಬಲಿಯನ್ನೂ ಮತ್ತು ಸಮಾಧಾನದ ಬಲಿಯನ್ನೂ ಸಮರ್ಪಿಸಿದ ಮೇಲೆ ಇಳಿದು ಬಂದನು.


ಆದರೆ ದೇವರು ನಾನು ನನ್ನ ತಾಯಿಯ ಗರ್ಭದಲ್ಲಿದ್ದಾಗಲೇ ನನ್ನನ್ನು ಪ್ರತ್ಯೇಕಿಸಿ, ತಮ್ಮ ಕೃಪೆಯ ಮೂಲಕ ನನ್ನನ್ನು ಕರೆದು,


ಆದ್ದರಿಂದ, “ಅವರ ನಡುವೆಯಿಂದ ಹೊರಟುಬಂದು ಪ್ರತ್ಯೇಕವಾಗಿರಿ. ಅಶುದ್ಧವಾದ ಯಾವುದನ್ನೂ ಮುಟ್ಟದಿರಿ, ನಾನು ನಿಮ್ಮನ್ನು ಸ್ವೀಕರಿಸುವೆನು ಎಂದು ಕರ್ತದೇವರು ಹೇಳುತ್ತಾರೆ.”


ಅದು ಇತರರಿಗೆ ಸೇವೆ ಸಲ್ಲಿಸುವುದಾಗಿದ್ದರೆ, ಅದನ್ನು ಇತರರಿಗೆ ಸೇವೆ ಸಲ್ಲಿಸುವುದರಲ್ಲಿ ಉಪಯೋಗಿಸಲಿ. ಅದು ಬೋಧಿಸುವ ವರವಾಗಿದ್ದರೆ, ಅವನು ಬೋಧಿಸಲಿ.


ಕ್ರಿಸ್ತ ಯೇಸುವಿನ ದಾಸನೂ ಅಪೊಸ್ತಲನಾಗುವುದಕ್ಕೆ ಕರೆಹೊಂದಿದವನೂ ದೇವರ ಸುವಾರ್ತೆಯನ್ನು ಸಾರುವುದಕ್ಕೆ ಪ್ರತ್ಯೇಕಗೊಂಡವನೂ ಆಗಿರುವ ಪೌಲನು ಬರೆಯುವ ಪತ್ರ.


ಇವರೆಲ್ಲರೂ ಕರ್ತದೇವರನ್ನು ಆರಾಧಿಸಿ, ಉಪವಾಸಮಾಡುತ್ತಿದ್ದರು. ಆಗ ಪವಿತ್ರಾತ್ಮ ದೇವರು, “ಬಾರ್ನಬನನ್ನೂ ಸೌಲನನ್ನೂ ನಾನು ಕರೆದಿರುವ ಕಾರ್ಯಕ್ಕಾಗಿ ಅವರನ್ನು ನನಗಾಗಿ ಪ್ರತ್ಯೇಕಿಸಿರಿ,” ಎಂದರು.


“ ‘ಆದರೆ ಇಸ್ರಾಯೇಲರು ನನ್ನನ್ನು ಬಿಟ್ಟುಹೋದಾಗ ನನ್ನ ಪರಿಶುದ್ಧಸ್ಥಳದ ಕಾಯಿದೆಯನ್ನು ಪಾಲಿಸಿದ ಚಾದೋಕನ ಮಕ್ಕಳಾಗಿರುವ ಲೇವಿಯರಾದ ಯಾಜಕರೂ ಇವರು ನನಗೆ ಸೇವೆಮಾಡುವಂತೆ ನನ್ನ ಸಮೀಪಕ್ಕೆ ಬಂದು, ನನ್ನ ಮುಂದೆ ನಿಂತು, ನನಗೆ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವರೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.


ಆದರೂ ಅವರು ನನ್ನ ಪರಿಶುದ್ಧ ಸ್ಥಳದಲ್ಲಿ ಸೇವಿಸುವವರಾಗಿರುವರು. ಆಲಯದ ಬಾಗಿಲುಗಳ ಮೇಲ್ವಿಚಾರವನ್ನು ಹೊಂದಿ ಆಲಯಕ್ಕೆ ಸೇವೆಮಾಡುವರು. ಅವರು ಜನರಿಗೋಸ್ಕರ ದಹನಬಲಿಯನ್ನೂ ಸಮಾಧಾನ ಬಲಿಯನ್ನೂ ಮಾಡಿ ಅವರಿಗೆ ಸೇವೆ ಮಾಡುವ ಹಾಗೆ ಅವರ ಮುಂದೆ ನಿಲ್ಲುವರು.


ನಮ್ಮ ದೇವರ ಆಲಯದ ಅಂಗಳಗಳಲ್ಲಿಯೂ ಸೇವೆ ಮಾಡುವ ಯೆಹೋವ ದೇವರ ಸೇವಕರೇ, ಸ್ತುತಿಸಿರಿ.


ನಿಮ್ಮ ಕೈಗಳನ್ನು ಪರಿಶುದ್ಧ ಸ್ಥಳದಲ್ಲಿ ಎತ್ತಿ, ಯೆಹೋವ ದೇವರನ್ನು ಸ್ತುತಿಸಿರಿ.


ನನ್ನ ಮಕ್ಕಳೇ, ಉದಾಸೀನರಾಗಿರಬೇಡಿರಿ. ಏಕೆಂದರೆ ತಮ್ಮ ಸಮ್ಮುಖದಲ್ಲಿ ನಿಲ್ಲುವುದಕ್ಕೂ, ತಮ್ಮನ್ನು ಸೇವಿಸುವುದಕ್ಕೂ, ತಮಗೆ ಸೇವಕರಾಗಿರುವುದಕ್ಕೂ, ತಮಗೆ ಧೂಪವನ್ನು ಸುಡುವುದಕ್ಕೂ ಯೆಹೋವ ದೇವರು ನಿಮ್ಮನ್ನು ಆಯ್ದುಕೊಂಡಿದ್ದಾರೆ,” ಎಂದನು.


ಲೇವಿಯರನ್ನು ಕುರಿತು ಅವರು ಗುಡಾರವನ್ನೂ, ಅವರ ಸೇವೆಗೋಸ್ಕರ ಅದರ ಪಾತ್ರೆಗಳನ್ನೂ ಇನ್ನು ಮೇಲೆ ಹೊರುವ ಕೆಲಸವಿಲ್ಲವೆಂದು ಹೇಳಿದ್ದನು.


ಯಾಜಕರು ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯಲ್ಲಿ ಕೆರೂಬಿಗಳ ರೆಕ್ಕೆಗಳ ಕೆಳಗಿದ್ದ ಅದರ ಸ್ಥಳದಲ್ಲಿ ಇಟ್ಟರು.


ಅಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಸೇವೆ ಮಾಡುವುದಕ್ಕೆ ನಿಂತ ಯಾಜಕನ ಮಾತನ್ನಾದರೂ, ನ್ಯಾಯಾಧಿಪತಿಯ ಮಾತನ್ನಾದರೂ ಕೇಳದೆ ಅಹಂಕಾರದಿಂದ ಏನಾದರೂ ಮಾಡುವುದಾದರೆ, ಆ ಮನುಷ್ಯನು ಸಾಯಲೇಬೇಕು. ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು.


ಅವರು ನೋಡಿಕೊಳ್ಳಬೇಕಾಗಿದ್ದವುಗಳು ಯಾವವೆಂದರೆ: ಮಂಜೂಷ, ಮೇಜು, ದೀಪಸ್ತಂಭ, ವೇದಿಕೆಗಳು, ದೇವಸ್ಥಾನದ ಸೇವೋಪಕರಣಗಳು ಹಾಗೂ ಒಳಗಣ ಪರದೆ. ಇಂಥ ಎಲ್ಲಾ ವಿಧವಾದ ಸೇವೆಯನ್ನು ಅವರು ಮಾಡಬೇಕಾಗಿತ್ತು.


ಅವನ ತಲೆಯ ಮೇಲೆ ಮುಂಡಾಸವನ್ನು ಇಟ್ಟು, ಆ ಮುಂಡಾಸದ ಮೇಲೆ ಅಂದರೆ ಅದರ ಮುಂಭಾಗದಲ್ಲಿ ಬಂಗಾರದ ಪಟ್ಟಿಯನ್ನೂ, ಪವಿತ್ರವಾದ ಕಿರೀಟವನ್ನೂ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಇಟ್ಟನು.


ಇದಲ್ಲದೆ ಮೋಶೆಯು ಈ ನಿಯಮವನ್ನು ಬರೆದು, ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವಂಥ ಲೇವಿಯ ಪುತ್ರರಾದ ಯಾಜಕರಿಗೂ, ಇಸ್ರಾಯೇಲಿನ ಎಲ್ಲಾ ಹಿರಿಯರಿಗೂ ಒಪ್ಪಿಸಿದನು.


ಆಗ ದಾವೀದನು, “ಲೇವಿಯರ ಹೊರತಾಗಿ ಮತ್ತ್ಯಾರೂ ದೇವರ ಮಂಜೂಷವನ್ನು ಹೊರಬಾರದು. ಯೆಹೋವ ದೇವರು ದೇವರ ಮಂಜೂಷವನ್ನು ಹೊರಲೂ, ಯುಗಯುಗಕ್ಕೆ ಅವರಿಗೆ ಸೇವೆಮಾಡಲೂ ಅವರನ್ನು ಆಯ್ದುಕೊಂಡಿದ್ದಾರೆ,” ಎಂದನು.


ಯೆಹೋವ ದೇವರ ಆಲಯದಲ್ಲಿ ಪ್ರತಿ ರಾತ್ರಿ ಸೇವೆ ಸಲ್ಲಿಸುವ ಯೆಹೋವ ದೇವರ ಎಲ್ಲಾ ಸೇವಕರೇ, ಯೆಹೋವ ದೇವರನ್ನು ಸ್ತುತಿಸಿರಿ.


ಹತನಾದವನಿಗೆ ಸಮೀಪವಾದ ಊರು ಯಾವುದೋ, ಆ ಊರಿನ ಹಿರಿಯರು ಇನ್ನೂ ಕೆಲಸ ಮಾಡದಂಥ, ನೊಗ ಎಳೆಯದಂಥ, ಒಂದು ಕಡಸನ್ನು ತೆಗೆದುಕೊಳ್ಳಬೇಕು.


ಅಮ್ರಾಮನ ಪುತ್ರರು: ಆರೋನ್ ಮತ್ತು ಮೋಶೆ; ಆರೋನನನ್ನು ಮತ್ತು ಅವನ ಪುತ್ರರನ್ನು ಮಹಾಪರಿಶುದ್ಧವಾದ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಶಾಶ್ವತವಾಗಿ ಪ್ರತ್ಯೇಕಿಸಲಾಯಿತು. ಇವರು ಯೆಹೋವ ದೇವರ ಸನ್ನಿಧಿಯಲ್ಲಿ ಸದಾಕಾಲ ಧೂಪಹಾಕುವವರೂ, ಅವರ ಸೇವೆ ಮಾಡುವವರೂ, ಅವರ ಹೆಸರಿನಿಂದ ಜನರನ್ನು ಆಶೀರ್ವದಿಸುವವರೂ ಆಗಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು