Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಧರ್ಮೋಪದೇಶಕಾಂಡ 1:35 - ಕನ್ನಡ ಸಮಕಾಲಿಕ ಅನುವಾದ

35 “ಕೆಟ್ಟ ಸಂತತಿಯಾದ ಈ ಮನುಷ್ಯರಲ್ಲಿ ಒಬ್ಬನಾದರೂ ನಾನು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ಒಳ್ಳೆಯ ದೇಶವನ್ನು ನೋಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಆತನು, “ನಿಮ್ಮ ಪೂರ್ವಿಕರಿಗೆ ವಾಗ್ದಾನಮಾಡಿದ ಆ ಒಳ್ಳೇ ದೇಶವನ್ನು ಈ ದುಷ್ಟ ಸಂತತಿಯವರಲ್ಲಿ ಯಾರೂ ನೋಡುವುದಿಲ್ಲ” ಎಂದು ಪ್ರಮಾಣಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ‘ಈಗ ಜೀವಿಸುತ್ತಿರುವ ದುಷ್ಟಜನರಾದ ನಿಮ್ಮಲ್ಲಿ ಯಾರೂ ನಾನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಒಳ್ಳೆಯನಾಡಿಗೆ ಹೋಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಧರ್ಮೋಪದೇಶಕಾಂಡ 1:35
8 ತಿಳಿವುಗಳ ಹೋಲಿಕೆ  

ಆದ್ದರಿಂದ, ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ,’ ” ಎಂದು ನಾನು ಅಸಂತೋಷದಿಂದ ಆಣೆ ಇಟ್ಟುಕೊಂಡೆನು.


ಆದರೆ ಅವರೊಳಗೆ ಬಹುಮಂದಿಯನ್ನು ದೇವರು ಮೆಚ್ಚಲಿಲ್ಲ. ಆದ್ದರಿಂದ ಅವರು ಅರಣ್ಯದಲ್ಲಿ ಸಂಹಾರವಾದರು.


ಮೊದಲಿನಿಂದಿರುವ ನಮ್ಮ ನಿರೀಕ್ಷೆಯನ್ನು ಅಂತ್ಯದವರೆಗೂ ನಾವು ದೃಢವಾಗಿ ಹಿಡಿದುಕೊಳ್ಳುವುದಾದರೆ ಕ್ರಿಸ್ತ ಯೇಸುವಿನ ಭಾಗಿಗಳಾಗಿದ್ದೇವಲ್ಲಾ!


“ದೇವರು ನುಡಿದದ್ದನ್ನು ಕೇಳಿ ಕೋಪಗೊಂಡು ವಿರೋಧಿಸಿದವರು ಯಾರು? ಆದರೂ ಮೋಶೆಯ ಮೂಲಕ ಈಜಿಪ್ಟಿನಿಂದ ಹೊರಟು ಬಂದವರೆಲ್ಲರೂ ಹಾಗೆ ಮಾಡಲಿಲ್ಲವಲ್ಲಾ?


ನಾವು ಕಾದೇಶ್ ಬರ್ನೇಯವನ್ನು ಬಿಟ್ಟಂದಿನಿಂದ ಜೆರೆದ್ ಹಳ್ಳವನ್ನು ದಾಟಿದವರೆಗೆ ಗತಿಸಿದ ಕಾಲವು ಮೂವತ್ತೆಂಟು ವರ್ಷ. ಯೆಹೋವ ದೇವರು ಅವರಿಗೆ ಪ್ರಮಾಣ ಮಾಡಿದ ಪ್ರಕಾರ ಅಷ್ಟರಲ್ಲಿ ಆ ಸಂತತಿಯ ಸೈನಿಕರೆಲ್ಲರು ಸತ್ತುಹೋಗಿದ್ದರು.


ಆದ್ದರಿಂದ ದೇವರು ಅವರನ್ನು ಮರುಭೂಮಿಯಲ್ಲಿ ಬೀಳುವಂತೆಯೂ, ಅವರ ಸಂತತಿಯರು ದೇಶಗಳಲ್ಲಿ ಚದರಿಸುವಂತೆಯೂ


ಆದರೂ ಹಾಲೂ ಜೇನೂ ಹರಿಯುವಂಥ ದೇಶಗಳಿಗೆ ಕೀರ್ತಿಯಾಗಿರುವಂಥ ಆ ದೇಶದಲ್ಲಿ ಅವರನ್ನು ಸೇರಿಸುವುದಿಲ್ಲವೆಂದು ಮರುಭೂಮಿಯಲ್ಲಿ ಅವರಿಗೆ ನನ್ನ ಕೈಯೆತ್ತಿ ಪ್ರಮಾಣಮಾಡಿದೆನು.


ಆ ದೇಶವನ್ನು ನಿಮಗೆ ಕೊಟ್ಟಿದ್ದೇನೆ. ನೀವು ಹೋಗಿ ಯೆಹೋವ ದೇವರಾದ ನಾನು ನಿಮ್ಮ ಪಿತೃಗಳಾದ ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಅವರ ತರುವಾಯ ಹುಟ್ಟುವ ಅವರ ಸಂತತಿಗೂ ಕೊಡುತ್ತೇನೆಂದು ಪ್ರಮಾಣ ಮಾಡಿದ ದೇಶವನ್ನು ಸ್ವತಂತ್ರಿಸಿಕೊಳ್ಳಿರಿ,” ಎಂದು ಹೇಳಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು