Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 9:14 - ಕನ್ನಡ ಸಮಕಾಲಿಕ ಅನುವಾದ

14 ನಮ್ಮ ದೇವರಾದ ಯೆಹೋವ ದೇವರು ತಾವು ಮಾಡುವ ಎಲ್ಲದರಲ್ಲಿಯೂ ನೀತಿವಂತರಾಗಿದ್ದುದರಿಂದ, ವಿನಾಶವನ್ನು ನಮ್ಮ ಮೇಲೆ ಬರಮಾಡಲು ಯೆಹೋವ ದೇವರು ಹಿಂಜರಿಯಲಿಲ್ಲ. ಆದರೂ ನಾವು ಅವರಿಗೆ ವಿಧೇಯರಾಗಲೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಆದಕಾರಣ ಯೆಹೋವನು ಆ ಕೇಡನ್ನು ನೋಡಿಕೊಂಡಿದ್ದು ನಮ್ಮ ಮೇಲೆ ಬರಮಾಡಿದ್ದಾನೆ; ನಮ್ಮ ದೇವರಾದ ಯೆಹೋವನು ತಾನು ಮಾಡುವ ಸಕಲಕಾರ್ಯಗಳಲ್ಲಿ ಧರ್ಮಸ್ವರೂಪನೇ; ನಾವೋ ಆತನ ಮಾತನ್ನು ಕೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಆದಕಾರಣ ಸರ್ವೇಶ್ವರ ಈ ಕೇಡನ್ನು ಸಕಾಲಕ್ಕೆ ನಮ್ಮ ಮೇಲೆ ಬರಮಾಡಿದ್ದಾರೆ. ನಮ್ಮ ದೇವರಾದ ಸರ್ವೇಶ್ವರ ತಾವು ಮಾಡುವ ಸಕಲ ಕಾರ್ಯಗಳಲ್ಲೂ ನ್ಯಾಯಸ್ವರೂಪರು. ನಾವೋ ಅವರ ಮಾತನ್ನು ಕೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಆದಕಾರಣ ಯೆಹೋವನು ಆ ಕೇಡನ್ನು ನೋಡಿಕೊಂಡಿದ್ದು ನಮ್ಮ ಮೇಲೆ ಬರಮಾಡಿದ್ದಾನೆ; ನಮ್ಮ ದೇವರಾದ ಯೆಹೋವನು ತಾನು ಮಾಡುವ ಸಕಲ ಕಾರ್ಯಗಳಲ್ಲಿ ಧರ್ಮಸ್ವರೂಪನೇ; ನಾವೋ ಆತನ ಮಾತನ್ನು ಕೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಯೆಹೋವನಾದ ನೀನು ನಮಗೆ ಆಪತ್ತುಗಳನ್ನು ಸಿದ್ಧಪಡಿಸಿಟ್ಟಿದ್ದೆ. ಆ ಆಪತ್ತುಗಳು ನಮ್ಮ ಮೇಲೆ ಬರುವಂತೆ ನೀನು ಮಾಡಿದೆ. ಯೆಹೋವನಾದ ನೀನು ಎಲ್ಲವನ್ನು ನಿಷ್ಪಕ್ಷಪಾತವಾಗಿ ಮಾಡುವೆ. ಆದ್ದರಿಂದಲೇ ಇದೆಲ್ಲವನ್ನು ಮಾಡಿದೆ. ಆದರೆ ಇಂದಿಗೂ ನಾವು ನಿನ್ನ ಉಪದೇಶಕ್ಕೆ ಕಿವಿಗೊಟ್ಟಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 9:14
16 ತಿಳಿವುಗಳ ಹೋಲಿಕೆ  

“ಕರ್ತದೇವರೇ, ನೀವು ನೀತಿವಂತರು, ಆದರೆ ನಾವು ಈ ದಿನ ಬಹಳ ಲಜ್ಜೆಗೆಟ್ಟವರು. ಯೆಹೂದ್ಯರು ಹಾಗು ಯೆರೂಸಲೇಮಿನ ನಿವಾಸಿಗಳು ಈಗಾಗಲೇ ನಿಮಗೆ ವಿರುದ್ಧ ಮಾಡಿದ ದ್ರೋಹದ ನಿಮಿತ್ತ ನಿಮ್ಮಿಂದ ದೇಶವಿದೇಶಗಳಿಗೆ ಚದರಿಹೋಗಿದ್ದಾರೆ. ದೂರದ ದೇಶಗಳಿಗೂ, ಹತ್ತಿರದ ನಾಡುಗಳಿಗೂ ಚದರಿಹೋಗಿರುವ ಆ ಎಲ್ಲಾ ಇಸ್ರಾಯೇಲರು ನಾಚಿಕೆಗೆ ಈಡಾಗಿದ್ದಾರೆ.


ನೀವು ನಮ್ಮ ಮೇಲೆ ಬರಮಾಡಿದ ಎಲ್ಲದರಲ್ಲಿಯೂ ನ್ಯಾಯವಂತರಾಗಿರುವಿರಿ. ಏಕೆಂದರೆ ನೀವು ಮಾಡಿದ್ದು ಸತ್ಯಕ್ಕನುಸಾರವಾದದ್ದು. ಆದರೆ ನಾವು ದುಷ್ಟರಾಗಿ ನಡೆದೆವು.


ನಾನು ಒಳ್ಳೆಯದಕ್ಕಾಗಿ ಅಲ್ಲ; ಕೆಟ್ಟದ್ದಕ್ಕಾಗಿ ಅವರ ಮೇಲೆ ಎಚ್ಚರವಾಗಿರುವೆನು. ಈಜಿಪ್ಟ್ ದೇಶದಲ್ಲಿರುವ ಯೆಹೂದದ ಮನುಷ್ಯರೆಲ್ಲರೂ ಮುಗಿದು ಅಂತ್ಯವಾಗುವವರೆಗೆ ಖಡ್ಗದಿಂದಲೂ ಬರದಿಂದಲೂ ನಾಶವಾಗುವರು.


ದೇವರೇ, ನನ್ನ ರಕ್ಷಣೆಯ ದೇವರೇ, ರಕ್ತಾಪರಾಧದಿಂದ ನನ್ನನ್ನು ಬಿಡಿಸಿರಿ, ನನ್ನ ನಾಲಿಗೆಯು ನಿಮ್ಮ ನೀತಿಯನ್ನು ಹಾಡುವುದು.


ನಾನು ಅವರನ್ನು ಕೀಳಲು, ಕೆಡವಲು, ಅಳಿಸಲು ಹಾಳುಮಾಡಲು, ಎಚ್ಚರವಹಿಸಿದ ಹಾಗೆಯೇ ಇನ್ನು ಮುಂದೆ ಅವರನ್ನು ಕಟ್ಟುವುದಕ್ಕೂ, ನೆಡುವುದಕ್ಕೂ ಅವರ ವಿಷಯವಾಗಿ ಎಚ್ಚರವಹಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.


ಆದ್ದರಿಂದ ಇಸ್ರಾಯೇಲಿನ ಪ್ರಧಾನರೂ, ಅರಸನೂ ತಮ್ಮನ್ನು ತಗ್ಗಿಸಿಕೊಂಡು, “ಯೆಹೋವ ದೇವರು ನೀತಿವಂತರು,” ಎಂದರು.


ಯೆಹೋವ ದೇವರು ಕೃಪೆಯೂ ನೀತಿಯೂ ಉಳ್ಳವರು ನಮ್ಮ ದೇವರು ಅನುಕಂಪ ಭರಿತರು.


ಯೆಹೋವ ದೇವರೇ, ನೀವು ನೀತಿವಂತರು, ನಿಮ್ಮ ನಿಯಮಗಳು ಸರಿಯಾದವುಗಳೇ.


ಆಗ ಫರೋಹನು ಮೋಶೆ ಆರೋನರನ್ನು ಕರೆಕಳುಹಿಸಿ ಅವರಿಗೆ, “ಈ ಸಲ ನಾನು ಪಾಪಮಾಡಿದ್ದೇನೆ, ಯೆಹೋವ ದೇವರು ನೀತಿವಂತನು. ಆದರೆ ನಾನೂ, ನನ್ನ ಜನರೂ ತಪ್ಪಿತಸ್ಥರು.


ಇಸ್ರಾಯೇಲರ ದೇವರಾಗಿರುವ ಯೆಹೋವ ದೇವರೇ, ನೀವು ನೀತಿವಂತರು! ನಾವು ಇಂದು ತಪ್ಪಿಸಿಕೊಂಡು ಉಳಿದಿದ್ದೇವೆ. ನಾವು ನಮ್ಮ ಅಪರಾಧಗಳ ನಿಮಿತ್ತ ನಿಮ್ಮ ಮುಂದೆ ನಿಲ್ಲಲು ಯೋಗ್ಯರಲ್ಲದಿದ್ದರೂ, ನಮ್ಮ ಅಪರಾಧಗಳೊಂದಿಗೆ ನಿಮ್ಮ ಮುಂದೆ ನಿಂತಿದ್ದೇವೆ,” ಎಂದು ಪ್ರಾರ್ಥನೆಮಾಡಿದೆ.


ದೇವರ ಕೈಕೆಲಸಗಳು ಸತ್ಯವೂ, ನ್ಯಾಯವೂ ಆಗಿವೆ; ಅವರ ಸೂತ್ರಗಳೆಲ್ಲಾ ವಿಶ್ವಾಸಕ್ಕೆ ಯೋಗ್ಯವಾದವುಗಳು.


ಹೊಲ ಕಾಯುವವರಂತೆ ಸುತ್ತಲಾಗಿ ಅವಳಿಗೆ ವಿರೋಧವಾಗಿದ್ದಾರೆ. ಏಕೆಂದರೆ ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದಾಳೆಂದು,’ ” ಎಂದು ಯೆಹೋವ ದೇವರು ಹೇಳುತ್ತಾರೆ.


ಓ ಯೆಹೋವ ದೇವರೇ, ನಾನು ನಿಮ್ಮ ಸಂಗಡ ವಾದಿಸುವಾಗ, ನೀವು ನೀತಿವಂತರೇ ಆಗಿದ್ದೀರಿ. ಆದರೂ ನಾನು ನಿಮ್ಮ ಸಂಗಡ ನ್ಯಾಯವಾದವುಗಳನ್ನು ಕುರಿತು ಮಾತನಾಡುವೆನು. ದುಷ್ಟರ ಮಾರ್ಗವು ಸಮೃದ್ಧಿಯಾಗುವುದು ಏಕೆ? ಮಹಾ ವಂಚನೆ ಮಾಡುವವರೆಲ್ಲರು ಸುಖವಾಗಿರುವುದು ಏಕೆ?


ಆಕೆಯ ವೈರಿಗಳು ಆಕೆಯ ಯಜಮಾನರಾಗಿದ್ದಾರೆ. ಆಕೆಯ ಶತ್ರುಗಳು ನೆಮ್ಮದಿಯಿಂದ ಇದ್ದಾರೆ. ಏಕೆಂದರೆ ಆಕೆಯ ಅನೇಕ ಪಾಪಗಳ ನಿಮಿತ್ತ ಯೆಹೋವ ದೇವರು ಆಕೆಯನ್ನು ಸಂಕಟಪಡಿಸಿದ್ದಾರೆ. ಆಕೆಯ ಮಕ್ಕಳು ಶತ್ರುವಿನ ಮುಂದೆ ಸೆರೆಗೆ ಹೋಗಿದ್ದಾರೆ.


“ ‘ನೀನು ನಿನ್ನ ಯೌವನದ ದಿವಸಗಳನ್ನು ಜ್ಞಾಪಕಮಾಡಿಕೊಳ್ಳದೆ, ಈ ಸಂಗತಿಗಳಿಂದ ನೀನು ನನಗೆ ಬೇಸರಪಡಿಸಿದ್ದರಿಂದ, ನಾನು ಸಹ ನಿನ್ನ ದುರ್ಮಾರ್ಗದ ಫಲವನ್ನು ನಿನ್ನ ತಲೆಗೆ ಕಟ್ಟುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ನಿನ್ನ ಇತರ ಎಲ್ಲಾ ಅಸಹ್ಯವಾದವುಗಳ ಜೊತೆಗೆ, ಈ ಅಪವಿತ್ರತೆಯನ್ನು ನೀನು ಮಾಡಲಿಲ್ಲವೇ?


ಆ ಸಮಯದ ಅಂತ್ಯದಲ್ಲಿ ನೆಬೂಕದ್ನೆಚ್ಚರನಾದ ನಾನು ನನ್ನ ಕಣ್ಣುಗಳನ್ನು ಪರಲೋಕದ ಕಡೆಗೆ ಎತ್ತಿದೆನು. ನನ್ನ ತಿಳುವಳಿಕೆ ನನಗೆ ತಿರುಗಿ ಬಂತು. ಆಗ ನಾನು ಮಹೋನ್ನತರನ್ನು ಕೊಂಡಾಡಿದೆನು. ಸದಾಕಾಲಕ್ಕೂ ಇರುವವರಾದ ಅವರನ್ನು ಗೌರವಿಸಿ, ಮಹಿಮೆ ಪಡಿಸಿದೆನು. ಅವರ ಆಡಳಿತವು ನಿತ್ಯವಾದ ಆಡಳಿತವಾಗಿದೆ. ಅವರ ರಾಜ್ಯವು ತಲತಲಾಂತರಕ್ಕೂ ಇರುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು