ದಾನಿಯೇಲ 9:1 - ಕನ್ನಡ ಸಮಕಾಲಿಕ ಅನುವಾದ1 ಅಹಷ್ವೇರೋಷನ ಮಗನೂ ಮೇದ್ಯಯ ವಂಶದವನೂ ಆದ ದಾರ್ಯಾವೆಷನ ಆಳ್ವಿಕೆಯ ಪ್ರಥಮ ವರ್ಷದಲ್ಲಿ ಬಾಬಿಲೋನ್ ರಾಜ್ಯದ ಮೇಲೆ ಅಧಿಕಾರಿಯಾಗಿದ್ದಾಗ, ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಅಹಷ್ವೇರೋಷನ ಮಗನೂ, ಮೇದ್ಯ ವಂಶದವನೂ ಕಸ್ದೀಯ ರಾಜ್ಯದ ದೊರೆತನವನ್ನು ಹೊಂದಿದವನೂ ಆದ ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಅದು, ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷ. ಈತನು ಅಹಷ್ವೇರೋಷನ ಮಗ, ಮೇದ್ಯ ವಂಶದವನು ಹಾಗು ಬಾಬಿಲೋನಿನ ರಾಜ್ಯದ ದೊರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಅಹಷ್ವೇರೋಷನ ಮಗನೂ ಮೇದ್ಯಯ ವಂಶದವನೂ ಕಸ್ದೀಯ ರಾಜ್ಯದ ದೊರೆತನವನ್ನು ಹೊಂದಿದವನೂ ಆದ ದಾರ್ಯಾವೆಷನ ಆಳಿಕೆಯ ಮೊದಲನೆಯ ವರುಷದಲ್ಲಿ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷದಂದು ನಡೆದ ಸಂಗತಿಗಳಿವು: ದಾರ್ಯಾವೆಷನು ಅಹಷ್ವೇರೋಷನೆಂಬವನ ಮಗನು. ದಾರ್ಯವೆಷನು ಮೇದ್ಯಯ ವಂಶದವನು. ಅವನು ಕಸ್ದೀಯ ರಾಜ್ಯದ ದೊರೆಯಾದನು. ಅಧ್ಯಾಯವನ್ನು ನೋಡಿ |
ಶಾರೀರಿಕ ನ್ಯೂನತೆ ಇಲ್ಲದವರಾಗಿಯೂ, ಸುಂದರವಾಗಿಯೂ, ಅವರು ಎಲ್ಲಾ ರೀತಿಯ ವಿಷಯಗಳನ್ನು ಕಲಿಯುವ ಸಾಮರ್ಥ್ಯವನ್ನು ಹೊಂದಿರಬೇಕು. ಅವರು ವಿವೇಕವುಳ್ಳವರಾಗಿಯೂ ಮತ್ತು ತ್ವರಿತವಾಗಿ ಅರ್ಥಮಾಡಿಕೊಳ್ಳುವವರಾಗಿಯೂ, ಅರಸನ ಅರಮನೆಯಲ್ಲಿ ಸೇವೆ ಮಾಡಲು ಸಾಮರ್ಥ್ಯವುಳ್ಳವರಾಗಿಯೂ ಇರುವ ಯೌವನಸ್ಥರನ್ನು ತಂದು ಬಾಬಿಲೋನಿಯರ ವಿದ್ಯೆಯನ್ನೂ, ಭಾಷೆಯನ್ನೂ ಅವರಿಗೆ ಬೋಧಿಸಬೇಕೆಂದು ಆಜ್ಞಾಪಿಸಿದನು.