ದಾನಿಯೇಲ 7:7 - ಕನ್ನಡ ಸಮಕಾಲಿಕ ಅನುವಾದ7 “ತರುವಾಯ ರಾತ್ರಿಯ ದರ್ಶನದಲ್ಲಿ ನಾನು ನೋಡಲಾಗಿ, ನಾಲ್ಕನೆಯ ಮೃಗವು ಭಯಂಕರವೂ, ಘೋರವೂ, ಬಹು ಬಲವುಳ್ಳದ್ದೂ ಆಗಿತ್ತು. ಅದಕ್ಕೆ ದೊಡ್ಡ ಕಬ್ಬಿಣದ ಹಲ್ಲುಗಳು ಇವೆ. ಅದು ತಿಂದು ತುಂಡುತುಂಡು ಮಾಡಿ, ಮಿಕ್ಕದ್ದನ್ನು ತನ್ನ ಕಾಲುಗಳ ಕೆಳಗೆ ಹಾಕಿ ತುಳಿಯಿತು. ಅದು ಮೊದಲಿನ ಎಲ್ಲಾ ಮೃಗಗಳಿಗಿಂತ ವ್ಯತ್ಯಾಸವುಳ್ಳದ್ದೂ, ಹತ್ತು ಕೊಂಬುಗಳುಳ್ಳದ್ದೂ ಆಗಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ನಾನು ರಾತ್ರಿ ಕಂಡ ಕನಸಿನಲ್ಲಿ ಸ್ವಲ್ಪ ಹೊತ್ತಿನ ಮೇಲೆ ಆಹಾ, ನಾಲ್ಕನೆಯ ಮೃಗವು ಕಾಣಿಸಿತು; ಅದು ಭಯಂಕರವಾಗಿತ್ತು, ಹೆದರಿಸುವಂಥದಾಗಿತ್ತು, ಅಧಿಕ ಬಲವುಳ್ಳದ್ದಾಗಿತ್ತು. ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು. ಅದು ನುಂಗುತ್ತಾ, ಚೂರುಚೂರು ಮಾಡುತ್ತಾ ಉಳಿದದ್ದನ್ನು ಕಾಲುಗಳಿಂದ ತುಳಿಯುತ್ತಾ ಇತ್ತು. ಅದು ಹಿಂದಿನ ಎಲ್ಲಾ ಮೃಗಗಳಿಗಿಂತ ವಿಲಕ್ಷಣವಾಗಿತ್ತು. ಅದಕ್ಕೆ ಹತ್ತು ಕೊಂಬುಗಳಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಇದಾದ ಬಳಿಕ ಆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡ ನಾಲ್ಕನೇ ಮೃಗ ಭಯಂಕರವಾಗಿತ್ತು. ಹೆದರಿಸುವಂಥದಾಗಿತ್ತು. ಅಧಿಕ ಬಲವುಳ್ಳದ್ದಾಗಿತ್ತು. ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು. ಅದು ತನ್ನ ಬಲಿಯನ್ನು ತುಂಡುತುಂಡಾಗಿಸಿ ಕಬಳಿಸುತ್ತಿತ್ತು. ಮಿಕ್ಕದ್ದನ್ನು ಕಾಲುಗಳಿಂದ ತುಳಿಯುತ್ತಾ ಇತ್ತು. ಅದು ಮುಂಚಿನ ಮೃಗಗಳಿಗಿಂತ ವಿಲಕ್ಷಣವಾಗಿತ್ತು. ಅದಕ್ಕೆ ಹತ್ತು ಕೊಂಬುಗಳಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ನಾನು ರಾತ್ರಿ ಕಂಡ ಕನಸಿನಲ್ಲಿ ಸ್ವಲ್ಪ ಹೊತ್ತಿನ ಮೇಲೆ ಆಹಾ, ನಾಲ್ಕನೆಯ ಮೃಗವು ಕಾಣಿಸಿತು; ಅದು ಭಯಂಕರ, ಹೆದರಿಸುವಂಥದು, ಅಧಿಕಬಲವುಳ್ಳದ್ದು; ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು; ಅದು ನುಂಗುತ್ತಾ ಚೂರುಚೂರು ಮಾಡುತ್ತಾ ವಿುಕ್ಕದ್ದನ್ನು ಕಾಲುಗಳಿಂದ ತುಳಿಯುತ್ತಾ ಇತ್ತು; ಅದು ಮುಂಚಿನ ಎಲ್ಲಾ ಮೃಗಗಳಿಗಿಂತ ವಿಲಕ್ಷಣವಾಗಿತ್ತು; ಅದಕ್ಕೆ ಹತ್ತು ಕೊಂಬುಗಳಿದ್ದವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 “ನನಗಾದ ರಾತ್ರಿಯ ದರ್ಶನದಲ್ಲಿ ನಾಲ್ಕನೆ ಮೃಗವನ್ನು ಕಂಡೆ. ಅದು ಅತ್ಯಂತ ಬಲಿಷ್ಠವಾಗಿತ್ತು ಮತ್ತು ಭಯಂಕರವಾಗಿತ್ತು. ಅದು ಅತಿ ಶಕ್ತಿಶಾಲಿಯಾಗಿತ್ತು. ಅದಕ್ಕೆ ದೊಡ್ಡದೊಡ್ಡ ಕಬ್ಬಿಣದ ಹಲ್ಲುಗಳಿದ್ದವು. ಈ ಪ್ರಾಣಿಯು ತಾನು ಬೇಟೆಯಾಡಿದ ಪಶುವನ್ನು ತಂಡುತುಂಡು ಮಾಡುತ್ತಾ ತಿನ್ನುತ್ತಿತ್ತು; ಮಿಕ್ಕಿದ್ದನ್ನು ಅದು ತುಳಿಯುತ್ತಿತ್ತು. ಈ ನಾಲ್ಕನೆಯ ಪ್ರಾಣಿಯು ನಾನು ಅದಕ್ಕೂ ಮುಂಚೆ ನೋಡಿದ ಮೃಗಗಳಿಗಿಂತ ಭಿನ್ನವಾಗಿತ್ತು. ಈ ಮೃಗಕ್ಕೆ ಹತ್ತು ಕೊಂಬುಗಳಿದ್ದವು. ಅಧ್ಯಾಯವನ್ನು ನೋಡಿ |