Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 5:4 - ಕನ್ನಡ ಸಮಕಾಲಿಕ ಅನುವಾದ

4 ಅವರು ದ್ರಾಕ್ಷಾರಸವನ್ನು ಕುಡಿದು ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಸ್ತುತಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ದ್ರಾಕ್ಷಾರಸವನ್ನು ಕುಡಿದು ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣ, ಮರಕಲ್ಲುಗಳ ದೇವರುಗಳನ್ನು ಸ್ತುತಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಕುಡಿದುಕೊಂಡೇ ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ತಮ್ಮ ದೇವರುಗಳನ್ನು ಆರಾಧಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ದ್ರಾಕ್ಷಾರಸವನ್ನು ಕುಡಿದು ಬಂಗಾರಬೆಳ್ಳಿ ತಾಮ್ರಕಬ್ಬಿಣ ಮರಕಲ್ಲುಗಳ ದೇವರುಗಳನ್ನು ಸ್ತುತಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಅವರು ಕುಡಿಯುವಾಗ ತಮ್ಮ ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಸ್ತುತಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 5:4
21 ತಿಳಿವುಗಳ ಹೋಲಿಕೆ  

ಪರಲೋಕದ ಒಡೆಯನಿಗೆ ವಿರೋಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ. ಅವರ ಆಲಯದ ಪಾತ್ರೆಗಳನ್ನು ನಿನ್ನ ಸನ್ನಿಧಿಗೆ ತಂದರು. ಆಗ ನೀನು ನಿನ್ನ ಪ್ರಧಾನರು ಮತ್ತು ಪತ್ನಿಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು, ಬುದ್ಧಿ, ಕಣ್ಣು ಕಿವಿಗಳಿಲ್ಲದ ಬೆಳ್ಳಿಬಂಗಾರ ಕಂಚು ಕಬ್ಬಿಣ ಮರ ಕಲ್ಲುಗಳ ದೇವರುಗಳನ್ನು ಸ್ತುತಿಸಿದಿರಿ. ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗತಿಗಳು ಯಾರ ಅಧೀನದಲ್ಲಿವೆಯೋ, ಆ ದೇವರನ್ನು ಘನಪಡಿಸಲೇ ಇಲ್ಲ.


ಮರಕ್ಕೆ, ‘ಎಚ್ಚರವಾಗು!’ ಮೂಕವಾದ ಕಲ್ಲಿಗೆ, ‘ಎದ್ದೇಳು!’ ಎಂದು ಹೇಳುವವನಿಗೆ ಕಷ್ಟ! ಅದು ಮಾರ್ಗದರ್ಶನ ನೀಡುವುದೇ? ಅದು ಬಂಗಾರ, ಬೆಳ್ಳಿಯಿಂದ ಹೊದಿಸಿದ್ದಾರೆ. ಆದರೆ ಅದರಲ್ಲಿ ಉಸಿರು ಎಷ್ಟು ಮಾತ್ರವೂ ಇಲ್ಲ.”


“ನಾವು ದೇವರ ಮಕ್ಕಳಾಗಿರುವುದರಿಂದ, ಮಾನವ ಕಲ್ಪನೆ, ಕುಶಲತೆಯಿಂದ ರೂಪಿಸಿದ ಬೆಳ್ಳಿ, ಬಂಗಾರ, ಶಿಲೆಯ ಮೂರ್ತಿಯಂತೆ ದೇವರು ಇದ್ದಾರೆಂದು ನಾವು ಭಾವಿಸಬಾರದು.


ನಾನೇ ಯೆಹೋವ ದೇವರು, ಅದೇ ನನ್ನ ಹೆಸರು. ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಇಲ್ಲವೆ ನನ್ನ ಸ್ತುತಿಯನ್ನು ಎರಕದ ವಿಗ್ರಹಗಳಿಗೂ ಕೊಡೆನು.


ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸರನ್ನು ಸ್ತುತಿಸಿ, ಹೆಚ್ಚಿಸಿ ಘನಪಡಿಸುತ್ತೇನೆ. ಅವರ ಕ್ರಿಯೆಗಳೆಲ್ಲಾ ಸತ್ಯವೇ. ಅವರ ಮಾರ್ಗಗಳು ನ್ಯಾಯವೇ. ಗರ್ವದಲ್ಲಿ ನಡೆಯುವವರನ್ನು ಅವರೇ ತಗ್ಗಿಸಬಲ್ಲರು.


ಕೆತ್ತಿದ ವಿಗ್ರಹಗಳಲ್ಲಿ ಭರವಸವಿಟ್ಟು, ‘ನೀವೇ ನಮ್ಮ ದೇವರುಗಳು,’ ಎಂದು ಹೇಳುವವರು ಹಿಂದೆ ಬಿದ್ದು, ನಾಚಿಕೆಗೆ ಈಡಾಗುವರು.


ದಾನಿಯೇಲನು ಅರಸನ ಭೋಜನದ ಪಾಲಿನಿಂದಲಾದರೂ, ಅವನು ಕುಡಿಯುವ ದ್ರಾಕ್ಷಾರಸದಿಂದಾದರೂ ತನ್ನನ್ನು ಅಶುದ್ಧಪಡಿಸಿಕೊಳ್ಳುವುದಿಲ್ಲವೆಂದು ತನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡನು. ಆದ್ದರಿಂದ ತಾನು ಅಶುದ್ಧನಾಗದ ಹಾಗೆ ಕಂಚುಕಿಯರ ಯಜಮಾನನನ್ನು ಬೇಡಿಕೊಂಡನು.


ಆಗ ಅವರು ಯೆರೂಸಲೇಮಿನ ದೇವರ ಆಲಯದೊಳಗಿಂದ ತಂದಿದ್ದ ಬಂಗಾರದ ಪಾತ್ರೆಗಳನ್ನು ತಂದರು. ಅರಸನೂ ಅವರ ಪ್ರಧಾನರೂ ಪತ್ನಿ ಮತ್ತು ಉಪಪತ್ನಿಯರೂ ಅವುಗಳಲ್ಲಿ ಕುಡಿದರು.


ಕೂಡಲೇ ಒಬ್ಬ ಮನುಷ್ಯನ ಕೈಬೆರಳುಗಳು ಬಂದು ದೀಪಸ್ತಂಭಕ್ಕೆ ಎದುರಾಗಿ ಅರಮನೆಯ ಗೋಡೆಯ ಮೇಲೆ ಬರೆಯಲಾರಂಭಿಸಿದವು. ಅರಸನು ಆ ಬರೆಯುವ ಕೈಭಾಗವನ್ನು ನೋಡಿದನು.


ಆದ್ದರಿಂದ ಸೆರೆಗೆ ಕರೆದೊಯ್ಯುವವರಲ್ಲಿ ನೀವು ಮೊದಲಿಗರಾಗಿರುವಿರಿ, ಭೋಗ ಮಾಡುವವರ ಹರ್ಷ ಧ್ವನಿಯು ಗತಿಸಿ ಹೋಗುವುದು.


ಆಗ ಅದೋನೀಯನ ಸಂಗಡ ಔತಣಕ್ಕೆ ಬಂದಿದ್ದ ಎಲ್ಲರೂ ಹೆದರಿಕೊಂಡು ಎದ್ದು, ತಮ್ಮ ತಮ್ಮ ಸ್ಥಳಗಳಿಗೆ ಹೊರಟು ಹೋದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು