Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 4:3 - ಕನ್ನಡ ಸಮಕಾಲಿಕ ಅನುವಾದ

3 ಅವರ ಸೂಚಕಕಾರ್ಯಗಳು ಎಷ್ಟೋ ದೊಡ್ಡವುಗಳು! ಅವರ ಅದ್ಭುತಗಳು ಪರಾಕ್ರಮವಾದವುಗಳು! ಅವರ ರಾಜ್ಯವು ನಿತ್ಯವಾದ ರಾಜ್ಯವು, ಅವರ ಆಡಳಿತವು ತಲತಲಾಂತರಕ್ಕೂ ಇರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆತನ ಮಹತ್ತುಗಳು ಎಷ್ಟೋ ಅತಿಶಯ! ಆತನ ಅದ್ಭುತಗಳು ಎಷ್ಟೋ ವಿಶೇಷ! ಆತನ ರಾಜ್ಯವು ಶಾಶ್ವತರಾಜ್ಯ, ಆತನ ಆಳ್ವಿಕೆಯು ತಲತಲಾಂತರಕ್ಕೂ ಸ್ಥಿರವಾಗಿ ನಿಲ್ಲುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ದೇವರ ಸೂಚಕಕಾರ್ಯಗಳು ಎಷ್ಟೋ ಅತಿಶಯ! ಅವರ ಅದ್ಭುತಗಳು ಎಷ್ಟೋ ಅಪಾರ! ಅವರ ರಾಜ್ಯ ಶಾಶ್ವತ ಸಾಮ್ರಾಜ್ಯ; ಅವರ ಆಳ್ವಿಕೆ ತಲತಲಾಂತರಕ್ಕೂ ಸ್ಥಿರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಆತನ ಮಹತ್ತುಗಳು ಎಷ್ಟೋ ಅತಿಶಯ! ಆತನ ಅದ್ಭುತಗಳು ಎಷ್ಟೋ ವಿಶೇಷ! ಆತನ ರಾಜ್ಯವು ಶಾಶ್ವತರಾಜ್ಯ, ಆತನ ಆಳಿಕೆಯು ತಲತಲಾಂತರಕ್ಕೂ ನಿಲ್ಲುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ದೇವರು ಅಚ್ಚರಿಗೊಳಿಸುವ ಅದ್ಭುತಕಾರ್ಯಗಳನ್ನು ಮಾಡಿದ್ದಾನೆ. ದೇವರು ಅದ್ಭುತಕಾರ್ಯಗಳನ್ನು ಮಾಡಿದ್ದಾನೆ. ದೇವರ ಸಾಮ್ರಾಜ್ಯವು ಶಾಶ್ವತವಾದದ್ದು. ದೇವರ ಆಳ್ವಿಕೆಯು ಎಲ್ಲಾ ತಲೆಮಾರುಗಳಲ್ಲಿಯೂ ಮುಂದುವರೆಯುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 4:3
29 ತಿಳಿವುಗಳ ಹೋಲಿಕೆ  

ನಿಮ್ಮ ರಾಜ್ಯವು ಶಾಶ್ವತವಾದ ರಾಜ್ಯವಾಗಿದೆ; ನಿಮ್ಮ ಅಧಿಪತ್ಯವು ಎಲ್ಲಾ ತಲತಲಾಂತರಗಳಲ್ಲಿ ಇರುವುದು. ಯೆಹೋವ ದೇವರು ತಮ್ಮ ಎಲ್ಲಾ ಪ್ರತಿಜ್ಞೆಗಳಲ್ಲಿ ನಂಬಿಗಸ್ತರಾಗಿರುತ್ತಾರೆ. ಎಲ್ಲಾ ಕಾರ್ಯಗಳಲ್ಲಿಯೂ ಅವರ ಅನುಗ್ರಹ ಉಳಿದಿದೆ.


“ಆ ಅರಸರ ದಿವಸಗಳಲ್ಲಿ ಪರಲೋಕದ ದೇವರು ಎಂದಿಗೂ ನಾಶವಾಗದ ರಾಜ್ಯವನ್ನು ಸ್ಥಾಪಿಸುವರು. ಅದು ಬೇರೆ ಜನರಿಗೆ ಸೇರಿ ಹೋಗುವುದಿಲ್ಲ. ಅದು ಆ ರಾಜ್ಯಗಳನ್ನೆಲ್ಲಾ ಧ್ವಂಸಮಾಡಿ, ಮುಗಿಸಿ, ತಾನು ಎಂದೆಂದಿಗೂ ನಿಲ್ಲುವುದು.


ಯೆಹೋವ ದೇವರೇ, ನೀವೇ ನನ್ನ ದೇವರು. ನೀವು ಸತ್ಯ ಪ್ರಾಮಾಣಿಕತೆಗಳನ್ನು ಆಲೋಚಿಸಿ, ಅನುಸರಿಸಿ ಆದಿಸಂಕಲ್ಪಗಳನ್ನು ನೆರವೇರಿಸುತ್ತಾ, ಅದ್ಭುತಕಾರ್ಯಗಳನ್ನು ನಡೆಸಿದ ಕಾರಣ ನಿಮ್ಮನ್ನು ಉನ್ನತಪಡಿಸಿ, ನಿಮ್ಮ ನಾಮವನ್ನು ಕೊಂಡಾಡುವೆನು.


ಆತನನ್ನು ಸಕಲ ಪ್ರಜೆ, ಜನಾಂಗ, ಭಾಷೆಗಳವರು ಸೇವಿಸುವ ಹಾಗೆ ಆತನಿಗೆ ಅಧಿಕಾರವು, ಮಹತ್ವವು, ರಾಜ್ಯವು ಇವುಗಳನ್ನು ಕೊಡಲಾಯಿತು. ಈತನ ಅಧಿಕಾರವು ಎಂದಿಗೂ ಮುಗಿಯದ ನಿತ್ಯ ಅಧಿಕಾರವುಳ್ಳದ್ದು. ಈತನ ರಾಜ್ಯವು ನಾಶವಾಗದಂಥ ರಾಜ್ಯವಾಗಿದೆ.


ಏಳನೆಯ ದೇವದೂತನು ತುತೂರಿಯನ್ನು ಊದಿದನು. ಆಗ ಪರಲೋಕದಲ್ಲಿ ಮಹಾ ಧ್ವನಿಗಳುಂಟಾಗಿ, ಹೀಗೆ ಹೇಳಿದವು: “ಲೋಕದ ರಾಜ್ಯವು ನಮ್ಮ ದೇವರ ಮತ್ತು ಅವರಿಗೆ ಸೇರಿದ ಕ್ರಿಸ್ತ ಯೇಸುವಿನ ರಾಜ್ಯವಾಯಿತು, ಈ ಕ್ರಿಸ್ತ ಯೇಸುವೇ ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವರು.”


ತಂದೆ ದೇವರು ತಮ್ಮ ಪುತ್ರ ಆಗಿರುವವರ ವಿಷಯದಲ್ಲಿ ಹೀಗೆ ಹೇಳಿದ್ದಾರೆ: “ದೇವರೇ, ನಿಮ್ಮ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು. ನೀತಿದಂಡವೇ ನಿಮ್ಮ ರಾಜದಂಡವಾಗಿದೆ.


ನಿತ್ಯವಾದ ಅರಸರೂ ಅಮರರೂ ಅದೃಶ್ಯರೂ ಆಗಿರುವ ಜ್ಞಾನಿಯಾದ ಒಬ್ಬರೇ ದೇವರಿಗೆ ಯುಗಯುಗಾಂತರಗಳಲ್ಲಿಯೂ ಘನವೂ ಮಹಿಮೆಯೂ ಉಂಟಾಗಲಿ. ಆಮೆನ್.


ರಾಜ್ಯವೂ, ದೊರೆತನವೂ, ಆಕಾಶದ ಕೆಳಗಿರುವ ಪೂರ್ತಿ ರಾಜ್ಯಗಳ ಮಹತ್ತೂ ಮಹೋನ್ನತನ ಪರಿಶುದ್ಧವಾದ ಜನರಿಗೆ ದೊರಕುವುದು. ಆತನ ರಾಜ್ಯವು ನಿತ್ಯವಾದ ರಾಜ್ಯ. ಎಲ್ಲಾ ದೊರೆತನಗಳೂ ಆತನನ್ನು ಸೇವಿಸುವುವು ಮತ್ತು ವಿಧೇಯವಾಗಿರುವುವು.’


ಒಬ್ಬನು ಬೋಧಿಸುವವನಾದರೆ ದೇವರ ವಾಕ್ಯವನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರಿಂದ ಶಕ್ತಿಯನ್ನು ಹೊಂದಿದವನಾಗಿ ಮಾಡಲಿ. ಇದರಿಂದ ಎಲ್ಲದರಲ್ಲಿ ಕ್ರಿಸ್ತ ಯೇಸುವಿನ ಮೂಲಕ ದೇವರಿಗೆ ಮಹಿಮೆಯೂ ಸ್ತೋತ್ರವೂ ಅಧಿಪತ್ಯವೂ ಯುಗಯುಗಾಂತರಗಳಲ್ಲಿ ಇರಲಿ. ಆಮೆನ್.


ದೇವರು ಸಹ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ನಾನಾ ವಿಧವಾದ ಮಹತ್ಕಾರ್ಯಗಳಿಂದಲೂ ತಮ್ಮ ಚಿತ್ತಾನುಸಾರವಾಗಿ ದಯಪಾಲಿಸಿದ ಪವಿತ್ರಾತ್ಮರ ವರದಾನಗಳಿಂದಲೂ ಸಾಕ್ಷಿನೀಡಿ ದೃಢಪಡಿಸಿದ್ದಾರೆ.


ಆದರೆ ಯೆಹೋವ ದೇವರು ನಿಜವಾದ ದೇವರಾಗಿದ್ದಾರೆ. ಅವರು ಜೀವಸ್ವರೂಪರಾದ ದೇವರೂ, ನಿತ್ಯನಾದ ಅರಸರೂ ಆಗಿದ್ದಾರೆ. ಅವರ ರೌದ್ರದಿಂದ ಭೂಮಿ ಕಂಪಿಸುವುದು. ಅವರ ಉಗ್ರತೆಯನ್ನು ಜನಾಂಗಗಳು ತಾಳಲಾರವು.


ಇವರು ದೇವರ ಸೂಚಕಕಾರ್ಯಗಳನ್ನೂ, ಹಾಮನ ದೇಶದಲ್ಲಿ ಅದ್ಭುತಗಳನ್ನೂ ಅವರೊಳಗೆ ತೋರಿಸಿದರು.


“ ‘ಈ ತೀರ್ಮಾನವು ದೂತರಿಂದ ಪ್ರಕಟವಾಯಿತು, ಪರಿಶುದ್ಧರು ಅಂತಿಮ ನಿರ್ಣಯವನ್ನು ಘೋಷಿಸುವರು, ಮಹೋನ್ನತರು ಜನರ ರಾಜ್ಯಗಳ ಮೇಲೆ ಸರ್ವಾಧಿಕಾರಿಯಾಗಿರುವರೆಂದೂ, ರಾಜ್ಯಗಳನ್ನು ತಮ್ಮ ಮನಸ್ಸಿಗೆ ಬಂದವರಿಗೆ ಕೊಡುವರೆಂದೂ, ಅವುಗಳ ಮೇಲೆ ಕೀಳಾದವರನ್ನು ನೇಮಿಸುವರೆಂದೂ ಇದರಿಂದ ಜೀವಿತರು ತಿಳಿದುಕೊಳ್ಳುವರು.’


ಈ ವಿವೇಕವು ಸಹ ಅತಿಶಯ ಆಲೋಚನಾಪರರೂ, ಕಾರ್ಯಸಾಧಕ ಜ್ಞಾನ ಶ್ರೇಷ್ಠರೂ ಆಗಿರುವ ಸೇನಾಧೀಶ್ವರ ಯೆಹೋವ ದೇವರಿಂದಲೇ ಹೊರಡುತ್ತದೆ.


ಅವರ ಆಡಳಿತದ ಶ್ರೇಷ್ಠತೆ ಮತ್ತು ಶಾಂತಿಗೆ ಅಂತ್ಯವಿಲ್ಲ. ಅವರ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವುದು, ದಾವೀದನ ರಾಜ್ಯವು ಇಂದಿನಿಂದ ಯಾವಾಗಲೂ ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವುದು, ಸೇನಾಧೀಶ್ವರ ಯೆಹೋವ ದೇವರ ಅನುಗ್ರಹವು ಇದನ್ನು ನೆರವೇರಿಸುವುದು.


ಯೆಹೋವ ದೇವರೇ, ನಿಮ್ಮ ಕೆಲಸಗಳು ಎಷ್ಟೋ ಇವೆ! ಅವುಗಳನ್ನೆಲ್ಲಾ ಜ್ಞಾನದಿಂದ ಉಂಟುಮಾಡಿದ್ದೀರಿ, ಭೂಮಿಯು ನಿಮ್ಮ ಸಂಪತ್ತಿನಿಂದ ತುಂಬಿದೆ.


ಯೆಹೋವ ದೇವರೇ, ನಿಮ್ಮ ಕೃತ್ಯಗಳು ಎಷ್ಟೋ ಮಹತ್ತಾದದ್ದು. ನಿಮ್ಮ ಯೋಚನೆಗಳು ಬಹು ಆಳವಾಗಿವೆ.


ನೀವು ದೊಡ್ಡವರೂ ಅದ್ಭುತಗಳನ್ನು ಮಾಡುವವರೂ ಆಗಿದ್ದೀರಿ. ನೀವೊಬ್ಬರೇ ದೇವರು.


ನೀವು ಸಮುದ್ರದಲ್ಲಿ ಮಾರ್ಗಮಾಡಿದಿರಿ. ಮಹಾಜಲರಾಶಿಗಳನ್ನು ದಾಟಿದಿರಿ. ಆದರೂ ನಿಮ್ಮ ಹೆಜ್ಜೆಯ ಗುರುತು ಕಾಣಲಿಲ್ಲ.


ಅದ್ಭುತಗಳನ್ನು ಮಾಡುವುದರಲ್ಲಿ ಸರಿಸಾಟಿಯಿಲ್ಲದ ಇಸ್ರಾಯೇಲರ ದೇವರಾಗಿರುವ ಯೆಹೋವ ದೇವರಿಗೆ ಸ್ತೋತ್ರವಾಗಲಿ.


ದೇವರು ತಮ್ಮ ಶಕ್ತಿಯಿಂದ ಎಂದೆಂದಿಗೂ ಆಳುವವರಾಗಿದ್ದಾರೆ. ದೇವರ ಕಣ್ಣುಗಳು ಜನಾಂಗಗಳನ್ನು ದೃಷ್ಟಿಸುತ್ತವೆ; ದೇವರಿಗೆ ವಿರೋಧವಾಗಿ ದಂಗೆಕೋರರು ಏಳದಿರಲಿ.


“ಅಧಿಕಾರ ಮತ್ತು ವಿಸ್ಮಯ ದೇವರಿಗೆ ಸೇರಿದೆ; ಉನ್ನತಲೋಕದಲ್ಲಿ ಸಮಾಧಾನವನ್ನು ಸ್ಥಾಪಿಸಿದವರು ದೇವರೇ.


ನಿಮ್ಮ ದೇವರಾದ ಯೆಹೋವ ದೇವರು ಈಜಿಪ್ಟಿನಲ್ಲಿ ನಿಮ್ಮ ಕಣ್ಣ ಮುಂದೆಯೇ ನಿಮಗೆ ಮಾಡಿದ್ದೆಲ್ಲದರ ಹಾಗೆ ಯಾವ ದೇವರು ಒಂದು ಜನಾಂಗವನ್ನು ಮತ್ತೊಂದು ಜನಾಂಗದಿಂದ ತಮಗಾಗಿ ಆಯ್ದು ತೆಗೆದುಕೊಳ್ಳುವುದಕ್ಕೆ ಪರೀಕ್ಷೆಗಳು, ಗುರುತುಗಳು, ಅದ್ಭುತಗಳು ಇವುಗಳ ಮೂಲಕವಾಗಿಯೂ, ಯುದ್ಧದಿಂದಲೂ, ಭುಜಬಲದಿಂದಲೂ, ಚಾಚಿದ ತೋಳಿನಿಂದಲೂ, ದೊಡ್ಡ ಭಯಗಳಿಂದಲೂ ಪ್ರಯತ್ನ ಮಾಡಿದರೋ?


ಆಹಾ! ದೇವರ ಐಶ್ವರ್ಯ, ಜ್ಞಾನ ಮತ್ತು ವಿವೇಕಗಳು ಎಷ್ಟು ಆಳವಾದವುಗಳು! ದೇವರ ತೀರ್ಮಾನಗಳು ಪರೀಶೀಲಿಸಲು ಅಸಾಧ್ಯವಾದದ್ದು! ದೇವರ ಮಾರ್ಗಗಳನ್ನು ಕಂಡುಹಿಡಿಯುವುದು ಅಪರಿಮಿತವಾದದ್ದು!


ಆದ್ದರಿಂದ, ಅರಸನು ತನ್ನ ಕನಸನ್ನು ತಿಳಿಸಲು ಮಂತ್ರಗಾರರನ್ನೂ, ಜೋತಿಷ್ಯರನ್ನೂ, ಮಾಟಗಾರರನ್ನೂ, ಪಂಡಿತರನ್ನೂ ಕರೆಯಲು ಆಜ್ಞಾಪಿಸಿದನು. ಇವರೆಲ್ಲರೂ ಬಂದು ಅರಸನ ಮುಂದೆ ನಿಂತರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು