Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 4:14 - ಕನ್ನಡ ಸಮಕಾಲಿಕ ಅನುವಾದ

14 ಅವನು ಗಟ್ಟಿಯಾಗಿ ಕೂಗಿ: ‘ಮರವನ್ನು ಕಡಿಯಿರಿ. ಅದರ ಕೊಂಬೆಗಳನ್ನು ಕತ್ತರಿಸಿ, ಅದರ ಎಲೆಗಳನ್ನು ಉದುರಿಸಿ, ಅದರ ಫಲವನ್ನು ಚದುರಿಸಿಬಿಡಿರಿ. ಮೃಗಗಳು ಅದರ ಕೆಳಗಿನಿಂದಲೂ, ಪಕ್ಷಿಗಳು ಅದರ ಕೊಂಬೆಗಳಿಂದಲೂ ಹೋಗಿಬಿಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ವೃಕ್ಷವನ್ನು ಕಡಿಯಿರಿ, ಕೊಂಬೆಗಳನ್ನು ಕತ್ತರಿಸಿರಿ, ಎಲೆಗಳನ್ನು ಉದುರಿಸಿರಿ, ಹಣ್ಣುಗಳನ್ನು ಚೆಲ್ಲಿರಿ; ಮೃಗಗಳು ನೆರಳನ್ನು ಬಿಟ್ಟುಬಿಡಲಿ, ಪಕ್ಷಿಗಳು ರೆಂಬೆಗಳನ್ನು ತೊರೆದು ಹೋಗಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಆ ಮರವನ್ನು ಕಡಿಯಿರಿ, ಕೊಂಬೆಗಳನ್ನು ಕತ್ತರಿಸಿ, ಎಲೆಗಳನ್ನು ಉದುರಿಸಿ, ಹಣ್ಣುಗಳನ್ನು ಕಿತ್ತುಬಿಸಾಡಿ. ಮೃಗಗಳು ಅದರ ನೆರಳನ್ನು ಬಿಟ್ಟು ತೆರಳಲಿ, ಪಕ್ಷಿಗಳು ರೆಂಬೆಗಳನ್ನು ತೊರೆದುಹೋಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ವೃಕ್ಷವನ್ನು ಕಡಿಯಿರಿ, ಕೊಂಬೆಗಳನ್ನು ಕತ್ತರಿಸಿರಿ, ಎಲೆಗಳನ್ನು ಉದುರಿಸಿರಿ, ಹಣ್ಣುಗಳನ್ನು ಚೆಲ್ಲಿರಿ; ಮೃಗಗಳು ನೆರಳನ್ನು ಬಿಟ್ಟುಬಿಡಲಿ, ಪಕ್ಷಿಗಳು ರೆಂಬೆಗಳನ್ನು ತೊರೆದು ಹೋಗಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಅವನು ಮಹಾ ಧ್ವನಿಯಿಂದ, ‘ಮರವನ್ನು ಕಡಿದುಹಾಕಿರಿ; ಅದರ ಕೊಂಬೆಗಳನ್ನು ಕಡಿದುಹಾಕಿರಿ; ಅದರ ಎಲೆಗಳನ್ನು ಕಿತ್ತುಹಾಕಿರಿ; ಹಣ್ಣುಗಳನ್ನು ಸುತ್ತಲೂ ಉದುರಿಸಿಬಿಡಿ. ಮರದ ಕೆಳಗೆ ಇದ್ದ ಪ್ರಾಣಿಗಳು ಓಡಿಹೋಗುವವು. ಅದರ ಕೊಂಬೆಗಳಲ್ಲಿ ವಾಸವಾಗಿದ್ದ ಪಕ್ಷಿಗಳು ಹಾರಿಹೋಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 4:14
19 ತಿಳಿವುಗಳ ಹೋಲಿಕೆ  

ಮರಗಳ ಬೇರಿಗೆ ಈಗಾಗಲೇ ಕೊಡಲಿ ಬಿದ್ದಿದೆ, ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕಲಾಗುವುದು.


“ಪರಿಶುದ್ಧನಾದ ಒಬ್ಬನು ಪರಲೋಕದಿಂದ ಇಳಿದುಬಂದು, ‘ಮರವನ್ನು ಕಡಿದು ನಾಶಮಾಡಿರಿ. ಆದರೆ ಅದರ ಬೇರಿನ ಮೋಟನ್ನು ನೆಲದಲ್ಲಿ ಉಳಿಸಿ, ಮೋಟನ್ನು ಕಬ್ಬಿಣ ಮತ್ತು ಕಂಚುಗಳಿಂದ ಕಟ್ಟಿ, ಬಯಲಿನ ಎಳೆಯ ಹುಲ್ಲಿನಲ್ಲಿಯೂ, ಬೇರುಗಳನ್ನು ಭೂಮಿಯಲ್ಲಿಯೂ ಬಿಡಿರಿ. ಅವನು ಆಕಾಶದ ಮಂಜಿನಿಂದ ತೇವವಾಗಲಿ. ಏಳು ಕಾಲಗಳು ಕಳೆಯುವ ತನಕ ಅವನು ಕಾಡುಮೃಗಗಳ ಹಾಗೆ ಜೀವಿಸಲಿ, ಎಂದು ಸಾರುವುದನ್ನು ಅರಸನಾದ ನೀನು ನೋಡಿದೆಯಲ್ಲಾ.’


ಮರಗಳ ಬೇರಿಗೆ ಈಗಾಗಲೇ ಕೊಡಲಿ ಬಿದ್ದಿದೆ, ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕಲಾಗುವುದು,” ಎಂದು ಹೇಳಿದನು.


ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು.


ಅದರ ಎಲೆಗಳು ಅಂದವಾಗಿದ್ದವು. ಅದರ ಫಲವು ಬಹಳವಾಗಿತ್ತು. ಅದರಲ್ಲಿ ಎಲ್ಲರಿಗೂ ಆಹಾರವಿತ್ತು. ಕಾಡುಮೃಗಗಳಿಗೆ ಅದರ ಕೆಳಗೆ ನೆರಳಲ್ಲಿ ಆಶ್ರಯ ದೊರಕುತ್ತಿತ್ತು. ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಿಸುತ್ತಿದ್ದವು. ಎಲ್ಲಾ ಜೀವಿಗಳಿಗೂ ಅದರಿಂದಲೇ ಆಹಾರ ದೊರಕುತ್ತಿತ್ತು.


ಆಗ ಘೋಷಣೆ ಮಾಡುವವರು ಗಟ್ಟಿಯಾಗಿ ಕೂಗಿ, “ಪ್ರಜೆಗಳೇ, ಜನಾಂಗಗಳೇ, ವಿವಿಧ ಭಾಷೆಯವರೇ


ಅವನು ಮಹಾಧ್ವನಿಯಿಂದ: “ ‘ಬಿದ್ದಳು! ಬಾಬಿಲೋನ್ ಮಹಾನಗರಿಯು ಬಿದ್ದಳು!’ ಆಕೆಯು ದೆವ್ವಗಳಿಗೆ ವಾಸಸ್ಥಾನವೂ ಎಲ್ಲಾ ದುರಾತ್ಮಗಳಿಗೂ ಅಶುದ್ಧವಾದ ಹಾಗೂ ಅಸಹ್ಯವಾದ ಪ್ರತಿಯೊಂದು ಪ್ರಾಣಿಪಕ್ಷಿಗಳಿಗೂ ನಿವಾಸವಾಗಿದ್ದಾಳೆ.


ಸಿಂಹದ ಘರ್ಜನೆಯಂತೆ ಮಹಾ ಸ್ವರದಿಂದ ಕೂಗಿದನು. ಅವನು ಕೂಗಿದಾಗ, ಏಳು ಗುಡುಗುಗಳು ಮಾತನಾಡಿದವು.


ಆದರೆ ಅವನ ಹೃದಯವು ಹೆಮ್ಮೆಯಿಂದ ಉಬ್ಬಿಕೊಂಡಾಗ ಮತ್ತು ಅವನ ಹೃದಯವು ಗಟ್ಟಿಯಾದಾಗ, ಅವನನ್ನು ಸಿಂಹಾಸನದಿಂದ ತೆಗೆದುಹಾಕಲಾಯಿತು ಮತ್ತು ಅವನ ಪ್ರತಿಷ್ಠೆಯನ್ನು ಕಿತ್ತುಕೊಳ್ಳಲಾಯಿತು.


“ ‘ನಾವು ಬಾಬಿಲೋನನ್ನು ವಾಸಿಮಾಡಲು ಪ್ರಯತ್ನಿಸಿದೆವು; ಆದರೆ ಅದು ವಾಸಿಯಾಗಲಿಲ್ಲ; ಅದನ್ನು ಬಿಡು, ನಮ್ಮ ಸ್ವಂತ ದೇಶಗಳಿಗೆ ಹೋಗೋಣ; ಅದರ ನ್ಯಾಯ ತೀರ್ವಿಕೆಯು ಆಕಾಶಗಳಿಗೆ ಮುಟ್ಟುತ್ತದೆ; ಆಕಾಶಗಳವರೆಗೂ ಏರುತ್ತದೆ.’


“ಬಾಬಿಲೋನಿನೊಳಗಿಂದ ಓಡಿಹೋಗಿರಿ; ಒಬ್ಬೊಬ್ಬನು ತನ್ನ ತನ್ನ ಪ್ರಾಣವನ್ನು ತಪ್ಪಿಸಿಕೊಳ್ಳಲಿ; ಅದರ ಪಾಪದಲ್ಲಿ ನಾಶವಾಗಬೇಡಿರಿ; ಏಕೆಂದರೆ ಇದು ಯೆಹೋವ ದೇವರ ಪ್ರತಿದಂಡನೆಯ ಕಾಲವು; ಆತನೇ ಅದಕ್ಕೆ ಮುಯ್ಯಿಗೆ ಮುಯ್ಯಿ ಕೊಡುತ್ತಾನೆ.


ಹೆತ್ತ ಕರುಳು ಅಂಥವರನ್ನು ಮರೆತು ಬಿಡುವುದು; ಹುಳವು ಅಂಥವರ ಹೆಣವನ್ನು ರುಚಿಯಿಂದ ತಿಂದುಬಿಡುವುದು; ಇನ್ನು ಅವರ ನೆನಪು ಇರುವುದಿಲ್ಲ; ಮರದ ಹಾಗೆ ದುಷ್ಟರು ಮುರಿದುಹೋಗುವರು.


“ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಅವನು ಎತ್ತರವಾಗಿ ಬೆಳೆದು ತನ್ನ ತುದಿ ಮೋಡಗಳನ್ನು ಮುಟ್ಟುವಷ್ಟು ನೀಳವಾಗಿದ್ದುದರ ಬಗ್ಗೆ ಗರ್ವಪಟ್ಟನು.


ನಾನೇ ಭೂಮಿಯನ್ನೂ, ಭೂಮಿಯ ಮೇಲಿರುವ ಮನುಷ್ಯರನ್ನೂ, ಮೃಗಗಳನ್ನೂ ನನ್ನ ಮಹಾ ಬಲದಿಂದಲೂ, ನನ್ನ ಚಾಚಿದ ಕೈಯಿಂದಲೂ ಉಂಟುಮಾಡಿ, ನನಗೆ ಸರಿ ತೋಚಿದವರಿಗೆ ಅದನ್ನು ಕೊಟ್ಟಿದ್ದೇನೆ.


ಅವರು ಕಾಲವನ್ನೂ, ಸಮಯವನ್ನೂ ಬದಲಾಯಿಸುತ್ತಾ ಅವರು ಅರಸರನ್ನು ಕಡೆಗಣಿಸುತ್ತಾರೆ ಮತ್ತು ಇತರರನ್ನು ಮೇಲಕ್ಕೆತ್ತುತ್ತಾರೆ. ಜ್ಞಾನಿಗಳಿಗೆ ಜ್ಞಾನವನ್ನೂ, ಬುದ್ಧಿವಂತರಿಗೆ ತಿಳುವಳಿಕೆಯನ್ನೂ ಕೊಡುವರು.


ಹನ್ನೆರಡು ತಿಂಗಳಾದ ಮೇಲೆ ಅರಸನು ಬಾಬಿಲೋನಿನ ರಾಜ್ಯದ ಅರಮನೆಯ ಮೇಲ್ಗಡೆ ತಿರುಗಾಡಿದನು.


ಅವನು ಮಾನವ ಸಮಾಜದಿಂದ ಬಹಿಷ್ಕೃತನಾದನು. ಮಹೋನ್ನತರಾದ ದೇವರು ಮನುಷ್ಯರ ರಾಜ್ಯವನ್ನು ಆಳುತ್ತಾರೆಂದೂ, ಅವರು ತಮಗೆ ಬೇಕಾದವರನ್ನು ಅದಕ್ಕೆ ನೇಮಿಸುತ್ತಾರೆಂದೂ ತಿಳಿಯುವ ತನಕ ಅವನು ಮೃಗಬುದ್ಧಿಯುಳ್ಳವನಾಗಿದ್ದನು. ಅವನ ನಿವಾಸವು ಕಾಡುಕತ್ತೆಗಳ ಸಂಗಡ ಇತ್ತು. ಅವನು ದನಗಳಂತೆ ಹುಲ್ಲನ್ನು ಮೇಯುತ್ತಿದ್ದನು. ಅವನ ಶರೀರ ಆಕಾಶದ ಮಂಜಿನಿಂದ ತೇವವಾಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು