ದಾನಿಯೇಲ 2:8 - ಕನ್ನಡ ಸಮಕಾಲಿಕ ಅನುವಾದ8 ಆಗ ಅರಸನು ಉತ್ತರವಾಗಿ, “ನಾನು ಇದನ್ನು ದೃಢವಾಗಿ ನಿರ್ಧರಿಸಿದ್ದೇನೆಂದು ಹೇಳಿದ್ದರಿಂದ ನೀವು ಸಮಯ ಉಳಿಸಿಕೊಳ್ಳುವುದಕ್ಕಾಗಿ ಪ್ರಯತ್ನಿಸುತ್ತಿದ್ದೀರೆಂದು ನನಗೆ ನಿಶ್ಚಯವಾಗಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಅದಕ್ಕೆ ರಾಜನು, “ನೀವು ಆ ಕನಸನ್ನು ನನಗೆ ತಿಳಿಸದಿದ್ದರೆ ಮರಣದಂಡನೆಯ ನಿಯಮವೇ ನಿಮಗೆ ಗತಿಯಾಗುವುದು ಎಂಬ ನನ್ನ ಮಾತು ಖಂಡಿತವೆಂದು ನೀವು ತಿಳಿದುಕೊಂಡು ಕಾಲಹರಣ ಮಾಡುತ್ತಿದ್ದೀರಿ, ಇದು ನನಗೆ ಚೆನ್ನಾಗಿ ಗೊತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಅದಕ್ಕೆ ರಾಜನು, “ನೀವು ಆ ಕನಸನ್ನು ನನಗೆ ತಿಳಿಸದಿದ್ದರೆ ನಿಮಗೆ ಮರಣದಂಡನೆಯಾಗುವುದು ಖಚಿತವೆಂದು ತಿಳಿದೇ ಕಾಲಹರಣ ಮಾಡುತ್ತಿದ್ದೀರಿ. ಇದು ನನಗೆ ಚೆನ್ನಾಗಿ ಗೊತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಅದಕ್ಕೆ ರಾಜನು - ನೀವು ಆ ಕನಸನ್ನು ನನಗೆ ತಿಳಿಸದಿದ್ದರೆ [ಮರಣದಂಡನೆಯ] ನಿಯಮವೇ ನಿಮಗೆ ಗತಿಯಾಗುವದು ಎಂಬ ನನ್ನ ಮಾತು ಖಂಡಿತವೆಂದು ನೀವು ತಿಳಿದುಕೊಂಡು ಕಾಲಹರಣ ಮಾಡಿತ್ತಿದ್ದೀರಿ, ಇದು ನನಗೆ ಚೆನ್ನಾಗಿ ಗೊತ್ತು; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಅರಸನಾದ ನೆಬೂಕದ್ನೆಚ್ಚರನು, “ನೀವು ಹೆಚ್ಚಿನ ಕಾಲಾವಕಾಶವನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದೀರೆಂಬುದನ್ನು ನಾನು ಬಲ್ಲೆ. ನಾನು ಹೇಳಿದ್ದು ನಿಮಗೆ ಸರಿಯಾಗಿ ತಿಳಿದಿದೆ. ಅಧ್ಯಾಯವನ್ನು ನೋಡಿ |
ನೀವು ಕನಸನ್ನು ನನಗೆ ಹೇಳದಿದ್ದರೆ, ನಿಮಗೆ ಒಂದೇ ಒಂದು ಶಿಕ್ಷೆಯಿದೆ. ತಪ್ಪು ಮಾರ್ಗಕ್ಕೆ ನಡೆಸುವ ಹಾಗೂ ಕೆಟ್ಟ ಸಂಗತಿಗಳನ್ನು ನನಗೆ ಹೇಳಿ, ಪರಿಸ್ಥಿತಿಯನ್ನು ನೀವು ನನಗೆ ವಿರೋಧವಾಗಿ ಒಪ್ಪಂದ ಮಾಡಿಕೊಂಡಿದ್ದೀರಿ, ಬದಲಾವಣೆಯನ್ನು ನಿರೀಕ್ಷಿಸುವಂತೆ. ಆದ್ದರಿಂದ ಕನಸನ್ನು ನನಗೆ ಹೇಳಲೇಬೇಕು. ಆಗ ಅದನ್ನು ವ್ಯಾಖ್ಯಾನ ಮಾಡಿ, ವಿವರಿಸುವಿರೆಂದು ನಾನು ತಿಳಿಯುವೆನು,” ಎಂದನು.