ದಾನಿಯೇಲ 2:40 - ಕನ್ನಡ ಸಮಕಾಲಿಕ ಅನುವಾದ40 ಆಮೇಲೆ ನಾಲ್ಕನೆಯ ರಾಜ್ಯವು ಕಬ್ಬಿಣದ ಹಾಗೆ ಬಲವಾಗಿ ಇರುವುದು. ಏಕೆಂದರೆ ಕಬ್ಬಿಣವು ಸಮಸ್ತ ವಸ್ತುಗಳನ್ನು ವಶಮಾಡಿಕೊಂಡು, ಚೂರುಚೂರು ಮಾಡುತ್ತದೆ. ಕಬ್ಬಿಣವು ಹೇಗೆ ಎಲ್ಲವನ್ನು ಚೂರು ಮಾಡುವುದೋ, ಹಾಗೆಯೇ ಆ ರಾಜ್ಯವು ಇತರರೆಲ್ಲರನ್ನು ಚೂರುಚೂರಾಗಿ ಮಾಡಿ ಧ್ವಂಸ ಮಾಡುವುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201940 “ನಾಲ್ಕನೆಯ ರಾಜ್ಯವು ಕಬ್ಬಿಣದಷ್ಟು ಗಟ್ಟಿ; ಕಬ್ಬಿಣವು ಎಲ್ಲಾ ವಸ್ತುಗಳನ್ನು ಚೂರುಚೂರಾಗಿ ಒಡೆದು ಹಾಕುತ್ತದಷ್ಟೆ; ಸಕಲವನ್ನೂ ಧ್ವಂಸಮಾಡುವ ಕಬ್ಬಿಣದಂತೆಯೇ ಅದು ಚೂರುಚೂರಾಗಿ ಧ್ವಂಸಮಾಡುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)40 ನಾಲ್ಕನೆಯ ರಾಜ್ಯ ಕಬ್ಬಿಣದಷ್ಟು ಗಟ್ಟಿಗೆ ಕಬ್ಬಿಣ ಎಲ್ಲ ವಸ್ತುಗಳನ್ನು ಚೂರುಚೂರಾಗಿ ಒಡೆದುಹಾಕುತ್ತದೆ. ಅಂತೆಯೇ ಅದು ಎಲ್ಲವನ್ನು ಚೂರುಚೂರಾಗಿಸಿ ಧ್ವಂಸ ಮಾಡುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)40 ನಾಲ್ಕನೆಯ ರಾಜ್ಯವು ಕಬ್ಬಿಣದಷ್ಟು ಗಟ್ಟಿ; ಕಬ್ಬಿಣವು ಎಲ್ಲಾ ವಸ್ತುಗಳನ್ನು ಚೂರುಚೂರಾಗಿ ಒಡೆದುಹಾಕುತ್ತದಷ್ಟೆ; ಸಕಲವನ್ನೂ ದ್ವಂಸಮಾಡುವ ಕಬ್ಬಿಣದಂತೆಯೇ ಅದು ಚೂರುಚೂರಾಗಿ ದ್ವಂಸಮಾಡುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್40 ಆಮೇಲೆ ನಾಲ್ಕನೆಯ ರಾಜ್ಯ. ಆ ರಾಜ್ಯವು ಕಬ್ಬಿಣದಂತೆ ಗಟ್ಟಿಯಾಗಿರುತ್ತದೆ. ಹೇಗೆ ಕಬ್ಬಿಣವು ಎಲ್ಲ ವಸ್ತುಗಳನ್ನು ಒಡೆದು ಪುಡಿ ಮಾಡುತ್ತದೆಯೋ ಹಾಗೆಯೇ ಆ ನಾಲ್ಕನೆಯ ರಾಜ್ಯವು ಉಳಿದೆಲ್ಲ ರಾಜ್ಯಗಳನ್ನು ಒಡೆದು ಪುಡಿ ಮಾಡುತ್ತದೆ. ಅಧ್ಯಾಯವನ್ನು ನೋಡಿ |