ದಾನಿಯೇಲ 2:38 - ಕನ್ನಡ ಸಮಕಾಲಿಕ ಅನುವಾದ38 ಜನರನ್ನು, ಭೂಮಿಯ ಮೃಗಗಳನ್ನು, ಆಕಾಶದ ಪಕ್ಷಿಗಳನ್ನು, ಜೀವಿಸುವಂಥಾದ್ದೆಲ್ಲವನ್ನೂ ನಿನ್ನ ಕೈಯಲ್ಲಿ ಕೊಟ್ಟು, ಅವೆಲ್ಲವುಗಳಿಗೆ ನಿನ್ನನ್ನು ಆಳುವವನಾಗಿ ಮಾಡಿದ್ದಾರೆ. ಆ ಬಂಗಾರದ ತಲೆಯು ನೀನೇ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201938 ನರಜಾತಿಯವರು ವಾಸಿಸುವ ಸಕಲ ಪ್ರಾಂತ್ಯಗಳಲ್ಲಿ ಆಕಾಶಪಕ್ಷಿಗಳನ್ನೂ, ಭೂಜಂತುಗಳನ್ನೂ ನಿನ್ನ ಕೈಗೆ ಒಪ್ಪಿಸಿ ನೀನು ಅವುಗಳನ್ನೆಲ್ಲಾ ಆಳುವಂತೆ ಮಾಡಿದ್ದಾನೆ; ನೀನೇ ಆ ಬಂಗಾರದ ತಲೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)38 ನರಮಾನವರು ವಾಸಿಸುವ ಸಕಲ ಪ್ರಾಂತ್ಯಗಳಲ್ಲಿ ಆಕಾಶಪಕ್ಷಿಗಳನ್ನೂ ಭೂಜಂತುಗಳನ್ನೂ ನಿಮ್ಮ ಕೈಗೆ ಒಪ್ಪಿಸಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)38 ನರಜಾತಿಯವರು ವಾಸಿಸುವ ಸಕಲ ಪ್ರಾಂತಗಳಲ್ಲಿ ಆಕಾಶಪಕ್ಷಿಗಳನ್ನೂ ಭೂಜಂತುಗಳನ್ನೂ ನಿನ್ನ ಕೈಗೆ ಒಪ್ಪಿಸಿ ನೀನು ಅವುಗಳನ್ನೆಲ್ಲಾ ಆಳುವಂತೆ ಮಾಡಿದ್ದಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್38 ದೇವರು ನಿನಗೆ ಅಧಿಕಾರವನ್ನು ಕೊಟ್ಟಿದ್ದಾನೆ. ಆ ದೇವರು ನಿನ್ನನ್ನು ಎಲ್ಲೆಡೆಯಲ್ಲಿರುವ ಜನರ ಮೇಲೆ, ಕಾಡುಪ್ರಾಣಿಗಳ ಮೇಲೆ, ಪಕ್ಷಿಗಳ ಮೇಲೆ ಆಳುವಂತೆ ಮಾಡಿದ್ದಾನೆ. ಅರಸನಾದ ನೆಬೂಕದ್ನೆಚ್ಚರನೇ, ನೀನೇ ಆ ಪ್ರತಿಮೆಯ ಬಂಗಾರದ ತಲೆ. ಅಧ್ಯಾಯವನ್ನು ನೋಡಿ |