ದಾನಿಯೇಲ 2:30 - ಕನ್ನಡ ಸಮಕಾಲಿಕ ಅನುವಾದ30 ಆದರೆ ನಾನೇ ಎಲ್ಲಾ ಜೀವಂತರಿಗಿಂತ ಹೆಚ್ಚು ಬುದ್ಧಿಯುಳ್ಳವನೆಂದಲ್ಲದಿದ್ದರೂ, ಕನಸಿನ ಅರ್ಥವು ಅರಸನಾದ ನಿನಗೆ ಗೋಚರವಾಗಿ, ನಿನ್ನ ಹೃದಯದ ಯೋಚನೆಗಳು ನಿನಗೆ ತಿಳಿದುಬರಲೆಂದು ನನಗೆ ಪ್ರಕಟವಾಗಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201930 ನಾನೇ ಎಲ್ಲಾ ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತನಲ್ಲ, ಕನಸಿನ ಅಭಿಪ್ರಾಯವು ರಾಜನಿಗೆ ಗೋಚರವಾಗಿ ನಿನ್ನ ಮನಸ್ಸಿನ ಯೋಚನೆಯ ವಿಷಯವು ನಿನಗೆ ತಿಳಿದು ಬರಲಿ ಎಂದು ಈ ರಹಸ್ಯವು ನನಗೂ ಪ್ರಕಟವಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)30 ಆ ಗುಟ್ಟನ್ನು ನನಗೂ ವ್ಯಕ್ತಪಡಿಸಿದ್ದಾರೆ. ನಾನು ಎಲ್ಲ ಜೀವಂತರಿಗಿಂತ ಹೆಚ್ಚು ಬುದ್ಧಿಯುಳ್ಳವನು ಎಂದೇನೂ ಅಲ್ಲ. ಆ ಕನಸಿನ ಉದ್ದೇಶ ರಾಜರಾದ ತಮಗೆ ಗೋಚರವಾಗಿ ನಿಮ್ಮ ಮನದಾಲೋಚನೆಗಳು ನಿಮಗೆ ಅರ್ಥವಾಗಲಿ ಎಂದು ನನಗೂ ವ್ಯಕ್ತಪಡಿಸಲಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)30 ನಾನೇ ಎಲ್ಲಾ ಜೀವಂತರಿಗಿಂತ ಹೆಚ್ಚು ಬುದ್ಧಿಯುಳ್ಳವನೆಂತಲ್ಲ, ಕನಸಿನ ಅಭಿಪ್ರಾಯವು ರಾಜನಿಗೆ ಗೋಚರವಾಗಿ ನಿನ್ನ ಮನಸ್ಸಿನ ಯೋಚನೆಯ ವಿಷಯವು ನಿನಗೆ ತಿಳಿದುಬರಲಿ ಎಂದು ಈ ರಹಸ್ಯವು ನನಗೆ ವ್ಯಕ್ತವಾಗಿದೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್30 ದೇವರು ರಹಸ್ಯವನ್ನು ನನಗೂ ತಿಳಿಸಿದ್ದಾನೆ! ದೇವರು ನನಗೆ ತಿಳಿಸಿರುವುದು ನಾನು ಬೇರೆಯವರಿಗಿಂತ ಹೆಚ್ಚು ಬುದ್ಧಿವಂತನೆಂದಲ್ಲ. ಆದರೆ ಅರಸನಾದ ನಿನಗೆ ಇದರ ಅರ್ಥ ತಿಳಿಯಲಿ ಎಂಬ ಉದ್ದೇಶದಿಂದ ದೇವರು ನನಗೆ ತಿಳಿಸಿದ್ದಾನೆ. ಇದರಿಂದ ನಿನ್ನ ಮನಸ್ಸಿನ ಯೋಚನೆಗಳ ವಿಷಯ ನಿನಗೆ ತಿಳಿದುಬರುತ್ತದೆ. ಅಧ್ಯಾಯವನ್ನು ನೋಡಿ |