Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ದಾನಿಯೇಲ 12:7 - ಕನ್ನಡ ಸಮಕಾಲಿಕ ಅನುವಾದ

7 ನದಿಯ ನೀರಿನ ಮೇಲೆ ನಿಂತು ನಾರುಬಟ್ಟೆಯನ್ನು ಧರಿಸಿ ನಿಂತಿದ್ದ ಮನುಷ್ಯನು ತನ್ನ ಎಡಗೈಯನ್ನೂ ಬಲಗೈಯನ್ನೂ ಆಕಾಶದ ಕಡೆಗೆ ಎತ್ತಿ ಸದಾಕಾಲ ಜೀವಂತರಾಗಿರುವವರ ಮೇಲೆ ಆಣೆಯಿಟ್ಟು, “ಅದು ಒಂದುಕಾಲ, ಎರಡುಕಾಲ, ಅರ್ಧಕಾಲ ಕಳೆಯಬೇಕು; ಕೊನೆಗೆ ಪರಿಶುದ್ಧರ ಬಲವನ್ನು ಮುರಿದ ಮೇಲೆ ಈ ಕಾರ್ಯಗಳೆಲ್ಲ ಮುಕ್ತಾಯವಾಗುವುವು,” ಎಂಬುದಾಗಿ ನನ್ನ ಕಿವಿಗೆ ಬೀಳುವಂತೆ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ನದಿಯ ನೀರಿನ ಮೇಲೆ ನಾರಿನ ಹೊದಿಕೆಯನ್ನು ಹೊದ್ದುಕೊಂಡು ನಿಂತಿದ್ದ ಪುರುಷನನ್ನು ಕೇಳಲು, ಆ ಪುರುಷನು ಎಡ ಮತ್ತು ಬಲಗೈಗಳನ್ನು ಆಕಾಶದ ಕಡೆಗೆ ಎತ್ತಿಕೊಂಡು, “ಶಾಶ್ವತ ಜೀವಸ್ವರೂಪನಾಣೆ, ಒಂದು ಕಾಲ, ಎರಡುಕಾಲ, ಅರ್ಧಕಾಲ ಕಳೆಯಬೇಕು. ದೇವಜನರ ಬಲವನ್ನು ಸಂಪೂರ್ಣವಾಗಿ ಮುರಿದುಬಿಟ್ಟ ಮೇಲೆ ಈ ಕಾರ್ಯಗಳೆಲ್ಲಾ ಮುಕ್ತಾಯವಾಗುವವು” ಎಂಬುದಾಗಿ ನನ್ನ ಕಿವಿಗೆ ಬೀಳುವಂತೆ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಆ ದೂತ ಎಡಬಲಗೈಗಳನ್ನು ಆಕಾಶದ ಕಡೆಗೆ ಎತ್ತಿಕೊಂಡು, “ಶಾಶ್ವತ ಜೀವಸ್ವರೂಪನಾಣೆ, ಒಂದು ಯುಗ, ಎರಡು ಯುಗ, ಮತ್ತು ಅರ್ಧ ಯುಗ ಕಳೆಯಬೇಕು. ದೇವಜನರಿಗಾಗುವ ಹಿಂಸೆಬಾಧೆಗಳು ಸಂಪೂರ್ಣವಾಗಿ ನಿಂತಮೇಲೆ ಈ ಕಾರ್ಯಗಳೆಲ್ಲ ಮುಕ್ತಾಯವಾಗುವುವು,” ಎಂಬುದಾಗಿ ನನ್ನ ಕಿವಿಗೆ ಬೀಳುವಂತೆ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಆಕಾಶದ ಕಡೆಗೆ ಎತ್ತಿಕೊಂಡು - ಶಾಶ್ವತ ಜೀವಸ್ವರೂಪನಾಣೆ, ಒಂದುಕಾಲ ಎರಡುಕಾಲ ಅರ್ಧಕಾಲ ಕಳೆಯಬೇಕು; ದೇವರ ಜನರ ಬಲವನ್ನು ಸಂಪೂರ್ಣವಾಗಿ ಮುರಿದುಬಿಟ್ಟ ಮೇಲೆ ಈ ಕಾರ್ಯಗಳೆಲ್ಲಾ ಮುಕ್ತಾಯವಾಗುವವು ಎಂಬದಾಗಿ ನನ್ನ ಕಿವಿಗೆ ಬೀಳುವಂತೆ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ನಾರುಮಡಿಯನ್ನು ಧರಿಸಿ ನೀರಿನ ಮೇಲೆ ನಿಂತುಕೊಂಡಿದ್ದ ಮನುಷ್ಯನು ತನ್ನ ಎರಡೂ ಕೈಗಳನ್ನು ಆಕಾಶದ ಕಡೆಗೆ ಎತ್ತಿದನು. ಅವನು ಶಾಶ್ವತವಾದ ದೇವರ ಮೇಲೆ ಆಣೆಮಾಡಿ, “ಮೂರುವರೆ ವರ್ಷ ಕಳೆಯಬೇಕು. ದೇವರ ಭಕ್ತರ ಬಲವು ಸಂಪೂರ್ಣವಾಗಿ ಮುರಿದುಹೋಗುವದು. ಆಮೇಲೆ ಎಲ್ಲಾ ಸಂಗತಿಗಳು ಜರುಗುವವು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ದಾನಿಯೇಲ 12:7
30 ತಿಳಿವುಗಳ ಹೋಲಿಕೆ  

ಅವನು ಮಹೋನ್ನತ ದೇವರಿಗೆ ವಿರೋಧವಾಗಿ ಕೊಚ್ಚಿಕೊಂಡು ಮಾತುಗಳನ್ನಾಡಿ, ಪರಿಶುದ್ಧರನ್ನು ಬಾಧಿಸಿ, ಕಾಲ ನಿಯಮಗಳನ್ನು ಬದಲಾಯಿಸುವುದಕ್ಕೆ ಪ್ರಯತ್ನಿಸುವನು. ಪರಿಶುದ್ಧರು ಒಂದುಕಾಲ, ಎರಡುಕಾಲ, ಅರ್ಧಕಾಲದ ತನಕ ಅವರು ಅವನ ಕೈವಶವಾಗಿರುವರು.


ಆ ಸ್ತ್ರೀಯು ಅರಣ್ಯದಲ್ಲಿದ್ದ ತನ್ನ ಸ್ಥಳಕ್ಕೆ ಹಾರಿಹೋಗುವುದಕ್ಕಾಗಿ ಆಕೆಗೆ ದೊಡ್ಡ ಹದ್ದಿನ ಎರಡು ರೆಕ್ಕೆಗಳು ಕೊಡಲಾದವು. ಅಲ್ಲಿ ಆಕೆಯು ಒಂದುಕಾಲ, ಎರಡುಕಾಲ ಮತ್ತು ಅರ್ಧಕಾಲ ಸರ್ಪನಿಗೆ ಸಿಗದಂತೆ ಪೋಷಣೆ ಹೊಂದಿದಳು.


ಅವನ ಶಕ್ತಿಯು ಬಲವಾಗಿರುವುದು. ಆದರೆ ಅದು ಸ್ವಂತ ಶಕ್ತಿಯಲ್ಲ. ಅವನು ಆಶ್ಚರ್ಯದ ರೀತಿಯಲ್ಲಿ ನಾಶಮಾಡಿ ಅಭಿವೃದ್ಧಿಯಾಗುವನು. ಅವನು ತನ್ನ ಇಷ್ಟಾರ್ಥವನ್ನು ತೀರಿಸಿಕೊಳ್ಳುವನು. ಬಲವಾದ, ಪರಿಶುದ್ಧ ಜನರನ್ನು ನಾಶಮಾಡುವನು.


ಆ ಮೃಗಕ್ಕೆ ಬಡಾಯಿ ಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡುವ ಬಾಯಿ ಕೊಡಲಾಯಿತು. ನಲವತ್ತೆರಡು ತಿಂಗಳುಗಳವರೆಗೆ ಕಾರ್ಯಸಾಧಿಸುವ ಅಧಿಕಾರವನ್ನೂ ಅದಕ್ಕೆ ಕೊಡಲಾಯಿತು.


ಆ ಸ್ತ್ರೀಯು ಅರಣ್ಯಕ್ಕೆ ಓಡಿ ಹೋದಳು. ಅಲ್ಲಿ ಆಕೆಗೆ ಸಾವಿರದ ಇನ್ನೂರ ಅರವತ್ತು ದಿನಗಳವರೆಗೆ ಪೋಷಣೆಯಾಗಬೇಕೆಂದು ದೇವರು ಸ್ಥಳವನ್ನು ಸಿದ್ಧಮಾಡಿದ್ದರು.


ಇದಲ್ಲದೆ ಅವರು ಖಡ್ಗಕ್ಕೆ ತುತ್ತಾಗಿ ಬೀಳುವರು ಮತ್ತು ಸೆರೆಯಾಗಿ ಎಲ್ಲಾ ರಾಷ್ಟ್ರಗಳಲ್ಲಿ ಒಯ್ಯುವರು. ಯೆಹೂದ್ಯರಲ್ಲದವರ ಕಾಲ ಪರಿಪೂರ್ಣವಾಗುವವರೆಗೆ ಅವರು ಯೆರೂಸಲೇಮನ್ನು ತುಳಿದುಹಾಕುವರು.


ಆ ಸಮಯದ ಅಂತ್ಯದಲ್ಲಿ ನೆಬೂಕದ್ನೆಚ್ಚರನಾದ ನಾನು ನನ್ನ ಕಣ್ಣುಗಳನ್ನು ಪರಲೋಕದ ಕಡೆಗೆ ಎತ್ತಿದೆನು. ನನ್ನ ತಿಳುವಳಿಕೆ ನನಗೆ ತಿರುಗಿ ಬಂತು. ಆಗ ನಾನು ಮಹೋನ್ನತರನ್ನು ಕೊಂಡಾಡಿದೆನು. ಸದಾಕಾಲಕ್ಕೂ ಇರುವವರಾದ ಅವರನ್ನು ಗೌರವಿಸಿ, ಮಹಿಮೆ ಪಡಿಸಿದೆನು. ಅವರ ಆಡಳಿತವು ನಿತ್ಯವಾದ ಆಡಳಿತವಾಗಿದೆ. ಅವರ ರಾಜ್ಯವು ತಲತಲಾಂತರಕ್ಕೂ ಇರುವುದು.


ಆದರೆ ಕತ್ತಲೆಯೊಳಗಿದ್ದ ನಿಮ್ಮನ್ನು ಕರೆದು ತಮ್ಮ ಆಶ್ಚರ್ಯಕರವಾದ ಬೆಳಕಿಗೆ ಸೇರಿಸಿದ ದೇವರನ್ನು ಕೊಂಡಾಡುವವರಾಗುವಂತೆ ನೀವು ಆಯ್ದುಕೊಂಡ ಜನರೂ ರಾಜತನದ ಯಾಜಕರೂ ಪರಿಶುದ್ಧ ಜನಾಂಗವೂ ದೇವರ ಜನರೂ ಆಗಿದ್ದೀರಿ.


ನೀನು ಸತ್ಯದಿಂದಲೂ ನ್ಯಾಯದಿಂದಲೂ ನೀತಿಯಿಂದಲೂ, ‘ಯೆಹೋವ ದೇವರ ಜೀವದಾಣೆ,’ ಎಂದು ಪ್ರಮಾಣ ಮಾಡುವೆ. ಆಗ ರಾಷ್ಟ್ರಗಳೆಲ್ಲ ನನ್ನಿಂದ ಆಶೀರ್ವಾದ ಪಡೆಯ ಬಯಸುವರು. ನನ್ನಲ್ಲಿಯೇ ಹೆಮ್ಮೆಪಡುವರು.”


ಆಗ ಅವರು, ಪರಿಶುದ್ಧ ಜನರೂ, ಯೆಹೋವ ದೇವರು ವಿಮೋಚಿಸಿದವರೂ ಎಂದು ಎನಿಸಿಕೊಳ್ಳುವರು ನಿನಗೆ ಹುಡುಕಿದ ಹಾಗೂ ಕೈ ಬಿಡದ ಪಟ್ಟಣ, ಎಂದು ಹೆಸರು ಬರುವುದು.


ದೇವರು ನಿರ್ಮಿಸಿದ ಎಲ್ಲಾ ದೇಶಗಳಿಗಿಂತ ಹೆಚ್ಚಾಗಿ ನಿಮ್ಮನ್ನು ಕೀರ್ತಿಯಲ್ಲಿಯೂ, ಪ್ರಸಿದ್ಧತೆಯಲ್ಲಿಯೂ, ಘನತೆಯಲ್ಲಿಯೂ, ಸ್ಥಾಪಿಸುವುದಾಗಿ ನಿಮ್ಮ ದೇವರಾದ ಯೆಹೋವ ದೇವರು ವಾಗ್ದಾನ ಮಾಡಿದಂತೆ ನೀವು ಅವರಿಗೆ ಪರಿಶುದ್ಧ ಜನರಾಗಬೇಕೆಂದೂ ಘೋಷಿಸಿದ್ದಾರೆ.


ಏಕೆಂದರೆ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಪರಿಶುದ್ಧ ಜನರು. ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಭೂಮಿಯ ಮೇಲಿರುವ ಎಲ್ಲಾ ಜನರೊಳಗಿಂದ ತಮಗೆ ಸ್ವಂತ ಜನರಾಗಿರಲು ತಮ್ಮ ಆಸ್ತಿಯಾಗಿ ಆರಿಸಿಕೊಂಡಿದ್ದಾರೆ.


ಅವರು ನದಿಯ ನೀರಿನ ಮೇಲೆ ನಿಂತು, ನಾರುಬಟ್ಟೆಯನ್ನು ಧರಿಸಿದ್ದ ಒಬ್ಬನಿಗೆ ಇನ್ನೊಬ್ಬನು, “ಈ ಆಶ್ಚರ್ಯದ ಅಂತ್ಯವು ಎಷ್ಟರವರೆಗೆ ಇರುವುದು?” ಎಂದು ಕೇಳಿದನು.


ಏಕೆಂದರೆ ಉತ್ತರದ ಅರಸನು ಪುನಃ ತಿರುಗಿಕೊಂಡು ಮೊದಲನೆಯದಕ್ಕಿಂತಲೂ ದೊಡ್ಡ ಸೈನ್ಯವನ್ನು ನಿಲ್ಲಿಸಿ, ಕೆಲವು ವರ್ಷಗಳಾದ ಮೇಲೆ ದೊಡ್ಡ ಸೈನ್ಯದ ಸಂಗಡವೂ, ಬಹಳ ಆಯುಧಗಳ ಸಂಗಡವೂ ನಿಶ್ಚಯವಾಗಿ ಬರುವನು.


ಅವನು ನನಗೆ, “ಎರಡು ಸಾವಿರದ ಮುನ್ನೂರು ಸಾಯಂಕಾಲ ಹಾಗೂ ಪ್ರಾತಃಕಾಲದವರೆಗೂ ನಡೆಯುವುವು. ಅನಂತರ ಪರಿಶುದ್ಧ ಸ್ಥಳವು ಪುನಃ ನ್ಯಾಯಸ್ಥಾಪನೆಯಾಗುವುದು,” ಎಂದು ಹೇಳಿದನು.


ಆಕಾಶದ ಕಡೆ ನನ್ನ ಕೈಯೆತ್ತಿ, ನಾನು ನಿತ್ಯವಾಗಿ ಬದುಕುವಾತನು ಎಂದು ಹೇಳುತ್ತೇನೆ.


ಆಗ ನೀವು ಏನು ಉತ್ತರಕೊಡಬೇಕೆಂದು ಮುಂದಾಗಿ ಚಿಂತಿಸಬೇಕಾಗಿಲ್ಲವೆಂದು ನಿಮ್ಮ ಹೃದಯಗಳಲ್ಲಿ ನಿಶ್ಚಯಮಾಡಿಕೊಳ್ಳಿರಿ.


ನನ್ನ ನ್ಯಾಯವನ್ನು ತಪ್ಪಿಸಿದ ಜೀವಂತ ದೇವರಾಣೆ, ನನ್ನ ಆತ್ಮವನ್ನು ವ್ಯಥೆಪಡಿಸಿರುವ ಸರ್ವಶಕ್ತರ ಆಣೆ,


ಯುಗಯುಗಾಂತರಗಳಲ್ಲಿಯೂ ಜೀವಿಸುವವರಾಗಿ, ಸಿಂಹಾಸನದ ಮೇಲೆ ಆಸೀನರಾದವರಿಗೆ ಆ ನಾಲ್ಕು ಜೀವಿಗಳು ಮಹಿಮೆ, ಮಾನ, ಕೃತಜ್ಞತಾ ಸ್ತುತಿಗಳನ್ನು ಸಲ್ಲಿಸುವಾಗ,


ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಆಸೀನರಾದವರ ಎದುರಿಗೆ ಅಡ್ಡಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ,


ಅವರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಇಸ್ರಾಯೇಲನ್ನು ಆಯ್ದುಕೊಂಡ ದಿವಸದಲ್ಲಿ ಯಾಕೋಬನ ವಂಶದವರಿಗೆ ನನ್ನ ಕೈಯೆತ್ತಿ, “ನಿಮ್ಮ ಸಾರ್ವಭೌಮ ಯೆಹೋವ ದೇವರು ನಾನೇ” ಎಂದು ಈಜಿಪ್ಟ್ ದೇಶದಲ್ಲಿ ಅವರಿಗೆ ಹೇಳಿದೆನು.


ನಾನು ನನ್ನ ಕಣ್ಣುಗಳನ್ನೆತ್ತಿ ಮೇಲಕ್ಕೆ ನೋಡಿದೆನು. ಆಗ, ನಾರುಮಡಿಯನ್ನು ಧರಿಸಿದ್ದ ಒಬ್ಬ ಮನುಷ್ಯನನ್ನು ಕಂಡೆನು. ಆತನ ನಡುವು ಊಫಜಿನ ಅತ್ಯುತ್ತಮ ಬಂಗಾರದಿಂದ ಬಿಗಿದಿತ್ತು.


ನಾನು ಅದನ್ನು ಕೇಳಿದೆನು, ಆದರೆ ಗ್ರಹಿಸಲಿಲ್ಲ. ಆಗ ನಾನು, “ನನ್ನ ಒಡೆಯನೇ, ಈ ಸಂಗತಿಗಳ ಅಂತ್ಯವೇನು?” ಎಂದು ಕೇಳಿದೆನು.


ಏಕೆಂದರೆ ಯೆಹೋವ ದೇವರು ತಮ್ಮ ಜನರಿಗೆ ನ್ಯಾಯತೀರಿಸುವರು. ದೇವರು ತಮ್ಮ ಸೇವಕರ ಬಲ ಹೋಯಿತೆಂದೂ, ಗುಲಾಮರಾಗಲಿ, ಸ್ವತಂತ್ರರಾಗಲಿ ಉಳಿಯಲಿಲ್ಲವೆಂದೂ ನೋಡಿದಾಗ, ತಮ್ಮ ಸೇವಕರಿಗೋಸ್ಕರ ಕರುಣಿಸುವರು.


ಈ ಮಾತು ಅರಸನ ಬಾಯಿಯಲ್ಲಿ ಇರುವಾಗಲೇ ಪರಲೋಕದಿಂದ ಒಂದು ಧ್ವನಿ ಉಂಟಾಯಿತು: “ಅರಸನಾದ ನೆಬೂಕದ್ನೆಚ್ಚರನೇ, ನಿನ್ನ ವಿಷಯವಾದ ದೈವೋಕ್ತಿ ಏನೆಂದರೆ: ನಿನ್ನ ರಾಜ್ಯವು ನಿನ್ನಿಂದ ತೆಗೆಯಲಾಗುವುದು.


ನಾನು ನೋಡಲಾಗಿ ಆ ಕೊಂಬು ಪರಿಶುದ್ಧರ ಸಂಗಡ ಯುದ್ಧ ಮಾಡಿತು ಮತ್ತು ಅವರಿಗೆ ವಿರೋಧವಾಗಿ ಜಯಗಳಿಸಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು