ದಾನಿಯೇಲ 11:6 - ಕನ್ನಡ ಸಮಕಾಲಿಕ ಅನುವಾದ6 ಕೆಲವು ವರ್ಷಗಳ ನಂತರ ಅವರಿಬ್ಬರು ಒಪ್ಪಂದ ಮಾಡಿಕೊಳ್ಳುವರು. ದಕ್ಷಿಣದ ಅರಸನ ಮಗಳು ಒಪ್ಪಂದ ಮಾಡಿಕೊಳ್ಳಲು ಉತ್ತರದ ಅರಸನ ಬಳಿಗೆ ಬರುವಳು. ಆದರೆ ಅವಳು ತನ್ನ ಅಧಿಕಾರವನ್ನು ಉಳಿಸಿಕೊಳ್ಳುವುದಿಲ್ಲ. ಅವನೂ, ಅವನ ಅಧಿಕಾರವೂ ನಿಲ್ಲುವುದಿಲ್ಲ. ಆ ದಿನಗಳಲ್ಲಿ ಅವಳೂ ಅವಳನ್ನು ಕರೆತಂದವರೂ ಮತ್ತು ಅವಳ ತಂದೆಯೂ ಅವಳಿಗೆ ಸಹಾಯ ಮಾಡಿದವರು ಯಾರೂ ಉಳಿಯುವುದಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಕೆಲವು ವರ್ಷಗಳಾದ ಮೇಲೆ ಅವರು ಸೇರಿಕೊಳ್ಳುವರು. ದಕ್ಷಿಣ ದಿಕ್ಕಿನ ರಾಜನ ಕುಮಾರಿಯು ಉತ್ತರ ರಾಜ್ಯದ ರಾಜನೊಂದಿಗೆ ಒಪ್ಪಂದ ಮಾಡಿಕೊಳ್ಳಲಿಕ್ಕೆ ಬರುವಳು. ಆದರೂ ತನ್ನ ಭುಜಬಲವನ್ನು ಉಳಿಸಿಕೊಳ್ಳಲು ಆಗದು; ಅವನೂ, ಅವನ ತೋಳೂ ನಿಲ್ಲವು; ಅವಳೂ, ಅವಳನ್ನು ಕರೆದು ತಂದವರೂ, ಪಡೆದವನೂ, ತಕ್ಕೊಂಡವನೂ ಆ ಕಾಲದಲ್ಲಿ ನಾಶನಕ್ಕೆ ಈಡಾಗುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಕೆಲವು ವರ್ಷಗಳಾದ ಮೇಲೆ ಅವರು ಒಪ್ಪಂದ ಮಾಡಿಕೊಳ್ಳುವರು. ಇದನ್ನು ದೃಢಪಡಿಸಿಕೊಳ್ಳಲು ಆ ದಕ್ಷಿಣ ರಾಜನ ಕುಮಾರಿ ಉತ್ತರ ದಿಕ್ಕಿನ ರಾಜನನ್ನು ಸೇರುವಳು. ಆದರೂ ತನ್ನ ಸಂಬಂಧವನ್ನು ಉಳಿಸಿಕೊಳ್ಳನು. ಅವನೂ ಅವನ ಸಂತಾನವೂ ನಿಲ್ಲವು. ಅವಳು, ಅವಳನ್ನು ಕರೆತಂದವರು, ಪಡೆದವನು, ಕರೆದುಕೊಂಡವನು ಇವರೆಲ್ಲರೂ ಅಂದು ನಾಶಕ್ಕೀಡಾಗುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಕೆಲವು ವರುಷಗಳ ಮೇಲೆ ಅವರು ಸೇರಿಕೊಳ್ಳುವರು; ದಕ್ಷಿಣರಾಜನ ಕುಮಾರಿಯು ಉತ್ತರದಿಕ್ಕಿನ ರಾಜನೊಂದಿಗೆ ಒಪ್ಪಂದ ಮಾಡಿಕೊಳ್ಳಲಿಕ್ಕೆ ಬರುವಳು; ಆದರೂ ತನ್ನ ಭುಜಬಲವನ್ನು ಉಳಿಸಿಕೊಳ್ಳಳು; ಅವನೂ ಅವನ ತೋಳೂ ನಿಲ್ಲವು; ಅವಳೂ ಅವಳನ್ನು ಕರತಂದವರೂ ಪಡೆದವನೂ ತಕ್ಕೊಂಡವನೂ ಆ ಕಾಲದಲ್ಲಿ ನಾಶನಕ್ಕೆ ಈಡಾಗುವರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 “ಕೆಲವು ವರ್ಷಗಳಾದ ಮೇಲೆ ದಕ್ಷಿಣ ದಿಕ್ಕಿನ ರಾಜನು ಮತ್ತು ಆ ಸೇನಾಧಿಪತಿಯು ಒಂದು ಒಪ್ಪಂದವನ್ನು ಮಾಡಿಕೊಳ್ಳುವರು. ದಕ್ಷಿಣದ ರಾಜನ ಮಗಳು ಉತ್ತರದ ರಾಜನನ್ನು ಮದುವೆಯಾಗುವಳು. ಶಾಂತಿಯನ್ನು ಸ್ಥಾಪಿಸುವದಕ್ಕಾಗಿ ಅವಳು ಹೀಗೆ ಮಾಡುವಳು. ಆದರೆ ಅವಳು ಮತ್ತು ದಕ್ಷಿಣದ ರಾಜನು ಸಾಕಷ್ಟು ಶಕ್ತಿಶಾಲಿಗಳಾಗಿರುವುದಿಲ್ಲ. ಜನರು ಅವಳನ್ನೂ ಮತ್ತು ಆ ದೇಶಕ್ಕೆ ಅವಳನ್ನು ಕರೆದುಕೊಂಡು ಹೋದ ವ್ಯಕ್ತಿಯನ್ನೂ ವಿರೋಧ ಮಾಡುವರು. ಆ ಜನರು ಅವಳ ಮಗು ಮತ್ತು ಅವಳ ಸಹಾಯಕನನ್ನು ವಿರೋಧಿಸುವರು. ಅಧ್ಯಾಯವನ್ನು ನೋಡಿ |