ದಾನಿಯೇಲ 10:17 - ಕನ್ನಡ ಸಮಕಾಲಿಕ ಅನುವಾದ17 ನನ್ನ ಒಡೆಯನ ದಾಸನಾದ ನನ್ನಂಥವನು ನನ್ನ ಒಡೆಯನಾದ ತಮ್ಮಂಥವರ ಸಂಗಡ ಹೇಗೆ ಮಾತಾಡಬಹುದು? ನನ್ನ ತ್ರಾಣವು ನನ್ನಲ್ಲಿ ಉಳಿಯಲಿಲ್ಲ, ಉಸಿರಾಡಿಸಲೂ ಆಗದು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ಎನ್ನೊಡೆಯನ ಸೇವಕನಾದ ನನ್ನಂಥವನು ಎನ್ನೊಡೆಯನಾದ ನಿನ್ನಂಥವನ ಸಂಗಡ ಹೇಗೆ ಮಾತನಾಡಬಹುದು? ಈಗಿನಿಂದ ಶಕ್ತಿಯನ್ನೆಲ್ಲಾ ಕಳಕೊಂಡವನಾಗಿದ್ದೇನೆ, ನನ್ನಲ್ಲಿ ಉಸಿರೇ ಇಲ್ಲ” ಎಂದು ಹೇಳಿದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ನನ್ನೊಡೆಯನ ದಾಸನಾದ ನನ್ನಂಥವನು ಎನ್ನೊಡೆಯರಾದ ತಮ್ಮಂಥವರ ಸಂಗಡ ಹೇಗೆ ಮಾತಾಡಬಹುದು? ಈಗ ಶಕ್ತಿಯನ್ನೆಲ್ಲಾ ಕಳೆದುಕೊಂಡಿದ್ದೇನೆ, ನನ್ನಲ್ಲಿ ಉಸಿರೇ ಇಲ್ಲವಾಗಿದೆ,” ಎಂದು ಹೇಳಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ಎನ್ನೊಡೆಯನ ಸೇವಕನಾದ ನನ್ನಂಥವನು ಎನ್ನೊಡೆಯನಾದ ನಿನ್ನಂಥವನ ಸಂಗಡ ಹೇಗೆ ಮಾತಾಡಬಹುದು? ಈಗಿನಿಂದ ಶಕ್ತಿಯನ್ನೆಲ್ಲಾ ಕಳಕೊಂಡವನಾಗಿದ್ದೇನೆ, ನನ್ನಲ್ಲಿ ಉಸುರೇ ಇಲ್ಲ ಎಂದು ಹೇಳಿದೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್17 ಸ್ವಾಮೀ, ನಾನು ನಿಮ್ಮ ಸೇವಕನಾದ ದಾನಿಯೇಲ. ನಾನು ನಿಮ್ಮ ಸಂಗಡ ಹೇಗೆ ಮಾತನಾಡಲಿ. ನನಗೆ ಶಕ್ತಿಯೇ ಇಲ್ಲದಂತಾಗಿದೆ. ಉಸಿರಾಡುವುದೂ ಕಷ್ಟವಾಗಿದೆ” ಎಂದೆ. ಅಧ್ಯಾಯವನ್ನು ನೋಡಿ |